ವಿಷಯಕ್ಕೆ ಹೋಗು

ರಾಜಕೀಯ ಪಕ್ಷ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಂದು ರಾಜಕೀಯ ಪಕ್ಷ ವು ಸರ್ಕಾರದೊಳಗೆ, ಸಾಮಾನ್ಯವಾಗಿ ಮತದಾನ ಶಿಬಿರಗಳಲ್ಲಿ, ಶೈಕ್ಷಣಿಕ ವ್ಯಾಪ್ತಿಗಳಲ್ಲಿ ಅಥವಾ ವಿರೋಧ ಪ್ರಕ್ರಿಯೆಗಳಲ್ಲಿ ಭಾಗವಹಿಸುವುದರ ಮೂಲಕ, ವಿಶಿಷ್ಟವಾಗಿ ರಾಜಕೀಯ ಬಲವನ್ನು ಸಾಧಿಸುವ ಮತ್ತು ನಿರ್ವಹಿಸಿಕೊಂಡು ಹೋಗುವ ಒಂದು ರಾಜಕೀಯ ಸಂಘಟನೆಯಾಗಿದೆ. ಪಕ್ಷಗಳು ಅನೇಕ ವೇಳೆ ಬಹಿರಂಗಗೊಳಿಸಲ್ಪಟ್ಟ ವಿಚಾರಪರಂಪರೆ ಅಥವಾ ನಿರ್ದಿಷ್ಟ ಗುರಿಗಳ ಜೊತೆ ಒಂದು ಬರೆಯಲ್ಪಟ್ಟ ವೇದಿಕೆಯ ಮೂಲಕ ದೂರದೃಷ್ಟಿಯನ್ನು ಪ್ರೋತ್ಸಾಹಿಸುವ, ವಿಭಿನ್ನ ಆಸಕ್ತಿಗಳ ನಡುವೆ ಒಂದು ಸಮ್ಮಿಶ್ರಣವನ್ನು ಸ್ಥಾಪಿಸುವ ಅಭಿಪ್ರಾಯವನ್ನು ಸಮರ್ಥಿಸುತ್ತವೆ.

ಮತದಾನ ವ್ಯವಸ್ಥೆಗಳು[ಬದಲಾಯಿಸಿ]

ಮತದಾನ ವ್ಯವಸ್ಥೆಗಳ ವಿಧವು ಪಕ್ಷದ ರಾಜಕೀಯ ವ್ಯವಸ್ಥೆ ವಿಧವನ್ನು ನಿರ್ಧರಿಸುವ ಒಂದು ಮಹತ್ವದ ಸಂಗತಿಯಾಗಿದೆ. ಯಾವ ದೇಶಗಳಲ್ಲಿ ಫಸ್ಟ್ ಪಾಸ್ಟ್ ದ ಪೋಸ್ಟ್ ಮತದಾನ ವ್ಯವಸ್ಥೆಗಳಿವೆಯೋ ಅಲ್ಲಿ ಎರಡು ಪಕ್ಷ ವ್ಯವಸ್ಥೆಯ ಒಂದು ಹೆಚ್ಚಿನ ಸಂಭಾವ್ಯತೆಯಿರುತ್ತದೆ. ಯುರೋಪಿನೆಲ್ಲೆಡೆ ಅಸ್ತಿತ್ವದಲ್ಲಿರುವಂತೆ, ಸೂಕ್ತ ಪ್ರಮಾಣಾನುಗುಣವಾದ ಪ್ರತಿನಿಧಿತ್ವ ಮತದಾನ ವ್ಯವಸ್ಥೆಯನ್ನು ಹೊಂದಿರುವ ದೇಶಗಳಲ್ಲಿ, ಅಥವಾ ಆಸ್ಟ್ರೇಲಿಯಾ ಅಥವಾ ಐರ್ಲೆಂಡ್ ದೇಶಗಳಂತೆ, ಒಂದು ಹೆಚ್ಚಿನ ಮಟ್ಟದಲ್ಲಿ ಆದ್ಯತಾ ಮತದಾನ ವ್ಯವಸ್ಥೆಯನ್ನು ಹೊಂದಿರುವ ದೇಶಗಳಲ್ಲಿ ಮೂರು ಅಥವಾ ಹೆಚ್ಚು ಪಕ್ಷಗಳು ಅನೇಕ ವೇಳೆ ಸಾರ್ವಜನಿಕ ಕಚೇರಿಗಳಿಗೆ ಚುನಾಯಿಸಲ್ಪಡುತ್ತವೆ.

ಪಕ್ಷಾವಲಂಬಿ (ಪಕ್ಷಪಾತಿ) ಶೈಲಿ[ಬದಲಾಯಿಸಿ]

ಪಕ್ಷಾವಲಂಬಿ ಶೈಲಿಯು ಅಲ್ಲಿ ಎಷ್ಟು ಪಕ್ಷಗಳಿವೆ ಮತ್ತು ಪ್ರತಿ ವೈಯುಕ್ತಿಕ ಪಕ್ಷವು ಯಾವ ಮಟ್ಟದ ಪ್ರಭಾವವನ್ನು ಹೊಂದಿದೆ ಎಂಬುದರ ಆಧಾರದ ಮೇಲೆ ಸರ್ಕಾರದಿಂದ ಸರ್ಕಾರಕ್ಕೆ ಬದಲಾಗುತ್ತದೆ.

ಪಕ್ಷಾವಲಂಬಿಯಲ್ಲದ[ಬದಲಾಯಿಸಿ]

ಒಂದು ಪಕ್ಷಾವಲಂಬಿಯಲ್ಲದ ವ್ಯವಸ್ಥೆಯಲ್ಲಿ, ಯಾವುದೇ ವಿಧ್ಯುಕ್ತವಾದ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿ ಇರುವುದಿಲ್ಲ, ಅವು ಕೆಲವು ವೇಳೆ ರಾಜಕೀಯ ಪಕ್ಷಗಳ ಮೇಲಿನ ಕಾನೂನು ಪ್ರತಿಬಂಧಗಳನ್ನು ಪ್ರತಿನಿಧಿಸುತ್ತವೆ. ಪಕ್ಷಾವಲಂಬಿಯಲ್ಲದ ಚುನಾವಣೆಗಳಲ್ಲಿ, ಪ್ರತಿಯೊಬ್ಬ ಅಭ್ಯರ್ಥಿಯೂ ಅವನ ಅಥವಾ ಅವಳ ಸ್ವಂತ ಅರ್ಹತೆಗಳ ಆಧಾರದ ಮೇಲೆ ಕಾರ್ಯಾಲಯಕ್ಕೆ ಅರ್ಹನಾಗಿರುತ್ತಾನೆ. ಪಕ್ಷಪಾತಿಯಲ್ಲದ ಶಾಸಕಾಂಗಗಳಲ್ಲಿ, ಶಾಸಕಾಂಗದೊಳಗಡೆ ಯಾವುದೇ ವಿಶಿಷ್ಟವಾದ ಸಾಂಪ್ರದಾಯಿಕ ಪಕ್ಷ ಹೊಂದಾಣಿಕೆ(ಒಪ್ಪಂದ)ಗಳಿರುವುದಿಲ್ಲ. ಜಾರ್ಜ್ ವಾಷಿಂಗ್‌ಟನ್‌ನ ಆಡಳಿತ ನಿರ್ವಹಣೆ ಮತ್ತು ಯುಎಸ್ ಕಾಂಗ್ರೆಸ್‌ನ ಮೊದಲ ಕೆಲವು ಅವಧಿಗಳು ಪಕ್ಷಪಾತಿಯಾಗಿರಲಿಲ್ಲ. ವಾಷಿಂಗ್‌ಟನ್‌ನು ತನ್ನ ಬೀಳ್ಕೊಡುಗೆ ಭಾಷಣ ಮಾಡುವ ಸಮಯದಲ್ಲಿ ರಾಜಕೀಯ ಪಕ್ಷಗಳ ವಿರುದ್ಧ ಎಚ್ಚರಿಕೆಯನ್ನು ನೀಡಿದನು.[೧] ನೇಬ್ರಸ್ಕಾಒಂದೇ ಶಾಸನಸಭೆಯ (ಏಕ ಸಭೆಯ) ಶಾಸಕಾಂಗವು ಕೇವಲ ರಾಜ್ಯ ಸರ್ಕಾರದ ಪ್ರಧಾನ ಭಾಗ ಮಾತ್ರವೇ ಆಗಿರುತ್ತದೆ, ಅದು ಇಂದಿನ ದಿನಗಳಲ್ಲಿ ಯುಎಸ್‌ನಲ್ಲಿ ಪಕ್ಷಾವಲಂಬಿಯಾಗಿಲ್ಲ. ಹಲವಾರು ನಗರ ಮತ್ತು ದೇಶದ ಸರ್ಕಾರಗಳು ಪಕ್ಷಾವಲಂಬಿಗಳಾಗಿಲ್ಲ.[vague] ಕೆನಡಾದಲ್ಲಿ, ಉತ್ತರಪಶ್ಚಿಮ ಭೂಪ್ರದೇಶಗಳ ಮತ್ತು ನಾನೌಟ್‌ನ ರಾಜ್ಯಕ್ಷೇತ್ರ ಶಾಸಕಾಂಗವು ಪಕ್ಷಾವಲಂಬಿಗಳಲ್ಲ. ಪಕ್ಷಪಾತವಲ್ಲದ ಚುನಾವಣೆಗಳು ಮತ್ತು ಆಡಳಿತದ ಪದ್ಧತಿಗಳು ರಾಜ್ಯ ಸಂಸ್ಥೆಗಳ ಹೊರಬದಿಯಲ್ಲಿ ಸಾಮಾನ್ಯವಾಗಿರುತ್ತವೆ.[೨] ಅಲ್ಲಿ ರಾಜಕೀಯ ಪಕ್ಷಗಳ ವಿರುದ್ಧ ಕಾನೂನು ಪ್ರತಿಬಂಧಗಳು ಇಲ್ಲದಿದ್ದಲ್ಲಿ, ಪಕ್ಷಪಾತಿಯಲ್ಲದ ವ್ಯವಸ್ಥೆಗಳೊಳಗಿಂದ ಅನೇಕವೇಳೆ ವೈಷಮ್ಯಗಳು (ಒಳಗುಂಪುಗಳು) ರಾಜಕೀಯ ಪಕ್ಷಗಳಲ್ಲಿ ಹಂತ ಹಂತವಾಗಿ ಬೆಳೆಯುತ್ತವೆ. ಟೋಕ್‌ಲಾವ್ ಇದೂ ಕೂಡ ಒಂದು ಪಕ್ಷಪಾತಿಯಲ್ಲದ ಸಂಸತ್ತನ್ನು ಹೊಂದಿದೆ.

ಏಕೈಕ ಪ್ರಬಲ ಪಕ್ಷ[ಬದಲಾಯಿಸಿ]

ಏಕೈಕ-ಪಕ್ಷ ವ್ಯವಸ್ಥೆಗಳಲ್ಲಿ, ಒಂದು ರಾಜಕೀಯ ಪಕ್ಷವು ಪರಿಣಾಮಕಾರಿಯಾದ (ವಾಸ್ತವಿಕವಾದ) ಅಧಿಕಾರವನ್ನು ಕಾನೂನುಸಮ್ಮತವಾಗಿ ನೀಡಲ್ಪಟ್ಟಿರುತ್ತದೆ. ಆದಾಗ್ಯೂ, ಸಣ್ಣ ಪಕ್ಷಗಳೂ ಕೂಡ ಕೆಲವೊಮ್ಮೆ ಅಧಿಕಾರವನ್ನು ನೀಡಲ್ಪಟ್ಟಿರುತ್ತವೆ, ಅವುಗಳು ಪ್ರಬಲವಾದ ಪಕ್ಷದ ನಾಯಕತ್ವವನ್ನು ಕಾನೂನು ಸಮ್ಮತವಾಗಿ ಅಂಗೀಕರಿಸಬೇಕಾಗುತ್ತದೆ. ಈ ಪಕ್ಷವು ಯಾವಾಗಲೂ ಸರ್ಕಾರಕ್ಕೆ ಅನುರೂಪವಾಗಿರಬೇಕೆಂದೇನೂ ಇಲ್ಲ, ಆದಾಗ್ಯೂ ಕೆಲವು ವೇಳೆ ಪಕ್ಷದೊಳಗಿನ ಸ್ಥಾನಮಾನಗಳು ಸರ್ಕಾರದೊಳಗಿನ ಸ್ಥಾನಮಾನಕ್ಕಿಂತ ಹೆಚ್ಚು ಪ್ರಮುಖವಾಗುತ್ತವೆ. ಚೀನಾ ಮತ್ತು ಸಿಂಗಾಪೂರ್‌ಗಳಂತಹ ರಾಜ್ಯಗಳು ಇದರ ಕೆಲವು ಉದಾಹರಣೆಗಳಾಗಿವೆ; ಇತರ ಉದಾಹರಣೆಗಳನ್ನು 1933 ಮತ್ತು 1945 ರ ನಡುವಿನ ಸಮಯದಲ್ಲಿ ಉಗ್ರ ಬಲಪಂಥೀಯ ದೇಶಗಳಾದ ನಾಜಿ ಜರ್ಮನಿಗಳಲ್ಲಿ ಕಂಡುಬಂದವು. ಏಕೈಕ-ಪಕ್ಷ ವ್ಯವಸ್ಥೆಯು ಆದ್ದರಿಂದ ಸಾಮಾನ್ಯವಾಗಿ ನಿರಂಕುಶ ಪ್ರಭುತ್ವ (ಸರ್ವಾಧಿಕರಿತ್ವ) ಮತ್ತು ದಬ್ಬಾಳಿಕೆಗಳ ಜೊತೆ ಸಮವೆಂದು ಪರಿಗಣಿಸಲ್ಪಡುತ್ತದೆ.

ಪ್ರಬಲ-ಪಕ್ಷ ವ್ಯವಸ್ಥೆಗಳಲ್ಲಿ, ವಿರೋಧ ಪಕ್ಷಗಳು ಅವಕಾಶ ನೀಡಲ್ಪಟ್ಟಿರುತ್ತವೆ, ಮತ್ತು ಅಲ್ಲಿ ಆಳವಾಗಿ ಊರ್ಜಿತಗೊಳಿಸಲ್ಪಟ್ಟ ಸಂಪ್ರದಾಯದ ಒಂದು ಪ್ರಜಾಪ್ರಭುತ್ವವೂ ಕೂಡ ಅಸ್ತಿತ್ವದಲ್ಲಿರಬಹುದು, ಆದರೆ ಇತರ ಪಕ್ಷಗಳು ಅಧಿಕಾರವನ್ನು ಪದೆದುಕೊಳ್ಳುವ ಯಾವುದೇ ವಾಸ್ತವಿಕ ಅವಕಾಶವನ್ನು ಹೊಂದುವುದಿಲ್ಲವೆಂದು ವ್ಯಾಪಕವಾಗಿ ಪರಿಗಣಿಸಲ್ಪಡುವುದಿಲ್ಲ. ಕೆಲವು ವೇಳೆ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸನ್ನಿವೇಶಗಳು, ಮತ್ತು ಸಾರ್ವಜನಿಕ ಅಭಿಪ್ರಾಯಗಳು ಇತರ ಪಕ್ಷಗಳ ವಿಫಲತೆಯ ಕಾರಣಗಳಾಗಿರುತ್ತವೆ. ಕೆಲವು ವೇಳೆ, ವಿಶಿಷ್ಟವಾಗಿ ಕಡಿಮೆ ಊರ್ಜಿತಗೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯ ಜೊತೆಗಿನ ದೇಶಗಳಲ್ಲಿ, ಪ್ರಬಲವಾದ ಪಕ್ಷವು ಪ್ರೋತ್ಸಾಹವನ್ನು ಬಳಸಿಕೊಂಡು ಮತ್ತು ಕೆಲವು ವೇಳೆ ಮತದಾನ ಮೋಸಗಳನ್ನು ಬಳಸಿಕೊಂಡು ಅಧಿಕಾರದಲ್ಲಿರುವುದು ಸಂಭವನೀಯವಾಗಿರುತ್ತದೆ. ಎರಡನೆಯ ದೃಷ್ಟಾಂತದಲ್ಲಿ, ಪ್ರಬಲವಾದ ಮತ್ತು ಏಕೈಕ-ಪಕ್ಷ ವ್ಯವಸ್ಥೆಗಳ ನಡುವಣ ವ್ಯಾಖ್ಯಾನವು ಅದಕ್ಕಿಂತ ಹೆಚ್ಚಾಗಿ ಅಸ್ಪಷ್ಟವಾಗಿರುತ್ತದೆ. ಪ್ರಬಲವಾದ ಪಕ್ಷದ ಉದಾಹರಣೆಗಳು, ಸಿಂಗಾಪುರದಲ್ಲಿನ ಜನರ ಕ್ರಿಯಾತ್ಮಕ ಪಕ್ಷ, ದಕ್ಷಿಣ ಆಫ್ರಿಕಾದಲ್ಲಿನ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್, ಮೊಂಟೆನೆಗ್ರೋದಲ್ಲಿನ ಮೊಂಟೆನೆಗ್ರೋದ ಸಮಾಜವಾದಿಗಳ ಪ್ರಜಾಪ್ರಭುತ್ವ ಪಕ್ಷ, ಜಪಾನ್‌ಸ್ವತಂತ್ರ ಪ್ರಜಾಪ್ರಭುತ್ವ ಪಕ್ಷ, ಮತ್ತು ಸ್ವೀಡನ್‌ನಲ್ಲಿನ ಸಾಮಾಜಿಕ ಪ್ರಜಾಪ್ರಭುತ್ವ ಪಕ್ಷ ಇವುಗಳನ್ನು ಒಳಗೊಳ್ಳುತ್ತದೆ. ಒಂದು ಪಕ್ಷ ಪ್ರಬಲ ವ್ಯವಸ್ಥೆಗಳು ಮೆಕ್ಸಿಕೋದಲ್ಲಿಯೂ ಕೂಡ 1990 ರವರೆಗೆ ಸಾಂಸ್ಥಿಕ ಕ್ರಾಂತಿಕಾರಿ ಪಕ್ಷದ ಜೊತೆ ಅಸ್ತಿತ್ವದಲ್ಲಿತ್ತು, ದಕ್ಷಿಣ ಭಾಗದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಜಾಪ್ರಭುತ್ವ ಪಕ್ಷದ ಜೊತೆ 19 ನೇ ಶತಮಾನದ ಕೊನೆಯಿಂದ 1970 ರ ದಶಕದವರೆಗೆ, ಮತ್ತು ಇಂಡೋನೇಷಿಯಾದಲ್ಲಿ ಗೋಲಂಗಾನ್ ಕಾರ್ಯ (ಕಾರ್ಯಾತ್ಮಕ ಗುಂಪುಗಳ ಪಕ್ಷ) ಪಕ್ಷದ ಜೊತೆ 1970 ರ ದಶಕದ ಮೊದಲಿನಿಂದ 1998 ರವರೆಗೆ ಅಸ್ತಿತ್ವದಲ್ಲಿತ್ತು.

ಎರಡು ರಾಜಕೀಯ ಪಕ್ಷಗಳು[ಬದಲಾಯಿಸಿ]

ಎರಡು-ಪಕ್ಷ ವ್ಯವಸ್ಥೆಗಳು ಯುನೈಟೆಡ್ ಸ್ಟೇಟ್ಸ್, ಜಮೈಕಾ, ಮತ್ತು ಘಾನಾದಂತಹ ರಾಜ್ಯಗಳಲ್ಲಿವೆ, ಅಲ್ಲಿ ಎರಡು ರಾಜಕೀಯ ಪಕ್ಷಗಳು ಯಾವ ಮಟ್ಟದಲ್ಲಿ ಪ್ರಾಬಲ್ಯವನ್ನು ಹೊಂದಿರುತ್ತವೆಂದರೆ ಯಾವುದೇ ಇತರ ಪಕ್ಷದ ಬ್ಯಾನರಿನಡಿಯಲ್ಲಿ ಚುನಾವಣೆಯ ಯಶಸ್ಸು ಬಹುಮಟ್ಟಿಗೆ ಅಸಾಧ್ಯವಾಗಿರುತ್ತದೆ. ಒಂದು ಬಲ ಪಾರ್ಶ್ವ ಸಂಯುಕ್ತ ಪಕ್ಷ ಮತ್ತು ಒಂದು ಎಡ ಪಾರ್ಶ್ವ ಸಂಯುಕ್ತ ಪಕ್ಷಗಳು ಅಂತಹ ಒಂದು ವ್ಯವಸ್ಥೆಯಲ್ಲಿ ಹೆಚ್ಚು ಸಾಮಾನ್ಯವಾಗಿರುವ ಸೈದ್ಧಾಂತಿಕ ವಿಫಲತೆಗಳಾಗಿವೆ, ಆದರೆ ಎರಡು-ಪಕ್ಷ ರಾಜ್ಯ ರಾಜಕೀಯ ಪಕ್ಷಗಳು ಸಾಂಪ್ರದಾಯಿಕವಾಗಿ ಎಲ್ಲ ಪಕ್ಷಗಳನ್ನು ಒಳಗೊಂಡವುಗಳಾಗಿರುತ್ತವೆ, ಅವು ಸೈದ್ಧಾಂತಿಕವಾಗಿ ವಿಶಾಲವಾಗಿರುತ್ತವೆ ಮತ್ತು ಎಲ್ಲವನ್ನು ಒಳಗೊಳ್ಳುವಂತವಾಗಿರುತ್ತವೆ.

ಯುನೈಟೆಡ್ ಕಿಂಗ್‌ಡಮ್ ಇದು ಎರಡು-ಪಕ್ಷ ರಾಜ್ಯ ಎಂದು ವ್ಯಾಪಕವಾಗಿ ಪರಿಗಣಿಸಲ್ಪಡುತ್ತದೆ, ಐತಿಹಾಸಿಕವಾಗಿ ಅಧಿಕಾರವು ಎರಡು ಪ್ರಬಲವಾದ ಪಕ್ಷಗಳ ನಡುವೆ ಬದಲಾಯಿಸಲ್ಪಡುತ್ತದೆ (ಪ್ರಸ್ತುತದಲ್ಲಿ ಲೇಬರ್ ಪಕ್ಷ ಮತ್ತು ಕನ್‌ಸರ್ವೇಟಿವ್ ಪಕ್ಷ). ಆದಾಗ್ಯೂ, 2010 ರ ಸಾಮಾನ್ಯ ಚುನಾವಣೆಯು ಕನ್‌ಸರ್ವೇಟಿವ್ ಪಕ್ಷದಿಂದ ನಡೆಸಲ್ಪಟ್ಟ ಮತ್ತು ಸ್ವತಂತ್ರ ಪ್ರಜಾಪ್ರಭುತ್ವವಾದಿಗಳನ್ನು ಒಳಗೊಂಡ ಒಂದು ಸಂಯುಕ್ತ ಸರ್ಕಾರಕ್ಕೆ ಕಾರಣವಾಯಿತು. ಅಲ್ಲಿ ಸ್ವತಂತ್ರ ಸಂಸತ್ತಿನ ಸದಸ್ಯರಂತೆ, ಸಂಸತ್ತಿನ ಒಂದು ಬೃಹತ್ ಪ್ರಮಾಣದ ಸ್ಥಾನಗಳನ್ನು ಹಲವಾರು ಇತರ ಪಕ್ಷಗಳೂ ಕೂಡ ಹೊಂದಿವೆ.

ಒಂದು ಜನಪ್ರಿಯವಾಗಿರುವ ಮತದಾನ ವ್ಯವಸ್ಥೆ (ಯುನೈಟೆಡ್ ಸ್ಟೇಟ್ಸ್‌ನಲ್ಲಿರುವಂತಹ ವ್ಯವಸ್ಥೆ) ಸಾಮಾನ್ಯವಾಗಿ ಒಂದು ಎರಡು-ಪಕ್ಷ ವ್ಯವಸ್ಥೆಗೆ ಕಾರಣವಾಗುತ್ತದೆ, ಇದು ಮೌರಿಸ್ ಡುವೆರ್ಜರ್‌ನಿಂದ ವರ್ಣಿಸಲ್ಪಟ್ಟ ಒಂದು ಸಂಬಂಧವಾಗಿದೆ ಮತ್ತು ಡುವೆರ್ಜರ್‌ನ ನಿಯಮ ಎಂದು ಕರೆಯಲ್ಪಡುತ್ತದೆ.[೩]

ಬಹುಸಂಖ್ಯೆಯ ಪಕ್ಷಗಳು[ಬದಲಾಯಿಸಿ]

ಇಟಲಿಯ 2004ರ ಯುರೋಪಿಯನ್ ಪಾರ್ಲಿಮೆಂಟಿನ ಚುನಾವಣೆಯ ಪಾರ್ಟಿಯ ಪಟ್ಟಿಗಳನ್ನು ತೋರಿಸುವ ಭಿತ್ತಿಪತ್ರಗಳು

ಎರಡಕ್ಕಿಂತ ಹೆಚ್ಚು ಪಕ್ಷಗಳು ಪ್ರತಿನಿಧಿಸಲ್ಪಡುವ ಮತ್ತು ಸಾರ್ವಜನಿಕ ಕಾರ್ಯಾಲಯಕ್ಕೆ ಚುನಾಯಿಸಲ್ಪಡುವ ವ್ಯವಸ್ಥೆಯನ್ನು ಬಹು-ಪಕ್ಷ ವ್ಯವಸ್ಥೆಗಳು ಎನ್ನುವರು.

ಆಸ್ಟ್ರೇಲಿಯಾ, ಕೆನಡಾ, ಪಾಕಿಸ್ತಾನ, ಭಾರತ, ಐರ್ಲೆಂಡ್ ಗಣರಾಜ್ಯ, ಯುನೈಟೆಡ್ ಕಿಂಗ್‌ಡಮ್ ಮತ್ತು ನೊರ್ವೇಗಳು ಎರಡು ಶಕ್ತಿಯುತವಾದ ಪಕ್ಷಗಳನ್ನು ಹೊಂದಿರುವ ಮತ್ತು ಪ್ರತಿನಿಧಿಸುವಿಕೆಯನ್ನು ಹೊಂದಿರುವ ಹೆಚ್ಚುವರಿ ಸಣ್ಣ ಪಕ್ಷಗಳನ್ನೂ ಕೂಡ ಹೊಂದಿರುವ ದೇಶಗಳಿಗೆ ಉದಾಹರಣೆಗಳಾಗಿವೆ. ಒಂದು ದೊಡ್ಡದಾದ ಪಕ್ಷದ ಜೊತೆ ಅಥವಾ ಇತರ ಪ್ರಬಲವಾದ ಪಕ್ಷಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಣ್ಣದಾದ ಅಥವಾ "ಮೂರನೆಯ" ಪಕ್ಷಗಳು ಸಂಯುಕ್ತ ಸರ್ಕಾರದ ಭಾಗವಾಗಿ ಪರಿಗಣಿಸಲ್ಪಡುತ್ತವೆ.

ಹೆಚ್ಚು ಸಾಮಾನ್ಯವಾಗಿ, ಎರಡು ಅಥವಾ ಹೆಚ್ಚು ಪಕ್ಷಗಳಿರುವ ದೃಷ್ಟಾಂತಗಳಲ್ಲಿ, ಯಾವುದೇ ಒಂದು ಪಕ್ಷವೂ ಕೂಡ ಏಕಾಂಗಿಯಾಗಿ ಅಧಿಕಾರವನ್ನು ಪಡೆದುಕೊಳ್ಳುವುದು ಸಾಧ್ಯವಿಲ್ಲ, ಮತ್ತು ಪಕ್ಷಗಳು ಸಂಯುಕ್ತ ಸರ್ಕಾರವನ್ನು ನಿರ್ಮಿಸಲು ಪರಸ್ಪರ ಜೊತೆಯಲ್ಲಿ ಕಾರ್ಯ ನಿರ್ವಹಿಸುತ್ತವೆ. 1980 ರ ತರುವಾಯದಿಂದ ಇದು ಐರ್ಲೆಂಡ್‌ನ ಗಣರಾಜ್ಯದಲ್ಲಿ ಬೆಳೆಯುತ್ತಿರುವ ಒಂದು ಪೃವೃತ್ತಿಯಾಗಿದೆ ಮತ್ತು ಇದು ಜರ್ಮನಿಯ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟಗಳಲ್ಲಿನ, ಮತ್ತು ಸಾಮುದಾಯಿಕ ಮಟ್ಟದ ಹೆಚ್ಚಿನ ಚುನಾವಣಾ ಕ್ಶೇತ್ರಗಳಲ್ಲಿನ ಸಾಮಾನ್ಯ ದೃಷ್ಟಾಂತವಾಗಿದೆ. ಅದಕ್ಕೂ ಹೆಚ್ಚಾಗಿ, ಐರ್ಲೆಂಡ್ ಗಣರಾಜ್ಯದ ಸ್ಥಾಪನೆಯಾದ ನಂತರ ಅಲ್ಲಿ ಒಂದು ಸಮ್ಮಿಶ್ರ ಪಕ್ಷಗಳಿಂದ ನಡೆಸಲ್ಪಟ್ಟ ಯಾವುದೇ ಸರ್ಕಾರ ಇರಲಿಲ್ಲ (ಸಾಮಾನ್ಯವಾಗಿ ಸ್ವತಂತ್ರ ಪಕ್ಷಗಳಿಂದ) ಮತ್ತು ಮತ್ತೊಂದು ಅನೇಕ ವೇಳೆ ಸಾಮಾಜಿಕ ಪ್ರಜಾಪ್ರಭುತ್ವ ಒಕ್ಕೂಟವಾಗಿತ್ತು. ರಾಜಕೀಯ ಬದಲಾವಣೆಯು ಅನೇಕ ವೇಳೆ ಒಂದು-ಪಕ್ಷ ಅಥವಾ ಎರಡು-ಪಕ್ಷ ಪ್ರಾಬಲ್ಯ ವ್ಯವಸ್ಥೆಗಳಿಗಿಂತ ಸಂಯುಕ್ತ ಸರ್ಕಾರದ ಜೊತೆ ಸುಲಭವಾಗಿರುತ್ತದೆ.[dubious ]

ಸಮತೋಲಿತ ಬಹು-ಪಕ್ಷ ವ್ಯವಸ್ಥೆಗಳು[ಬದಲಾಯಿಸಿ]

ಡೋನಾಲ್ಡ್ ಅರ್ಥರ್ ಕ್ರೊನೊಸ್‌ನಿಂದ ರಚಿಸಲ್ಪಟ್ಟ ಅನುಕರಣಗಳು[ಸೂಕ್ತ ಉಲ್ಲೇಖನ ಬೇಕು] ಮತ್ತು ಮತದಾನಗಳನ್ನು[೪] ಒಳಗೊಂಡ ತೀವ್ರವಾದ ಅಧ್ಯಯನಗಳು, ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಸ್ತುತದಲ್ಲಿ ಆಚರಣೆಯಲ್ಲಿರುವ ಒಂದು ಪರಿಣಾಮಕಾರಿಯಾದ ಎರಡು-ಪಕ್ಷ ವ್ಯವಸ್ಥೆಯನ್ನು, ಒಂದು ನಕಾರಾತ್ಮಕ ಮತದಾನ ಆಯ್ಕೆಯ ಸೇರಿಕೆಯ ಮೂಲಕ ಮತದಾರರ ಉದ್ದೇಶಗಳನ್ನು ಉತ್ತಮವಾಗಿ ಪ್ರತಿನಿಧಿಸುವುದಕ್ಕಾಗಿ, ಒಂದು ಸಮತೋಲಿತ ಬಹುಸಂಖ್ಯೆಯ ಮತದಾನ ವ್ಯವಸ್ಥೆಯಾಗಿ ಬದಲಾಯಿಸಬಹುದು. ಇದು ಒಂದು ಮಾನದಂಡಾತ್ಮಕ ಬಹುಸಂಖ್ಯೆಯ ಮತದಾನ ವ್ಯವಸ್ಥೆ ಅಥವಾ ಒಂದು ಬಹುಸಂಖ್ಯಾ-ವಿರೋಧಿ ಮತದಾನ ವ್ಯವಸ್ಥೆಗಿಂತ ಭಿನ್ನವಾಗಿರುತ್ತದೆ, ಇದರಲ್ಲಿ ಯಾರಿಗೆ ಮತವನ್ನು ನೀಡುವುದು ಎಂಬುದರ ಆಯ್ಕೆ ಅಥವಾ ಯಾರಿಗೆ ಮತವನ್ನು ನೀಡಬಾರದು ಎಂಬುದರ ಆಯ್ಕೆಯಲ್ಲಿ ಎರಡರಲ್ಲಿ ಒಂದಕ್ಕೆ ಅವಕಾಶವಿರುತ್ತದೆ, ಒಂದು ಸಮತೋಲಿತ ವ್ಯವಸ್ಥೆಯು ಯಾವುದೇ ಅಭ್ಯರ್ಥಿಯ ಪ್ರತಿ ಮತವನ್ನು ಪರವಾಗಿ ಅಥವಾ ವಿರೋಧವಾಗಿ ನೀಡುವ ಅವಕಾಶವಿರುತ್ತದೆ. ಸಮತೋಲಿತ ವ್ಯಾಪ್ತಿ ಮತದಾನ ದೃಷ್ಟಾಂತದಲ್ಲಿ, ಒಬ್ಬ ವ್ಯಕ್ತಿಯು ಪರವಾಗಿ ಮತ್ತು ವಿರೋಧವಾಗಿ ಎರಡರಿಂದ ಸಂಯೋಜಿತವಾದ ಮತವನ್ನು ಹಾಕಬಹುದು.

ಸಾಂಪ್ರದಾಯಿಕ ಬಹುಸಂಖ್ಯಾ ಮತದಾನ ವ್ಯವಸ್ಥೆಯ ಜೊತೆಗಿರುವ ಸಮಸ್ಯೆಯೆಂದರೆ, ಒಬ್ಬ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಗೆಲ್ಲುವುದನ್ನು ತಡೆಯಲು ಮಾಡುವ ಯಾವುದೇ ಪ್ರಯತ್ನಗಳು ಒಂದು ತಪ್ಪು ಸಕಾರಾತ್ಮಕ ಮತಕ್ಕೆ ಕಾರಣವಾಗುತ್ತದೆ, ಸಾಮಾನ್ಯವಾಗಿ ಒಬ್ಬ ಅಭ್ಯರ್ಥಿಯು ಇತರ ಅಭ್ಯರ್ಥಿಗಳಿಗಿಂತ ಲಾಭಕರ ಸ್ಥಾನದಲ್ಲಿರುತ್ತಾನೆ, ಆ ಮೂಲಕ ಅಂತಹ ಲಾಭವನ್ನು ಕಡಿಮೆಮಾಡುವಲ್ಲಿ ಅಥವಾ ಹೆಚ್ಚಿಸಿಕೊಳ್ಳುವಲ್ಲಿ ಕಾರಣನಾಗುತ್ತಾನೆ. ಒಂದು ಸಮತೋಲಿತ ಬಹುಸಂಖ್ಯಾ ಚುನಾವಣೆಯು ಮತದಾರನಿಗೆ ಒಂದು ನಿಜವಾದ ನಕಾರಾತ್ಮಕ ಮತವನ್ನು ಪ್ರತಿನಿಧಿಸುವಲ್ಲಿ ಸ್ವಾತಂತ್ರವನ್ನು ನೀಡುತ್ತವೆ, ಆದ್ದರಿಂದ ಇವು ತಪ್ಪು ಸಕಾರಾತ್ಮಕ ಮತಗಳನ್ನು ತೆಗೆದುಹಾಕುತ್ತವೆ ಅಥವಾ ಅದರ ಸಂಭವನೀಯತೆಯನ್ನು ಕಡಿಮೆ ಮಾಡುತ್ತವೆ.

ಒಂದು ಸಮತೋಲಿತ ಬಹುಸಂಖ್ಯಾ-ಪಕ್ಷ ವ್ಯವಸ್ಥೆಯು ಗಣನೀಯವಾಗಿ ಒಂದು ತಿಳಿಯಲ್ಪಟ್ಟ ಆದರೆ ಜನಪ್ರಿಯನಲ್ಲದ ಅಭ್ಯರ್ಥಿಯು ಚುನಾವಣೆಯಲ್ಲಿ ಗೆಲ್ಲುವ ವಿಲಕ್ಷಣವನ್ನು ಕಡಿಮೆ ಮಾಡುತ್ತದೆ, ಇದು ಯಾರು ಆ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲುವುದಕ್ಕೆ ವಿರೋಧಿಸುತ್ತಾರೋ ಅವರನ್ನು ಬೆಂಬಲಿಸುತ್ತದೆ. ಇಲ್ಲಿ ಒಂದು ಅಸಮತೋಲಿತ ವ್ಯವಸ್ಥೆಯ ನಕಾರಾತ್ಮಕ ಮತಗಳು ಅಥವಾ ಕೇವಲ ಸಕಾರಾತ್ಮಕ ಮತಗಳಿಗಿಂತ ಹೆಚ್ಚು ಮತವನ್ನು ಆ ಅಭ್ಯರ್ಥಿಯು ಪಡೆಯುವ ಸಂಭವವಿರುತ್ತದೆ. ಸಹಜವಾಗಿ ಸಕಾರಾತ್ಮಕ ಮತದಾನದ ಆಯ್ಕೆಯು ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಬಹಳ ಅವಶ್ಯಕವಾಗಿದೆ. ಎಲ್ಲವನ್ನು ಕೇವಲ ಒಂದು ನಕಾರಾತ್ಮಕ ಮತದಾನ ವ್ಯವಸ್ಥೆಗೆ ಬದಲಾಯಿಸುವುದು ಅಸಮತೋಲನದ ಪರಸ್ಪರ ವಿರುದ್ಧ-ಪ್ರವೃತ್ತಿಗಳನ್ನು ತೆಗೆದುಹಾಕುವುದಕ್ಕಿಂತ ಹೆಚ್ಚಾಗಿ ಅದನ್ನು ತಿರುಗು ಮುರುಗಾಗಿಸುತ್ತದೆ.

ಪ್ರತಿ ಮತದಾರನ ಮತದ ಸಂಖ್ಯೆಗಳು ವ್ಯವಸ್ಥೆಯನ್ನು ಸಮತೋಲನವಾಗಿಸುವಲ್ಲಿನ ಒಂದು ಅಂಶವಾಗಿರುವುದಿಲ್ಲ. ಚುನಾವಣೆಯಲ್ಲಿ ಎಲ್ಲಾ ಮತದಾರರಿಗೂ ಸರಿಯಾಗಿರಲು ಇದು ಸಮಂಜಸವಾಗಿರಬೇಕು. ಇದು ಸಮಯಾನಂತರದಲ್ಲಿ ನಿರ್ದಿಷ್ಟವಾದ ಎರಡು ಪಕ್ಷಗಳಿಗೆ ಒಂದು ಸರಿಯಲ್ಲದ ಪ್ರಯೋಜನವನ್ನು ನೀಡುವ ಮರುಮಾಹಿತಿ ಆವರ್ತನೆಯನ್ನು ತೆಗೆದುಹಾಕುವ ಗಣಿತಶಾಸ್ತ್ರದ ಪರಿಣಾಮವನ್ನೂ ಕೂಡ ಹೊಂದಿದೆ. ಯಾವಾಗ ಒಬ್ಬ ಮತದಾರನು ಸಕಾರಾತ್ಮಕ ಮತಗಳು ಮಾತ್ರ ಲಭ್ಯವಿದ್ದ ಸಮಯದಲ್ಲಿ ನಕಾರಾತ್ಮಕ ಮತವನ್ನು ಪ್ರತಿನಿಧಿಸಲು ಪ್ರಯತ್ನಿಸುತ್ತಾನೋ ಅಂತಹ ಸಾಂಪ್ರದಾಯಿಕ ಬಹುಸಂಖ್ಯಾ ಮತದಾನ ವ್ಯವಸ್ಥೆಯಲ್ಲಿ ಈ ಮರುಮಾಹಿತಿ ಆವರ್ತನವು ಸಂಭವಿಸುತ್ತದೆ. ಮತದಾರನು ದೊರಕುವ ಆಯ್ಕೆಗಳನ್ನು ಪರಿಶೀಲಿಸುವುದಕ್ಕೆ ಮತ್ತು ವಿರೋಧಿ ಅಭ್ಯರ್ಥಿಯು ಗೆಲ್ಲುವ ವಿಲಕ್ಷಣವನ್ನು ಯಾವುದು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಆಗುವಂತೆ ಮಾಡುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ಒತ್ತಡ ಹೇರಲ್ಪಡುತ್ತಾನೆ. ಉದಾಹರಣೆಗೆ, ಒಂದು ಪಕ್ಷದ ಇತಿಹಾಸವು ಆ ಪಕ್ಷದಿಂದ ಸಮರ್ಥಿಸಲ್ಪಟ್ಟಿರುವ ಅಭ್ಯರ್ಥಿಯ ಆಯ್ಕೆಯಾಗುವಿಕೆಯ ಬಗೆಗೆ ಕೆಲವು ಸೂಚನೆಗಳನ್ನು ನೀಡುವ ಕಾರಣದಿಂದ, ಒಂದು ಸಾಮಾನ್ಯ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಗೆ ವಿರುದ್ಧವಾಗಿ ಮತ ಚಲಾಯಿಸುವ ಸಂಗತಿಯು ಐತಿಹಾಸಿಕವಾಗಿ ಆ ಪಕ್ಷವು ಹೆಚ್ಚಿನ ಚುನಾವಣೆಗಳನ್ನು ಗೆದ್ದಿರುವ ನಂಬಿಕೆಗಳ ಆಧಾರದ ಮೇಲೆ ಆ ಪಕ್ಷದ ಅಭ್ಯರ್ಥಿಗೆ ನೀಡುವ ಮತವಾಗಿರುತ್ತದೆ. ವಿರೋಧಿ ಅಭ್ಯರ್ಥಿಯು ವಾಸ್ತವವಾಗಿ ಅದೇ ಪಕ್ಷದಡಿಯಲ್ಲಿ ಬರುವವನಾಗಿದ್ದರೆ, ನಂತರದ ಸುಲಭ ಆಯ್ಕೆಯು ಮುಂದಿನ ಹೆಚ್ಚು ಐತಿಹಾಸಿಕ ಯಶಸ್ವಿ ಪಕ್ಷದ ಅಭ್ಯರ್ಥಿಯಾಗಿರುತ್ತದೆ. ಒಮ್ಮೆ ಒಂದು ಇತಿಹಾಸವು ಸ್ಥಾಪಿತಗೊಂಡ ಬಳಿಕ ಇದು ಕೇವಲ ಎರಡು ಪಕ್ಷಗಳಿಗೆ ಮಾತ್ರ ಸಮರ್ಥನೀಯ ಕಾರ್ಯಸಾಧ್ಯತೆಯನ್ನು ಹೊಂದಲು ಅವಕಾಶ ನೀಡುತ್ತದೆ. ಒಂದು ಸಮತೋಲಿತ ಮತದಾನ ವ್ಯವಸ್ಥೆಯು ಇದರ ಪ್ರಯೋಜನವನ್ನು ಪಡೆಯುವ ಮತದಾರರಿಗೆ ಈ ಮರುಮಾಹಿತಿ ಆವರ್ತನವನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ.

ಒಂದು ಪಕ್ಷದ ವ್ಯವಸ್ಥೆಯನ್ನು ಸಮತೋಲನಗೊಳಿಸಲು ಒಂದು ನಕಾರಾತ್ಮಕ ಮತದಾನ ಆಯ್ಕೆಯ ಸಂಯೋಜನವು ಸೈದ್ಧಾಂತಿಕವಾಗಿ ಒಂದು ಜನಪ್ರಿಯ ಮತದಾನಕ್ಕೆ, ಅಥವಾ ಒಂದು ಚುನಾವಣಾ ಕಾಲೇಜ್ ಮತದಾನಕ್ಕೆ, ಅಥವಾ ಎರಡಕ್ಕೂ ಅನ್ವಯಿಸಲ್ಪಡುತ್ತದೆ. ಒಂದು ಚುನಾವಣಾ ಕಾಲೇಜ್ ವ್ಯವಸ್ಥೆಯು ಕೆಲವು ಮಾರ್ಗಗಳಲ್ಲಿ ಜನಪ್ರಿಯ ಮತದಾನ ವ್ಯವಸ್ಥೆಯನ್ನು ಪ್ರತಿನಿಧಿಸುವುದಕ್ಕೆ ಬಯಸಲ್ಪಡುವ ಕೆಲವು ದೃಷ್ಟಾಂತಗಳಲ್ಲಿ, ಇದು ಸಹಜವಾಗಿ ಚುನಾವಣಾ ಕಾಲೇಜ್ ಮತ್ತು ಜನಪ್ರಿಯ ಮತದಾನ ಎರಡು ವ್ಯವಸ್ಥೆಗಳಿಗೂ ಸಮತೋಲಿತ ಮತದಾನ ಆಯ್ಕೆಗಳನ್ನು ಅನುಮತಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು] ಒಂದು ಸಮತೋಲಿತ ಮತದಾನ ವ್ಯವಸ್ಥೆಯ ವಿಷಯವು ಧಿಡೀರ್ ರನ್‌ಆಫ್ ಮತದಾನ ಮತ್ತು ಇತರ ಬಹುಸಂಖ್ಯಾ ಮತದಾನ ವ್ಯವಸ್ಥೆಗಳನ್ನು ಒಳಗೊಂಡಂತೆ ಹಲವಾರು ವಿಧದ ಮತದಾನ ವ್ಯವಸ್ಥೆಗಳಿಗೆ ಅನ್ವಯಿಸುತ್ತದೆ ಮತ್ತು ಬಹುಸಂಖ್ಯಾ ಮತದಾನ ಅಥವಾ ಪ್ರಮಾಣಾನುಗುಣ ಪ್ರತಿನಿಧಿತ್ವ ವ್ಯವಸ್ಥೆಗಳಲ್ಲೂ ಕೂಡ ಸಮನಾಗಿ ಅನ್ವಯಿಸಲ್ಪಡುತ್ತದೆ.

ಪಕ್ಷದ ಹಣಕಾಸು[ಬದಲಾಯಿಸಿ]

 • ಪಕ್ಷದ ಸದಸ್ಯರ, ವೈಯಕ್ತಿಕ ಮತ್ತು ಅದರ ರಾಜಕೀಯ ವಿಚಾರಗಳನ್ನು ಹಂಚಿಕೊಳ್ಳುವ ಸಂಘಟನೆಗಳು ಅಥವಾ ಅದರ ಚಟುವಟಿಕೆಗಳಿಂದ ಲಾಭ ಪಡೆಯುವವರು ಅಥವಾ ಸರ್ಕಾರಿ ಸಾರ್ವಜನಿಕ ನಿಧಿಗಳ ಕೊಡುಗೆಗಳ ಮೂಲಕ ರಾಜಕೀಯ ಪಕ್ಷಗಳ ಹಣಕಾಸು ವ್ಯವಸ್ಥೆಯಾಗುತ್ತದೆ.
 • ಮುಖ್ಯವಾಗಿ ಸರ್ಕಾರದಲ್ಲಿರುವ, ರಾಜಕೀಯ ಪಕ್ಷಗಳು ಮತ್ತು ಒಳ ಪಂಗಡಗಳು, ಸಂಘಟನೆಗಳು, ಉದ್ಯಮಗಳು ಮತ್ತು ವೃತ್ತಿ ಸಂಘಗಳಂತಹ ವಿಶೇಷ ಆಸಕ್ತಿ ಗುಂಪುಗಳಿಂದ ಹುರುಪಿನಿಂದ ವಶೀಲಿ ಮಾಡುತ್ತವೆ.
 • ಪಕ್ಷಕ್ಕೆ ಅಥವಾ ಇದರ ಸದಸ್ಯರುಗಳಿಗೆ ಹಣ ಮತ್ತು ಉಡುಗೊರೆಗಳು ಪ್ರೋತ್ಸಾಹಕಗಳ ರೂಪದಲ್ಲಿ ನೀಡಲಾಗುತ್ತದೆ.
 • ಇಂಗ್ಲೆಂಡಿನಲ್ಲಿ, ಪಕ್ಷಕ್ಕೆ ಕೊಡುಗೆ ನೀಡಿದವರಿಗೆ ಪೀರೇಜಸ್‌ ಪುರಸ್ಕಾರ ನೀಡುತ್ತಾರೆ ಎಂದು ಹೇಳಲಾಗಿದೆ, ಪೋಷಕರು ಸಂಸತ್ತಿನ ಮೇಲ್ಮನೆಯ ಸದಸ್ಯರಾಗುತ್ತಾರೆ ಮತ್ತು ಹೀಗೆ ಶಾಸನ ರಚಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಸ್ಥಾನದಲ್ಲಿರುತ್ತಾರೆ.
 • ಜನಪ್ರಿಯವಾಗಿ, ಲಾಯ್ಡ್ ಜಾರ್ಜ್ ಅವರಿಗೆ ಪೀರೇಜಸ್‌ ಮಾರುವುದು ಕಂಡುಬಂತು ಮತ್ತು ಭವಿಷ್ಯದಲ್ಲಿ ಇಂತಹ ಭ್ರಷ್ಟಾಚಾರವನ್ನು ತಡೆಗಟ್ಟಲು ಸಂಸತ್ತು ಆನರ್ಸ್ (ನಿಂದನೆಗಳನ್ನು ತಡೆಗಟ್ಟಲು) ಅಧಿನಿಯಮ 1925 ನ್ನು ಕಾನೂನಾಗಿ ಅಂಗೀಕರಿಸಿದರು.
 • ಸಂಪೂರ್ಣವಾಗಿ ಪೀರೇಜಸ್‌ ಮಾರಾಟ ಮತ್ತು ಈ ರೀತಿಯ ಪದವಿಗಳು ಅಪರಾಧಿ ಕೃತ್ಯವಾಯಿತು, ಆದಾಗ್ಯೂ ಕೆಲವು ಪೋಷಕರು ಅವರ ಕೊಡುಗೆಗಳು ಸಾಲಗಳಂತೆ ಎಂದು ಮುಚ್ಚಿತ್ತು ಇದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು, ಹಣಕ್ಕೆ ಪೀರೇಜಸ್‌ ಎನ್ನುವ ಹಗರಣಕ್ಕೆ ಕಾರಣರಾದರು. ಇಂತಹ ಚಟುವಟಿಕೆಗಳು ಬೇಡಿಕೆಗಳನ್ನು ಹೆಚ್ಚಿಸಿದವು ಕೊಡುಗೆಗಳ ಪ್ರಮಾಣವನ್ನು ನಿಯಂತ್ರಿಸಬೇಕು.
 • ಚುನಾವಣಾ ಪ್ರಚಾರವನ್ನು ಹೆಚ್ಚಿಸುವ ಖರ್ಚು ಹೆಚ್ಚಿದಂತೆ ಪಕ್ಷದ ಮೇಲೆ ಹಣಕಾಸಿನ ಬೇಡಿಕೆ ಹೆಚ್ಚಾಯಿತು. ಇಂಗ್ಲೆಂಡಿನಲ್ಲಿ ರಾಜ್ಯಗಳು ಪಕ್ಷಕ್ಕೆ ಹಣ ಒದಗಿಸಬೇಕು ಎಂದು ಕೆಲವು ರಾಜಕಾರಣಿಗಳು ವಾದಿಸಿದರು; ಈ ವಾದವು ಒಂದು ಆಸಕ್ತಿಕರ ಚರ್ಚೆಗೆ ಎಡೆಮಾಡಿಕೊಡುವಂತಹುದಾಗಿತ್ತು. ಕೊಡುಗೆಗಳ ಹೆಚ್ಚಿದ ಸಮಗ್ರ ಪರಿಶೀಲನೆಯ ಜೊತೆ ಬಹಳಷ್ಟು ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳ ಪಕ್ಷದ ಸದಸ್ಯತ್ವಗಳಲ್ಲಿ ದೀರ್ಘ ಸಮಯದ ಒತ್ತಡವಿತ್ತು. ಮತ್ತು ಆ ಕಾರಣಕ್ಕಾಗಿ ಹಣವೊದಗಿಸುವಿಕೆಯ ಮೇಲೆ ಹೆಚ್ಚಿನ ಒತ್ತಡ ಬಿತ್ತು.
 • ಉದಾಹರಣೆಗೆ ಇಂಗ್ಲೆಂಡ್ ಮತ್ತು ಆಸ್ತ್ರೆಲಿಯಗಳಲ್ಲಿ 2006ರಲ್ಲಿ ಎರಡು ಮುಖ್ಯ ಪಕ್ಷಗಳ ಸದಸ್ಯತ್ವ 1950ರಲ್ಲಿ ಇದ್ದ 1/8 ಭಾಗಕ್ಕಿಂತ ಕಡಿಮೆಯಾಗಿದೆ, ಆ ಸಮಯದಲ್ಲಿ ಜನಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು.
 • ಐರ್ಲೆಂಡ್‍ನಲ್ಲಿ ಸಿನ್ ಫಿಯಿನ್ ಪಕ್ಷದ ಚುನಾಯಿತ ಪ್ರತಿನಿಧಿಗಳು ಪ್ರತಿನಿಧಿಯಾಗಿ ಅವರ ಸಂಬಳದಿಂದ ಸರಾಸರಿ ಕೈಗಾರಿಕಾ ವೇತನವನ್ನು ಮಾತ್ರ ತೆಗೆದುಕೊಳ್ಳುತ್ತಾರೆ, ಉಳಿದ ಭಾಗ ಪಕ್ಷದ ಬಂಡವಾಳಕ್ಕೆ ಹೋಗುತ್ತದೆ.
 • ಅವರು ಇತರ ಆದಾಯಗಳನ್ನು ಹೊಂದಿದ್ದರೆ ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
 • ಸಮಾಜವಾದಿ ಪಕ್ಷಗಳ (ಐರ್ಲೆಂಡ್) ಚುನಾಯಿತ ಪ್ರತಿನಿಧಿಗಳು ಅವರ ಪೂರ್ಣ ಗಳಿಕೆಯಲ್ಲಿ ಸರಾಸರಿ ಕೈಗಾರಿಕಾ ವೇತನವನ್ನು ಮಾತ್ರ ತೆಗೆದುಕೊಳ್ಳುತ್ತಾರೆ.
 • ಪಕ್ಷಗಳಿಗೆ ಮತ್ತು ಅಭ್ಯರ್ಥಿಗಳಿಗೆ ಚುನಾವಣೆಗಳ ಸಮಯದಲ್ಲಿ ಸಾರ್ವಜನಿಕ ನಿಧಿ ಸಂಗ್ರಹ ಕೆಲವು ಪರಿವರ್ತನೆಗಳನ್ನು ಹೊಂದಿದೆ ಮತ್ತು ಇದು ಸಾಮಾನ್ಯವಾಗುವುದು ಹೆಚ್ಚಾಗಿದೆ.
 • ಹಣಕಾಸಿನ ವ್ಯವಸ್ಥೆಯಲ್ಲಿ ಎರಡು ಮುಖ್ಯ ವಿಭಾಗಗಳಿವೆ, ಪ್ರತ್ಯಕ್ಷ(ನೇರ), ಇದು ಪಕ್ಷಕ್ಕೆ ಮೌದ್ರಿಕ ವರ್ಗಾಂತರವನ್ನು ಒಳಗೊಂಡಿದೆ, ಮತ್ತು ಪರೋಕ್ಷ, ಇದು ಮಾಧ್ಯಮದಲ್ಲಿ ಪ್ರಸಾರದ ಸಮಯ, ಅಂಚೆ ಸೇವೆ ಅಥವಾ ಪೂರೈಕೆಗಳ ಉಪಯೋಗವನ್ನು ಒಳಗೊಂಡಿದೆ.
 • ಎಸಿಇ ಇಲೆಕ್ಟರಲ್ ನಾಲೆಜ್ಡ್ ನೆಟ್‍ವರ್ಕ್ನ್ ನ ತುಲನಾತ್ಮಕ ಅಂಕಿಅಂಶಗಳ ಪ್ರಕಾರ, ಮಾದರಿ 180 ದೇಶಗಳಲ್ಲಿ, 25% ದೇಶಗಳು ಪ್ರತ್ಯಕ್ಷ ಅಥವಾ ಪರೋಕ್ಷ ಯಾವುದೇ ಸಾರ್ವಜನಿಕ ಹಣಕಾಸನ್ನು ಒದಗಿಸುವುದಿಲ್ಲ, 58% ಪ್ರತ್ಯಕ್ಷ ಸಾರ್ವಜನಿಕ ಹಣಕಾಸನ್ನು ಒದಗಿಸುತ್ತವೆ ಮತ್ತು 60% ದೇಶಗಳು ಪರೋಕ್ಷ ಸಾರ್ವಜನಿಕ ಹಣಕಾಸನ್ನು ಒದಗಿಸುತ್ತದೆ.[೫]
 • ಕೆಲವು ದೇಶಗಳು ರಾಜಕೀಯ ಪಕ್ಷಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಎರಡೂ ತರಹದ ಸಾರ್ವಜನಿಕ ಹಣಕಾಸನ್ನು ಒದಗಿಸುತ್ತವೆ.
 • ಎಲ್ಲ ಪಕ್ಷಗಳಿಗೆ ಸಮ ಪ್ರಮಾಣದ ಅಥವಾ ಹಿಂದಿನ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಸಂಖ್ಯೆಯ ಆಧಾರದ ಮೇಲೆ ಹಣಕಾಸನ್ನು ಒದಗಿಸುತ್ತದೆ.[೬]
 • ಮತ್ತೆ ಮತ್ತೆ ಪಕ್ಷಗಳು ಖಾಸಗಿ ಮತ್ತು ಸಾರ್ವಜನಿಕ ನಿಧಿಯ ಮಿಶ್ರಣದ ಮೇಲೆ ಅವಲಂಬಿತವಾಗಿರುತ್ತವೆ ಮತ್ತು ಚುನಾವಣಾ ಪ್ರಬಂಧನ ಸಮಿತಿಗೆ ಅವುಗಳ ಹಣಕಾಸಿನ ಬಗ್ಗೆ ತಿಳಿಯಪಡಿಸಬೇಕಾಗುತ್ತದೆ.[೭]

ಪಕ್ಷಗಳಿಗೆ ಬಣ್ಣಗಳು ಮತ್ತು ಚಿಹ್ನೆಗಳು[ಬದಲಾಯಿಸಿ]

ಮುಖ್ಯ ಲೇಖನ: ರಾಜಕೀಯ ಬಣ್ಣ ಮತ್ತು ರಾಜಕೀಯ ಪಕ್ಷದ ಚಿಹ್ನೆಗಳ ಪಟ್ಟಿಯನ್ನು ನೋಡಿ. ಸಾಮಾನ್ಯವಾಗಿ ಹೇಳುವುದಾದರೆ, ಪ್ರಪಂಚದ ತುಂಬ ರಾಜಕೀಯ ಪಕ್ಷಗಳು ಬಣ್ಣಗಳನ್ನು ಮೊದಲು ಗುರುತಿಸಿಕೊಳ್ಳಲು, ಮುಖ್ಯವಾಗಿ ಚುನಾವಣೆಗಳ ಸಮಯದಲ್ಲಿ ಮತದಾರರು ಗುರುತು ಹಿಡಿಯಲು ತಮ್ಮಲ್ಲೇ ಜತೆಗೂಡಿ ನಿರ್ಧರಿಸುತ್ತವೆ. ಸಂಪ್ರದಾಯವಾದಿ ಪಕ್ಷಗಳು ಸಾಮಾನ್ಯವಾಗಿ ನೀಲಿ ಅಥವಾ ಕಪ್ಪು ಬಣ್ಣವನ್ನು ಉಪಯೋಗಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಗುಲಾಬಿ ಬಣ್ಣ ಕೆಲವೊಮ್ಮೆ ಮಧ್ಯಮ ಸಮಾಜವಾದಿ ಸಂಕೇತವಾಗುತ್ತದೆ.

ಹಳದಿ ಬಣ್ಣವನ್ನು ಸ್ವಾತಂತ್ರ್ಯವಾದ ಅಥವಾ ಶಾಸ್ತ್ರೀಯ ಉದಾರತಾವಾದಕ್ಕೆ ಉಪಯೋಗಿಸುತ್ತಾರೆ.

ಉರುಗ್ವೆಯನ್ನು ಬಿಟ್ಟು ಕೆಂಪು ಸಾಮಾನ್ಯವಾಗಿ ವಾಮಪಂಥಿ, ಸಮತಾವಾದಿ ಅಥವಾ ಸಮಾಜವಾದಿ[ಸೂಕ್ತ ಉಲ್ಲೇಖನ ಬೇಕು] ಪಕ್ಷಗಳ ಸಂಕೇತವಾಗಿದೆ, ಉರುಗ್ವೆಯಲ್ಲಿ "ಪಾರ್ತಿದೋ ಕಲರದೋ" (ರೆಡ್ ಪಕ್ಷ) (ರಾಜಕೀಯವಾಗಿ) ಉದಾರ ಪಕ್ಷವಾಗಿದೆ ಇದರ ಆರ್ಥಿಕ ಆಲೋಚನೆಗಳು ಶಾಸ್ತ್ರೀಯ ಉದಾರತಾವಾದ ಮತ್ತು ಸಾಮಾಜಿಕ-ಪ್ರಜಾಭುತ್ವ ಇವೆರಡರಿಂದಲೂ ಕೂಡಿದೆ. ಈ ವಿಷಯದಲ್ಲಿ, ಕೆಂಪು ಬಣ್ಣದ ಉಪಯೋಗ ಪಕ್ಷ ಪ್ರಾರಂಭವಾದ ca. 1836 ರಿಂದ ಬಂದಿದ್ದು ಅದು ಇದನ್ನು ಪ್ರಪಂಚದ ಅತ್ಯಂತ ಹಳೆಯ ಕ್ರಿಯಾಶೀಲ ಪಕ್ಷವನ್ನಾಗಿ ಮಾಡಿತು.

ಉತ್ತರ ಭಾಗದ ಐರ್ಲೆಂಡ್‍ನಲ್ಲಿ ಹಸಿರು ಬಣ್ಣ ಹಸಿರು ಪಕ್ಷಗಳ, ಇಸ್ಲಾಮಿಗ ಪಕ್ಷಗಳ ಮತ್ತು ಐರಿಷ್ ರಾಷ್ಟ್ರೀಯತಾವಾದಿ ಮತ್ತು ಗಣತಂತ್ರವಾದಿ ಪಕ್ಷಗಳ ಸಂಕೇತವಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಕಿತ್ತಳೆ ಬಣ್ಣ ಕೆಲವೊಮ್ಮೆ ರಾಷ್ಟ್ರೀಯತೆಯ ಬಣ್ಣವಾಗಿದೆ, ನೆದರ‍್ಲ್ಯಾಂಡ್ಸ್ ನಲ್ಲಿನಂತೆ ಇಸ್ರೇಲ್‍ನಲ್ಲಿ ಆರೆಂಜ್ ಕ್ಯಾಂಪ್ ಅಥವಾ ಐರ್ಲೆಂಡ್‍ನ ಉತ್ತರ ಭಾಗದಲ್ಲಿ ಉಲ್‍ಸ್ಟರ್ ಲಾಯಲಿಸ್ಟ್ಸ್; ಉಕ್ರೇನ್‍ನಲ್ಲಿನಂತೆ ಇದು ಸುಧಾರಣೆಯ ಬಣ್ಣವೂ ಸಹ ಆಗಿದೆ.

ಮೊದಲು ನೇರಳೆ ಬಣ್ಣವನ್ನು ರಾಜತ್ವದ ಬಣ್ಣ ಎಂದು ಪರಿಗಣಿಸಲಾಗಿತ್ತು (ಬಿಳಿ ಬಣ್ಣದಂತೆ), ಆದರೆ ಈಗ ಕೆಲವೊಮ್ಮೆ ಸ್ತ್ರೀ ಸಮಾನತಾವಾದಿ ಪಕ್ಷಗಳು ಉಪಯೋಗಿಸುತ್ತಾರೆ. ಬಿಳಿ ಬಣ್ಣ ಸಹ ರಾಷ್ಟ್ರೀಯತೆಯ ಪ್ರತೀಕವಾಗಿದೆ. "ಪರ್ಪಲ್ ಪಾರ್ಟಿ" ಯನ್ನು ಸಹ ಗೊತ್ತು ಮಾಡದ ಪಕ್ಷದ ಶೈಕ್ಷಣಿಕ ಕಾಲ್ಪನಿಕವಾಗಿ ಉಪಯೋಗಿಸಲಾಗಿದೆ, ಸಂಯುಕ್ತ ಸಂಸ್ಥಾನಗಳಲ್ಲಿ ಸೆಂಟ್ರಲಿಸ್ಟ್ ಪಕ್ಷವಿರುವಂತೆ (ಏಕೆಂದರೆ ಪರ್ಪಲ್‍ನ್ನು ಎರಡು ಮುಖ್ಯ ಪಕ್ಷಗಳ ಕೆಂಪು ಮತ್ತು ನೀಲಿ ಬಣ್ನಗಳನ್ನು ಸೇರಿಸಿ ರೂಪಿಸಲಾಗಿದೆ) ಮತ್ತು ಹೆಚ್ಚು ಆದರ್ಶಪ್ರಾಯವಾದ "ಶಾಂತಿ ಮತ್ತು ಪ್ರೀತಿ" ಪಕ್ಷ [೧]-- ಬಹುಶಃ ಗ್ರೀನ್ ಪಾರ್ಟಿಯಂತೆಯೇ.

 ಸಾಮಾನ್ಯವಾಗಿ ಕಪ್ಪು ಬಣ್ಣ ಪ್ರತಿಗಾಮಿ ಪಕ್ಷಗಳ ಸಂಕೇತ, ಉದಾಹರಣೆಗೆ ಬೆನಿಟೊ ಮುಸಲೋನಿಯವರ ಕಪ್ಪುಶರ್ಟುಗಳು, ಆದರೆ ಅದು ಅರಾಜಕತಾವಾದದ ಸಂಕೇತ ಸಹ ಆಗಿದೆ.   ಅಂತೆಯೇ, ಕಂದುಬಣ್ಣ ಕೆಲವೊಮ್ಮೆ ನಾಜಿನೀತಿಯ ಸಂಕೇತವಾಯಿತು, ಉದಾಹರಣೆಗೆ ನಾಜಿ ಪಕ್ಷಕಂದುಬಣ್ಣದ-ಸಮವಸ್ತ್ರ ಧರಿಸಿದ ಸ್ಟಾರ್ಮ್ ಟ್ರೂಪರ್‌ಗಳು. 

ಮತದಾರ ಅನಕ್ಷರಸ್ತನಿದ್ದಾಗ ಬಣ್ಣಗಳ ಜತೆಗಾರಿಕೆಗಳು ಸ್ಮೃತಿ ವರ್ಧನೆಗೆ ಸಹಕಾರಿಯಾಗಿವೆ.[ಸೂಕ್ತ ಉಲ್ಲೇಖನ ಬೇಕು] ಮತ್ತೊಂದು ಸಂದರ್ಭದಲ್ಲಿ ಪಕ್ಷಗಳಿಗೆ ಕಟ್ಟುನಿಟ್ಟಿನ ಸಂಪರ್ಕಗಳನ್ನು ಮಾಡುವ ಇಚ್ಛೆ ಹೊಂದಿಲ್ಲದಿರುವಾಗ ಅವುಗಳ ಉಪಯೋಗವಾಗುತ್ತದೆ, ಮುಖ್ಯವಾಗಿ ರಾಜಕೀಯ ಪಕ್ಷಗಳು ಮತ್ತು ಇತರ ಸಂಘಟನೆಗಳ ನಡುವೆ ಏಕೀಭವನಗಳು ಮತ್ತು ಮೈತ್ರಿಗಳು ಏರ್ಪಟ್ಟಾಗ, ಉದಾಹರಣೆಗೆ: ರೆಡ್ ಟೋರಿ, "ಪರ್ಪಲ್" (ಕೆಂಪು-ನೀಲಿ) ಮೈತ್ರಿಗಳು, ಕೆಂಪು-ಹಸಿರು ಮೈತ್ರಿಗಳು, ನೀಲಿ-ಹಸಿರು ಮೈತ್ರಿಗಳು, ಟ್ರಾಫಿಕ್ ಲೈಟ್ ಏಕೀಭವನಗಳು, ಪಾನ್-ಗ್ರೀನ್ ಏಕೀಭವನಗಳು, ಮತ್ತು ಪಾನ್-ಬ್ಲೂ ಏಕೀಭವನಗಳು. ಸಂಯುಕ್ತ ಸಂಸ್ಥಾನಗಳಲ್ಲಿ ರಾಜಕೀಯ ಬಣ್ಣದ ವ್ಯವಸ್ಥೆ ಅಂತರರಾಷ್ಟ್ರೀಯ ರೂಢಿಗಳಿಗಿಂತ ಭಿನ್ನವಾಗಿದೆ. 2000ದಿಂದ, ಕೆಂಪು ಬಣ್ಣ ರೈಟ್-ವಿಂಗ್ ರಿಪಬ್ಲಿಕನ್ ಪಕ್ಷದ ಮತ್ತು ನೀಲಿ ಬಣ್ಣ ಲೆಫ್ಟ್-ವಿಂಗ್ ಡೆಮಾಕ್ರಟಿಕ್ ಪಕ್ಷದ ಸಂಕೇತಗಳಾಗಿವೆ. ಆದಾಗ್ಯೂ, ಇತರ ದೇಶಗಳ ರಾಜಕೀಯ ಬಣ್ಣದ ವ್ಯವಸ್ಥೆಗೆ ಹೋಲಿಕೆಯಿಲ್ಲ, ಪಕ್ಷಗಳು ಆ ಬಣ್ಣಗಳನ್ನು ಆಯ್ಕೆ ಮಾಡಿ ಕೊಳ್ಳಲಿಲ್ಲ; ಇವುಗಳನ್ನು 2000ರ ಚುನಾವಣೆಯ ಫಲಿತಾಂಶಗಳಲ್ಲಿ ಮತ್ತು ನಂತರದ ಕಾನೂನು ಸಮರಗಳಲ್ಲಿ ಉಪಯೋಗಿಸಿಕೊಳ್ಳಲಾಗಿದೆ ಮತ್ತು ಜನಪ್ರಿಯವಾಗಿ ಬಳಕೆಗೊಂಡಿದೆ. 2000ರ ಚುನಾವಣೆಗೆ ಮೊದಲು ಪ್ರತಿ ರಾಷ್ಟ್ರಪತಿ ಚುನಾವಣಾ ಪ್ರಕ್ರಿಯೆಯ ಯಾವ ಬಣ್ಣ ಯಾವ ಪಕ್ಷವನ್ನು ಪ್ರತಿನಿಧಿಸುತ್ತದೆ ಎಂದು ಮಾಧ್ಯಮ ವಿಶಿಷ್ಟವಾಗಿ ಪರ್ಯಾಯಗೊಳಿಸಿತು. ಆ ವರ್ಷ ಬಣ್ಣದ ಪದ್ಧತಿ ಅತ್ಯಧಿಕ ಗಮನವನ್ನು ಪಡೆಯುವಂತಾಯಿತು, ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಗೊಂದಲ ಆಗದಂತೆ ಚಕ್ರವು ನಿಂತು ಹೋಯಿತು. ಒಂದು ಮುಷ್ಟಿಯಲ್ಲಿ ಹಿಡಿದ ಕೆಂಪು ಗುಲಾಬಿ ಹೂವು ಸಮಾಜವಾದಿ ಪಕ್ಷಗಳ ಲಾಂಛನವಾಯಿತು.

ಸಮತಾವಾದಿ ಪಕ್ಷಗಳು ಕೆಲವೊಮ್ಮೆ ಕೆಲಸಗಾರನನ್ನು ಪ್ರತಿನಿಧಿಸಲು ಕೊಡಲಿಯನ್ನು, ರೈತನನ್ನು ಪ್ರತಿನಿಧಿಸಲು ಕುಡುಗೋಲು, ಅಥವಾ ಇಬ್ಬರಿಗೂ ಏಕ ಕಾಲದಲ್ಲಿ ಅನ್ವಯಿಸುವಂತೆ ಒಂದು ಕೊಡಲಿ ಮತ್ತು ಒಂದು ಕುಡುಗೋಲು ಎರಡನ್ನೂ ಲಾಂಛನವಾಗಿ ಉಪಯೋಗಿಸಿದರು. ನಾಜಿನೀತಿಯ ಲಾಂಛನವಾದ ಸ್ವಸ್ತಿಕ ಅಥವಾ "ಹಕೆನ್‍ಕ್ರೆಝ್" ನ್ನು ಯಾವುದೇ ಸಂಘಟನೆಗಳನ್ನು ದ್ವೇಷಿಸುವ ಗುಂಪುಗಳಿಗೆ ಹತ್ತಿರದ ಸಾರ್ವತ್ರಿಕ ಲಾಂಛನವಾಗಿ ತೆಗೆದುಕೊಳ್ಳಲಾಯಿತು, ಇದು ಬಹಳ ಪ್ರಾಚೀನ ಕಾಲದ ದಿನಾಂಕವನ್ನು ನಮೂದಿಸುತ್ತದೆ. ಸಮಗ್ರ ಮತದಾರ ಸಮುದಾಯ ಅನಕ್ಷರಸ್ಥವಾದಾಗ ಚಿಹ್ನೆಗಳು ಬಹಳ ಮುಖ್ಯವಾಗುತ್ತವೆ. ಕೆನ್ಯನ್ ಸಂವಿಧಾನಿಕ ಜನಮತಸಂಗ್ರಹ, 2005ರಲ್ಲಿ ಸಂವಿಧಾನದ ಬೆಂಬಲಿಗರು ಕಿತ್ತಳೆಹಣ್ಣಿನ ಬದಲಾಗಿ ಬಾಳೆಹಣ್ಣನ್ನು ತಮ್ಮ ಚಿಹ್ನೆಯಾಗಿ ಉಪಯೋಗಿಸಿದರು.

ಭಾರತದಲ್ಲಿ ಪಕ್ಷಗಳಿಗೆ ಬಣ್ಣಗಳು ಮತ್ತು ಚಿಹ್ನೆಗಳು[ಬದಲಾಯಿಸಿ]

 • 13 Jan, 2017
 • ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್‌ ಯಾದವ್‌ ಅವರ ಕುಟುಂಬ ಕಲಹ, ಸಮಾಜವಾದಿ ಪಕ್ಷ ಇಬ್ಭಾಗವಾಗಲು ಕಾರಣವಾಗಿದೆ. ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ನೇತೃತ್ವದ ಬಣ ಹಾಗೂ ಅವರ ಪುತ್ರ, ರಾಜ್ಯದ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರ ಬಣದ ನಡುವೆ ಪಕ್ಷದ ಚಿಹ್ನೆ ‘ಸೈಕಲ್‌’ ಪಡೆಯಲು ಪೈಪೋಟಿ ನಡೆಯುತ್ತಿದೆ.
 • ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ (ಜ.13) ಎರಡೂ ಬಣಗಳ ವಿಚಾರಣೆ ನಡೆಸಲಿದೆ. ಬಣಗಳ ವಾದ ಪ್ರತಿ ವಾದ ಆಲಿಸಿ, ಎರಡೂ ಕಡೆಯವರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ, ಚಿಹ್ನೆ ಯಾರಿಗೆ ಸೇರಬೇಕು ಎಂಬ ನಿರ್ಧಾರವನ್ನು ಆಯೋಗ ಕೈಗೊಳ್ಳಲಿದೆ.
 • ಆಯೋಗವೇ ‘ಸುಪ್ರೀಂ’
 • * ಪಕ್ಷದ ಚಿಹ್ನೆ ಹಂಚಿಕೆಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಅಧಿಕಾರವಿರುವುದು ಕೇಂದ್ರ ಚುನಾವಣಾ ಆಯೋಗಕ್ಕೆ ಮಾತ್ರ.
 • * ಪಕ್ಷದ ಚಿಹ್ನೆಗಾಗಿ ಬಣಗಳ ನಡುವೆ ತಿಕ್ಕಾಟ ಆರಂಭವಾದಾಗ ಚುನಾವಣಾ ಆಯೋಗವು 1968ರ ಚುನಾವಣಾ ಚಿಹ್ನೆಗಳು (ಕಾದಿರಿಸುವಿಕೆ ಮತ್ತು ಹಂಚಿಕೆ) ಆದೇಶದ ಅಡಿಯಲ್ಲಿ ನಿರ್ಣಯ ಕೈಗೊಳ್ಳುತ್ತದೆ.
 • * ಆಯಾ ಬಣಗಳ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆದು ಆಯೋಗವು ಚಿಹ್ನೆ ಯಾರಿಗೆ ಸೇರಬೇಕು ಎಂದು ತೀರ್ಮಾನ ಕೈಗೊಳ್ಳುತ್ತದೆ.
 • * ಒಡೆದಿರುವ ಪಕ್ಷದ ಬಣಗಳಲ್ಲಿ ಯಾವುದಕ್ಕೆ ಹೆಚ್ಚು ಬೆಂಬಲ ಇದೆಯೋ (ಶಾಸಕರ ಮತ್ತು ಪದಾಧಿಕಾರಿಗಳ) ಆ ಬಣಕ್ಕೆ ಪಕ್ಷದ ಮೂಲ ಚಿಹ್ನೆ ಹಂಚಿಕೆ ಮಾಡಿದ ಉದಾಹರಣೆಗಳಿವೆ.
 • * ಚಿಹ್ನೆ ಹಂಚಿಕೆ ಕಗ್ಗಂಟಾದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಚಿಹ್ನೆಯನ್ನು ಅಮಾನತಿನಲ್ಲಿಟ್ಟು, ಪಕ್ಷದ ಬಣಗಳಿಗೆ ಪ್ರತ್ಯೇಕ ಚಿಹ್ನೆಗಳನ್ನು ಹಂಚಿಕೆ ಮಾಡುವ ಅಧಿಕಾರವೂ ಆಯೋಗಕ್ಕಿದೆ.
 • ಮೊದಲ ಘಟನೆ
 • ಪಕ್ಷದ ಚಿಹ್ನೆಗೆ ಸಂಬಂಧಿಸಿದಂತೆ ಎರಡು ಬಣಗಳ ನಡುವೆ ಮೊದಲ ಬಾರಿಗೆ ಸಂಘರ್ಷ ನಡೆದಿದ್ದು 1969ರಲ್ಲಿ.
 • ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಮೊದಲ ಬಾರಿಗೆ ವಿಭಜನೆಯಾದಾಗ, ಎಸ್‌. ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್‌ (ಒ) ಹಾಗೂ ಇಂದಿರಾ ಗಾಂಧಿ ಅವರು ಹೊಸದಾಗಿ ಸ್ಥಾಪಿಸಿದ್ದ ಕಾಂಗ್ರೆಸ್‌ (ಆರ್‌) ನಡುವೆ ಚಿಹ್ನೆಗಾಗಿ ಸಂಘರ್ಷ ನಡೆದಿತ್ತು.
 • ಕಾಂಗ್ರೆಸ್‌ನ ಹಳೆಯ ಚಿಹ್ನೆಯಾಗಿದ್ದ ‘ನೊಗ ಹೊತ್ತಿದ್ದ ಜೋಡೆತ್ತು’ ಕಾಂಗ್ರೆಸ್‌ (ಒ)ಗೆ ಸಿಕ್ಕಿತ್ತು. ಇಂದಿರಾ ಗಾಂಧಿ ಅವರ ಪಕ್ಷಕ್ಕೆ ‘ಹಸು ಮತ್ತು ಕರು’ವಿನ ಚಿಹ್ನೆಯನ್ನು ಚುನಾವಣಾ ಆಯೋಗ ನೀಡಿತ್ತು.
 • 1978ರಲ್ಲಿ ಕಾಂಗ್ರೆಸ್‌ (ಆರ್‌) ಮತ್ತೆ ವಿಭಜನೆ ಆಯಿತು. ಇಂದಿರಾ ಗಾಂಧಿ ಪಕ್ಷದಿಂದ ಹೊರ ಬಂದು ಕಾಂಗ್ರೆಸ್‌ (ಐ) ಸ್ಥಾಪಿಸಿದರು. ಆಗ ಅವರು ಹಳೆಯ ಚಿಹ್ನೆ ‘ಹಸು ಮತ್ತು ಕರು’ ಕೈ ಬಿಟ್ಟು, ಹಸ್ತದ ಚಿಹ್ನೆ ಆಯ್ಕೆ ಮಾಡಿಕೊಂಡಿದ್ದರು.
 • ತಮಿಳುನಾಡಿನಲ್ಲಿ ವಿಚಿತ್ರ ಸನ್ನಿವೇಶ
 • ಎಐಎಡಿಎಂಕೆ ಸಂಸ್ಥಾಪಕ ಮತ್ತು ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಎಂ.ಜಿ. ರಾಮಚಂದ್ರನ್‌ ಅವರು 1987ರಲ್ಲಿ ನಿಧನಹೊಂದಿದಾಗ ಪಕ್ಷ ಹೋಳಾಗಿತ್ತು. ರಾಮಚಂದ್ರನ್‌ ಪತ್ನಿ ಜಾನಕಿ ಅವರು ಒಂದು ಬಣದ ನೇತೃತ್ವ ವಹಿಸಿದ್ದರೆ, ಜೆ. ಜಯಲಲಿತಾ ಅವರು ಮತ್ತೊಂದು ಬಣದ ಚುಕ್ಕಾಣಿ ಹಿಡಿದಿದ್ದರು.
 • ಪಕ್ಷದ ಚಿಹ್ನೆ ‘ಎರಡು ಎಲೆ’ಗಾಗಿ ತಮ್ಮ ಹಕ್ಕನ್ನು ಮಂಡಿಸಿ ಎರಡೂ ಬಣಗಳು ಚುನಾವಣಾ ಆಯೋಗದ ಮೆಟ್ಟಿಲೇರಿದ್ದವು.
 • ಅದುವರೆಗೂ ಹೆಚ್ಚಿನ ಸಂದರ್ಭಗಳಲ್ಲಿ, ಯಾವ ಬಣಕ್ಕೆ ಪಕ್ಷದ ಶಾಸಕರ ಮತ್ತು ಪದಾಧಿಕಾರಿಗಳ ಬೆಂಬಲ ಇರುತ್ತದೆಯೋ, ಆ ಬಣಕ್ಕೆ ಪಕ್ಷದ ಚಿಹ್ನೆಯನ್ನು ಆಯೋಗ ನೀಡುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿತ್ತು.
 • ಆದರೆ, ಎಐಎಡಿಎಂಕೆ ಪ್ರಕರಣದಲ್ಲಿ ಪಕ್ಷದ ಶಾಸಕರು ಮತ್ತು ಸಂಸದರು ಜಾನಕಿ ಅವರ ಬಣಕ್ಕೆ ಬೆಂಬಲ ಸೂಚಿಸಿದ್ದರೆ, ಪದಾಧಿಕಾರಿಗಳು ಜಯಲಲಿತಾ ಅವರನ್ನು ಬೆಂಬಲಿಸಿದ್ದರು. ಆ ಸಂದರ್ಭದಲ್ಲಿ ಚುನಾವಣಾ ಆಯೋಗ ವಿಚಿತ್ರ ಸನ್ನಿವೇಶವನ್ನು ಎದುರಿಸಿತ್ತು. ಆದರೆ, ಚಿಹ್ನೆಯನ್ನು ಯಾವ ಬಣಕ್ಕೆ ನೀಡಬೇಕು ಎಂದು ಆಯೋಗ ನಿರ್ಧರಿಸುವುದಕ್ಕೂ ಮುನ್ನ ಎರಡೂ ಬಣಗಳು ಒಂದಾಗಿದ್ದವು.
 • ಟಿಡಿಪಿ ಕಥೆ
 • ಆಂಧ್ರಪ್ರದೇಶದಲ್ಲಿ ಎನ್‌.ಟಿ. ರಾಮರಾವ್‌ ಅವರು ಸ್ಥಾಪಿಸಿದ್ದ ತೆಲುಗುದೇಶಂ ಪಕ್ಷವು (ಟಿಡಿಪಿ) 1995ರಲ್ಲಿ ಇಬ್ಭಾಗವಾದಗಲೂ ಪಕ್ಷದ ಚಿಹ್ನೆಯಾಗಿದ್ದ ‘ಸೈಕಲ್‌’ ಮಾಲೀಕತ್ವದ ಬಗ್ಗೆ ಹಗ್ಗಜಗ್ಗಾಟ ನಡೆದಿತ್ತು.
 • ಹಠಾತ್‌ ಬೆಳವಣಿಗೆಯಲ್ಲಿ ಆಂಧ್ರದ ಇಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಮಾವ (ಪತ್ನಿಯ ತಂದೆ) ಎನ್‌.ಟಿ. ರಾಮರಾವ್‌ ಅವರನ್ನು ಪಕ್ಷದ ಅಧ್ಯಕ್ಷ ಹುದ್ದೆ ಮತ್ತು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಲು ಯಶಸ್ವಿಯಾಗಿದ್ದರು. ಅಲ್ಲದೇ ಟಿಡಿಪಿಯ ಬಹುತೇಕ ಶಾಸಕರ ಮತ್ತು ಮುಖಂಡರ ವಿಶ್ವಾಸವನ್ನೂ ಪಡೆದಿದ್ದರು.
 • ಆ ಸಂದರ್ಭದಲ್ಲಿ ನಾಯ್ಡು ಹಾಗೂ ರಾಮರಾವ್‌ ಬಣಗಳ ನಡುವೆ ಸೈಕಲ್ ಚಿಹ್ನೆಗಾಗಿ ತಿಕ್ಕಾಟ ನಡೆದಿತ್ತು.
 • ಚುನಾವಣಾ ಆಯೋಗವು ಹಲವಾರು ಬಾರಿ ವಿಚಾರಣೆ ನಡೆಸಿ, ವಾದ ಮತ್ತು ಪ್ರತಿವಾದಗಳನ್ನು ಆಲಿಸಿ ಅಂತಿಮವಾಗಿ ಚಿಹ್ನೆಯನ್ನು ನಾಯ್ಡು ಅವರ ಬಣಕ್ಕೆ ಒಪ್ಪಿಸಿತ್ತು.
 • ಹಿಂದೆಯೂ ಇತ್ತು...
 • 1968ರಲ್ಲಿ ಹೊಸ ನಿಯಮ ಜಾರಿಯಾಗುವುದಕ್ಕೂ ಮೊದಲು ಚುನಾವಣಾ ಆಯೋಗವು ಚುನಾವಣಾ ‘1961ರ ನಿರ್ವಹಣಾ ನಿಯಮಗಳ’ ಅಡಿಯಲ್ಲಿ ನಿರ್ಧಾರ ಕೈಗೊಳ್ಳುತ್ತಿತ್ತು.
 • 1964ರಲ್ಲಿ ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ಇಬ್ಭಾಗವಾದಾಗ, ಒಂದು ಗುಂಪು ತನಗೆ ಸಿಪಿಐ (ಮಾವೋವಾದಿ) (ಸಿಪಿಎಂ) ಎಂಬ ಮಾನ್ಯತೆ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು.
 • ಅದಕ್ಕೆ ಪೂರಕವಾಗಿ ಬಣವನ್ನು ಬೆಂಬಲಿಸುವ ಆಂಧ್ರ ಪ್ರದೇಶ, ಕೇರಳ ಮತ್ತು ಪಶ್ಚಿಮ ಬಂಗಾಳದ ಶಾಸಕರು ಮತ್ತು ಸಂಸದರ ಪಟ್ಟಿಯನ್ನೂ ಸಲ್ಲಿಸಿತ್ತು. ಬಣವು ಸಲ್ಲಿಸಿದ್ದ ಪೂರಕ ದಾಖಲೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಆಯೋಗವು ಅದಕ್ಕೆ ‘ಸಿಪಿಎಂ’ ಎಂದು ಮಾನ್ಯತೆ ನೀಡಿತ್ತು.
 • * 1793 ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುವ ರಾಜಕೀಯ ಪಕ್ಷಗಳ ಸಂಖ್ಯೆ
 • * 7 ರಾಷ್ಟ್ರೀಯ ಪಕ್ಷಗಳು
 • * 1786 ರಾಜ್ಯ ಮಟ್ಟದ ಪಕ್ಷಗಳು

[೮]

ರಾಜಕೀಯ ಪಕ್ಷಗಳ ಅಂತರಾಷ್ಟ್ರೀಯ ಸಂಸ್ಥೆಗಳು[ಬದಲಾಯಿಸಿ]

19ನೇ ಮತ್ತು 20ನೇ ಶತಮಾನದಲ್ಲಿ, ಅನೇಕ ರಾಜಕೀಯ ಪಕ್ಷಗಳು ಅದೇ ರೀತಿಯ ಕೆಲವು ನಿಯಮಾವಳಿಗಳೊಂದಿಗೆ ತಮ್ಮನ್ನು ಅಂತರಾಷ್ಟ್ರೀಯ ಸಂಸ್ಥೆಯನ್ನಾಗಿ ಮಾಡಿಕೊಂಡವು. ಕೆಲವು ಗುರುತಿಸಬಹುದಾದ ಸಂಸ್ಥೆಗಳೆಂದರೆ: ಇಂಟರ್‌ನ್ಯಾಶನಲ್ ವರ್ಕಿಂಗ್ ಮೆನ್ಸ್ ಅಸ್ಸೋಸಿಯೆಶನ್(ಫರ್ಸ್ಟ್ ಇಂಟರ್‌ನ್ಯಾಶನಲ್ ಎಂದೂ ಕರೆಯುವ), ಸೊಶಿಯಲಿಸ್ಟ್ ಇಂಟರ್‌ನ್ಯಾಶನಲ್( ಸೆಕೆಂಡ್ ಇಂಟರ್‌ನ್ಯಾಶನಲ್ ಎಂದೂ ಕರೆಯುವ), ಕಮ್ಯುನಿಸ್ಟ್ ಇಂಟರ್‌ನ್ಯಾಶನಲ್(ಥರ್ಡ್ ಇಂಟರ್‌ನ್ಯಾಶನಲ್ ಎಂದೂ ಕರೆಯುವ),ಫೊರ್ಥ್ ಇಂಟರ್‌ನ್ಯಾಶನಲ್,ವರ್ಕಿಂಗ್ ಕ್ಲಾಸ್ ಪರ್ಟೀಸ್‌ನ ಸಂಸ್ಥೆಗಳಾದ, ಅಥವಾ ಲಿಬರಲ್ ಇಂಟರ್‌ನ್ಯಾಶನಲ್( ಹಳದಿ), ಕ್ರಿಶ್ಚಿಯನ್ ಡೆಮೊಕ್ರಟಿಕ್ ಇಂಟರ್‌ನ್ಯಾಶನಲ್ ಮತ್ತು ಇಂಟರ್‌ನ್ಯಾಶನಲ್ ಡೆಮೊಕ್ರಾಟ್ ಯುನಿಯನ್(ನೀಲಿ). ವರ್ಡ್‌ವೈಡ್ ಗ್ರೀನ್ ಪಾರ್ಟೀಸ್ ಇತ್ತೀಚೆಗೆ ಗ್ಲೋಬಲ್ ಗ್ರೀನ್ಸ್‌ನ್ನು ಸ್ಥಾಪಿಸಿತು.

ಸೋಶಿಯಲಿಸ್ಟ್ ಇಂಟರ್‌ನ್ಯಾಶನಲ್, ಲಿಬರಲ್ ಇಂಟರ್‌ನ್ಯಾನಲ್ ಮತ್ತು ಇಂಟರ್‌ನ್ಯಾಶನಲ್ ಡೆಮೊಕ್ರಾಟ್ ಯುನಿಯನ್‌ಗಳು ಲಂಡನ್‌ ಮೂಲದ ಪಕ್ಷವಾಗಿದೆ.

ಕೆಲವು ದೇಶಗಳು ( ಉದಾ:ಹಾಂಗ್ ಕಾಂಗ್) ಸ್ಥಳೀಯ ಮತ್ತು ವಿದೇಶಿ ಸಂಸ್ಥೆಗಳ ನಡುವಿನ ವ್ಯವಹಾರಿಕ ಕೊಂಡಿಗಳಂತೆ ವರ್ತಿಸುವವರನ್ನು ಗಡಿಪಾರು ಮಾಡಿವೆ, ಅಂತರಾಷ್ಟೀಯ ರಾಜಕೀಯ ಪಕ್ಷಗಳನ್ನು ಪರಿಣಾಮಕಾರಿಯಾಗಿ ಗಡಿಪಾರು ಮಾಡಿವೆ.

ರಾಜಕೀಯ ಪಕ್ಷಗಳ ವಿಧಗಳು[ಬದಲಾಯಿಸಿ]

ಫ್ರೆಂಚ್ ರಾಜಕೀಯ ವಿಜ್ಞಾನಿ ಮೊರಿಸ್ ಡುವೆರ್ಜರ್ ಏಕ(ಒಂದು) ಪಕ್ಷಗಳು ಮತ್ತು ಸಮೂಹ ಪಕ್ಷಗಳ ನಡುವಿನ ವ್ಯತ್ಯಾಸಗಳನ್ನು ಚಿತ್ರಿಸಿದರು. ಒಂದು ಪಕ್ಷಗಳೆಂದರೆ ರಾಜಕೀಯ ಗಣ್ಯ ವ್ಯಕ್ತಿಗಳು, ಚುನಾವಣೆಗಳಲ್ಲಿ ಭಾಗವಹಿಸುವುದನ್ನು ಮತ್ತು ಹೊರಗಿನವರ ಪ್ರಭಾವಗಳನ್ನು ನಿರ್ಬಂಧಿಸುವುದರಲ್ಲಿ ಕಾಳಜಿ ವಹಿಸುತ್ತಾರೆ, ಮತ್ತು ಅವರು ಕೇವಲ ಚುನಾವಣಾ ಪ್ರಚಾರಲ್ಲಿ ಸಲಹೆ ನೀಡುವುದಕ್ಕಷ್ಟೇ ಅಗತ್ಯವಾಗಿರುತ್ತಾರೆ. ಸಂಯುಕ್ತ ಪಕ್ಷಗಳು ಪಕ್ಷಕ್ಕೆ ಹಣವನ್ನು ತಂದುಕೊಡುವಂತಹ ಹೊಸ ಸದಸ್ಯರನ್ನು ಸೇರಿಸಿಕೊಳ್ಳುತ್ತದೆ ಮತ್ತು ನಂತರ ಪಕ್ಷದ ತತ್ವಗಳನ್ನು ಪ್ರಚಾರ ಮಾಡುವುದು ಅದರೊಂದಿಗೆ ಪಕ್ಷಕ್ಕೆ ಚುನಾವಣೆಗಳಲ್ಲಿ ನೆರವಾಗಬೇಕೆಂದು ನಿರೀಕ್ಷಿಸಲಾಗುತ್ತದೆ. ಏಕೆಂದರೆ ಏಕ ಪಕ್ಷಗಳು ಹೆಚ್ಚಿನ ನಿಷ್ಠೆಯನ್ನು ಬಯಸಲಾಗುವುದಿಲ್ಲ, ಅವುಗಳಲ್ಲಿ ಹೆಚ್ಚಿನವು ಬಹುತ್ವವನ್ನು ಪಡೆದುಕೊಳ್ಳುತ್ತವೆ, ತಮ್ಮ ಸದಸ್ಯತ್ವವನ್ನು ಹೆಚ್ಚಿಸುವುದರಲ್ಲಿ ಗಣ್ಯ ವ್ಯಕ್ತಿಗಳ ಮೇಲಿನ ಹಿಡಿತವನ್ನು ನಿರ್ವಹಿಸುವುದರಲ್ಲಿ ನಿರತವಾಗಿರುತ್ತವೆ. ಸೊಶಿಯಲಿಸ್ಟ್ ಪಕ್ಷಗಳು ಸಂಯುಕ್ತ ಪಕ್ಷಗಳಿಗೆ ಉದಾಹರಣೆಯಾಗಿದೆ, ಹಾಗೆಯೇ ಬ್ರಿಟಿಷ್ ಕನ್ಸರ್ವೇಟಿವ್ ಪಾರ್ಟಿ ಮತ್ತು ಜರ್ಮನ್ ಕ್ರಿಶ್ಚಿಯನ್ ಡೆಮಾಕ್ರಟಿಕ್ ಯುನಿಯನ್‌ಗಳು ಏಕ ಪಕ್ಷಕ್ಕೆ ಉದಾಹರಣೆಗಳಾಗಿವೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಮುಖ ಪಕ್ಷಗಳೆರಡೂ ಏಕ ಪಕ್ಷಗಳಾಗಿವೆ, ಪ್ರಾಥಮಿಕರ ಪರಿಚಯ ಮತ್ತು ಇನ್ನಿತರ ಸುಧಾರಣೆಗಳು ಅವರಿಗೆ ವರ್ಗಾಯಿಸಲ್ಪಡುತ್ತದೆ, ಹೀಗಾಗಿ ಪ್ರಭಾವಗಳ ಮೇಲಿನ ಮತ್ತು ಅಭ್ಯರ್ಥಿಗಳ ನಾಮನಿರ್ದೇಶನಗಳ ಸ್ಪರ್ಧೆಯ ನಿರ್ವಹಣೆಯನ್ನು ಕಾರ್ಯಕರ್ತರೇ ನೋಡಿಕೊಳ್ಳುತ್ತಾರೆ. [೯]


ಕೌಸ್ ವಾನ್ ಬೇಮೆಯು ಯುರೋಪಿಯನ್ ಪಕ್ಷಗಳನ್ನು ಒಂಬತ್ತು ಕುಟುಂಬಗಳನ್ನಾಗಿ ವಿಂಗಡಿಸಿದ್ದಾನೆ, ಅವು ಹೆಚ್ಚಿನ ಪಕ್ಷಗಳ ವಿವರಣೆಯನ್ನು ಕೊಡುತ್ತವೆ. ಅವನು ಏಳನ್ನು ಎಡದಿಂದ ಬಲಕ್ಕೆ ಜೋಡಿಸಲು ಸಮರ್ಥನಾಗುತ್ತಾನೆ: ಕಮ್ಯುನಿಸ್ಟ್, ಸೋಶಿಯಲಿಸ್ಟ್, ಗ್ರೀನ್, ಲಿಬರಲ್, ಕ್ರಿಶ್ಚಿಯನ್ ಡೆಮಾಕ್ರಟಿಕ್, ಕನ್ಸರ್ವೇಟಿವ್ ಮತ್ತು ಲಿಬರ್ಟೇರಿಯನ್. ಅಧಿಕಾರದ ಎರಡು ಇನ್ನಿತರ ವಿಧಗಳೆಂದರೆ ರೈತಾಪಿಯ ಮತ್ತು ಸ್ಥಳೀಯ/ ಜನಾಂಗೀಯ ಪಕ್ಷಗಳಾಗಿ ವಿಂಗಡಿಸಲಾಗುತ್ತದೆ.[೧೦]

ಇವನ್ನೂ ಗಮನಿಸಿ[ಬದಲಾಯಿಸಿ]

Page ಮಾಡ್ಯೂಲ್:Portal/styles.css has no content.

ಪರಾಮರ್ಶನಗಳು[ಬದಲಾಯಿಸಿ]

 1. ರೆಡ್ಡಿಂಗ್ 2004
 2. ಅಬಿಜಡೆಹ್ 2005.
 3. ಡುವೆರ್ಜರ್ 1954
 4. ಡೊನಾಲ್ಡ್ ಎ. ಕ್ರೊನೊಸ್ ಸಿಂಪಲ್ ಎಲೆಟ್ರಿಕಲ್ ರಿಫಾರ್ಮ್ ಪಾರ್ ಪೈರ್ ಆ‍ಯ್‌೦ಡ್ ಬ್ಯಾಲೆನ್ಸಡ್ ಎಲೆಕ್ಷನ್ಸ್ Archived 2008-06-14 ವೇಬ್ಯಾಕ್ ಮೆಷಿನ್ ನಲ್ಲಿ. ಬ್ಲಾಗ್ ವಿತ್ ಲಿಂಕ್ಸ್ ಟು ಪೊಲ್ಸ್
 5. ACEproject.org ಎಸಿಇ ಎಲೆಕ್ಟಿಕಲ್ ನಾಲೆಡ್ಜ್ ನೆಟ್‌ವರ್ಕ್: ಕಂಪೇರಿಟಿವ್ ಡಾಟ: ಪೊಲಿಟಿಕಲ್ ಪಾರ್ಟೀಸ್ ಆ‍ಯ್‌೦ಡ್ ಕ್ಯಾಂಡಿಡೇಟ್ಸ್
 6. ACEproject.org ಎಸಿಇ ಎಲೆಕ್ಟಿಕಲ್ ನಾಲೆಡ್ಜ್ ನೆಟ್‌ವರ್ಕ್: ಕಂಪೇರಿಟಿವ್ ಡಾಟ: ಪೊಲಿಟಿಕಲ್ ಪಾರ್ಟೀಸ್ ಆ‍ಯ್‌೦ಡ್ ಕ್ಯಾಂಡಿಡೇಟ್ಸ್
 7. ACEproject.org ಎಸಿಇ ಎನ್‌ಸೈಕ್ಲೋಪೀಡಿಯ: ಪಬ್ಲಿಕ್ ಫಂಡಿಂಗ್ ಆಫ್ ಪೊಲಿಟಿಕಲ್ ಪಾರ್ಟೀಸ್
 8. ಪಕ್ಷ ಹೋಳಾದರೆ ಚಿಹ್ನೆ ಯಾರಿಗೆ: ಒಂದು ಹಿನ್ನೋಟ;13 Jan, 2017
 9. Ware, ಪೊಲಿಟಿಕಲ್ ಪಾರ್ಟೀಸ್ , pp. 65-67
 10. Ware, ಪೊಲಿಟಿಕಲ್ ಪಾರ್ಟೀಸ್ , p. 22

ಗ್ರಂಥವಿವರಣ ಸೂಚಿ[ಬದಲಾಯಿಸಿ]

 • ಅಬಿಜಡೆಹ್, ಅರಶ್, 2005. MCgill.ca, "ಡೆಮಾಕ್ರಟಿಕ್ ಎಲೆಕ್ಷನ್ಸ್ ವಿತ್‌ಔಟ್ ಕ್ಯಾಂಪೈನ್ಸ್? ನಾರ್ಮಿಟಿವ್ ಫೌಂಡೇಶನ್ಸ್ ಆಫ್ ನ್ಯಾಶನಲ್ Baha'i (ಬಹಾಇ) ಎಲೆಕ್ಷನ್ಸ್." ವರ್ಲ್ಡ್ ಆರ್ಡರ್ ವಿಭಾಗ. 37, ಸಂಖ್ಯೆ. 1, pp. 7–49.
 • ಡುವೆರ್ಜರ್, ಮೊರಿಸ್. 1954. ರಾಜಕೀಯ ಪಕ್ಷಗಳು ಲಂಡನ್:ಮೆಥುಯೆನ್.
 • ಗಿಂತರ್, ರಿಚರ್ಡ್ ಮತ್ತು ಲೆರ್ರಿ ಡೈಮಂಡ್. 2003. "ಸ್ಪೀಶೀಸ್ ಆಫ್ ಪೊಲಿಟಿಕಲ್ ಪಾರ್ಟೀಸ್:ಎ ನ್ಯೂ ಟೈಪಾಲಜಿ," ಪಾರ್ಟಿ ಪೊಲಿಿಕ್ಸ್ , ವಿಭಾಗ. 9, ಸಂಖ್ಯೆ. 2, pp. 167–199.
 • ನ್ಯೂಮನ್,ಸಿಗ್ಮಂಡ್ (ಆವೃತ್ತಿ). 1956. ಮಾಡರ್ನ್ ಪೊಲಿಟಿಕಲ್ ಪಾರ್ಟೀಸ್ . IL: ಚಿಕಾಗೊ ಪ್ರೆಸ್ ವಿಶ್ವವಿದ್ಯಾಲಯ.
 • ರೆಡ್ಡಿಂಗ್ ,ರಾಬರ್ಟ್. 2004. {0ಹೈರ್ಡ್ ಹಾರ್ಟೆಡ್{/0}. ಆರ‍್‌ಸಿಐ.
 • ಸ್ಮಿತ್, ಸ್ಟೀವನ್ ಎಸ್. 2007. ಪಾರ್ಟಿ ಇನ್‌ಫ್ಲುಯೆನ್ಸ್‌ ಇನ್ ಕಾಂಗ್ರೆಸ್. ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್
 • ಸುತರ್‌ಲ್ಯಾಂಡ್, ಕೈತ್. 2004. ದ ಪಾರ್ಟೀಸ್ ಓವರ್ . ಇಂಪ್ರಿಂಟ್ ಅಕಾಡೆಮಿಕ್. ಐಎಸ್‌ಬಿಎನ್ 0-595-20284-5.
 • ವೇರ್,ಅಲಾನ್. 1987.

ಸಿಟಿಜನ್ಸ್, ಪಾರ್ಟೀಸ್ ಆ‍ಯ್೦ಡ್ ದ ಸ್ಟೇಟ್: ಎ ರಿಅಪ್ರೈಸಲ್. ಪ್ರಿನ್ಸ್‌ಟನ್ ಯುನಿವರ್ಸಿಟಿ ಪ್ರೆಸ್.

ಬಾಹ್ಯ ಕೊಂಡಿಗಳು[ಬದಲಾಯಿಸಿ]