ಗೌಡೀಯ ವೈಷ್ಣವ ಪಂಥ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗೌಡೀಯ ವೈಷ್ಣವ ದೇವಸ್ಥಾನ

ಗೌಡೀಯ ವೈಷ್ಣವ ಪಂಥವು (ಚೈತನ್ಯ ವೈಷ್ಣವ ಪಂಥ ಮತ್ತು ಹರೇ ಕೃಷ್ಣ ಎಂದೂ ಪರಿಚಿತವಿದೆ) ಚೈತನ್ಯ ಮಹಾಪ್ರಭುರಿಂದ (೧೪೮೬-೧೫೩೪) ಭಾರತದಲ್ಲಿ ೧೬ನೇ ಶತಮಾನದಲ್ಲಿ ಸ್ಥಾಪಿತವಾದ ಒಂದು ವೈಷ್ಣವ ಧಾರ್ಮಿಕ ಚಳುವಳಿ. ಗೌಡೀಯ ಗೌಡ ಪ್ರದೇಶವನ್ನು (ಇಂದಿನ ಬಂಗಾಳ/ಬಾಂಗ್ಲಾದೇಶ) ಸೂಚಿಸುತ್ತದೆ ಮತ್ತು ವೈಷ್ಣವ ಪಂಥದ ಅರ್ಥ ವಿಷ್ಣುವಿನ ಆರಾಧನೆ. ಭಗವದ್ಗೀತೆ ಹಾಗು ಭಾಗವತ ಪುರಾಣ ಮುಖ್ಯವಾಗಿ ಅದರ ತತ್ವಶಾಸ್ತ್ರೀಯ ಆಧಾರವಾಗಿದೆ, ಜೊತೆಗೆ ಇತರ ಪೌರಾಣಿಕ ಗ್ರಂಥಗಳು ಮತ್ತು ಈಶಾವಾಸ್ಯೋಪನಿಷತ್, ಗೋಪಾಲ ತಾಪನಿ ಉಪನಿಷತ್, ಮತ್ತು ಕಲಿಸಂತರಣೋಪನಿಷತ್‍ನಂತಹ ಉಪನಿಷತ್ತುಗಳು ಕೂಡ.