ಗೌಡ (ಉಪನಾಮ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೌಡ ಎಂದರೆ ಗ್ರಾಮದ, ಅಥವಾ ಜಮಿನ್ದಾರ, ಅಥವಾ ಒಂದು ಊರಿನ ಪಂಚಾಯ್ತಿದಾರ. ಒಕ್ಕಲಿಗ ಮತ್ತು ಹಲವು ಜಾತಿಯ ಜನರು ಗೌಡ ಎಂಬ ಪದದಿಂದ ಬಳಸುತ್ತಾರೆ. ಊರಿನ ಹಿರಿಯನನ್ನು ಭೂ ಒಡೆಯ, ಕೃಷಿಕ ಎಂದು ಕರೆಯುತ್ತಾರೆ. ತಮ್ಮ ಊರಿನ ಪೂಜಾರಿಯನ್ನು ದೇವರಗೌಡ ಅಥವಾ ದೇವರಗುಡ್ಡ ಎನ್ನುತ್ತಾರೆ.

ಹಿಂದೆ ಗ್ರಾಮದ ಹಿರಿಯನನ್ನು 'ಗೌಡ' ಎಂದು ಕರೆಯುತ್ತಿದ್ದರು. ಆರಂಭದಲ್ಲಿ 'ಗಾಮುಂಡ' ಎಂದರೆ 'ಗ್ರಾಮ+ಮುಖಂಡ' ಎಂಬ ಅರ್ಥದಲ್ಲಿ ಬಳಕೆಗೆ ಬಂತು. ಗ್ರಾಮ+ಮುಖಂಡ>ಗಾಮುಂಡ>ಗಾವುಂಡ>ಗವುಂಡ> ಗವುಡ>ಗೌಡ ಎಂಬ ರೂಪ ಹೊಂದಿದೆ. 'ಗೌಡ' ಎಂಬ ಪದವು 'ಸ್ಥಾನಸೂಚಿ' ಮತ್ತು 'ಅಧಿಕಾರಸೂಚಿ' ಆಗಿದೆ. ಅದೇ ಹಿನ್ನೆಲೆಯಿಂದ ಬಂದವರನ್ನು ಗೌಡರೆಂದು ಕರೆಯುವುದು ರೂಢಿಯಾಯಿತು. ಇಂದು 'ಗೌಡ' ಪದವು ಜಾತಿಸೂಚಿ ಪದವಾಗಿ ಬಳಕೆಯಾಗಿರಬಹುದು.

ವ್ಯುತ್ಪತ್ತಿ[ಬದಲಾಯಿಸಿ]

ಇತಿಹಾಸಕಾರ ಸೂರ್ಯನಾಥ ಯು. ಕಾಮತ್ ಅವರ ಪ್ರಕಾರ, ಗೌಡ ಎಂಬ ಪದವು ಗವುಂಡದಿಂದ ಬಂದಿದೆ. [೧] ಜರ್ಮನ್ ಇಂಡಾಲಜಿಸ್ಟ್ ಗುಸ್ತಾವ್ ಒಪೆರ್ಟ್ ಅವರು 'ಗೌಡ' ದ ಮೂಲವು "ಪರ್ವತ" ಎಂಬ ಅರ್ಥವನ್ನು ಹೊಂದಿರುವ ದ್ರಾವಿಡ ಪದವಾಗಿದೆ ಎಂದು ಅಭಿಪ್ರಾಯಪಟ್ಟರು.[೨]

ಉಲ್ಲೇಖಗಳು[ಬದಲಾಯಿಸಿ]

  1. Kamath, Suryanath U.; Naik, R.A (1983). Gazetteer of India Government of Karnataka, Karnataka State Gazetteer Part II. Bangalore: Parishree Printers. p. 243-244.: ”Villages had gramakuta or gavunda (gauda), the village headman. He had under him the village militia^ later called as talaras and tolls.”
  2. Kumar Suresh Singh; Anthropological Survey of India (2002). People of India. Anthropological Survey of India. p. 408. ISBN 978-81-85938-99-8.