ಕರ್ನಾಟಕದ ಏಳು ಅದ್ಭುತಗಳು
ಕರ್ನಾಟಕದ ಏಳು ಅದ್ಭುತಗಳು - ಕರ್ನಾಟಕದ ಸಾಂಸ್ಕೃತಿಕ, ಚಾರಿತ್ರಿಕ, ಕಲಾತ್ಮಕ ಮತ್ತು ನೈಸರ್ಗಿಕ ಹೆಗ್ಗುರುತುಗಳನ್ನು ಹುಡುಕಿ, ಗುರುತಿಸುವ ಅಭಿಯಾನ. ಈ ಅಭಿಯಾನವನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕನ್ನಡಪ್ರಭ ದಿನಪತ್ರಿಕೆ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ವಾಹಿನಿ ಆರಂಭಿಸಿತು. ಕರ್ನಾಟಕದ ಏಳು ಅದ್ಭುತಗಳನ್ನು ವೈಜ್ಞಾನಿಕ ಆಯ್ಕೆಯ ವಿಧಾನದ ಮೂಲಕ ಆರಿಸಿ ಹೆಸರಿಸುವುದು ಈ ಅಭಿಯಾನದ ಗುರಿಯಾಗಿತ್ತು.
ಕರ್ನಾಟಕದ ಏಳು ಅದ್ಭುತಗಳು ಅಭಿಯಾನಕ್ಕೆ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಮೇ 4, 2022ರಂದು ಚಾಲನೆ ನೀಡಿದರು. ಫೆಬ್ರವರಿ 25, 2023ರಂದು ಅಭಿಯಾನ ಮುಕ್ತಾಯಗೊಂಡು ಕರ್ನಾಟಕದ ಏಳು ಅದ್ಭುತಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.[೧],[೨][೩]
ಆಯ್ಕೆ ಪ್ರಕ್ರಿಯೆ
[ಬದಲಾಯಿಸಿ]ಐದು ಸುತ್ತುಗಳನ್ನು ಒಳಗೊಂಡ ಆಯ್ಕೆ ಪ್ರಕ್ರಿಯೆಯನ್ನು ಈ ಅಭಿಯಾನ ಒಳಗೊಂಡಿತ್ತು.[೪] ಸಾರ್ವಜನಿಕರಿಂದ ನಾಮ ನಿರ್ದೇಶನ, ಕ್ಷೇತ್ರ ಸಮೀಕ್ಷೆ, ಸಾರ್ವಜನಿಕರಿಗೆ ಮತ ಚಲಾವಣೆ, ತಜ್ಞ ತೀರ್ಪುಗಾರರ ಆಯ್ಕೆ ಸಮಿತಿಯ ಮೂಲಕ ಏಳು ಅದ್ಭುತಗಳನ್ನು ಅಂತಿಮಗೊಳಿಸಲಾಯಿತು. ಮೊದಲ ಹಂತದಲ್ಲಿ ಸಾರ್ವಜನಿಕರಿಂದ ನಾಮನಿರ್ದೇಶನಗಳನ್ನು ಆಹ್ವಾನಿಸಲಾಯಿತು. ಮೂವತ್ತು ದಿನಗಳ ಕಾಲ ಸಾರ್ವಜನಿಕರು ತಮ್ಮ ಮೆಚ್ಚಿನ ತಾಣಗಳನ್ನು ನಾಮನಿರ್ದೇಶನ ಮಾಡಿದರು. ಇದಕ್ಕಾಗಿಯೇ, ರೂಪಿಸಲಾಗಿದ್ದ ವೆಬ್‌ಸೈಟ್ನಲ್ಲಿ ಸಾರ್ವಜನಿಕರು ತಮ್ಮ ಮೆಚ್ಚಿನ ತಾಣಗಳನ್ನು ಸೂಚಿಸಿದರು. ಮೂವತ್ತು ದಿನಗಳಲ್ಲಿ ಸುಮಾರು ೫೦೦೦ ತಾಣಗಳು ನಾಮನಿರ್ದೇಶನಗೊಂಡವು. ಎರಡನೆಯ ಸುತ್ತಿನಲ್ಲಿ, ತಜ್ಞರ ಆಂತರಿಕ ಸಮಿತಿಯು ಐದು ಸಾವಿರ ನಾಮನಿರ್ದೇಶನಗಳನ್ನು ಪರಿಶೀಲಿಸಿ, ೧೦೦ ಅದ್ಭುತ ತಾಣಗಳನ್ನು ವೆಬ್‌ಸೈಟಿಗೆ ಹಾಕಿತು. ಮೂವತ್ತು ದಿನಗಳ ಕಾಲ ಸಾರ್ವಜನಿಕರು ತಮ್ಮ ಮೆಚ್ಚಿನ ತಾಣಕ್ಕೆ ಮತ ಹಾಕಲು ಅವಕಾಶ ನೀಡಲಾಯಿತು. ಮೂರನೆಯ ಹಂತದಲ್ಲಿ ಮತ ಹಾಕಲು ಅವಕಾಶ ನೀಡಲಾಯಿತು. ಈ ಸುತ್ತಿನಲ್ಲಿ, ಎರಡನೆಯ ಸುತ್ತಿನಲ್ಲಿ ಹೆಚ್ಚು ಮತ ಗಳಿಸಿದ ೪೯ ತಾಣಗಳನ್ನು ಸಾರ್ವಜನಿಕರ ಮುಂದಿಡಲಾಯಿತು. ಮೂವತ್ತು ದಿನಗಳ ಕಾಲ ಮತ ಹಾಕಲು ಅವಕಾಶ ಇತ್ತು. ಎರಡು ಮತ್ತು ಮೂರನೆಯ ಸುತ್ತಿನಲ್ಲಿ ೮೨ ಲಕ್ಷಕ್ಕೂ ಹೆಚ್ಚು ಮತಗಳು ವಿವಿಧ ತಾಣಗಳಿಗೆ ದಾಖಲಾದವು. ನಾಲ್ಕನೆಯ ಹಂತದಲ್ಲಿ ೨೧ ತಾಣಗಳನ್ನು ಆರಿಸಲಾಯಿತು. ಸಾರ್ವಜನಿಕರ ಮತ, ಕ್ಷೇತ್ರ ಸಮೀಕ್ಷೆ ಮತ್ತು ತಜ್ಞರ ಸಮಿತಿಯ ಜತೆ ಚರ್ಚಿಸಿ ೨೧ ತಾಣಗಳನ್ನು ಅಂತಿಮಗೊಳಿಸಲಾಯಿತು.
ಅಭಿಯಾನದ ರಾಯಭಾರಿ
[ಬದಲಾಯಿಸಿ]ನಟ, ನಿರ್ದೇಶಕ ರಮೇಶ್ ಅರವಿಂದ್ ಈ ಅಭಿಯಾನದ ರಾಯಭಾರಿಯಾಗಿದ್ದರು. ಸಕ್ರಿಯವಾಗಿ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಅವರು ಅಭಿಯಾನದ ರೂಪರೇಷೆಗಳ ಕುರಿತು ಮೌಲಿಕ ಸಂಗತಿಗಳನ್ನು ಒದಗಿಸಿದರು.
ತೀರ್ಪುಗಾರರ ಸಮಿತಿ
[ಬದಲಾಯಿಸಿ]ತೀರ್ಪುಗಾರರ ಸಮಿತಿಯಲ್ಲಿದ್ದವರು-
- ರಿಕಿ ಕೇಜ್ - 3 ಬಾರಿ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತಗಾರ, ವಿಶ್ವಸಂಸ್ಥೆಯ ಗುಡ್‌ವಿಲ್ ರಾಯಭಾರಿ, ಪರಿಸರವಾದಿ
- ಪ್ರಶಾಂತ್ ಪ್ರಕಾಶ್ - ರಾಜ್ಯ ಸ್ಟಾರ್ಟಪ್ ವಿಷನ್ ಗ್ರೂಪ್‌ನ ಅಧ್ಯಕ್ಷ, ಸರಣಿ ಆತಿಥ್ಯ ಉದ್ಯಮಿ
- ಅಮೋಘವರ್ಷ - ವೈಲ್ಡ್ ಕರ್ನಾಟಕ, ಗಂಧದ ಗುಡಿ ಚಿತ್ರಗಳ ನಿರ್ದೇಶಕ, ನಿಸರ್ಗ ಛಾಯಾಚಿತ್ರಗಾರ
- ಡಾ.ದೇವರಕೊಂಡ ರೆಡ್ಡಿ - ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ, ಪುರಾತತ್ವ ಹಾಗೂ ಇತಿಹಾಸ ತಜ್ಞ
- ವಿಲಾಸ್ ನಾಯಕ್ - ವೇಗದ ಚಿತ್ರ ಕಲಾವಿದ, ಯುವ ವಿಶ್ವ ಪ್ರವಾಸಿಗ
- ಜಗದೀಶ್ ಜಿ. - ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ
- ರವಿ ಹೆಗಡೆ - ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ
ಆಯ್ಕೆಗೊಂಡ ಕರ್ನಾಟಕದ ಏಳು ಅದ್ಭುತಗಳು
[ಬದಲಾಯಿಸಿ]ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಕೆಳಗಿನವುಗಳನ್ನು ಕರ್ನಾಟಕದ ಏಳು ಅದ್ಭುತಗಳು ಎಂದು ಘೋಷಿಸಲಾಯಿತು-[೫][೬][೭]
- ಹಿರೇಬೆಣಕಲ್ ಶಿಲಾ ಸಮಾಧಿಗಳು - ಬೃಹತ್ ಶಿಲಾಯುಗದ ಅದ್ಭುತ - ಕೊಪ್ಪಳ ಜಿಲ್ಲೆ
- ಹಂಪಿ - ಪುರಾತತ್ವ ಅದ್ಭುತ - ವಿಜಯನಗರ ಜಿಲ್ಲೆ
- ಗೋಲ ಗುಮ್ಮಟ - ವಾಸ್ತು ವಿಜ್ಞಾನ ಅದ್ಭುತ - ವಿಜಯಪುರ ಜಿಲ್ಲೆ
- ಶ್ರವಣಬೆಳಗೊಳದ ಗೊಮ್ಮಟೇಶ್ವರ - ತಾತ್ವಿಕ ಅದ್ಭುತ - ಹಾಸನ ಜಿಲ್ಲೆ
- ಮೈಸೂರು ಅರಮನೆ - ರಾಜಪರಂಪರಾ ಅದ್ಭುತ - ಮೈಸೂರು ಜಿಲ್ಲೆ
- ಜೋಗ ಜಲಪಾತ - ನೈಸರ್ಗಿಕ ಅದ್ಭುತ - ನೆಲ - ಶಿವಮೊಗ್ಗ ಜಿಲ್ಲೆ [೮]
- ನೇತ್ರಾಣಿ ದ್ವೀಪ - ನೈಸರ್ಗಿಕ ಅದ್ಭುತ - ಜಲ - ಉತ್ತರಕನ್ನಡ ಜಿಲ್ಲೆ
ಛಾಯಾಂಕಣ
[ಬದಲಾಯಿಸಿ]-
ಹಿರೇಬೆಣಕಲ್
-
ಹಂಪಿ
-
ಗೋಲ ಗುಮ್ಮಟ
-
ಶ್ರವಣಬೆಳಗೊಳ
-
ಮೈಸೂರು ಅರಮನೆ
-
ಜೋಗ ಜಲಪಾತ
-
ನೇತ್ರಾಣಿ ದ್ವೀಪ
ಬಾಹ್ಯ ಸಂಪರ್ಕ
[ಬದಲಾಯಿಸಿ]- ಕರ್ನಾಟಕದ ಏಳು ಅದ್ಭುತಗಳ ಅಧಿಕೃತ ಜಾಲತಾಣ
- ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಜಾಲತಾಣದಲ್ಲಿ - ಕರ್ನಾಟಕದ 7 ಅದ್ಬುತಗಳು
ಉಲ್ಲೇಖ
[ಬದಲಾಯಿಸಿ]- ↑ https://kannada.asianetnews.com/travel/grand-unveiling-of-the-seven-wonders-of-karnataka-vin-rqoh21
- ↑ https://kannada.oneindia.com/news/karnataka/here-is-list-of-seven-wonders-of-karnataka-campagin-through-digital-partner-the-josh/articlecontent-pf268164-285308.html
- ↑ "ಆರ್ಕೈವ್ ನಕಲು". Archived from the original on 2023-03-10. Retrieved 2023-03-10.
- ↑ https://www.7wondersofkarnataka.com/jury-committee/kannada
- ↑ https://newsable.asianetnews.com/india/its-official-seven-wonders-of-karnataka-unveiled-by-cm-bommai-actor-ramesh-aravind-lauds-moment-of-glory-snt-rqn9lq
- ↑ "ಆರ್ಕೈವ್ ನಕಲು". Archived from the original on 2023-03-10. Retrieved 2023-03-10.
- ↑ https://www.justkannada.in/front-page/mysore-palace-is-one-of-the-7-wonders-of-karnataka-chief-minister-basavaraja-bommai/
- ↑ https://shimoga.nic.in/en/tourist-place/jogfalls/
ಹಿರೇಬೆಣಕಲ್ ಶಿಲಾ ಸಮಾಧಿಗಳು | ಹಂಪಿ | ಗೋಲ ಗುಮ್ಮಟ | ಶ್ರವಣಬೆಳಗೊಳದ ಗೊಮ್ಮಟೇಶ್ವರ | ಮೈಸೂರು ಅರಮನೆ | ಜೋಗ ಜಲಪಾತ | ನೇತ್ರಾಣಿ ದ್ವೀಪ |