ಹೋಬಳಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಹೋಬಳಿ :

ಹಳ್ಳಿಗಳ ಸಮೂಹಕ್ಕೆ ಕರ್ನಾಟಕದಲ್ಲಿ ಬಳಕೆಯಲ್ಲಿರುವ ಹೆಸರು. ಆಡಳಿತ ನಿರ್ವಹಣೆಗೆ ಅನುಕೂಲಕರವಾಗಿರಲು ಹಾಗು ವಿಕೇಂದ್ರೀಕರಣಕ್ಕೆ ನೆರವಾಗಲು ನಿರ್ದಿಷ್ಟ ಪ್ರಮಾಣದ ಹಳ್ಳಿಗಳನ್ನು ಒಟ್ಟುಗೂಡಿಸಿ ಹೋಬಳಿಯನ್ನಾಗಿಸಲಾಗಿದೆ.

ಆಡಳಿತಾತ್ಮಕವಾಗಿ ಒಂದು ರಾಜ್ಯವನ್ನು ವಿಭಜಿಸುವಾಗ, ಜಿಲ್ಲೆಗಳಾಗಿಯು, ನಂತರ ಪ್ರತಿ ಜಿಲ್ಲೆಯನ್ನು ತಾಲ್ಲೂಕುಗಳಾಗಿ ಪ್ರತಿ ತಾಲ್ಲೂಕನ್ನು ಹೋಬಳಿಗಳಾಗಿ ಪುನರ್ವಿಂಗಡಿಸಗಾಗುತ್ತದೆ.

ಆಡಳಿತಾತ್ಮಕ ಹಾಗು ಆರ್ಥಿಕವಾಗಿ ಹೋಬಳಿಗಳಿಗೆ, ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಪ್ರತಿ ಹೋಬಳಿಗೆ ಒಬ್ಬ ಉಪ ತಹಶೀಲ್ದಾರರನ್ನು ನೇಮಿಸಲಾಗುತ್ತದೆ. ಇವರಿಗೆ ಒಂದು ಹೋಬಳಿಯ ಮಟ್ಟದಲ್ಲಿ ಅಧಿಕಾರವಿರುತ್ತದೆ.

ಪ್ರತಿ ಹೋಬಳಿ ಕೇಂದ್ರದಲ್ಲಿ ಹೋಬಳಿ ಕಚೇರಿ (ಹೋಬಳಿ ಸಂಕೀರ್ಣ) ಇದ್ದು ಒಂದು ತಾಲ್ಲೂಕು ಮಟ್ಟದ ಎಲ್ಲಾ ಕಚೇರಿಗಳ ಕಾರ್ಯ ನಿರ್ವಹಿಸುತ್ತವೆ.

ಭಾರತದ, ಕರ್ನಾಟಕ, ಮಹಾರಾಷ್ಟ್ರ, ಕೇರಳ, ತಮಿಳು ನಾಡು ಹಾಗು ಆಂಧ್ರ ಪ್ರದೇಶಗಳಲ್ಲಿ ಜಿಲ್ಲೆ-ತಾಲ್ಲೂಕು ವಿಭಜನೆ, ಸಾಮಾನ್ಯವಾಗಿ ಕಂಡು ಬರುತ್ತದೆ.

"https://kn.wikipedia.org/w/index.php?title=ಹೋಬಳಿ&oldid=928537" ಇಂದ ಪಡೆಯಲ್ಪಟ್ಟಿದೆ