ವಿಷಯಕ್ಕೆ ಹೋಗು

ಪರಿಕರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನವನ ವಿಕಾಸದ ಇತಿಹಾಸವು ಉಪಕರಣಗಳು ಅಥವಾ ಪರಿಕರಗಳನ್ನು (tool)ಗುರುತಿಸುವುದರಿಂದಲೇ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಈ ಪರಿಕರಗಳು ಕಲ್ಲಿನವೇ ಆಗಿರುತ್ತವೆ. ಇದರ ಅರ್ಥ ಮಾನವ ಕಟ್ಟಿಗೆ ಅಥವಾ ಮೂಳೆಗಳನ್ನು ಅಥವಾ ಇತರ ವಸ್ತುಗಳ ಪರಿಕರ ಬಳಸಲಿಲ್ಲವೆಂದಲ್ಲ. ಆದರೆ ಇವು ಬಹಳ ಕಾಲ ಉಳಿದುಕೊಂಡು ಬಂದು ಪುರಾವೆ ಒದಗಿಸಲಾರವು. ಕೆಲವೊಮ್ಮೆ ಇವುಗಳನ್ನು ಆಯುಧಗಳೆಂದೂ ಸಹ ಕರೆಯಲಾಗುತ್ತದೆ. ಆದರೆ, ಈ ಬಗೆಗೆ ಚರ್ಚೆಯೊಂದು ನಡೆದಂತೆ ತೋರುತ್ತದೆ. ಬ್ರಿಟಿಶ್ -ಅಮೆರಿಕ ಸಂಯುಕ್ತ ಸಂಸ್ಥಾನದ ಮಾನವಶಾಸ್ತ್ರಜ್ಞ ಎಮ್ . ಎಪ್. ಅಶ್ಲೆ ಮೊಂಟಗು (M.F. Ashley Montagu) ಮಾನವ ಮತ್ತು ಆಕ್ರಮಣಶೀಲತೆಯ ಬಗೆಗೆ ಬರೆಯುತ್ತಾ, ಯುರೋಪಿನ ಹಲವರ `ಮಾನವನು ಮೂಲತಹ ಆಕ್ರಮಣಕಾರಿ `ಎಂಬ ನಿಲುವನ್ನು ಮಾನವಶಾಸ್ತ್ರ ಬೆಂಬಲಿಸುವುದಿಲ್ಲ ಎಂದು ವಾದಿಸುತ್ತಾ, ಇಂತಹುದೇ ತಪ್ಪು ನಿಲುವು ಪ್ರೈಮೇಟ್‍ಗಳ ಹಲ್ಲು, ಉಗುರುಗಳನ್ನೂ ಆಯುಧಗಳನ್ನಾಗಿಸಿದೆ ಎನ್ನುತ್ತಾರೆ. [] ಬಹುಶಃ ಈ ಹಿನ್ನೆಲೆಯಲ್ಲಿಯೇ ಕನಿಷ್ಟ ಇಂಗ್ಲೀಶ್‍ನಲ್ಲಿ `tool` ಎಂದೇ ಬಳಸಲಾಗುತ್ತಿದ್ದೆ ಹಾಗೂ ಕನ್ನಡದಲ್ಲಿ ಉಪಕರಣ ಅಥವಾ ಪರಿಕರ. ಈ ಆಸಕ್ತಿದಾಯ ಕ ಚರ್ಚೆಗೆ ಬ್ರಿಟಾನಿಕ ಸಿಡಿ ಲೇಖನ ನೋಡಿ.

ಟಿಪ್ಪಣಿಗಳು

[ಬದಲಾಯಿಸಿ]
  1. Biology and ethics[ಶಾಶ್ವತವಾಗಿ ಮಡಿದ ಕೊಂಡಿ]


ಪರಾಮರ್ಶನಗಳು

[ಬದಲಾಯಿಸಿ]
  • Prehistory, Irfan Habib, Tulika Books, New Delhi, 2002