ಸಾಮಂತ
ಭಾರತೀಯ ಉಪಖಂಡದ ಇತಿಹಾಸದಲ್ಲಿ, ಸಾಮಂತ ಎನ್ನುವುದು ರಾಜರ ಸೇನೆಯ ಜನರಿಗಾಗಿ ಬಳಸಲಾಗುತ್ತಿದ್ದ ಪದವಿ ಮತ್ತು ಸ್ಥಾನವಾಗಿತ್ತು. ಸಾಮಂತ ಸಂಪ್ರದಾಯವನ್ನು ೬ನೇ ಶತಮಾನದ್ದೆಂದು ಕಾಲನಿರ್ಧಾರ ಮಾಡಲಾದ ಉತ್ತರ ಭಾರತದ ಶಾಸನಲಿಪಿಗಳಲ್ಲಿ ಮೊದಲ ಬಾರಿಗೆ ಉಲ್ಲೇಖಿಸಲಾಗಿದೆ.[೧] ಈ ಸಂಪ್ರದಾಯವು ಭಾರತದಲ್ಲಿ ಊಳಿಗಮಾನ ಪದ್ಧತಿಯ ಹುಟ್ಟು ಮತ್ತು ಬೆಳವಣಿಗೆಯೊಂದಿಗೆ ನಿಕಟವಾಗಿ ಸಂಬಂಧಿಸಿದೆ ಎಂದು ಪರಿಗಣಿಸಲಾಗಿದೆ.
ದಕ್ಷಿಣ ಭಾರತದಲ್ಲಿ ಸಾಮಂತ ಪದವನ್ನು ಸಾಮ್ರಾಟನ ಆಶ್ರಿತ ಆಡಳಿತಗಾರನ ಅರ್ಥದಲ್ಲಿ ಬಳಸಲಾಗುತ್ತಿತ್ತು.
ಸಾಮಂತನು ರಾಜನಿಗೆ ಸೇನಾ ಬೆಂಬಲವನ್ನು ಒದಗಿಸುತ್ತಿದ್ದನು ಮತ್ತು ಪ್ರಾಂತದ ಒಂದು ಭಾಗದಲ್ಲಿ ಆಡಳಿತ ನಡೆಸುತ್ತಿದ್ದನು.
ಮೂಲತಃ 'ಸಾಮಂತ' ಪದದ ಅರ್ಥ 'ನೆರೆಹೊರೆಯವನು' ಎಂದಾಗಿತ್ತು ಮತ್ತು ಮೌರ್ಯರ ಕಾಲದಲ್ಲಿ, ಈ ಪದವು ಪಕ್ಕದ ಪ್ರಾಂತದ ಸ್ವತಂತ್ರ ಪ್ರಭುವನ್ನು ಸೂಚಿಸುತ್ತಿತ್ತು. ಇದು ಅರ್ಥಶಾಸ್ತ್ರ ಮತ್ತು ಅಶೋಕನ ಶಾಸನಗಳಲ್ಲಿನ ಬಳಕೆಯಿಂದ ಸ್ಪಷ್ಟವಾಗಿದೆ. ಸಮುದ್ರಗುಪ್ತನ ಅಲಾಹಾಬಾದ್ ಪ್ರಶಸ್ತಿಯಲ್ಲಿ ಉಲ್ಲೇಖಿಸಲಾದ 'ಗಡಿಯ ರಾಜರು' (ಪ್ರತ್ಯನ್-ತನ್ರಿಪತಿ) ಅಂತಹ ಸಾಮಂತರಾಗಿದ್ದರು ಮತ್ತು ಈ ಪದದ ಮೂಲ ಬಳೆಕೆಯಾಗಿತ್ತು.[೨]