ಸಮುದ್ರಗುಪ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
The Gupta Empire at its maximum extent

ಗುಪ್ತ ಸಾಮ್ರಾಜ್ಯದ ಪ್ರಮುಖ ದೊರೆ ಸಮುದ್ರಗುಪ್ತ[೧]. ಅವನ ಕಾಲವನ್ನು "ಭಾರತದ ಸುವರ್ಣ ಯುಗ" ಎಂದು ಪರಿಗಣಿಸಲಾಗಿದೆ. ಸಮುದ್ರ ಗುಪ್ತನ ದಿಗ್ವಿಜಯವನ್ನು, ಹರಿಸೇನನ 'ಅಲಹಬಾದ್ ಸ್ತ೦ಭ ಶಾಸನ' ವಿವರಿಸುತ್ತದೆ[೨].

ಇತಿವೃತ್ತ[ಬದಲಾಯಿಸಿ]

ಗರುಡ ಸ್ತಂಭದೊಂದಿಗೆ ಸಮುದ್ರಗುಪ್ತನ ನಾಣ್ಯ.British Museum.

ಸಮುದ್ರಗುಪ್ತ, ಗುಪ್ತ ಸಾಮ್ರಾಜ್ಯದ ರಾಜ (ಸಿ 335 -.. ಸಿ 375 ಸಿಇ) , ಭಾರತೀಯ ಇತಿಹಾಸದಲ್ಲಿ ಮಹಾನ್ ಸೇನಾ ಪ್ರತಿಭೆಗಳ ಒಂದು ಗಣಿ ಎಂದು ಪರಿಗಣಿಸಲಾಗಿದೆ[೩]. ಈತ ಗುಪ್ತ ರಾಜವಂಶದ ಮೂರನೇ ಮಹಾನ್ ದೊರೆ. ಈತ ಒಬ್ಬ ಉಪಕಾರ ಬುದ್ಧಿಯ ಆಡಳಿತಗಾರ, ಮಹಾನ್ ಯೋಧ ಮತ್ತು ಕಲೆಗಳ ಪೋಷಕನಾಗಿದ್ದನು[೪]. ಸಮುದ್ರಗುಪ್ತನ ಹಲವಾರು ಹಿರಿಯ ಸಹೋದರರು ಮತ್ತು ತನ್ನ ತಂದೆಯ ಆಯ್ಕೆಯ ಮೇರೆಗೆ ಅವನು ತಂದೆಯ ಉತ್ತರಾಧಿಕಾರಿಯಾದನು. ಸಮುದ್ರಗುಪ್ತನಿಗೆ "ರಾಜಾ ಚಕ್ರವರ್ತಿ" ಅಥವಾ ಮಹಾನ್ ಚಕ್ರವರ್ತಿ, ನಿರ್ವಿವಾದ ರಾಜ ಎಂಬ ಬಿರುದುಗಳಿದ್ದವು.

ಸಮುದ್ರಗುಪ್ತ (ಕ್ರಿ.ಶ. ೩೩೫-೩೮೦)[ಬದಲಾಯಿಸಿ]

 • ಒಂದನೆಯ ಚಂದ್ರಗುಪ್ತನ ಮಗನೂ, ಉತ್ತರಾಧಿಕಾರಿಯೂ ಆದ ಸಮುದ್ರಗುಪ್ತನು ಗುಪ್ತ ಸಂತತಿಯ ಅತ್ಯಂತ ಪ್ರಸಿದ್ದ ದೊರೆ. ಮಹಾದಂಡನಾಯಕನಾಗಿ, ದಿಗ್ವಿಜಯಿಯಾಗಿ, ಸಾಮ್ರಾಜ್ಯ ನಿರ್ಮಾಪಕನಾಗಿ ಸಂಗೀತಗಾರನಾಗಿ, ಉತ್ತಮ ಆಡಳಿತಗಾರನಾಗಿ ಭಾರತದ ಚರಿತ್ರೆಯಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಡಿದ್ದಾನೆ. ಡಿ.ಅರ್.ಎಸ್.ತ್ರಿಪಾಠಿಯವರು ಬರೆಯುವಂತೆ ಯುದ್ದ ಮತ್ತು ಆಕ್ರಮಣಗಳನ್ನೇ ಗುರಿಯಾಗಿ ಹೊಂದಿದ್ದ ಸಮುದ್ರಗುಪ್ತನು ಶಾಂತಿ ಮತ್ತು ಧರ್ಮಗಳನ್ನು ಗುರಿಯಾಗಿ ಹೊಂದಿದ್ದ ಅಶೋಕನಿಗೆ ತದ್ವಿರುದ್ದನಾಗಿದ್ದನು.
 • ಈ ಹೇಳಿಕೆ ಅವನ ಒಟ್ಟಾರೆ ಆಳ್ವಿಕೆಯನ್ನು ವಿಮರ್ಶಿಸುತ್ತದೆ. ಮಹಾದಿಗ್ವಿಜಯಿಯಾಗಿದ್ದ ಸಮುದ್ರಗುಪ್ತನ ದಿಗ್ವಿಜಯವನ್ನು ತಿಳಿಯಲು ಇರುವ ಪ್ರಮುಖ ಆಧಾರವೆಂದರೆ ಅಲಹಾಬಾದ್ ಸ್ತಂಭಶಾಸನ, ಈ ಶಿಲಾಶಾಸನವು ಅವನ ದಂಡನಾಯಕನೂ, ಆಸ್ಥಾನ ಕವಿಯೂ ಆದ ಹರಿಸೇನನಿಂದ ರಚಿಸಲ್ಪಟ್ಟಿತು. ಇದು ಸಂಸ್ಕೃತ ಭಾಷೆಯ ಉತ್ಕೃಷ್ಟ ಶೈಲಿಯಲ್ಲಿದ್ದು ಗದ್ಯ ಮತ್ತು ಪದ್ಯ ಮಿಶ್ರಿತ ಚಂಪೂ ಕಾವ್ಯದ ಶೈಲಿಯಲ್ಲಿದೆ. ಅದರ ಕವಿಯೂ ಸಂಸ್ಕೃತ ಭಾಷೆಯ ಶ್ರೇಷ್ಟ ಸಾಹಿತಿಯಾಗಿದ್ದನೆಂಬುದನ್ನು ಸೂಚಿಸುತ್ತದೆ.
 • ಅಲಹಾಬಾದ್ ಸ್ತಂಭಶಾಸನವು ಮೂಲತಃ ಅಶೋಕನ ಶಾಸನವಾಗಿದ್ದು ಆ ಕಂಬದ ಮೇಲೆಯೇ ಸಮುದ್ರಗುಪ್ತನ ಸಾಧನೆಯನ್ನು ಕೆತ್ತಲಾಗಿದೆ. ಈ ಶಾಸನದಲ್ಲಿ ಸಮುದ್ರಗುಪ್ತನ ದಿಗ್ವಿಜಯವನ್ನು ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಶಾಸನದ ೧೩, ೧೪, ೨೧ ಮತ್ತು ೨೩ನೆಯ ಸಾಲುಗಳು ಸಮುದ್ರಗುಪ್ತನ ಆರ್ಯಾವರ್ತ ಅಂದರೆ ಉತ್ತರಭಾರತದ ದಿಗ್ವಿಜಯಗಳನ್ನು ಕುರಿತು ವಿವರಿಸುತ್ತವೆ.
 • ಉತ್ತರದ ಅರಸರುಗಳಾದ ಅಚ್ಯುತ (ಪದ್ಮಾವತಿ ರಾಜ್ಯ, ಮಧ್ಯಭಾರತ) ನಾಗಸೇನ (ಅಹಿಚ್ಚತ್ರ ರೋಹಿಲ್ ಖಂಡ) ಹೆಸರಿನೊಂದಿಗೆ ಉತ್ತರ ಗಂಗಾ ಕಣಿವೆಯಲ್ಲಿ ಆಳುತ್ತಿದ್ದ ರುದ್ರದೇವ, ಮೈಥಿಲಾ, ನಾಗದತ್ತ, ಚಂದ್ರವರ್ಮ, ಗಣಪತಿನಾಗ, ನಂದಿನ್ ಮತ್ತು ಬಲವರ್ಮ ಹೀಗೆ ಒಂಬತ್ತು ರಾಜರನ್ನು ಸೋಲಿಸಿ ಆ ರಾಜ್ಯಗಳನ್ನು ತನ್ನ ಆಳ್ವಿಕೆಗೆ ಸೇರಿಸಿಕೊಡನೆಂದು ತಿಳಿದುಬರುತ್ತದೆ.
 • ಎರಡನೆಯದಾಗಿ ನೇಪಾಳ, ಬಂಗಾಳ, ಅಸ್ಸಾಂ ಮುಂತಾದ ಹಿಮಾಲಯದ ರಾಜ್ಯಗಳು ಮತ್ತು ಗಡಿರಾಜ್ಯಗಳು. ಪಂಜಾಬಿನಲ್ಲಿ ಮೌರ್ಯ ಸಾಮ್ರಾಜ್ಯದ ನಂತರವೂ ಜೀವಂತವಾಗಿದ್ದ ಗಣರಾಜ್ಯಗಳನ್ನು ಸಮುದ್ರಗುಪ್ತ ತನ್ನ ಸೇನಾಪ್ರಭವದ ವಲಯದೊಳಕ್ಕೆ ತಂದುಕೊಂಡನು. ಮೂರನೆಯದಾಗಿ ಅವನ ಹತೋಟಿಗೆ ಒಳಗಾದ ರಾಜ್ಯಗಳೆಂದರೆ ವಿಂಧ್ಯ ಪ್ರದೇಶದ ಅಟವಿಕ ಅಂದರೆ ಆದಿವಾಸಿ ರಾಜ್ಯಗಳು ಸೇರುತ್ತವೆ.
 • ನಾಲ್ಕನೆಯದಾಗಿ ದಕ್ಷಿಣ ಭಾರತದ ಪೂರ್ವ ಭಾಗದ ಹನ್ನೆರಡು ರಾಜ್ಯಗಳನ್ನು ಗೆದ್ದು ಅವರಿಂದ ಕಪ್ಪ ಸಂಗ್ರಹಿಸಿ ಪನಃ ಅಲ್ಲಿನ ಅರಸರಿಗೇ ರಾಜ್ಯಗಳನ್ನು ಹಿಂದಿರುಗಿಸಲಾಯಿತು. ಅವುಗಳೆಂದರೆ ಕೋಸಲದ ಮಹೇಂದ್ರ ರಾಜ (ಮೇಲಿನಾಮಹಾನದಿ ಕಣಿವೆ) ಮಹಾಕಾಂತಾರದ ವ್ಯಾಘ್ರ ರಾಜ (ಮಹಾರಣ್ಯ ಅಥವಾ ದಂಡಕಾರಣ್ಯ) ಕೌರಾಲದ ಮಂಟರಾಜ, ಪಿಷ್ಟಪುರದ ಮಹೇಂದ್ರ (ಗೋದಾವರಿ ಜಿಲ್ಲೆಯ ಪೀತಪುರಂ) ಕೊಟ್ಟೂರದ ಸ್ವಾಮಿದತ್ತ (ಮದಶನು ಪ್ರಾಂತ್ಯದ ಉತ್ತರದ ಭಾಗ) ಎರಂಡಪಲಾದ ದಮನ (ವಿಶಾಖಪಟ್ಟಣ ಜಿಲ್ಲೆ) ಕಂಚಿಯ ಪಲ್ಲವ ರಾಜ ವಿಷ್ಣುಗೋಪ, ಅವಮುಕ್ತದ ನೀಲರಾಜ (ಗೋದಾವರಿಜಿಲ್ಲೆ) ವೆಂಗಿಯ ಶಾಲಂಕಾಯನ ರಾಜ ಹಸ್ತಿವರ್ಮನ್ (ಪ್ರಾಯಶಃ ನಲ್ಲೂರು ಜಲ್ಲೆ), ಪಲಕ್ಕದ ಉಗ್ರಸೇನ (ನಲ್ಲೂರು ಜಿಲ್ಲೆ) ದೇವರಾಷ್ಟ್ರದ ಕುಬೇರ (ವಿಶಾಖಪಟ್ಟಣ ಜಿಲ್ಲೆ), ಕೌಸ್ಥಲಪುರದ ಧನಂಜಯ (ಉತ್ತರ ಆರ್ಕಾಟ್ ಜಿಲ್ಲೆ). ಐದನೆಯದಾಗಿ ಆಫ್ಘಾನಿಸ್ತಾನದ ಭಾಗದಲ್ಲಿ ಆಳುತ್ತಿದ್ದ ಕುಶಾನರು ಮತ್ತು ಶಕರನ್ನು ಅಧಿಕಾರದಿಂದ ಕಿತ್ತೊಗೆದು ದೂರದೇಶದ ರಾಜರನ್ನು ಆಶ್ರಿತರನ್ನಾಗಿ ಮಾಡಿಕೊಂಡನೆಂದು ಹೇಳಲಾಗಿದೆ.
 • ಸಮುದ್ರಗುಪ್ತನ ಪ್ರತಿಷ್ಠೆ ಹಾಗೂ ಪ್ರಭಾವಗಳು ಭಾರತದ ಹೊರಗಿನ ದೇಶಗಳಿಗೂ ಮುಟ್ಟಿತ್ತು. ಲಂಕೆಯ ರಾಜನಾದ ಶ್ರೀಮೇಘವರ್ಮನು ಸಮುದ್ರಗುಪ್ತನ ಆಸ್ಥಾನಕ್ಕೆ ರಾಯಭಾರಿಗಳ ತಂಡವೊಂದನ್ನು ಕಳುಹಿಸಿ, ಬುದ್ದಗಯೆಯಲ್ಲಿ ವಿಹಾರವೊಂದನ್ನು ಕಟ್ಟಿಸಲು ಅನುಮತಿಯನ್ನು ಪಡೆದುಕೊಡಿದ್ದನೆಂದು ಹ್ಯೂಯೆನ್ ತ್ಸಾಂಗ್ ತಿಳಿಸಿದ್ದಾನೆ. ಇವನ ದಿಗ್ವಿಜಯದಿಂದ ಬೆದರಿದ ಭಾರತದ ಗಡಿನಾಡಿನ ಜನರು ತಾವೇ ತಾವಾಗಿ ಶರಣಾಗತರಾದರೆಂದೂ ಶಾಸನದಿಂದ ತಿಳಿದುಬರುತ್ತದೆ.
 • ಆರ್.ಕೆ. ಮುಖರ್ಜಿಯವರ ಪ್ರಕಾರ ಸಮುದ್ರಗುಪ್ತನ ಸಾಮ್ರಾಜ್ಯವು ಉತ್ತರದಲ್ಲಿ ಹಿಮಾಲಯದಿಂದ ದಕ್ಷಿಣದಲ್ಲಿ ನರ್ಮದಾ ನದಿಯವರೆಗೆ ಮತ್ತು ಪಶ್ಚಿಮದಲ್ಲಿ ಪಂಜಾಬಿನಿಂದ ಪೂರ್ವದಲ್ಲಿ ಬ್ರಹ್ಮಪುತ್ರ ನದಿಯವರೆಗೆ ಹರಡಿದ್ದಿತು. ಇದರ ಸುತ್ತಮುತ್ತ ಸಾಮಂತ ರಾಜರ ಹಲವು ರಾಜ್ಯಗಳಿದ್ದವು. ಈ ವಲಯದ ಹೊರಗೆ ಮಿತ್ರರಾಜ್ಯವಾಗಿದ್ದವೆಂದು ತಿಳಿದುಬರುತ್ತದೆ.

ಸಮುದ್ರಗುಪ್ತನ ವ್ಯಕ್ತಿತ್ವ[ಬದಲಾಯಿಸಿ]

 • ಸಮುದ್ರಗುಪ್ತ ಕೇವಲ ದಿಗ್ವಿಜಯಿಯಾಗಿರದೆ ಸಾಹಿತ್ಯ ಕಲೆಗಳ ಪೋಷಕನೂ ಆಗಿದ್ದನು. ಅಲಹಾಬಾದ್ ಶಾಸನವು ಇವನನ್ನು ‘ಕವಿರಾಜ’ ಎಂದು ವರ್ಣಿಸಿದೆ. ಸ್ವತಃ ಕವಿಯಾಗಿದ್ದುದೇ ಅಲ್ಲದೆ ಹಲವು ಕವಿಗಳಿಗೆ ಆಶ್ರಯ ನೀಡಿದ್ದನು. ಖ್ಯಾತ ಬೌದ್ಧವಿದ್ವಾಂಸ ವಸುಬಂಧು ಇವನ ಮಂತ್ರಿ. ಹರಿಸೇನ ದಂಡನಾಯಕನೂ, ಮಂತ್ರಿಯೂ, ಸಾಹಿತಿಯೂ ಆಗಿದ್ದನು. ಸಮುದ್ರಗುಪ್ತನಿಗೆ ಸಂಗೀತದಲ್ಲಿಯೂ ಆಸಕ್ತಿಯಿತ್ತು.
 • ಇವನ ಕೆಲವು ನಾಣ್ಯಗಳಲ್ಲಿ ಇವನನ್ನು ವೀಣೆ ಅಥವಾ ಕೊಳಲಿನಂತಹ ವಾದ್ಯವನ್ನು ನುಡಿಸುತ್ತಿರುವಂತೆ ಚಿತ್ರಿಸಲಾಗಿದೆ. ತನ್ನ ದಿಗ್ವಿಜಯದ ನೆನಪಿಗಾಗಿ ಅಶ್ವಮೇಧಯಾಗವೊಂದನ್ನು ಮಾಡಿ ಅಶ್ವಮೇಧ ಪರಾಕ್ರಮ ಎಂಬ ಬಿರುದನ್ನು ಧರಿಸಿದ್ದನು. ಆದರ ನೆನಪಿಗಾಗಿ ಎಂಟು ಬಗೆಯ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿಸಿದ್ದನು. ಈ ನಾಣ್ಯಗಳೂ ಆ ಕಾಲದ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುತ್ತವೆ.

ಸಮುದ್ರಗುಪ್ತನ ಆಡಳಿತ ನೀತಿ[ಬದಲಾಯಿಸಿ]

 • ಸಮುದ್ರಗುಪ್ತ ಒಬ್ಬ ಉತ್ತಮ ಆಡಳಿತಗಾರ, ನಾಗಸೇನನನ್ನು ಸೋಲಿಸಿದನು. ಸಮುದ್ರಗುಪ್ತ ದಕ್ಷಿಣ ರಾಜ್ಯಗಳ ವಿರುದ್ಧ ಪ್ರಚಾರ ಆರಂಭಿಸಿದನು. ಈ ದಕ್ಷಿಣ ಪ್ರಚಾರ ಬಂಗಾಳಕೊಲ್ಲಿ ಉದ್ದಕ್ಕೂ ದಕ್ಷಿಣಕ್ಕೂ ಹಬ್ಬಿದೆ. ಅವರು ಮಧ್ಯಪ್ರದೇಶದ ವಿಶಾಲ ಪ್ರದೇಶಗಳಾದ ಒಡಿಶಾ ಕರಾವಳಿ, ಗಂಜಾಂ, ವಿಶಾಖಪಟ್ಟಣಂ, ಗೋದಾವರಿ, ಕೃಷ್ಣಾ ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಮೂಲಕ ಮೆರವಣಿಗೆ ನಡೆಸಿದರು ಮತ್ತು ದೂರದ ಕಾಂಚೀಪುರ ತಲುಪಿದರು. ಆದರೆ ಅವರನ್ನು ಯಾರೂ ನೇರವಾಗಿ ನಿಯಂತ್ರಿಸಲಿಲ್ಲ.
 • ತನ್ನ ಶತ್ರುಗಳನ್ನು ಸೆರೆಹಿಡಿದ ನಂತರ ಗುಪ್ತ ಸಾಮ್ರಾಜ್ಯವನ್ನು ವಿಸ್ತರಿಸ ತೊಡಗಿದನು. ಇವನ ಆಳ್ವಿಕೆಯು ರಾಜನೀತಿಜ್ಞತೆಯಿಂದ ಹಲವು ಸಾಮರ್ಥ್ಯಗಳನ್ನು ಒದಗಿಸುತ್ತದೆ. ಅವನು ಎಲ್ಲಾ ಪ್ರದೇಶಗಳ ವಿಜಯಕ್ಕೆಮತ್ತು ಸ್ವಾಧೀನ ಮಾಡಿಕೊಳ್ಳಲು "ದಿಗ್ವಿಜಯ" ನೀತಿಯನ್ನು ಅಳವಡಿಸಿಕೊಂಡನು. ಬಂಗಾಳದ ಗಡಿ ಬಹುಶಃ (ಈಗಿನ ಉತ್ತರ ಪ್ರದೇಶ ರಾಜ್ಯದಲ್ಲಿ) ಅಲಹಾಬಾದ್ ಈಗ ತಲುಪಿತು. ಇವರು ದೆಹಲಿಯ ಹತ್ತಿರ ತನ್ನ ಉತ್ತರ ನೆಲೆಯಿಂದ ವಿಸ್ತರಣೆಯ ಯುದ್ಧಗಳ ಒಂದು ಸರಣಿಯನ್ನು ಆರಂಭಿಸಿದನು.
 • ಕಾಂಚೀಪುರಂ ದಕ್ಷಿಣ ಪಲ್ಲವ ಸಾಮ್ರಾಜ್ಯದ ನಂತರ ರಾಜಾ ವಿಷ್ಣುಗೋಪನನ್ನು ಮತ್ತು ಇತರರನ್ನು ಸೋಲಿಸಿದನು. ದಕ್ಷಿಣ ರಾಜ್ಯ ಪುನಃಸ್ಥಾಪನೆ ಮಾಡಿದನು. ಹಲವಾರು ಉತ್ತರ ಪ್ರಾಂತ್ಯಗಳನ್ನು ಗುಪ್ತ ಸಾಮ್ರಾಜ್ಯಕ್ಕೆ ಸೇರಿಸಲಾಗಿದೆ. ಸಮುದ್ರಗುಪ್ತ ಅಧಿಕಾರದ ಉತ್ತುಂಗದಲ್ಲಿ ಅವರು ಸುಮಾರು ಎಲ್ಲಾ ಗಂಗಾ ನದಿಯ ಕಣಿವೆಯ ನಿಯಂತ್ರಿತ ಮತ್ತು ಪೂರ್ವ ಬಂಗಾಳ, ಅಸ್ಸಾಂ, ನೇಪಾಳ, ಪಂಜಾಬ್ ಪೂರ್ವ ಭಾಗದಲ್ಲಿ, ಮತ್ತು ರಾಜಸ್ಥಾನ ವಿವಿಧ ಬುಡಕಟ್ಟು ಭಾಗಗಳು ಅರಸರಿಂದ ಗೌರವ ಪಡೆದರು.
 • ಸಮುದ್ರಗುಪ್ತ ಒಂದು ಅದ್ಭುತ ಕಮಾಂಡರ್ ಮತ್ತು ದೊಡ್ಡ ಆಕ್ರಮಣಕಾರ. ಅವನ ಬಜಲಪುರ ಮತ್ತು ಛೋಟಾ ನಾಗ್ಪುರ ಬಳಿ ಒಂಬತ್ತು ಉತ್ತರ ಭಾರತದ ಕೆಲ ರಾಜ್ಯಗಳು ಸದ್ದಡಗಿಸಿಕೊಂಡವು. ಹಲವು ರಾಜ್ಯಗಳು ಅಳಿದುಹೋದುವು. ನೇಪಾಳ ಮತ್ತು ಕೃತಿಪುರ 'ತೆರಿಗೆ ಪಾವತಿ, ಆದೇಶಗಳನ್ನು ಪಾಲಿಸಿದನು'. ಇರಾನ್ ಶಾಸನ ಸಮುದ್ರಗುಪ್ತ ಯುದ್ಧದಲ್ಲಿ 'ಅಜೇಯ' ಎಂಬುದನ್ನು ಒತ್ತಿಹೇಳುತ್ತದೆ.

ಉಲ್ಲೇಖಗಳು[ಬದಲಾಯಿಸಿ]

 1. http://indianhistorypr.blogspot.in/2011/03/blog-post_471.html
 2. http://economicsnithin.blogspot.in/2015/07/blog-post_3.html
 3. "ಆರ್ಕೈವ್ ನಕಲು". Archived from the original on 2022-08-18. Retrieved 2015-09-24.
 4. https://kn.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%97%E0%B3%81%E0%B2%AA%E0%B3%8D%E0%B2%A4%E0%B2%B0_%E0%B2%A8%E0%B2%BE%E0%B2%A3%E0%B3%8D%E0%B2%AF%E0%B2%97%E0%B2%B3%E0%B3%81