ವಸುದೇವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ[[ಚಿತ್|right|thumb|ಜನ್ಮಾಷ್ಟಮಿಯಂದು ಅವನ ಜನನದ ಸ್ವಲ್ಪ ನಂತರ ವಸುದೇವನಿಂದ ಕೃಷ್ಣನು ಯಮುನಾ ನದಿಯ ಮೇಲೆ ಎತ್ತೊಯ್ಯಲ್ಪಡುತ್ತಿದ್ದಾನೆ]] ಭಾರತೀಯ ಮಹಾಕಾವ್ಯದಲ್ಲಿ, ವಸುದೇವನು ಕೃಷ್ಣನ ತಂದೆ, ಯದು ಮತ್ತು ವೃಷ್ಣಿ ರಾಜವಂಶಗಳ ಶೂರಸೇನನ ಮಗ. ಅವನು ಕೃಷ್ಣನ ಸಾಕು ತಂದೆಯಾದ ರಾಜ ನಂದನ ಸಹೋದರನಾಗಿದ್ದನು. ಅವನ ಸಹೋದರಿ ಕುಂತಿಯು ಪಾಂಡುವನ್ನು ಮದುವೆಯಾಗಿದ್ದಳು.ದೇವಕಿಯ ಎಂಟನೆಯ ಮಗು ಕಂಸನನ್ನು ಕೊಲ್ಲುತ್ತಾನೆಂಬ ವಿಷಯ ಕಂಸನ ಕಿವಿಗೆ ಬೀಳುತ್ತಿದ್ದಂತೆ ಕಂಸನಿಗೆ ತಂಗಿಯ ಮೇಲೆ ವಿಪರೀತ ಕೋಪ ಬಂತು. ಅವನು ಆ ತಕ್ಷಣ ಅವಳನ್ನೂ, ವಸುದೇವನನ್ನೂ ಸೆರೆಮನೆ ಯಲ್ಲಿರಿಸಿ ಬಲವಾದ ಕಾವಲು ಹಾಕಿದ.ಪ್ರತೀ ಬಾರಿರು ದೇವಕಿಯ ಮಗುವನ್ನು ಕೊಲ್ಲುತ್ತಾ ಬರುತ್ತಾನೆ.ಆದರೆ ವಾಸುದೇವ ಮತ್ತು ದೇವಕಿಯ ಎಂಟನೆಯ ಮಗು ,ಕೃಷ್ಣನನ್ನು ವಾಸುದೇವ ರಾತ್ರೋರಾತ್ರಿ ತೆಗೆದುಕೊಂಡು ಹೋದನು.ತನ್ನ ಮಗುವನ್ನು ಯಶೋದೆಯ ಮಗುವೊಂದಿಗೆ ಬದಲಾಯಿಸಿಕೊಂಡು, ಯಶೋದೆಯ ಮಗುವನ್ನು ತೆಗೆದುಕೊಂಡು ಸೆರೆಮನೆಗೆ ಹಿಂದಿರುಗಿದನು.ಆದುದರಿಂದ ವಾಸುದೇವನ ಮಗು ಯಶೋದೆಯ ಬಳಿ ಬೆಳೆದನು.

"https://kn.wikipedia.org/w/index.php?title=ವಸುದೇವ&oldid=1199635" ಇಂದ ಪಡೆಯಲ್ಪಟ್ಟಿದೆ