ಪಟಾಕಿ
Jump to navigation
Jump to search
ಪಟಾಕಿಯು ಮುಖ್ಯವಾಗಿ ದೊಡ್ಡ ಪ್ರಮಾಣದಲ್ಲಿ ಶಬ್ದವನ್ನು, ವಿಶೇಷವಾಗಿ ಜೋರಾದ ಸದ್ದಿನ ರೂಪದಲ್ಲಿ, ಉತ್ಪತ್ತಿ ಮಾಡಲು ವಿನ್ಯಾಸಗೊಳಿಸಲಾದ ಸಣ್ಣ ಸ್ಫೋಟಕ ಸಾಧನ; ಯಾವುದೇ ದೃಶ್ಯ ಪರಿಣಾಮವು ಈ ಗುರಿಗೆ ಆಕಸ್ಮಿಕವಾಗಿದೆ. ಇವು ಬತ್ತಿಗಳನ್ನು ಹೊಂದಿರುತ್ತವೆ, ಮತ್ತು ಸ್ಫೋಟಕ ಮಿಶ್ರಣವನ್ನು ಹೊಂದಿರಲು ದಪ್ಪ ಕಾಗದದ ಕವಚದಲ್ಲಿ ಸುತ್ತಿರಲಾಗುತ್ತದೆ. ಸುಡುಮದ್ದುಗಳ ಜೊತೆಗೆ ಪಟಾಕಿಗಳು ಚೀನಾದಲ್ಲಿ ಹುಟ್ಟಿಕೊಂಡವು.
ಪಟಾಕಿಗಳನ್ನು ಸಾಮಾನ್ಯವಾಗಿ ರಟ್ಟು ಕಾಗದ ಅಥವಾ ಪ್ಲಾಸ್ಟಿಕ್‍ನಿಂದ ತಯಾರಿಸಲಾಗುತ್ತದೆ. ನೋದಕವಾಗಿ ಮಿಂಚು ಪುಡಿ, ಕಾರ್ಡೈಟ್, ಧೂಮರಹಿತ ಪುಡಿ, ಅಥವಾ ಕಪ್ಪುಪುಡಿಯನ್ನು ಹೊಂದಿರುತ್ತವೆ. ಆದರೆ ಯಾವಾಗಲೂ ಹೀಗೇ ಇರಬೇಕೆಂದೇನಿಲ್ಲ. ಬೆಂಕಿ ಕಡ್ಡಿಯ ವಸ್ತು, ಸೀಮೆಎಣ್ಣೆ, ಹಗುರವಾದ ದ್ರವ ಸೇರಿದಂತೆ ಎಲ್ಲವನ್ನೂ ಪಟಾಕಿಗಳನ್ನು ತಯಾರಿಸಲು ಯಶಸ್ವಿಯಾಗಿ ಬಳಸಲಾಗಿದೆ. ಭಾಗಶಃ ನೋದಕ ವಸ್ತುವು ಕಾರಣವಾದರೂ, ಸದ್ದುಮಾಡುವ ಪಟಾಕಿಗಳಿಗೆ ಒತ್ತಡವು ಅತ್ಯಂತ ಮುಖ್ಯವಾಗಿದೆ.