ಒಂದೆಲಗ

ವಿಕಿಪೀಡಿಯ ಇಂದ
(ಬ್ರಾಹ್ಮಿ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಒಂದೆಲಗ
Starr 020803-0094 Centella asiatica.jpg
ವೈಜ್ಞಾನಿಕ ವರ್ಗೀಕರಣ
Kingdom: plantae
(unranked): Angiosperms
(unranked): Eudicots
(unranked): Asterids
Order: Apiales
Family: Apiaceae
Subfamily: Mackinlayoideae
Genus: Centella
Species: C. asiatica
ದ್ವಿಪದ ಹೆಸರು
Centella asiatica
(L.) Urban
Synonyms[೧]

Hydrocotyle asiatica L.
Trisanthus cochinchinensis Lour.

ಒಂದೆಲಗ

ಒಂದೆಲಗ ಅಥವಾ ಬ್ರಾಹ್ಮಿ ಔಷಧಿಯಾಗಿಯೂ ಆಹಾರವಾಗಿಯೂ ಉಪಯೋಗಕ್ಕೆ ಬರುವ ಒಂದು ಸಸ್ಯ. ಹೆಸರೇ ಸೂಚಿಸುವಂತೆ ಒಂದೇ ಎಲೆಯಿಂದ ಕಂಗೊಳಿಸುತ್ತದೆ. ಇದು ನೆಲದಲ್ಲಿ ನೀರಿನ ಆಶ್ರಯವಿರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಕರಾವಳಿ ಪರಿಸರದಲ್ಲಿ ಭತ್ತದ ಗದ್ದೆಗಳ ಬದಿಯ ಜೌಗು ಪ್ರದೇಶದಲ್ಲಿ, ಅಡಿಕೆತೋಟಗಳಲ್ಲೂ ಹೇರಳವಾಗಿ ಬೆಳೆಯುತ್ತದೆ. ಕಾಂಡವು ನೆಲದ ಮೇಲೆ ಬಳ್ಳಿಯಂತೆ ಹರಡಿಕೊಂಡು ೩,೪ ಅಂಗುಲ ಎತ್ತರಕ್ಕೆ ಬೆಳೆಯುತ್ತದೆ.ಎಲೆಗಳು ಹಸಿರು ಬಣ್ಣದಿಂದ ಕೂಡಿ ದುಂಡಗಾಗಿರುತ್ತವೆ.

ಸುಶ್ರುತ ಸಂಹಿತೆಯಲ್ಲಿಯೂ ಬ್ರಾಹ್ಮೀಯ ಉಲ್ಲೇಖವಿದೆ, ಏಷ್ಯಾ ಇದರ ಮೂಲಸ್ಥಾನವೆಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಚೀನಾ ಹಾಗೂ ಆಫ್ರಿಕಾಗಳಲ್ಲಿ ಕೂಡಾ ಇದು ಪಾರಂಪರಿಕ ಔಷಧಿಯಾಗಿ ಬಳಕೆಯಲ್ಲಿದೆ.ಇದರ ವೈಜ್ಞಾನಿಕ ಹೆಸರು ಸೆಂಟಿಲ್ಲಾ ಏಸಿಯಾಟಿಕ (centella asiatica) ಎಂದು. ಕನ್ನಡದಲ್ಲಿ ಒಂದೆಲಗ. ಆಡು ಭಾಷೆಯಲ್ಲಿ ಉರಗೆ, ತುಳುವಿನಲ್ಲಿ "ತಿಮರೆ" ಕೊಂಕಣಿ-ಮರಾಠಿಗಳಲ್ಲಿ "ಕರಾನ್ನೊ" ಸಂಸ್ಕೃತ/ಹಿಂದಿಯಲ್ಲಿ "ಬ್ರಾಹ್ಮಿ" ಎಂದೂ ಕರೆಯಲ್ಪಡುತ್ತದೆ.ಈ ಸಸ್ಯ ಪ್ರಾಚೀನ ಕಾಲದಿಂದಲೂ ಔಷಧೀಯ ಗುಣವಿರುವುದೆಂದು ಗುರ್ತಿಸಿಕೊಂಡಿದೆ. ಇದರ ಎಲ್ಲಾ ಭಾಗಗಳು ಆರೋಗ್ಯ ರಕ್ಷಕ ಗುಣಗಳನ್ನು ಔಷಧೀಯ ಗುಣಗಳನ್ನು ಹೊಂದಿದೆ.ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.ಒಂದೆಲಗದ ವಿಶಿಷ್ಟ ರಾಸಾಯನಿಕ ಅಂಶಗಳು ಬೆಕೊಸೈಡ್ ಎ ಮತ್ತು ಬಿ ಈ ರಾಸಾಯನಿಕಗಳು ಮೆದುಳಿನ ನೆನಪಿನ ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಆಧಾರವಾಗಿವೆ . ನರರೋಗಗಳಿಗೆ ಇದು ದಿವ್ಯೌಷಧಿಯೆಂದು ಆಯುರ್ವೇದದಲ್ಲಿ ಪರಿಗಣಿಸಿದ್ದಾರೆ .

ಕೆಮ್ಮು, ಉಸಿರಾಟದ ತೊಂದರೆ ಇರುವವರಿಗೆ ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸುತ್ತಾರೆ.ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ ಎಂಬ ನಂಬಿಕೆಯಿದೆ.ಇದು ನಿತ್ಯ ತಿಂದರೆ ಬುದ್ಧಿ ಚುರುಕಾಗುತ್ತದೆ. ಮಕ್ಕಳಿಗೆ ಬೆಳಗ್ಗೆ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ. ದಿನಕ್ಕೆ 4 -5 ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು.ಮಲ ಬದ್ದತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸುತ್ತಾರೆ.

ಒಂದೆಲಗ ೨

ಉಲ್ಲೇಖಗಳು[ಬದಲಾಯಿಸಿ]

  1. "Pharmacological Review on Centella asiatica: A Potential Herbal Cure-all.". Indian J Pharm Sci: 546–56. September 2010. 
"https://kn.wikipedia.org/w/index.php?title=ಒಂದೆಲಗ&oldid=537727" ಇಂದ ಪಡೆಯಲ್ಪಟ್ಟಿದೆ