ನೇಗಿಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೇಗಿಲು ಬೀಜ ಬಿತ್ತುವ ಅಥವಾ ಸಸ್ಯ ನೆಡುವ ತಯಾರಿಕೆಯಲ್ಲಿ ಮಣ್ಣನ್ನು ಸಡಿಲಗೊಳಿಸಲು ಅಥವಾ ತಿರುಗಿಸುವ ಸಲುವಾಗಿ ಮಣ್ಣಿನ ಆರಂಭಿಕ ಸಾಗುವಳಿಗಾಗಿ ಕೃಷಿಯಲ್ಲಿ ಬಳಸಲಾದ ಒಂದು ಉಪಕರಣ ಅಥವಾ ಕೃಷಿ ಸಾಮಗ್ರಿ. ಸಾಂಪ್ರದಾಯಿಕವಾಗಿ ನೇಗಿಲುಗಳನ್ನು ಕುದುರೆಗಳು ಅಥವಾ ದನಗಳಂತಹ ಕೆಲಸದ ಪ್ರಾಣಿಗಳು ಎಳೆಯುತ್ತಿದ್ದವು, ಆದರೆ ಆಧುನಿಕ ಕಾಲದಲ್ಲಿ ಟ್ರ್ಯಾಕ್ಟರ್‌ಗಳು ಎಳೆಯುತ್ತವೆ. ನೇಗಿಲನ್ನು ಕಟ್ಟಿಗೆ, ಕಬ್ಬಿಣ ಅಥವಾ ಉಕ್ಕಿನಿಂದ ತಯಾರಿಸಬಹುದು. ಕಟ್ಟಿಗೆ, ಕಬ್ಬಿಣ, ಅಥವಾ ಉಕ್ಕಿನ ಚೌಕಟ್ಟಿಗೆ ಮಣ್ಣನ್ನು ಕತ್ತರಿಸಿ ಸಡಿಲಗೊಳಿಸಲು ಬಳಸಲಾದ ಅಲಗು ಅಥವಾ ಕೋಲನ್ನು ಜೋಡಿಸಲಾಗಿರುತ್ತದೆ. ದಾಖಲಿತ ಇತಿಹಾಸದ ಬಹುತೇಕ ಭಾಗದಲ್ಲಿ ಇದು ಒಂದು ಮೂಲಭೂತ ಪರಿಕರವಾಗಿದೆ. ಆದರೆ ಇಂಗ್ಲಿಷ್ ಭಾಷೆಯಲ್ಲಿ ಇದರ ಲಿಕ್ಜಿತ ಉಲ್ಲೇಖಗಳು ಕ್ರಿ.ಶ. ೧೧೦೦ರ ವರೆಗೆ ಕಾಣುವುದಿಲ್ಲ, ಮತ್ತು ಈ ಬಿಂದುವಿನಿಂದ ಇದನ್ನು ಮತ್ತೆ ಮತ್ತೆ ಉಲ್ಲೇಖಿಸಲಾಗುತ್ತದೆ. ನೇಗಿಲು ಮಾನವ ಇತಿಹಾಸದಲ್ಲಿನ ಪ್ರಮುಖ ಕೃಷಿ ಆವಿಷ್ಕಾರಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ.

ಮಣ್ಣಿನ ಮೇಲಿನ ಪದರವನ್ನು ತಿರುಗಿಸಿ, ಮೇಲ್ಮೈಗೆ ತಾಜಾ ಪೌಷ್ಟಿಕಾಂಶಗಳನ್ನು ತರುವುದು, ಮತ್ತು ಅದೇ ಸಮಯದಲ್ಲಿ ಕಳೆಗಳು ಮತ್ತು ಹಿಂದಿನ ಬೆಳೆಗಳ ಶೇಷಗಳನ್ನು ಹೂಳುವುದು ಮತ್ತು ವಿಘಟನೆಯಾಗುವುದಕ್ಕೆ ಅವುಗಳಿಗೆ ಆಸ್ಪದ ನೀಡುವುದು ಉಳುವುದರ ಪ್ರಧಾನ ಉದ್ದೇಶವಾಗಿದೆ. ಮಣ್ಣಿನಲ್ಲಿ ನೇಗಿಲನ್ನು ಎಳೆದಾಗ ಅದು ಉಕ್ಕೆ ಸಾಲುಗಳು ಎಂದು ಕರೆಯಲ್ಪಡುವ ಫಲವತ್ತಾದ ಮಣ್ಣಿನ ಉದ್ದ ಅಗಳುಗಳನ್ನು ಸೃಷ್ಟಿಸುತ್ತದೆ. ಆಧುನಿಕ ಬಳಕೆಯಲ್ಲಿ, ಉಳುಮೆ ಮಾಡಿದ ಗದ್ದೆಯನ್ನು ಸಾಮಾನ್ಯವಾಗಿ ಒಣಗಲು ಬಿಡಲಾಗುತ್ತದೆ, ಮತ್ತು ನಂತರ ನೆಡುವ ಮುಂಚೆ ಅದನ್ನು ಕುಂಟೆ ಹೊಡೆಯಲಾಗುತ್ತದೆ. ಮಣ್ಣನ್ನು ಉಳುವುದು ಮತ್ತು ಸಾಗುವಳಿ ಮಾಡುವುದು ಮಣ್ಣಿನ ಮೇಲಿನ ೧೨ ರಿಂದ ೨೫ ಸೆ.ಮಿ. ಅನ್ನು ಏಕರೂಪಗೊಳಿಸಿ ಮತ್ತು ಮಾರ್ಪಾಡು ಮಾಡಿ ಉಳು ಪದರವನ್ನು ರಚಿಸುತ್ತದೆ. ಅನೇಕ ಮಣ್ಣುಗಳಲ್ಲಿ, ನವುರಾದ ಸಸ್ಯ ಪೋಷಕ ಬೇರುಗಳ ಬಹುತೇಕ ಭಾಗವನ್ನು ಮೇಲ್ಮಣ್ಣು ಅಥವಾ ಉಳು ಪದರಿನಲ್ಲಿ ಕಾಣಬಹುದು.

ಆರಂಭದಲ್ಲಿ ನೇಗಿಲುಗಳು ಮಾನವ ಚಾಲಿತವಾಗಿದ್ದವು, ಆದರೆ ಒಮ್ಮೆ ಪ್ರಾಣಿಗಳನ್ನು ಸೇವೆಯಲ್ಲಿ ಒತ್ತಾಯಪಡಿಸಲಾದಾಗ ಈ ಪ್ರಕ್ರಿಯೆಯು ಗಣನೀಯವಾಗಿ ಹೆಚ್ಚು ಫಲಕಾರಿಯಾಯಿತು. ಮೊದಲ ಪ್ರಾಣಿಚಾಲಿತ ನೇಗಿಲುಗಳನ್ನು ನಿಸ್ಸಂಶಯವಾಗಿ ಎತ್ತುಗಳು ಎಳೆಯುತ್ತಿದ್ದವು, ಮತ್ತು ನಂತರ ಅನೇಕ ಪ್ರದೇಶಗಳಲ್ಲಿ ಕುದುರೆಗಳು (ಸಾಮಾನ್ಯವಾಗಿ ಭಾರ ಎಳೆಯುವ ಕುದುರೆಗಳು) ಮತ್ತು ಹೆಸರುಗತ್ತೆಗಳು ಎಳೆಯುತ್ತಿದ್ದವು. ಆದರೆ ಈ ಉದ್ದೇಶಕ್ಕಾಗಿ ವಿವಿಧ ಇತರ ಪ್ರಾಣಿಗಳನ್ನು ಬಳಸಲಾಗಿದೆ. ಕೈಗಾರಿಕೀಕೃತ ದೇಶಗಳಲ್ಲಿ, ನೇಗಿಲನ್ನು ಎಳೆಯುವ ಮೊದಲ ಯಾಂತ್ರಿಕ ಸಾಧನಗಳು ಆವಿಚಾಲಿತವಾಗಿದ್ದವು, ಆದರೆ ಕ್ರಮೇಣ ಆಂತರಿಕ ದಹನ ಚಾಲಿತ ಟ್ರ್ಯಾಕ್ಟರ್‌ಗಳು ಇವುಗಳ ಸ್ಥಾನ ತೆಗೆದುಕೊಂಡವು.

"https://kn.wikipedia.org/w/index.php?title=ನೇಗಿಲು&oldid=858751" ಇಂದ ಪಡೆಯಲ್ಪಟ್ಟಿದೆ