ಗ್ವಾಲಿಯರ್
ಗ್ವಾಲಿಯರ್ ಭಾರತದ ಮಧ್ಯ ಪ್ರದೇಶ ರಾಜ್ಯದ ಒಂದು ಪ್ರಮುಖ ನಗರವಾಗಿದೆ ಮತ್ತು ಪ್ರತಿಚುಂಬಕ ನಗರಗಳಲ್ಲಿ ಒಂದಾಗಿದೆ. ಇದು ರಾಜ್ಯದ ರಾಜಧಾನಿ ಭೋಪಾಲ್‍ನಿಂದ ೪೧೪ ಕಿಲೋಮೀಟರ್ ದೂರವಿದೆ. ಗ್ವಾಲಿಯರ್ ಭಾರತದ ಗಿರ್ದ್ ಪ್ರದೇಶದಲ್ಲಿ ಒಂದು ಯೋಜಿತ ಸ್ಥಳವನ್ನು ಹೊಂದಿದೆ. ಈ ಐತಿಹಾಸಿಕ ನಗರ ಮತ್ತು ಅದರ ಕೋಟೆಯನ್ನು ಹಲವಾರು ಐತಿಹಾಸಿಕ್ ಉತ್ತರ ಭಾರತೀಯ ರಾಜ್ಯಗಳು ಆಳಿವೆ. ೧೦ನೇ ಶತಮಾನದಲ್ಲಿ ಕಚ್ಛಪಘಾತರು, ೧೩ನೇ ಶತಮಾನದಲ್ಲಿ ತೋಮರ್‌ರಿಂದ ಇದು ಮೊಘಲ್ ಸಾಮ್ರಾಜ್ಯಕ್ಕೆ ಹೋಯಿತು, ನಂತರ ೧೭೫೪ರಲ್ಲಿ ಮರಾಠರಿಗೆ ಹೋಯಿತು. ೧೮ನೇ ಶತಮಾನದಲ್ಲಿ ಸಿಂದಿಯಾರಿಗೆ ಹೋಯಿತು.[೧]
ಪ್ರವಾಸಿ ತಾಣಗಳು
[ಬದಲಾಯಿಸಿ]ಗ್ವಾಲಿಯರ್ ಕೋಟೆ
[ಬದಲಾಯಿಸಿ]ಗ್ವಾಲಿಯರ್‌ನ ಹೃದಯಭಾಗದಲ್ಲಿ ತೋಮರ ರಾಜವಂಶದ ಗ್ವಾಲಿಯರ್ ಕೋಟೆಯಿದೆ. ಇದು ಒಂದು ವಿವಿಕ್ತ ಬಂಡೆ ಹೊರಚಾಚಿನ ಮೇಲೆ ನಿಂತಿದೆ. ಗ್ವಾಲಿಯರ್‌ನ ಹಳೆ ಪಟ್ಟಣವು ಕೋಟೆಯ ಪೂರ್ವ ತಳಪಾಯದ ಪಕ್ಕವಿದೆ.
- ಗೋಪಾಚಲ ಪರ್ವತವು ಗ್ವಾಲಿಯರ ಕೋಟೆಯ ಇಳಿಜಾರು ಪ್ರದೇಶದಲ್ಲಿ ಪರ್ವತೀಯ ವಲಯದಲ್ಲಿ ಸ್ಥಿತವಾಗಿದೆ. ಗೋಪಾಚಲ ಪರ್ವತವು ಜೈನ ತೀರ್ಥಂಕರರ ಅನನ್ಯ ವಿಗ್ರಹಗಳನ್ನು ಹೊಂದಿದೆ.
- ಮುನಿಸಿಪಾಲಿಟಿ ವಸ್ತುಸಂಗ್ರಹಾಲಯವು ರಾಣಿ ಲಕ್ಷ್ಮೀಬಾಯಿಯ ಸಮಾಧಿಯಿಂದ ಸ್ವಲ್ಪ ದೂರದಲ್ಲಿ ಸ್ಥಿತವಾಗಿದೆ.
- ಮಾಡರ್ನ್ 5ಡಿ ಮಧ್ಯ ಪ್ರದೇಶದ ಮೊದಲ ಬಹು ಆಯಾಮದ ರಂಗಮಂದಿರವಾಗಿದೆ.
- ಒಂದು ಔತಣಕೂಟದ ಸಭಾಂಗಣವಾದ ಶ್ಯಾಮ್ ವಾಟಿಕಾ ವಿಶ್ವದ ಅತಿ ದೊಡ್ಡ ಒಳಾಂಗಣ ಭಿತ್ತಿಚಿತ್ರವನ್ನು ಹೊಂದಿದೆ.
- ೧೫ನೇ ಶತಮನಾದ ಗುಜರಿ ಮೆಹೆಲ್ ರಾಜ ಮಾನ್‍ಸಿಂಗ್ ಟೊಮರ್ ಮತ್ತು ಅವನ ರಾಣಿ ಮೃಗ್‍ನಯನಿಯ ಪ್ರೀತಿಯ ಸ್ಮಾರಕವಾಗಿದೆ.
- ೯ನೇ ಶತಮಾನದ ಸಾಸ್-ಬಹು ದೇವಾಲಯವು ತನ್ನ ಕಲಾತ್ಮಕ ಮೌಲ್ಯದಿಂದ ಭಕ್ತರ ಜೊತೆಗೆ ಪ್ರವಾಸಿಗಳನ್ನೂ ಆಕರ್ಷಿಸುತ್ತದೆ.
- ತೇಲಿ ಕಾ ಮಂದಿರ್ (ತೆಲಂಗಾಣ ಮಂದಿರ್) - ಸುಮಾರು ೧೦೦ ಅಡಿ ಎತ್ತರದ ರಚನೆಯಾದ ಇದು ತನ್ನ ಅನನ್ಯವಾದ ವಾಸ್ತುಕಲೆಯ ಕಾರಣ ಭಿನ್ನವಾಗಿದೆ.
- ಕಲ್ಲಿನಲ್ಲಿ ಕೆತ್ತಿದ ಜೈನ ಶಿಲ್ಪಗಳು - ಗ್ವಾಲಿಯರ್ ಕೋಟೆಯಲ್ಲಿ ಗುಹೆಗಳ ಅಥವಾ ಕಲ್ಲಿನಲ್ಲಿ ಕೆತ್ತಿದ ಶಿಲ್ಪಗಳ ಸರಣಿಯಿದೆ. ಇವುಗಳ ಸಂಖ್ಯೆ ಸುಮಾರು ನೂರರಷ್ಟಿದೆ.
- ಗುರುದ್ವಾರ ದತ್ತ ಬಂದಿ ಚೂಢ್- ಈ ಗುರುದ್ವಾರಾವನ್ನು ಆರನೇ ಸಿಖ್ ಗುರು ಗುರು ಹರ್ ಗೋಬಿಂದ್‍ರ ನೆನಪಿನಲ್ಲಿ ನಿರ್ಮಿಸಲಾಗಿದೆ.
ಜೈ ವಿಲಾಸ್ ಮೆಹೆಲ್
[ಬದಲಾಯಿಸಿ]ಇದು ಗ್ವಾಲಿಯರ್‌ನ ಮರಾಠಾ ಅರಸರರಾದ ಸಿಂದಿಯಾಗಳ ವಾಸದ ಅರಮನೆಯಾಗಿದ್ದು ಈಗ ವಸ್ತುಸಂಗ್ರಹಾಲಯವಾಗಿದೆ.
ಐತಿಹಾಸಿಕ ಮಹತ್ವದ ಸಮಾಧಿಗಳು ಮತ್ತು ಛತ್ರಿಗಳು
[ಬದಲಾಯಿಸಿ]- ಸಿಂದಿಯಾಗಳ ಛತ್ರಿಗಳು ನಗರವನ್ನು ಆಳಿದ ಸಿಂದಿಯಾಗಳ ಹೂಳಿದ ಸ್ಥಳವಾಗಿದೆ.
- ತಾನ್‍ಸೇನ್‍ನ ಸಮಾಧಿ: ಅಕ್ಬರ್‌ನ ನವರತ್ನಗಳಲ್ಲಿ ಒಬ್ಬನಾದ ಸಂಗೀತಗಾರ ತಾನ್‍ಸೇನ್‍ನ ಸಮಾಧಿಯಿದು.[೨]
- ಘೌಸ್ ಮೊಹಮ್ಮದ್‍ನ ಗೋರಿ.
- ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಸಮಾಧಿ: ಇದು ಫೂಲ್‍ಬಾಗ್ ಪ್ರದೇಶದಲ್ಲಿದೆ.
ಸೂರ್ಯ ದೇವಾಲಯ
[ಬದಲಾಯಿಸಿ]ಮೋರಾರ್ ಕಂಟೋನ್ಮೆಂಟ್‌ನಲ್ಲಿ ಸ್ಥಿತವಾಗಿರುವ, ಸೂರ್ಯ ದೇವನಿಗೆ ಸಮರ್ಪಿತವಾದ ಸೂರ್ಯ ದೇವಾಲಯವನ್ನು ಕೊನಾರ್ಕ್‌ನ ಸೂರ್ಯ ದೇವಾಲಯದ ಯಥಾಪ್ರತಿಯಾಗಿ ವಿನ್ಯಾಸಗೊಳಿಸಲಾಗಿದೆ.
ಛಾಯಾಂಕಣ
[ಬದಲಾಯಿಸಿ]-
ಸೂರ್ಯ ದೇವಾಲಯ
-
ತಿಘ್ರಾ ಅಣೆಕಟ್ಟು
-
ಗುಜರಿ ಮೆಹೆಲ್ನ ಪ್ರವೇಶದ್ವಾರವನ್ನು ಕಾಯುತ್ತಿರುವ ವಿಗ್ರಹ
-
ಗ್ವಾಲಿಯರ್ ಕೋಟೆಯ ಏಳು ಪ್ರವೇಶದ್ವಾರಗಳಲ್ಲಿ ಒಂದು
-
ಈಗ ವಸ್ತುಸಂಗ್ರಹಾಲಯವಾಗಿರುವ ಗುಜರಿ ಮೆಹೆಲ್, ಗ್ವಾಲಿಯರ್ ಕೋಟೆಯೊಳಗೆ
-
ಗ್ವಾಲಿಯರ್ ಕೋಟೆಯಲ್ಲಿ ಸಾಸ್ ಬಹು ಕಾ ಮಂದಿರ್
-
ಗ್ವಾಲಿಯರ್ನಲ್ಲಿ ಹಿಂದಿನ ಕೇಂದ್ರ ಮುದ್ರಣಾಲಯ
-
ಗ್ವಾಲಿಯರ್ ಕೋಟೆಯ ಗೋಡೆಗಳ ಮೇಲೆ ಚೀನಾದ ಸುಂದರ ಕರಕುಶಲ ಕೃತಿ
-
ಹಿಂದಿನ ವಿಧಾನಸಭೆ, ಗ್ವಾಲಿಯರ್ ಮಧ್ಯ ಭಾರತದ ರಾಜಧಾನಿಯಾಗಿದ್ದಾಗ
-
ಮೊಹಮ್ಮದ್ ಘೌಜ಼್ನ ಗೋರಿ
ಉಲ್ಲೇಖಗಳು
[ಬದಲಾಯಿಸಿ]- ↑ Lonely Planet. "History of Gwalior - Lonely Planet Travel Information". Archived from the original on 6 July 2015. Retrieved 28 July 2015.
- ↑ "Navratnas of Akbar (9 Gems) - General Knowledge Today". Gktoday.in. Archived from the original on 2 July 2015. Retrieved 13 June 2017.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Official Website of Gwalior
- Gwalior Municipal Corporation
- Satellite map of Gwalior Junction and nearby railway stations
- Gwalior Information Centre
- Under Construction Website of Gwalior city
- R. Nath Mughal Architecture Image Collection, Images from Gwalior - University of Washington Digital Collection