ಗೋಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋಪಿ ಒಂದು ಸಂಸ್ಕೃತ ಶಬ್ದವಾಗಿದೆ. ಇದು ಗೋಪಾಲ ಶಬ್ದದಿಂದ ವ್ಯುತ್ಪನ್ನವಾಗಿದೆ. ಇದು ದನಗಳ ಹಿಂಡಿನ ಉಸ್ತುವಾರಿ ವಹಿಸುವ ವ್ಯಕ್ತಿಯನ್ನು ಸೂಚಿಸುತ್ತದೆ. ಹಿಂದೂ ಧರ್ಮದಲ್ಲಿ ವಿಶೇಷವಾಗಿ ಗೋಪಿಕಾ ಹೆಸರನ್ನು ಹೆಚ್ಚು ಸಾಮಾನ್ಯವಾಗಿ ವೈಷ್ಣವ ಪಂಥದಲ್ಲಿ ಕೃಷ್ಣನಿಗಾಗಿ ತಮ್ಮ ಬೇಷರತ್ತಾದ ಭಕ್ತಿಗಾಗಿ ಪ್ರಸಿದ್ಧರಾಗಿರುವ ಗೊಲ್ಲರ ಹುಡುಗಿಯರನ್ನು ಸೂಚಿಸಲು ಬಳಸಲಾಗುತ್ತದೆ. ಹೀಗೆಂದು ಭಾಗವತ ಪುರಾಣ ಮತ್ತು ಇತರ ಪುರಾಣ ಸಾಹಿತ್ಯದಲ್ಲಿ ವರ್ಣಿಸಲಾಗಿದೆ. ಈ ಗುಂಪಿನಲ್ಲಿ ರಾಧೆ ಎಂಬ ಒಬ್ಬ ಗೋಪಿಕೆಯು ಅನೇಕ ಧಾರ್ಮಿಕ ಸಂಪ್ರದಾಯಗಳಲ್ಲಿ, ವಿಶೇಷವಾಗಿ ಗೌಡೀಯ ವೈಷ್ಣವ ಪಂಥದಲ್ಲಿ, ವಿಶೇಷವಾಗಿ ಹೆಚ್ಚಿನ ಪೂಜ್ಯಭಾವ ಮತ್ತು ಮಹತ್ವದ ಸ್ಥಾನವನ್ನು ಹೊಂದಿದ್ದಾಳೆ.[೧] ಗೌಡೀಯ ವೈಷ್ಣವ ಪಂಥದಲ್ಲಿ, ವೃಂದಾವನದ ೧೦೮ ಗೋಪಿಕೆಯರಿದ್ದಾರೆ. ರಾಧೆ ಮತ್ತು ಇತರ ಗೋಪಿಯರನ್ನು ಗೊಲ್ಲೆಯರು ಎಂದು ಸೂಚಿಸಲಾಗುತ್ತದಾದರೂ, ವೈಷ್ಣವ ಪಂಥದ ನಿಗೂಢ ದೇವತಾಶಾಸ್ತ್ರದ ಪ್ರಕಾರ ಅವರು ಕೃಷ್ಣನ ಶಾಶ್ವತವಾದ ಸಂಗಾತಿಗಳಾಗಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. http://www.himalayanacademy.com/readlearn/basics/four-sects
"https://kn.wikipedia.org/w/index.php?title=ಗೋಪಿ&oldid=1021194" ಇಂದ ಪಡೆಯಲ್ಪಟ್ಟಿದೆ