ನವಶಿಲಾಯುಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನವಶಿಲಾಯುಗದ ಪರಿಕರಗಳು.


ನವಶಿಲಾಯುಗದಲ್ಲಿ ಮಾನವ ಪ್ರಾರಂಭಿಕ ಶಿಲಾ ಪರಿರಕರಗಳನ್ನು ಒಂದು ಕಲ್ಲಿನಿಂದ ಇನ್ನೊಂದು ಕಲ್ಲಿಗೆ ಹೊಡೆದು ತಯಾರಿಸುತ್ತಿದ್ದು, ಶಿಲಾಪರಿಕರಗಳು ಗಡುಸು, ನಯವಲ್ಲದ ಮೇಲ್ಮೈ ಪಡೆದಿರುತ್ತಿದ್ದವು. ನಂತರದ ಹಂತದಲ್ಲಿಯೇ,ಒಂದು ಕಲ್ಲನು ಇನ್ನೊಂದು ಕಲ್ಲಿಗೆ ಉಜ್ಜುವ ಅಧವಾ ಗಡುಸು ಕಲ್ಲಿನ ಮೇಲೆ ಮೆದು ಕಲ್ಲನ್ನು ತಿರುಗಿಸುವ ಮೂಲಕ ನಯವಾದ ಮೇಲ್ಮೈನ ಪರಿಕರಗಳನ್ನು ಅಥವಾ ಉಪಕರಣಗಳನ್ನು ಮಾನವ ತಯಾರಿಸ ತೊಡಗಿದ. ಪರಿಣಾಮವಾಗಿ ಈ ಪರಿಕರಗಳು ನಯವಾದ ಮೇಲ್ಮೈ ಪಡೆದವು. ಈ ಕಲ್ಲಿನ ಪರಿಕರಗಳ ಕಾಲಮಾನವನ್ನು ಹೊಸ ಶಿಲಾಯುಗ ಅಥವಾ ನವಶಿಲಾಯುಗ ಎಂದು ಕರೆಯಲಾಗುತ್ತದೆ. ಹಿಂದಿನ ಹಳೆಶಿಲಾಯುಗ ಹಾಗೂ ಸೂಕ್ಷ್ಮಶಿಲಾಯುಗದ ಪರಿಕರಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದ್ದವು. [೧] ದಕ್ಷಿಣ ಭಾರತಕ್ಕೆ ಈ ಕಾಲಮಾನದ ಪ್ರಾರಂಭವನ್ನು ಕ್ರಿ ಪೂ ೩೦೦೦ಕ್ಕೆ ಆಲ್‍ಚಿನ್ ರು ಇರಿಸಿ ಬೂದಿದಿಬ್ಬಗಳ ಮಾದರಿಯ ನವಶಿಲಾಯುಗ ಎಂದು ಆಲ್‍ಚಿನ್‍ರು ಕರೆಯುತ್ತಾರೆ. ಇಲ್ಲಿದೊರೆತ ಪರಿಕರಗಳ ಬಗೆಗೆ ಮಾಹಿತಿ ಇಲ್ಲ.

ಮೊದಲ ನಯಗೊಳಿಸಿದ ಪರಿಕರಗಳು ತುಸು ನಂತರದಲ್ಲಿ (ಕ್ರಿ ಪೂ ೨೧೦೦) ಪಿಕ್ಲಿಹಾಳದಲ್ಲಿ ಕಂಡು ಬರುತ್ತವೆ. ಕೋಡೆಕಲ್ ಮತ್ತು ಉತ್ತನೂರುಗಳಲ್ಲಿ ಮೊದಲ ಹಂತದ ಮಡಕೆ ಅಥವಾ ಕುಂಬಾರಿಕೆ ಸಂಪ್ರದಾಯ ಕಂಡು ಬರುತ್ತದೆ. [೨] ಈ ಬೂದಿದಿಬ್ಬಗಳ ಕತೃಗಳ ಬಗೆಗೆ ಚರ್ಚೆ ನಡೆಯುತ್ತಿದೆ. [೩] ಇವು ಬಹುತೇಕ ಪಶುಸಂಗೋಪನೆಯ ಸಂಸ್ಕೃತಿಗಳೆಂದು ಭಾವಿಸಲಾಗಿದೆ. ಕರ್ನಾಟಕದಲ್ಲಿ ೪೨ ಮತ್ತು ಹೊಂದಿಕೊಂಡಂತೆ ಆಂಧ್ರದಲ್ಲಿ ೧೫ ಬೂದಿದಿಬ್ಬಗಳನ್ನು ಗುರುತಿಸಲಾಗಿದೆ. [೩]

ಟಿಪ್ಪಣಿಗಳು[ಬದಲಾಯಿಸಿ]

  1. Prehistory, Irfan Habib, section ೩, Neolithic Revolution
  2. pp ೧೨೨-೧೨೩ Bridget and Raymond Allchin, The Rise of civilization in India and Pakistan, Cambridge University Press, First South Asian Edition, ೧೯೯೬
  3. ೩.೦ ೩.೧ ಅನುಬಂಧ ೧, ಪು ೧೮೪-೨೦೩, ಕರ್ನಾಟಕ ಚರಿತ್ರೆ ಸಂಪುಟ ೧, ಸಂಪಾದಕರು -ಪ್ರೊ. ಅ. ಸುಂದರ, ಕನ್ನಡ ವಿಶ್ವವಿದ್ಯಾಲಯ , ಹಂಪಿ, ೧೯೯೭ Cite error: Invalid <ref> tag; name "source1" defined multiple times with different content

ಪರಾಮರ್ಶನಗಳು[ಬದಲಾಯಿಸಿ]

  • ಭಾರತ ಉಪಖಂಡದ ಆಧುನಿಕಪೂರ್ವ ಚರಿತ್ರೆ, ಸಂಪಾದಕರು ವಿಜಯ್ ಪೂಣಚ್ಚ ತಂಬುಡ,ಕನ್ನಡ ವಿಶ್ವವಿದ್ಯಾಲಯ, ಹಂಪಿ, ೨೦೧೦
  • ಕರ್ನಾಟಕದ ಸಂಕ್ಷಿಪ್ತ ಇತಿಹಾಸ, ಡಾ. ಸೂರ್ಯನಾಥ ಕಾಮತ್, ಎಂ. ಸಿ. ಸಿ ಪಬ್ಲಿಕೇಷನ್ಸ್,ಬೆಂಗಳೂರು, ೨೦೧೦
  • Prehistory, Irfan Habib,Tulika Books, New Delhi, ೨೦೦೨
  • The Rise of civilization in India and Pakistan,Bridget and Raymond Allchin, Cambridge University Press, First South Asian Edition, ೧೯೯೬
  • ಕರ್ನಾಟಕ ಚರಿತ್ರೆ ಸಂಪುಟ ೧, ಸಂಪಾದಕರು -ಪ್ರೊ. ಅ. ಸುಂದರ, ಕನ್ನಡ ವಿಶ್ವವಿದ್ಯಾಲಯ , ಹಂಪಿ, ೧೯೯೭

ಬಾಹ್ಯ ಸಂಪರ್ಕಗಳು[ಬದಲಾಯಿಸಿ]