ಮಾನ್ಯಖೇಟ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
{{#if:|
Manyakheta ಮಾನ್ಯಖೇಟ
Malkhed ಮಳಖೇಡ
—  village  —
Manyakheta ಮಾನ್ಯಖೇಟ is located in Karnataka
Manyakheta ಮಾನ್ಯಖೇಟ
Manyakheta ಮಾನ್ಯಖೇಟ
Location in Karnataka, India
ರೇಖಾಂಶ: 17°11′42″N 77°9′39″E / 17.19500°N 77.16083°E / 17.19500; 77.16083Coordinates: 17°11′42″N 77°9′39″E / 17.19500°N 77.16083°E / 17.19500; 77.16083
ದೇಶ  ಭಾರತ
ರಾಜ್ಯ ಕರ್ನಾಟಕ
ಜಿಲ್ಲೆ ಕಲಬುರ್ಗಿ
ತಾಲ್ಲೂಕು ಸೇಡಂ
ಲೋಕಸಭಾ ಕ್ಷೇತ್ರ ಕಲಬುರ್ಗಿ
ಜನಸಂಖ್ಯೆ (2001)
 - ಒಟ್ಟು ೧೧,೧೮೦
 - ಸಾಂದ್ರತೆ ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ","./ಚದರ ಕಿಮಿ (Expression error: Unexpected < operator./ಚದರ ಮೈಲಿ)
{{{language}}} {{{ಭಾಷೆ}}}

ಮಾನ್ಯಖೇಟ (ಇಂದಿನ ಮಳಖೇಡ) ಎಂಬುದು ೯ ನೇ ಶತಮಾನದಲ್ಲಿ ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಮಾನ್ಯಖೇಟ ಇಂದಿನ ಗುಲಬರ್ಗಾ ಜಿಲ್ಲೆಯಲ್ಲಿ ಕಾಗಿಣಿ ನದಿಯ ದಡದಲ್ಲಿದೆ.ಇದು ಗುಲಬರ್ಗಾ ದಿ೦ದ ಸುಮಾರು ೪೦ ಕಿಲೊಮೀಟರ್ ದೂರದಲ್ಲಿದೆ.ಇದು ಕ್ರಿ. ಶ. ೮೧೮- ೯೮೨ ಅವಧಿಯಲ್ಲಿ ರಾಷ್ಟ್ರಕೂಟರ ರಾಜಧಾನಿಯಗಿತ್ತು . ರಾಷ್ಟ್ರಕೂಟರ ರಾಜ ಒಂದನೇ ಅಮೋಘವರ್ಷನ ಕಾಲದಲ್ಲಿ ರಾಷ್ಟ್ರಕೂಟರ ರಾಜಧಾನಿಯನ್ನು ಇವತ್ತಿನ ಬೀದರ್ ಜಿಲ್ಲೆಮಯೂರಖಂಡಿಯಿಂದ ಇಲ್ಲಿಗೆ ಸ್ಥಳಾಂತರಿಸಲಾಯಿತು . ರಾಷ್ಟ್ರಕೂಟರ ಪತನದ ನಂತರವೂ ಅವರ ಉತ್ತರಾಧಿಕಾರಿಗಳಾದ ಕಲ್ಯಾಣದ ಚಾಲುಕ್ಯರ ಆಡಳಿತದಲ್ಲಿ ರಾಜಧಾನಿ ಆಗಿಯೇ ಕ್ರಿ.ಶ. ೧೦೫೦ರ ವರೆಗೂ ಮಾನ್ಯಖೇಟವು ಮುಂದುವರೆಯಿತು .[೧]

ಮಳಖೇಡವು ಎರಡು ಬಹಳ ಹಳೆಯ ಸಂಸ್ಥೆಗಳಿಗೆ ನೆಲೆಯಾಗಿದೆ .

  • ಮಧ್ವಾಚಾರ್ಯದ್ವೈತ ಸಿದ್ಧಾಂತದ ಉತ್ತರಾದಿ ಮಠ. ಇಲ್ಲಿ ಮಧ್ವಾಚಾರ್ಯರ ಬ್ರಹ್ಮಸೂತ್ರ ಭಾಷ್ಯಕ್ಕೆ 'ನ್ಯಾಯಸುಧೆ' ಎಂಬ ಟೀಕೆ ಬರೆದು ಟೀಕಾಚಾರ್ಯ ಎಂದು ಪ್ರಸಿದ್ಧರಾದ ಶ್ರೀ ಜಯತೀರ್ಥರ ಬೃಂದಾವನವು ಇಲ್ಲಿದೆ.
  • ಇನ್ನೊಂದು ಜೈನ ಭಟ್ಟಾರಕ ಮಠ. ಇದು ನೇಮಿನಾಥ ದೇವಾಲಯ . ಒಂಭತ್ತನೆ ಶತಮಾನದ್ದು . ಇಲ್ಲಿ ೨೪ ಜೈನ ತೀರ್ಥಂಕರರ ಮೂರ್ತಿಗಳು , ನಂದೀಶ್ವರ ದ್ವೀಪ ಮತ್ತು ಯಕ್ಷಿಯ ಮೂರ್ತಿಗಳು ಇವೆ . ಇದು ಪ್ರಸಿದ್ಧ ಪಂಚಧಾತು ಸ್ಥಳವಾಗಿದೆ. ಇಲ್ಲಿ ಅನೇಕ ಐತಿಹಾಸಿಕ ಚಿತ್ರಣಗಳೂ ಇವೆ .

ಒಂಬತ್ತನೇ ಶತಮಾನದಲ್ಲಿ ಇಲ್ಲಿ ಆಚಾರ್ಯ ಜಿನಸೇನ ಮತ್ತು ಶಿಷ್ಯ ಗುಣಭದ್ರರು ಮಹಾಪುರಾಣ( ಆದಿಪುರಾಣ ಮತ್ತು ಉತ್ತರಪುರಾಣ) ವನ್ನು ರಚಿಸಿದರು. ಸೋಮದೇವ ಸೂರಿಯು ಯಶಸ್ತಿಲಕ ಚಂಪೂವನ್ನು ಇಲ್ಲಿಯೇ ರಚಿಸಿದನು. ಮಹಾವೀರಾಚಾರ್ಯನು 'ಗಣಿತಸಾರಸಂಗ್ರಹ' ಎಂಬ ಗಣಿತಗ್ರಂಥವನ್ನು ಇಲ್ಲಿಯೇ ಬರೆದನು. ಪ್ರಸಿದ್ಧ ಅಪಭ್ರಂಶ ಕವಿ ಪುಷ್ಪದಂತನು ಇಲ್ಲಿಯೇ ಬಾಳಿದನು.

References[ಬದಲಾಯಿಸಿ]

  • Dr. Suryanath U. Kamath (2001). A Concise History of Karnataka from pre-historic times to the present, Jupiter books, MCC, Bangalore (Reprinted 2002) OCLC: 7796041

ಹೊರಗಿನ ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]