ಬಾವುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾವುಟಗಳು

ಬಾವುಟ ಸಂಕೇತ ಸೂಚಿಸಲು ಅಥವಾ ಸಂವಹನ ಮೂಡಿಸಲು ಬಳಸಲಾಗುವ ಬಟ್ಟೆಯ ತುಂಡು. ಬಾವುಟವನ್ನು ಕಂಬಕ್ಕೆ ಕಟ್ಟಿ ಅಥವಾ ಕೋಲಿಗೆ ಕಟ್ಟಿ ಹಾರಿಸಲಾಗುತ್ತದೆ. ಬಾವುಟಗಳನ್ನು ಮೊದಲು ಸಂಕೇತ ರವಾನಿಸಲು ಬಳಸಲಾಗುತ್ತಿತ್ತು, ಬಾವುಟವನ್ನು ಹಿಡಿದವರ ಗುರುತಿಗಾಗಿ ಬಳಸಲಾಗುತ್ತಿತ್ತು. ಈಗಲೂ‌ ಇದೇ ಬಳಕೆಗಳಲ್ಲಿ ಬಾವುಟಗಳನ್ನು ನಾವು ಕಾಣುತ್ತೇವೆ. ಬಾವುಟಗಳನ್ನು ಸಂದೇಶ ರವಾನಿಸಲು ಅಥವಾ ಜಾಹೀರಾತಿಗಾಗಿ, ಅಥವಾ ಅಲಂಕಾರ ಕಾರ್ಯಗಳಿಗೆ ಕೂಡ ಬಳಸಲಾಗುತ್ತದೆ.

ಬಾವುಟಗಳ ಬಗ್ಗೆ ನಡೆಯುವ ಅಧ್ಯಯನವನ್ನು ಆಂಗ್ಲದಲ್ಲಿ ವೆಕ್ಸಿಲ್ಲಾಲಜಿ ಎಂದು ಕರೆಯುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ವೆಕ್ಸಿಲ್ಲಮ್ ಎಂದರೆ ಬಾವುಟ ಎಂದರ್ಥ.

ಮಂತ್ರಾಲಯ ಕಟ್ಟಡದ ಮೇಲೆ ಇರುವ ಬಾವುಟ ಭಾರತದಲ್ಲೇ‌ ಅತಿ ದೊಡ್ಡ ಬಾವುಟವಂತೆ!


"https://kn.wikipedia.org/w/index.php?title=ಬಾವುಟ&oldid=1185324" ಇಂದ ಪಡೆಯಲ್ಪಟ್ಟಿದೆ