ರಾಯಚೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಯಚೂರು
ನಗರ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆರಾಯಚೂರು
ಸರ್ಕಾರ
 • ಪಾಲಿಕೆನಗರಸಭೆ
Elevation
೪೦೭ m (೧,೩೩೫ ft)
Demonym(s)ರಾಯಚೂರಿನವರು
ಭಾಷೆ
 • ಅಧಿಕೃತಕನ್ನಡ
ವಾಹನ ನೋಂದಣಿKA 36
ಜಾಲತಾಣwww.raichurcity.mrc.gov.in

ರಾಯಚೂರು [೧] ಭಾರತದ ಕರ್ನಾಟಕ ರಾಜ್ಯದ ಒಂದು ನಗರ ಮತ್ತು ಜಿಲ್ಲಾ ಕೇಂದ್ರವಾಗಿದೆ. ರಾಯಚೂರು ನಗರವು ಕೃಷ್ಣ ಮತ್ತು ತುಂಗಭದ್ರಾ ನದಿಗಳ ತೀರದಲ್ಲಿದೆ. ಇದು ರಾಜ್ಯ ರಾಜಧಾನಿ ಬೆಂಗಳೂರಿನಿಂದ 409 ಕಿ.ಮಿ ಅಂತರದಲ್ಲಿ ಇದೆ 

ಭೂಗೋಳ[ಬದಲಾಯಿಸಿ]

ರಾಯಚೂರು ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇರುವ ನಗರವಾಗಿದೆ. [೨] ಇದು ಸರಾಸರಿ 407 ಮೀಟರ್ (1335 ಅಡಿ) ಎತ್ತರದಲ್ಲಿ ಇದೆ.   

ಬೇಸಿಗೆಯಲ್ಲಿ ಈ ಪ್ರದೇಶವು ಅತ್ಯಂತ ಬಿಸಿಯಾಗಿರುತ್ತದೆ ಮತ್ತು ಇದರ ಗರಿಷ್ಠ ತಾಪಮಾನವು 40°C ಕ್ಕಿಂತ ಹೆಚ್ಚಾಗುತ್ತದೆ.  ಈ ನಗರದ ಮಳೆಗಾಲದ ಅವಧಿಯು ಮೇ ಯಿಂದ ಆಗಸ್ಟ್ ತಿಂಗಳುಗಳು ಆಗಿವೆ . ಒಟ್ಟಾರೆಯಾಗಿ, ಈ ಪ್ರದೇಶವು ವರ್ಷದ ಬಹುಪಾಲು ಬಿಸಿಯಾದ ವಾತಾವರಣವನ್ನು ಹೊಂದಿದೆ.

ಜನಸಂಖ್ಯೆ[ಬದಲಾಯಿಸಿ]

2001 ರ ಭಾರತದ ಜನಗಣತಿಯ ಪ್ರಕಾರ, [೩]

ರಾಯಚೂರಿನಲ್ಲಿ 57.61% ರಷ್ಟು ಜನ ಹಿಂದೂ ಧರ್ಮದವರಾಗಿದ್ದಾರೆ. ಮತ್ತು ಶೇಕಡಾ 39.87% ರಷ್ಟು ಜನರು ಇಸ್ಲಾಂ ಧರ್ಮದವರಾಗಿದ್ದಾರೆ. ರಾಯಚೂರಿನಲ್ಲಿ ಕ್ರಿಶ್ಚಿಯನ್ ಧರ್ಮವನ್ನು 1.18%, ಜೈನ ಧರ್ಮವನ್ನು 0.94%, ಸಿಖ್ ಧರ್ಮವನ್ನು 0.08% ಮತ್ತು ಬೌದ್ಧ ಧರ್ಮವನ್ನು 0.08% ಅನುಸರಿಸುತ್ತಿದ್ದಾರೆ. ಸರಿಸುಮಾರು 0.29% 'ನಿರ್ದಿಷ್ಟ ಧರ್ಮವಿಲ್ಲ' ಎಂದು ಹೇಳಿದ್ದಾರೆ. ಈ ನಗರದಲ್ಲಿ ಹೆಚ್ಚಾಗಿ ಕನ್ನಡ ಭಾಷೆಯನ್ನ ಮಾತನಾಡುತ್ತಾರೆ.

ಉಲ್ಲೇಖ[ಬದಲಾಯಿಸಿ]

  1. "Raichur District".
  2. Falling Rain Genomics, Inc - Raichur
  3. "Census of India 2001: Data from the 2001 Census, including cities, villages and towns (Provisional)". Census Commission of India. Archived from the original on 16 June 2004. Retrieved 1 November 2008.
"https://kn.wikipedia.org/w/index.php?title=ರಾಯಚೂರು&oldid=1155839" ಇಂದ ಪಡೆಯಲ್ಪಟ್ಟಿದೆ