ಕಾಮಧೇನು
| Kamadhenu | |
|---|---|
| The Cow Mother Goddess of Cows | |
Sculpture of Kamadhenu at Arulmigu Rajamariamman Devasthanam, Johor Bahru, Malaysia | |
| ಇತರ ಹೆಸರುಗಳು | Surabhi |
| ದೇವನಾಗರಿ | कामधेनु |
| ಸಂಸ್ಕೃತ ಲಿಪ್ಯಂತರಣ | Kāmadhenu |
| ಸಂಲಗ್ನತೆ | Devi, Lakshmi |
| ನೆಲೆ | Goloka, Patala or the hermitages of sages, Jamadagni and Vashista |
| ಸಂಗಾತಿ | Kashyapa |
| ಮಕ್ಕಳು | Nandini, Dhenu, Harschika and Subhadra |
ಹಿಂದೂ ಪುರಾಣಗಳಲ್ಲಿ ಕಾಮಧೇನು ಎಂಬ ಹಸುವಿನ ಬಗೆಗೆ ತಿಳಿಸಲಾಗಿದೆ. ಸಮುದ್ರ ಮಂಥನ ಕಾಲದಲ್ಲಿ ಕ್ಷೀರಸಮುದ್ರದಲ್ಲಿ ಹುಟ್ಟಿದ ಕಲ್ಪವೃಕ್ಷವೇ ಮೊದಲಾದ ಹದಿನಾಲ್ಕು ಸುವಸ್ತುಗಳಲ್ಲಿ ಕಾಮಧೇನುವೂ ಒಂದು. ಕಾಮಧೇನು ಎಂದರೆ ಕಾಮಿಸಿದ್ದನ್ನು ನೀಡುವ ಧೇನು, ಅಂದರೆ ಬೇಡಿದ್ದನ್ನು ನೀಡುವ ಹಸು. ಈ ಹಸುವನ್ನು ದೇವತೆಗಳ ರಾಜನಾದ ಇಂದ್ರನಿಗೆ ಲೋಕಕಲ್ಯಾಣಾರ್ಥವಾಗಿ ನೀಡಲಾಯಿತು. ಆದುದರಿಂದ ಇದು ದೇವಲೋಕದ ಹಸು. ಕೇಳಿದ ಪದಾರ್ಥಗಳನ್ನು ಕೊಟ್ಟು ತಣಿಸುವ ಗುಣವುಳ್ಳದ್ದು. ಅಮೃತಮಥನ ಕಾಲದಲ್ಲಿ ಕ್ಷೀರಸಮುದ್ರದಿಂದ ಹುಟ್ಟಿತು. ಇದನ್ನು ದೇವತೆಗಳು ಸಪ್ತರ್ಷಿಗಳಿಗೆ ದಾನ ಮಾಡಲಾಗಿ ಇದು ಕಾಲಕ್ರಮದಲ್ಲಿ ವಸಿಷ್ಠರ ಸ್ವತ್ತಾಯಿತು. ಇದರ ಬಣ್ಣ ಬಿಳುಪು. ನಾಲ್ಕು ವೇದಗಳೇ ಇದರ ಕಾಲುಗಳು. ನಾಲ್ಕು ಪುರುಷಾರ್ಥಗಳೇ ಇದರ ಕೆಚ್ಚಲು. ನಂದಾ, ಸುನಂದ, ಸುರಭೀ, ಸುಶೀಲಾ, ಸುಮನಾ ಎಂಬ ಐದು ರೂಪಗಳಿಂದ ಇದು ಪ್ರಸಿದ್ಧವಾಗಿದೆ. ಭಾರ್ಗವ, ಆಂಗೀರಸ, ಭಾರದ್ವಾಜ, ಕಶ್ಯಪ, ವಸಿಷ್ಠ-ಈ ಐವರು ಋಷಿಗಳ ಆಶ್ರಮದಲ್ಲಿ ಒಂದೊಂದು ಧೇನುವಿದ್ದು ದೇವ, ಅತಿಥಿ, ಪಿತೃ ಮೊದಲಾದವರ ಪೂಜೆಗಳಲ್ಲಿ ನೆರವಾಗಿವೆಯೆಂದು ಪ್ರತೀತಿ. ಅಭೀಷ್ಟಸಿದ್ಧಿಗಾಗಿ ಬಲಿಪಾಡ್ಯಮಿಯ ದಿವಸ ಇದನ್ನು ಪೂಜಿಸುತ್ತಾರೆ. ರಾಮಾಯಣದ ಪ್ರಸಿದ್ಧ ವಿಶ್ವಾಮಿತ್ರ ಒಮ್ಮೆ ವಸಿಷ್ಠ ಮಹರ್ಷಿಗಳ ಆಶ್ರಮಕ್ಕೆ ಭೇಟಿಯಿತ್ತಾಗ ವಸಿಷ್ಠರು ಕಾಮದೇನುವಿನ (ನಂದಿನೀಧೇನು) ಸಹಾಯದಿಂದ ಅತಿಥಿ ಸತ್ಕಾರವನ್ನು ವಿಜೃಂಭಣೆಯಿಂದ ಮಾಡಿದರು. ಇದರಿಂದ ಸಂತೃಪ್ತಿ ಹೊಂದಿದ ವಿಶ್ವಾಮಿತ್ರ ಕಾಮಧೇನುವನ್ನು ತಾನು ಪಡೆಯಬೇಕೆಂದುದ ಇಚ್ಛಿಸಿ ಈ ಒಂದು ಹಸುವಿಗಾಗಿ ತನ್ನಲ್ಲಿರುವ ಹಸುಗಳನ್ನೆಲ್ಲ ಕೊಡುವುದಾಗಿ ವಸಿಷ್ಠರನ್ನು ಕೇಳಿದ. ವಸಿಷ್ಠರು ಕಾಮಧೇನುವನ್ನು ಕೊಡಲು ನಿರಾಕರಿಸಿದರು. ತತ್ಫಲವಾಗಿ ಪರಸ್ಪರ ಯುದ್ಧವಾಗಿ ವಿಶ್ವಾಮಿತ್ರ ಸೋಲನ್ನೊಪ್ಪಿಕೊಂಡು ಅಂದಿನಿಂದ ತನ್ನ ಕ್ಷಾತ್ರವನ್ನು ತ್ಯಜಿಸಿ ಬ್ರಹ್ಮ ಪದವಿ ಪಡೆಯಲು ತಪಸ್ಸು ಮಾಡಲು ಉದ್ಯುಕ್ತನಾದ. ಅನೇಕ ವರ್ಷಗಳ ತಪಸ್ಸಿನಿಂದಾಗಿಗ ಕಾಮಧೇನುವಿನ ಕರುವನ್ನು ಜಮದಗ್ನಿ ಮಹರ್ಷಿಗಳು ಪಡೆದಿದ್ದರೆಂದೂ ಇದನ್ನು ಕಾರ್ತವೀರ್ಯ ಅಪಹರಿಸಿದನೆಂದೂ ಇದರಿಂದಾಗಿ ಜಮದಗ್ನಿಯ ಮಗ ಪರಶುರಾಮ ಸಿಟ್ಟೆದ್ದು ಸಮಸ್ತ ಕ್ಷತ್ರಿಯರ ವಂಶದ ನಾಶಕ್ಕೆ ಕಾರಣನಾದನೆಂದೂ ಇನ್ನೊಂದು ಹೇಳಿಕೆಯಿದೆ. ಕಾಮಧೇನು ದಕ್ಷನ ಮಗಳೆಂದೂ ಕಶ್ಯಪರ ಪತಿಯೆಂದೂ ಇನ್ನೊಂದು ಹೇಳಿಕೆಯುಂಟು.
ಈ ಕಾಮಧೇನುವಿನ ಮಗಳು ನಂದಿನಿ. ಇದು ವಸಿಷ್ಠ ಋಷಿಯ ಆಶ್ರಮದಲ್ಲಿದ್ದ ಹಸು.
