ಭಾರದ್ವಾಜ

ವಿಕಿಪೀಡಿಯ ಇಂದ
Jump to navigation Jump to search

ಭಾರದ್ವಾಜನು (ಅಥವಾ ಬೃಹಸ್ಪತ್ಯ) ಪ್ರಾಚೀನ ಭಾರತದ ಪೂಜನೀಯ ವೈದಿಕ ಋಷಿಗಳಲ್ಲಿ ಒಬ್ಬನು. ಇವನು ಹೆಸರುವಾಸಿ ವಿದ್ವಾಂಸ, ಅರ್ಥಶಾಸ್ತ್ರಜ್ಞ ಹಾಗೂ ಶ್ರೇಷ್ಠ ವೈದ್ಯನಾಗಿದ್ದನು. ಇವನು ಸಪ್ತರ್ಷಿಗಳಲ್ಲಿ ಒಬ್ಬನು. ಪ್ರಾಚೀನ ಭಾರತೀಯ ಸಾಹಿತ್ಯ, ಮುಖ್ಯವಾಗಿ ಪುರಾಣಗಳು ಹಾಗೂ ಋಗ್ವೇದದಲ್ಲಿ ಇವನ ಕೊಡುಗೆಗಳು ಅಂದಿನ ಭಾರತೀಯ ಸಮಾಜದಲ್ಲಿ ಒಳನೋಟ ನೀಡುವಲ್ಲಿ ಗಣನೀಯ ಪಾತ್ರ ವಹಿಸಿದವು.[೧][೨][೩] ಇವನು ಮತ್ತು ಇವನ ಶಿಷ್ಯವರ್ಗವು ಋಗ್ವೇದದ ಆರನೇ ಗ್ರಂಥದ ಲೇಖಕರು ಎಂದು ಪರಿಗಣಿಸಲಾಗಿದೆ. ಭಾರದ್ವಾಜನು ಪಾಂಡವರು ಹಾಗೂ ಕೌರವರಿಬ್ಬರಿಗೂ ಗುರುವಾಗಿದ್ದ, ಮಹಾಭಾರತದ ಒಬ್ಬ ಮುಖ್ಯ ಪಾತ್ರನಾಗಿದ್ದ ಬ್ರಾಹ್ಮಣಯೋಧ ದ್ರೋಣನ ತಂದೆಯಾಗಿದ್ದನು. ಭಾರದ್ವಾಜನನ್ನು ವಿಶ್ವಾಸಾರ್ಹವಾದ ಪ್ರಾಚೀನ ಭಾರತೀಯ ವೈದ್ಯಕೀಯ ಪಠ್ಯವಾದ ಚರಕ ಸಂಹಿತಾದಲ್ಲೂ ಉಲ್ಲೇಖಿಸಲಾಗಿದೆ. ಮಹರ್ಷಿ ಭಾರದ್ವಾಜನನ್ನು "ವೈದ್ಯಶಾಸ್ತ್ರದ ಜನಕ"ನೆಂದು (ಆಯುರ್ವೇದ) ಪರಿಗಣಿಸಲಾಗಿದೆ.

ನೋಡಿ[ಬದಲಾಯಿಸಿ]

ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ವಸಿಷ್ಠ - ಮಹಾಭಾರತದ ಶಲ್ಯಪರ್ವದಲ್ಲಿ ಇರುವಂತೆ.

ಉಲ್ಲೇಖಗಳು[ಬದಲಾಯಿಸಿ]

  1. George M. Williams (2008). Handbook of Hindu Mythology. Oxford University Press. pp. 82–83. ISBN 978-0-19-533261-2.
  2. Roshen Dalal (2010). Hinduism: An Alphabetical Guide. Penguin Books. p. 67. ISBN 978-0-14-341421-6.
  3. Barbara A. Holdrege (2012). Veda and Torah: Transcending the Textuality of Scripture. State University of New York Press. pp. 229, 657. ISBN 978-1-4384-0695-4., Quote: "Bharadvaja (Vedic seer)..."