ವಿಷಯಕ್ಕೆ ಹೋಗು

ಮೈಸೂರು ಅರಮನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈಸೂರು ಅರಮನೆ
ಮೈಸೂರು ಅರಮನೆ
ಮೈಸೂರು ಅರಮನೆ is located in Karnataka
ಮೈಸೂರು ಅರಮನೆ
ಕರ್ನಾಟಕದ ಭೂಪಟದಲ್ಲಿ ಮೈಸೂರು ಅರಮನೆ
ಸಾಮಾನ್ಯ ಮಾಹಿತಿ
ವಾಸ್ತುಶಾಸ್ತ್ರ ಶೈಲಿಇಂಡೋ-ಸಾರ್ಸೆನಿಕ್
ಸ್ಥಳಒಳ ಮೈಸೂರು
ನಗರ ಅಥವಾ ಪಟ್ಟಣಮೈಸೂರು
ದೇಶಭಾರತ
ನಿರ್ದೇಶಾಂಕ12°18′14″N 76°39′16″E / 12.3039°N 76.6544°E / 12.3039; 76.6544
ಇಗಿನ ಬಾಡಿಗೆದಾರರುಕರ್ನಾಟಕ ಸರ್ಕಾರ
ನಿರ್ಮಾಣ ಪ್ರಾರಂಭ೧೮೯೭
ಮುಕ್ತಾಯ೧೯೧೨
ವಿನ್ಯಾಸ ಮತ್ತು ನಿರ್ಮಾಣ
Ownerರಾಜಮಾತ ಪ್ರಮೋದಾ ದೇವಿ ಒಡೆಯರ್
ವಾಸ್ತುಶಿಲ್ಪಿಹೆನ್ರಿ ಇರ್ವಿನ್
Designationsಮೈಸೂರು ಮಹಾರಾಜರ ಸ್ಥಾನ
The Grand Mysore Palace
ಮೈಸೂರು ಅರಮನೆಯ ಸಂಜೆಯ ನೋಟ
ಚಾವಣಿಯ ಕಲಾಕೃತಿ
ಮೈಸೂರು ಅರಮನೆ ಮುಖ್ಯ ಮಾರ್ಗ
ಗ್ಯಾಲರಿ
'ಅಂಬಾ ವಿಲಾಸ್ ಅರಮನೆ ಅಥವಾ ಮೈಸೂರರಮನೆ'

ಅಂಬಾ ವಿಲಾಸ್ ಅರಮನೆ ಮೈಸೂರು ನಗರದಲ್ಲಿರುವ ಅನೇಕ ಅರಮನೆಗಳಲ್ಲಿ ಮುಖ್ಯವಾದ ಅರಮನೆ. ಮೈಸೂರು "ಅರಮನೆಗಳ ನಗರ" ಎಂದು ಕರೆಯಲ್ಪಡುತ್ತದೆ. "ಮೈಸೂರು ಅರಮನೆ"[] ಎನ್ನುವಾಗ ಸಾಮಾನ್ಯವಾಗಿ ಮುಖ್ಯ ಅರಮನೆಯಾದ ಅಂಬಾ ವಿಲಾಸವನ್ನು ನಿರ್ದೇಶಿಸಿ ಹೇಳಲಾಗುತ್ತದೆ. ಇದು ಹಿಂದಿನ ಮೈಸೂರು ಸಂಸ್ಥಾನದ ಒಡೆಯರ್ ವಂಶದ ಅರಸರ ನಿವಾಸ ಹಾಗೂ ದರ್ಬಾರು ಶಾಲೆಯಾಗಿದ್ದಿತು. ಈ ಅರಮನೆಯ ನಿರ್ಮಾಣ ಪ್ರಾರಂಭಿಸಿದ್ದು ೧೮೯೭ ರಲ್ಲಿ; ನಿರ್ಮಾಣ ೧೯೧೨ ರಲ್ಲಿ ಮುಗಿಯಿತು. ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಮುಖ್ಯವಾದ ಸ್ಥಳಗಳಲ್ಲಿ ಮೈಸೂರು ಅರಮನೆಯೂ ಒಂದು. ಈಗಿರುವ ಮೈಸೂರು ಅರಮನೆಯ ಜಾಗದಲ್ಲಿ ಮರದಿಂದ ನಿರ್ಮಾಣ ಅರಮನೆ ಇತ್ತು. ಮರದ ಅರಮನೆಗೆ ಬೆಂಕಿ ಬಿದ್ದು ಸುಟ್ಟು ಹೋದ ನಂತರ ಈಗಿರುವ ಅರಮನೆ ಕಟ್ಟಲು ಶುರು ಮಾಡುತ್ತಾರೆ.

[]== ಚರಿತ್ರೆ ==

  • ಮೊದಲು ಈ ಸಂಸ್ಥಾನದ ರಾಜಧಾನಿ ಶ್ರೀರಂಗಪಟ್ಟಣ ಆಗಿತ್ತು
  • 1799ರಲ್ಲಿ ಟಿಪ್ಪು ನಿಧನರಾದ ನಂತರ ಮೈಸೂರು ಅರಸರು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಸ್ಥಳಾಂತಗೊಳ್ಳುತ್ತಾರೆ. ಆಗಿನ್ನೂ 6 ವರ್ಷದ ಬಾಲಕನಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ 1897ರಲ್ಲಿ ಹಳೆಯ ಮರದ ಅರಮನೆಯಲ್ಲಿ ಮದುವೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಂಕಿ ಬಿದ್ದು, ಇಡೀ ಅರಮನೆ ಸುಟ್ಟು ಹೋಯಿತು. ನಂತರ ಅರಮನೆ ವಾಸಿಗಳು ಸಮೀಪದ ಜಗನ್ಮೋಹನ ಅರಮನೆಗೆ ಸ್ಥಳಾಂತಗೊಳ್ಳುತ್ತಾರೆ.ಒಡೆಯರ್ ಅರಸರು ೧೪ ನೆಯ ಶತಮಾನದಲ್ಲಿಯೇ ಇಲ್ಲಿ ಒಂದು ಅರಮನೆಯನ್ನು ಕಟ್ಟಿಸಿದ್ದರು. ಈ ಅರಮನೆ ೧೬೩೮ ರಲ್ಲಿ ಸಿಡಿಲು ಹೊಡೆದು ಭಾಗಶಃ ಹಾಳಾಯಿತು. ಆಗ ಇದನ್ನು ರಿಪೇರಿ ಮಾಡಿ ವಿಸ್ತರಿಸಲಾಗಿತ್ತು.
  • ಆದರೆ ೧೮ ನೆಯ ಶತಮಾನದ ಕೊನೆಯ ಹೊತ್ತಿಗೆ ಅರಮನೆ ಮತ್ತಷ್ಟು ಹಾಳಾಗಿ ೧೭೯೩ ರಲ್ಲಿ ಟೀಪು ಸುಲ್ತಾನ್ ಕಾಲದಲ್ಲಿ ಅದನ್ನು ಬೀಳಿಸಲಾಯಿತು. ೧೮ಂ೩ ರಲ್ಲಿ ಇನ್ನೊಂದು ಅರಮನೆಯನ್ನು ಅದರ ಸ್ಥಳದಲ್ಲಿ ಕಟ್ಟಿಸಲಾಯಿತು. ಈ ಅರಮನೆ ಸಹ ೧೮೯೭ ರಲ್ಲಿ ರಾಜಕುಮಾರಿ ಜಯಲಕ್ಷಮ್ಮಣ್ಣಿ ಅವರ ಮದುವೆಯ ಸಂದರ್ಭದಲ್ಲಿ ಬೆಂಕಿ ಬಿದ್ದು ನಾಶವಾಯಿತು.
  • ಆಗ ಮೈಸೂರು ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ವಾಣಿವಿಲಾಸ ಸನ್ನಿಧಾನ ಇನ್ನೊಂದು ಅರಮನೆಯನ್ನು ಕಟ್ಟಲು ಬ್ರಿಟಿಷ್ ಇಂಜಿನಿಯರ್ ಹೆನ್ರಿ ಇರ್ವಿನ್ ಅವರನ್ನು ನೇಮಿಸಿದರು. ವಿವಿಧ ರೀತಿಯ ವಾಸ್ತುಕಲೆಗಳನ್ನು ಸೇರಿಸಿ ಅರಮನೆಯನ್ನು ಕಟ್ಟಲು ಅವರಿಗೆ ತಿಳಿಸಲಾಯಿತು. ಅರಮನೆ ೧೯೧೨ ರಲ್ಲಿ ಸಂಪೂರ್ಣವಾಯಿತು.

ಮೈಸೂರು ಸಂಸ್ಥಾನವನ್ನು ಆಳಿದ ಅರಸರು

[ಬದಲಾಯಿಸಿ]
  1. ಯದುರಾಯರು (ಸುಮಾರು 1399-1423)
  2. ಬೆಟ್ಟದ ಚಾಮರಾಜ ಒಡೆಯರು (1423-1459)
  3. ತಿಮ್ಮರಾಜ ಒಡೆಯರು (1459-1478)
  4. ಹಿರಿಯ ಚಾಮರಾಜ ಒಡೆಯರು (1478-1513)
  5. ಹಿರಿಯ ಬೆಟ್ಟದ ಚಾಮರಾಜ ಒಡೆಯರು (1513-1553)
  6. ಬೋಳ ಚಾಮರಾಜ ಒಡೆಯರು
  7. ಬೆಟ್ಟದ ಚಾಮರಾಜ ಒಡೆಯರು (ಈ ಮೂರೂ ಜನ 1553-1578)
  8. ರಾಜ ಒಡೆಯರು (1578-1618) ನಲವತ್ತು ವರ್ಷಗಳ ದೀರ್ಘ ಕಾಲದ ಆಳ್ವಿಕೆ.
  9. ಚಾಮರಾಜ ಒಡೆಯರು (1617-1637)
  10. ಎರಡನೆ ರಾಜ ಒಡೆಯರು (1637-1638) ಕೇವಲ 1 ವರ್ಷದ ಆಳ್ವಿಕೆ
  11. ರಣಧೀರ ಕಂಠೀರವ ನರಸರಾಜ ಒಡೆಯರು (1638-1659)
  12. ದೊಡ್ಡದೇವರಾಜ ಒಡೆಯರು (1659-1673)
  13. ಚಿಕ್ಕದೇವರಾಜ ಒಡೆಯರು (1673-1704)
  14. ಚಿಕ್ಕದೇವರಾಜ ಒಡೆಯರ ಮೂಕ ಮಗ (1704-1714 ತಾಯಿ, ಮಂತ್ರಿಗಳ ಸಹಕಾರದೊಂದಿಗೆ)
  15. ದೊಡ್ಡ ಕೃಷ್ಣರಾಜ ಒಡೆಯರು (1714-1734)
  16. ಅಂಕನಹಳ್ಳಿ ಚಾಮರಾಜ ಒಡೆಯರು
  17. ಇಮ್ಮಡಿ ಕೃಷ್ಣರಾಜ ಒಡೆಯರು (ಇಬ್ಬರೂ ದತ್ತುಪುತ್ರರು, 1766ರ ವರೆಗೆ, ಅಂದಿನ ಆಡಳಿತ ಮಂತ್ರಿಗಳ ಕುತಂತ್ರಕ್ಕೊಳಪಟ್ಟಿದ್ದು ವಿವರಗಳು ಕಡಿಮೆ)
  18. ನಂಜರಾಜ ಒಡೆಯರು (1766- 1770)
  19. ಬೆಟ್ಟದ ಚಾಮರಾಜ ಒಡೆಯರು (1770-1776)
  20. ಖಾಸಾ ಚಾಮರಾಜ ಒಡೆಯರು (1776-1796) (ನಂಜರಾಜ ಒಡೆಯರ ಕಾಲಕ್ಕೆ ಹೈದರಾಲಿಯು ಪ್ರಬಲನಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ಕೈಗೆ ತೆಗೆದುಕೊಂಡನು, 1782ರಲ್ಲಿ ಅವನು ಮರಣ ಹೊಂದಿದನು. ನಂತರ ಅವನ ಮಗ ಟಿಪ್ಪೂ ಸುಲ್ತಾನನು ಸಂಸ್ಥಾನದ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದುದರಿಂದ, ನಂಜರಾಜರು, ಬೆಟ್ಟದ ಚಾಮರಾಜರು,ಖಾಸಾ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿದ್ದರು)
  21. ಮುಮ್ಮಡಿ ಕೃಷ್ಣರಾಜ ಒಡೆಯರು (1799ರಲ್ಲಿ ಪಟ್ಟಕ್ಕೆ ಬಂದಾಗ ಕೇವಲ 5 ವರ್ಷದವರು ) ಆವರು ಸ್ವತಂತ್ರವಾಗಿ ಆಡಳಿತ ನಿರ್ವಹಿಸಿದ್ದು 1810ರಿಂದ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ಬ್ರಿಟಿಷ್ ಕಮಿಷನರಿಗೆ ಬಿಟ್ಟು ಕೊಡಬೇಕಾಯಿತು.
  22. ಚಾಮರಾಜ ಒಡೆಯರು (1881-1902)
  23. ನಾಲ್ವಡಿ ಕೃಷ್ಣರಾಜ ಒಡೆಯರು (1902-1940)
  24. ಜಯಚಾಮರಾಜ ಒಡೆಯರು (1940ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೆ,ನಂತರವೂ ರಾಜ ಪ್ರಮುಖರಾಗಿ, ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸಿದರು. ಮದ್ರಾಸು ರಾಜ್ಯದ ರಾಜ್ಯಪಾಲರಾಗಿ ನಿವೃತ್ತರಾದರು.)
  25. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಬಹದ್ದೂರ್ (20 ಫೆಬ್ರುವರಿ 1953 - 10 ಡಿಸೆಂಬರ್ 2013)
  26. ಯದುವೀರ ಕೃಷ್ಣ ದತ್ತಾ ಚಾಮರಾಜ ಒಡೆಯರ್ (28 ಮೇ 2015- ಪ್ರಸ್ತುತ)

ವಾಸ್ತುಶಿಲ್ಪ

[ಬದಲಾಯಿಸಿ]

ಅರಮನೆಯ ವಾಸ್ತುಕಲೆಯ ಶೈಲಿಯನ್ನು ಸಾಮಾನ್ಯವಾಗಿ "ಇಂಡೋ-ಸರಾಸೆನಿಕ್" ಶೈಲಿ ಎಂದು ವರ್ಣಿಸಲಾಗುತ್ತದೆ. ಮುಖ್ಯವಾಗಿ ಹಿಂದೂ, ಮುಸ್ಲಿಮ್, ಮತ್ತು ಗೋಥಿಕ್ ಶೈಲಿಯ ವಾಸ್ತುಕಲೆಗಳನ್ನು ಅರಮನೆಯ ನಿರ್ಮಾಣದಲ್ಲಿ ಉಪಯೋಗಿಸಲಾಗಿದೆ. ಕಲ್ಲಿನಲ್ಲಿ ಕಟ್ಟಲಾಗಿರುವ ಅರಮನೆಯಲ್ಲಿ ಮೂರು ಮಹಡಿಗಳಿದ್ದು, ಕೆಂಪು ಅಮೃತಶಿಲೆಯ ಗುಂಬಗಳು ಹಾಗೂ ೧೪೫ ಅಡಿ ಎತ್ತರದ ಐದು ಮಹಡಿಗಳುಳ್ಳ ಗೋಪುರವನ್ನು ಅರಮನೆ ಹೊಂದಿದೆ. ಅರಮನೆಯ ಸುತ್ತಲೂ ದೊಡ್ಡ ಉದ್ಯಾನವಿದೆ.

ದೇವಸ್ಥಾನಗಳು

[ಬದಲಾಯಿಸಿ]

ಅರಮನೆಯ ಆವರಣದಲ್ಲಿ ೧೨ ದೇವಸ್ಥಾನಗಳಿವೆ. ೧೪ ನೆಯ ಶತಮಾನದಲ್ಲಿ ಕಟ್ಟಿದ ಕೋಡಿ ಭೈರವನ ದೇವಸ್ಥಾನದಿಂದ ಹಿಡಿದು ೧೯೫೩ ರಲ್ಲಿ ಕಟ್ಟಲಾದ ದೇವಸ್ಥಾನಗಳೂ ಇವೆ. ಇಲ್ಲಿರುವ ದೇವಸ್ಥಾನಗಳಲ್ಲಿ ಪ್ರಸಿದ್ಧವಾದ ಕೆಲವು:

  1. ಸೋಮೇಶ್ವರನ ದೇವಸ್ಥಾನ
  2. ಲಕ್ಶ್ಮೀರಮಣ ದೇವಸ್ಥಾನ
  3. ಆಂಜನೇಯಸ್ವಾಮಿ ದೇವಸ್ಥಾನ
  4. ಗಣೇಶ ದೇವಸ್ಥಾನ
  5. ಶ್ವೇತ ವರಾಹ ಸ್ವಾಮಿ ದೇವಸ್ಥಾನ

ಆಕರ್ಷಣೆಗಳು

[ಬದಲಾಯಿಸಿ]
  • "ದಿವಾನ್-ಎ-ಖಾಸ್": ಮುಘಲ್ ಸಾಮ್ರಾಜ್ಯದ ಅರಮನೆಗಳಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತಿದ್ದ ಕೋಣೆ. ಮೈಸೂರು ಅರಮನೆಯಲ್ಲಿಯೂ ಇದನ್ನು ಬಳಸಲಾಗಿದೆ. ಮುಖ್ಯವಾದ ಅತಿಥಿಗಳು ಬಂದಾಗ ಅವರನ್ನು ರಾಜರು ಎದುರುಗೊಳ್ಳಲು ಉಪಯೋಗಿಸುತ್ತಿದ್ದ ಕೋಣೆ ಇದು. "ದರ್ಬಾರ್ ಹಾಲ್": ರಾಜರ ದರ್ಬಾರು ನಡೆಯುತ್ತಿದ್ದ ಶಾಲೆ. ಇಲ್ಲಿಯೇ ಜನರು ರಾಜರನ್ನು ಆಗಾಗ ಕಾಣಬಹುದಾಗಿತ್ತು. ಕಲ್ಯಾಣ ಮಂಟಪದಲ್ಲಿ ಚಿಕ್ಕ ಪುಟ್ಟ ಶುಭಕಾರ್ಯಗಳು ನಡೆಯುತ್ತಿದ್ದವು.

ಆಯುಧ ಶಾಲೆ

[ಬದಲಾಯಿಸಿ]
  • ರಾಜಮನೆತನದ ಸದಸ್ಯರು ಬಳಸುತ್ತಿದ್ದ ಆಯುಧಗಳನ್ನು ಇಲ್ಲಿ ಇಡಲಾಗಿದೆ. ಇಲ್ಲಿ ಚಾರಿತ್ರಿಕವಾದ ಅನೇಕ ಆಯುಧಗಳನ್ನು ಕಾಣಬಹುದು. ೧೪ ನೆಯ ಶತಮಾನದಲ್ಲಿ ಉಪಯೋಗಿಸಲ್ಪಡುತ್ತಿದ್ದ ಖಡ್ಗ, ಸುರಗಿ, ವ್ಯಾಗ್ರನಖ ಮೊದಲಾದ ಆಯುಧಗಳಿಂದ ಹಿಡಿದು ೨ಂನೆಯ ಶತಮಾನದ ಪಿಸ್ತೂಲುಗಳು, ಬಂದೂಕುಗಳು ಮೊದಲಾದವನ್ನು ಇಲ್ಲಿ ಕಾಣಬಹುದು.

ಮುಖ್ಯವಾಗಿ, ಒಡೆಯರ್ ವಂಶದ ಪ್ರಸಿದ್ಧ ಅರಸು ರಣಧೀರ ಕಂಠೀರವ ಉಪಯೋಗಿಸಿದ್ದ ಖಡ್ಗಗಳಲ್ಲಿ ಒಂದಾದ "ವಜ್ರಮುಷ್ಟಿ", ಹಾಗೂ ಟೀಪು ಸುಲ್ತಾನ್ ಮತ್ತು ಹೈದರ್ ಅಲಿ ಉಪಯೋಗಿಸುತ್ತಿದ್ದ ಖಡ್ಗಗಳಲ್ಲಿ ಕೆಲವನ್ನು ಇಲ್ಲಿ ಕಾಣಬಹುದು.[]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2021-10-20. Retrieved 2017-11-02.
  2. ಓರೆ ಅಕ್ಷರಗಳು
  3. Is tourism stagnating in Mysore?
ಕರ್ನಾಟಕದ ಏಳು ಅದ್ಭುತಗಳು
ಹಿರೇಬೆಣಕಲ್ ಶಿಲಾ ಸಮಾಧಿಗಳು | ಹಂಪಿ | ಗೋಲ ಗುಮ್ಮಟ | ಶ್ರವಣಬೆಳಗೊಳದ ಗೊಮ್ಮಟೇಶ್ವರ | ಮೈಸೂರು ಅರಮನೆ | ಜೋಗ ಜಲಪಾತ | ನೇತ್ರಾಣಿ ದ್ವೀಪ