ದೇವಕಿ

ವಿಕಿಪೀಡಿಯ ಇಂದ
Jump to navigation Jump to search
ರಾಜ ರವಿವರ್ಮ ಅವರಿಂದ ಕೃಷ್ಣ ಮತ್ತು ಬಲರಾಮ ತಮ್ಮ ತಂದೆ ವಸುದೇವ ಮತ್ತು ತಾಯಿ ದೇವಕಿಯನ್ನು ಭೇಟಿಮಾಡುವ ದೃಷ್ಯದ ಚಿತ್ರೀಕರಣ

ಹಿಂದೂ ಪುರಾಣದಲ್ಲಿ ದೇವಕಿ ಉಗ್ರಸೇನ ಮಹಾರಾಜನ ತಮ್ಮನಾದ ದೇವಕನ ಮಗಳು, ಕಂಸನ ತಂಗಿ ಮತ್ತು ಕೃಷ್ಣನ ತಾಯಿ.

ವಿವಾಹ[ಬದಲಾಯಿಸಿ]

ಉಗ್ರಸೇನ ಮಥುರೆಯ ರಾಜ್ಯದ ಸೇನಾಪತಿಯಾಗಿದ್ದ. ಮಥುರೆಯ ಮಹರಾಜನು ಶಾಪಗ್ರಸ್ತನಾಗಿ ಕಾಡಿಗೆ ಹೋಗುವಾಗ ಅವನ ಮಗನಾದ ವಸುದೇವನನ್ನು ಉಗ್ರಸೇನನ ಸುಪ್ರರ್ದಿಯಲ್ಲಿಟ್ಟು ಉಗ್ರಸೇನನಿಗೆ ಪಟ್ಟ ಕಟ್ಟುತ್ತಾನೆ. ಉಗ್ರಸೇನ ದೇವಕಿಯನ್ನು ವಸುದೇವನಿಗೆ ಕೊಟ್ಟು ಮದುವೆ ಮಾಡುತ್ತಾನೆ.

ಸೆರೆ[ಬದಲಾಯಿಸಿ]

ವಸುದೇವ ಮತ್ತು ದೇವಕಿಯ ಮದುವೆ ಸಂದರ್ಭದಲ್ಲಿ ಆದ ಅಶರೀರ ವಾಣಿಯಲ್ಲಿ ಕಂಸನು ದೇವಕಿಯ ಅಷ್ಟಮ ಗರ್ಭದಲ್ಲಿ ಹುಟ್ಟುವ ಸಂತಾನದಿಂದ ಕೊಲ್ಲಲ್ಪಡುತ್ತಾನೆ ಎಂದು ಹೇಳುತ್ತದೆ. ಇದರಿಂದ ಕೋಪಗೊಂಡ ಕಂಸನು ವಸುದೇವ ಮತ್ತು ದೇವಕಿಯರನ್ನು ಬಂಧಿಸಿ ಕರಾಗೃಹದಲ್ಲಿರಿಸುತ್ತಾನೆ. ನಂತರ, ಕಂಸನು ಹುಟ್ಟಿದ ಆರು ಮಕ್ಕಳನ್ನು ಕೊಂದನು. ವಸುದೇವ ಮತ್ತು ದೇವಕಿಯ ಎಂಟನೇ ಮಗನೇ ಕೃಷ್ಣ.

"https://kn.wikipedia.org/w/index.php?title=ದೇವಕಿ&oldid=859517" ಇಂದ ಪಡೆಯಲ್ಪಟ್ಟಿದೆ