ಭಟ್ಟಾರಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಟ್ಟಾರಕ ನಯನಂದಿ, ಖಜುರಾಹೊ ಶಿಲ್ಪ

ಭಟ್ಟಾರಕನು ಸಾಂಪ್ರದಾಯಿಕ ದಿಗಂಬರ ಜೈನ ಸಂಸ್ಥೆಗಳ ಅಧ್ಯಕ್ಷನಾಗಿರುತ್ತಾನೆ. ಇವನು ವಿದ್ವಾಂಸರಿಗೆ ತರಬೇತಿ ಕೊಡುವುದು, ಗ್ರಂಥಾಲಯಗಳ ನಿರ್ವಹಣೆ, ದತ್ತಿಗಳ ನಿರ್ವಹಣೆ, ಅನುಸ್ಥಾಪನ ಸಮಾರಂಭಗಳ ಅಧ್ಯಕ್ಷತೆ ವಹಿಸುವುದು ಮತ್ತು ಜೈನ ಸಂಸ್ಥೆಗಳನ್ನು ನಡೆಸುವುದಕ್ಕೆ ಜವಾಬ್ದಾರನಾಗಿರುತ್ತಾನೆ.[೧]

ಅವಲೋಕನ[ಬದಲಾಯಿಸಿ]

ಭಟ್ಟಾರಕ ಪದವನ್ನು ವೀರಸೇನ, ಭದ್ರಬಾಹು ಮತ್ತು ಇತರ ಪ್ರಖ್ಯಾತರಿಗೆ ಬಳಸಲಾಗಿತ್ತು. ಈ ಪದವನ್ನು ಪೂರ್ವದಲ್ಲಿ, ಶೈವ ಪಂಥ, ಬೌದ್ಧ ಧರ್ಮ ಮತ್ತು ಇತರ ಗುಂಪುಗಳಲ್ಲಿನ ಧಾರ್ಮಿಕ ವರ್ಗಗಳ ಮುಖ್ಯಸ್ಥರಿಗೆ ಬಳಸಲಾಗಿತ್ತು, ಆದರೆ ಪ್ರಸಕ್ತವಾಗಿ ದಿಗಂಬರ ಜೈನ ಸಂಸ್ಥೆಗಳ ಮುಖ್ಯಸ್ಥರಿಗೆ ಅನ್ವಯಿಸಲಾಗುತ್ತದೆ. ದಿಗಂಬರ ಸಂನ್ಯಾಸಿಗೆ ಭಿನ್ನವಾಗಿ, ಭಟ್ಟಾರಕನು ಕಿತ್ತಳೆ ಬಣ್ಣದ ಉಡುಪನ್ನು ಧರಿಸುತ್ತಾನೆ, ಒಂದೇ ಸ್ಥಳದಲ್ಲಿ ಇರುತ್ತಾನೆ ಮತ್ತು ಸಂಸ್ಥೆಯ ಸ್ವತ್ತುಗಳ ನಿರ್ವಹಣೆಯಲ್ಲಿ ಒಳಗೊಂಡಿರುತ್ತಾನೆ.

ಉಲ್ಲೇಖಗಳು[ಬದಲಾಯಿಸಿ]

  1. Vilas Adinath Sangave, Facets of Jainology: Selected Research Papers, 2001, Popular Prakashan. p. 133-143
"https://kn.wikipedia.org/w/index.php?title=ಭಟ್ಟಾರಕ&oldid=894304" ಇಂದ ಪಡೆಯಲ್ಪಟ್ಟಿದೆ