ವಿಷಯಕ್ಕೆ ಹೋಗು

ನೆಲಮಂಗಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೆಲಮಂಗಲ

ನೆಲಮಂಗಲ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬೆಂಗಳೂರು ಗ್ರಾಮಾಂತರ
ನಿರ್ದೇಶಾಂಕಗಳು 13.5° N 77.23° E
ವಿಸ್ತಾರ
 - ಎತ್ತರ
೨.೮೫ km²
 - ೮೮೨ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೨೫೨೮೭
 - ೮೮೭೨.೬೩/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೬೨ ೧೨೩
 - +೦೮೧೧೮
 - ಕೆಎ-೫೨

ನೆಲಮಂಗಲ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಒಂದು ಪಟ್ಟಣ. ಇದು ಬೆಂಗಳೂರಿನಿಂದ ಮಂಗಳೂರು ಮತ್ತು ಮುಂಬಯಿಯತ್ತ ಸಾಗುವ ಎರಡು ಹೆದ್ದಾರಿಗಳು ಸಂಧಿಸುವ ಸ್ಥಳವಾಗಿದೆ.

ನೆಲಮಂಗಲ ಪದವು ನೆಲ್ಲು(ಒಣ ಹುಲ್ಲು) + ಅಂಗಳ ಎಂಬ ಎರಡು ಪದಗಳಿಂದ ಉಂಟಾಗಿದೆ.

೨೦೧೧ ರ ಜನಗಣತಿಯ ಪ್ರಕಾರ, ನೆಲಮಂಗಲ ಟೌನ್ 37,232 ಜನಸಂಖ್ಯೆಯನ್ನು ಹೊಂದಿದೆ, ಇದರಲ್ಲಿ ಗಂಡು 50,06% ಇದ್ದಾರೆ ಹಾಗೂ ಮಹಿಳೆಯರು ಜನಸಂಖ್ಯೆಯ 49.4% . ಸಾಕ್ಷರತೆಯು 88,65% ಆಗಿದೆ. ಮಹಿಳಾ ಸಾಕ್ಷರತಾ ಪ್ರಮಾಣವು ೧೦೦% ಹಾಗೆಯೇ ನೆಲಮಂಗಲ, ಪುರುಷ ಸಾಕ್ಷರತೆ ಸುಮಾರು ೧೦೦%.

ವಿಶ್ವ ಶಾಂತಿ ಆಶ್ರಮ, ಪಾಂಡುರಂಗನ ಪ್ರತಿಮೆಗಳು, ಗೀತಾ ಮಂದಿರ, ವಿನಾಯಕನ ದೇವಾಲಯದಲ್ಲಿ, ಆರಾಮವಾಗಿರಲು ಒಂದು ಪಾರ್ಕ್ ಜೊತೆಗೆ ಸುಂದರ ವಿಶ್ವರೂಪ ವಿಜಯ ವಿಠ್ಠಲನ ಪ್ರತಿಮೆ (ವಿಹಾರ ಮತ್ತು ಆಧ್ಯಾತ್ಮದ ಒಂದು ಸ್ಥಾನ) ಇದೆ. ಇದೊಂದು ಸುಂದರ ತಾಣ. ಪ್ರಾವಸಿಗರು ವಾರದಲ್ಲಿ ಯಾವ ದಿನವಾದರೂ ಇಲ್ಲಿಗೆ ಭೇಟಿ ಮಾಡಬಹುದು. ಬಿನ್ನಮಂಗಲದಲ್ಲಿ ಪಾರ್ಕ್ ಇದೆ. ಶಿವಗಂಗೆ ಬೆಟ್ಟ ಎಂಬ ಪ್ರಸಿದ್ಧವಾದ ಬೆಟ್ಟವಿದೆ. ಇದು ಡಾಬಸ್ ಪೇಟೆ ಹತ್ತಿರವಿದೆ.

"https://kn.wikipedia.org/w/index.php?title=ನೆಲಮಂಗಲ&oldid=1223449" ಇಂದ ಪಡೆಯಲ್ಪಟ್ಟಿದೆ