ಟಿ. ನರಸೀಪುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಿಲ್ಲಾ ಕೇಂದ್ರ ಮೈಸೂರಿಗೆ ೩೨ ಕಿಲೋಮೀಟರ್ ದೂರದಲ್ಲಿರುವ ತಿರುಮಕೂಡಲು ನರಸೀಪುರ ಜಿಲ್ಲೆಯ ಪ್ರಮುಖ ಪಟ್ಟಣ ಹಾಗೂ ಪ್ರವಾಸಿ ತಾಣ.

ಇಲ್ಲಿ ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮವಾಗುತ್ತದೆ. ಈ ಮೂರರ ಸಂಗಮ ಸ್ಥಳವಾದ್ದರಿದಲೇ ಇದಕ್ಕೆ ತಿರುಮಕೂಡಲು ಎಂಬ ಹೆಸರಿದೆ.

ಶ್ರೀ ಚನ್ನಕೇಶವ ದೇವಾಲಯವು ಕರ್ನಾಟಕದ ಸೋಮನಾಥಪುರ ಪಟ್ಟಣ ದಲ್ಲಿದೆ. ಇದು ಕನ್ನಡದ ಮೇರು ದೊರೆಗಳಾದ ಹೊಯ್ಸಳರ ಕಾಲದ ಶಿಲ್ಪಕಲೆಯ ಬೀಡಾಗಿದೆ.೧೨೬೮ರಲ್ಲಿ ಹೊಯ್ಸಳ ದೊರೆ ಮೂರನೇ ನರಸಿಂಹ ಅವರಿಂದ ಕಟ್ಟಲ್ಪಟ್ಟಿತು. ಅದು ದಕ್ಷಿಣ ಭಾರತದಲ್ಲಿ ಹೊಯ್ಸಳ ಸಾಮ್ರಾಜ್ಯ ವಿಜ್ರಂಭಣೆಯಿಂದ ನಡೆಯುತ್ತಿದ್ದ ಸಮಯವಾಗಿತ್ತು. ಸಂಗಮದ ಸಮೀಪದಲ್ಲಿ ಅಗಸ್ತ್ಯೇಶ್ವರನ ದೇಗುಲವಿದೆ. ಈ ದೇಗುಲ ವಿಶಾಲವಾದ ಪ್ರಾಕಾರ ಹೊಂದಿದ್ದು ಗುಡಿಯ ಮುಂದೆ ಹಲ್ಲಿಯ ಕಂಬವಿದೆ. ಕಪಿಲೆ ಮತ್ತು ಕಾವೇರಿ ನದಿಗಳ ಸಂಗಮದ ಆಚೆಯ ದಡದಲ್ಲಿ ನರಸಿಂಹನ ಸ್ವಾಮಿ ದೇವಸ್ಥಾನವಿದೆ. ನರಸಿಂಹ ದೇವರ ಮೂರ್ತಿಯ ಕೈಯಲ್ಲಿ ಗುಲಗಂಜಿಯ ಕೆತ್ತನೆ ಇರುವುದರಿಂದ 'ಗುಂಜ ನರಸಿಂಹ' ಎಂಬ ಹೆಸರೂ ಬಂದಿದೆ. ಚೆನ್ನಕೇಶವ ದೇವಾಲಯವನ್ನು ಚೆನ್ನಕೇಶವ ದೇವಾಲಯ ಮತ್ತು ಕೇಶವ ದೇವಾಲಯ ಎಂದೂ ಕರೆಯಲಾಗುತ್ತದೆ , ಇದು ಭಾರತದ ಮೈಸೂರು ಜಿಲ್ಲೆಯ ಸೋಮನಾಥಪುರದಲ್ಲಿ ಕಾವೇರಿ ನದಿಯ ದಡದಲ್ಲಿರುವ ವೈಷ್ಣವ ಹಿಂದೂ ದೇವಾಲಯವಾಗಿದೆ . ಈ ದೇವಾಲಯವನ್ನು 1258 CE ನಲ್ಲಿ ಹೊಯ್ಸಳ ರಾಜ ನರಸಿಂಹ III ರ ಜನರಲ್ ಸೋಮನಾಥ ದಂಡನಾಯಕನು ಪವಿತ್ರಗೊಳಿಸಿದನು . ಇದು ಮೈಸೂರು ನಗರದ ಪೂರ್ವಕ್ಕೆ 38 ಕಿಲೋಮೀಟರ್ (24 ಮೈಲಿ) ದೂರದಲ್ಲಿದೆ.

ಚಿತ್ರಗಳು[ಬದಲಾಯಿಸಿ]

ಸರ್ಕಾರಿ ಪಿಯು ಕಾಲೇಜು, ನರಸೀಪುರ