ಗೌಡ

ವಿಕಿಪೀಡಿಯ ಇಂದ
Jump to navigation Jump to search

ಗೌಡ ಎಂದರೆ ಗ್ರಾಮದ , ಅಥವಾ ಜಮಿನ್ದಾರ, ಅಥವಾ ಒಂದು ಊರಿನ ಪಂಚಾಯ್ತಿದಾರ. ಕುರುಬ ಮತ್ತುಹಲವು ಜಾತಿಯ ಜನರು ಗೌಡ ಎಂಬ ಪದದಿಂದ ಬಳಸುತ್ತಾರೆ. ಊರಿನ ಹಿರಿಯನನ್ನು ಭೂ ಒಡೆಯ, ಕೃಷಿಕ ಎಂದು ಕರೆಯುತ್ತಾರೆ,, ತಮ್ಮ ಊರಿನ ಪೂಜಾರಿಯನ್ನು ದೇವರಗೌಡ ಅಥವಾ ದೇವರಗುಡ್ಡ ಎನ್ನುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಗೌಡ ಎಂಬ ಹೆಸರನ್ನು ಬಹುತೇಕ ಸಮಾಜದ ಜನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ರಾಜಕೀಯ ಪ್ರೇರಣೆಯು ಇದೆ.

ಹಿಂದೆ ಗ್ರಾಮದ ಹಿರಿಯನನ್ನು 'ಗೌಡ' ಎಂದು ಕರೆಯುತ್ತಿದ್ದರು. ಆರಂಭದಲ್ಲಿ 'ಗಾಮುಂಡ' ಎಂದರೆ 'ಗ್ರಾಮ+ಮುಖಂಡ' ಎಂಬ ಅರ್ಥದಲ್ಲಿ ಬಳಕೆಗೆ ಬಂತು. ಗ್ರಾಮ+ಮುಖಂಡ>ಗಾಮುಂಡ>ಗಾವುಂಡ>ಗವುಂಡ> ಗವುಡ>ಗೌಡ ಎಂಬ ರೂಪ ಹೊಂದಿದೆ. 'ಗೌಡ' ಎಂಬ ಪದವು 'ಸ್ಥಾನಸೂಚಿ' ಮತ್ತು 'ಅಧಿಕಾರಸೂಚಿ' ಆಗಿದೆ. ಅದೇ ಹಿನ್ನೆಲೆಯಿಂದ ಬಂದವರನ್ನು ಗೌಡರೆಂದು ಕರೆಯುವುದು ರೂಢಿಯಾಯಿತು. ಇಂದು 'ಗೌಡ' ಪದವು ಜಾತಿಸೂಚಿ ಪದವಾಗಿ ಬಳಕೆಯಾಗಿರಬಹುದು.

ಉತ್ತರ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲಿ ಕುರುಬರು "ನಾಡ ಗೌಡ" ಅಥವ "ಪಾಟೀಲ್/ಪಟೇಲ್" "ಗೌಡ" ಯೆ೦ದು ತಮ್ಮ ಹೆಸರಿನ ಜೊತೆ ನಮುದಿಸಿಕೋ೦ಡಿರುತ್ತಾರೆ ಮತ್ತು ಗ್ರಾಮದ ದೇವರ ಪೂಜಾರಿಗಳು ಆಗಿರುತ್ತಾರೆ.

ಗೌಡ ಎಂದು ಹೆಸರಿನ ಜೊತೆ ಸೇರಿಸುವ ಸಮಾಜ." ಗೊಲ್ಲಗೌಡ, ಒಕ್ಕಲಿಗೌಡ, ಕುರುಬಗೌಡರು"

"https://kn.wikipedia.org/w/index.php?title=ಗೌಡ&oldid=1026225" ಇಂದ ಪಡೆಯಲ್ಪಟ್ಟಿದೆ