ಕೆಂಪು
Red | |
---|---|
Spectral coordinates | |
Wavelength | ~630–740[೧][೨] nm |
Frequency | ~480–405 THz |
Common connotations | |
passion, aggression, courage, energy, guilt, love, anger, hatred, pain, socialism, fire, heat, sacrifice, violence, bullfighting, emergency, danger, sin, negativity, blood, devils, lust, communism, stop, exit, honor, leadership, Valentine's Day, yield sign, blushing, Christmas, purity, attraction, beauty, error, failure, wrong way, conservatism (US), happiness (China), good luck (China), HIV/AIDS awareness and drug intolerance | |
Color coordinates | |
Hex triplet | #FF5663 |
sRGBB (r, g, b) | (255, 86, 99) |
HSV (h, s, v) | (355.1°, 66.4%, 100%) |
Source | CIECAM02[೩] |
B: Normalized to [0–255] (byte) |
ಸ್ಥೂಲವಾಗಿ 630–740 nmಗಳಷ್ಟು ತರಂಗದೂರ ವ್ಯಾಪ್ತಿಯಲ್ಲಿ ಪ್ರಧಾನವಾಗಿ ಮಾನವ ಕಣ್ಣು ಗ್ರಹಿಸಬಲ್ಲ ದೀರ್ಘವಾದ ತರಂಗದೂರಗಳಲ್ಲಿರುವ ಬೆಳಕಿನಲ್ಲಿರುವ ಬಹು ಸಂಖ್ಯೆಯ ಸದೃಶ ವರ್ಣ/ಬಣ್ಣಗಳಲ್ಲಿ ಯಾವುದೇ ಬಣ್ಣವು ಕೆಂಪು ಆಗಿರುತ್ತದೆ.[೨] ಇದಕ್ಕಿಂತ ಉದ್ದವಾದ ತರಂಗದೂರಗಳನ್ನು ಅತಿಗೆಂಪು ಅಥವಾ ರಕ್ತಾತೀತ (ಕೆಂಪಿಗಿಂತ ಕೆಳಗಿನದು ) ಎಂದು ಕರೆಯಲಾಗುವುದಲ್ಲದೇ ಇವನ್ನು ಮಾನವನ ಬರಿಗಣ್ಣಿಂದ ನೋಡಲು ಸಾಧ್ಯವಿಲ್ಲ. ಕೆಂಪನ್ನು RGB ವರ್ಣ/ಬಣ್ಣ ವ್ಯವಸ್ಥೆಗಳಲ್ಲಿ ಹಸಿರುನೀಲಿಗೆ ಪೂರಕವಾಗಿ ಸಂಯೋಜನೀಯ/ಸೇರಿಸುವ ಬೆಳಕಿನ ಮೂಲ/ಪ್ರಾಥಮಿಕ ವರ್ಣ/ಬಣ್ಣಗಳಲ್ಲಿ ಒಂದಾಗಿ ಬಳಸಲಾಗುವುದು. RYB ವರ್ಣಾವಕಾಶದಲ್ಲಿ ಕೂಡಾ ಕಳೆಯುವ/ತೆಗೆಯುವ ಮೂಲ/ಪ್ರಾಥಮಿಕ ವರ್ಣ/ಬಣ್ಣಗಳಲ್ಲಿ ಕೂಡಾ ಒಂದಾಗಿರುವ ಕೆಂಪು CMYK ವರ್ಣಾವಕಾಶದಲ್ಲಿ ಹಾಗಿಲ್ಲ.
ವ್ಯುತ್ಪತ್ತಿ ಹಾಗೂ ಸ್ವರೂಪ ನಿರೂಪಣೆಗಳು
[ಬದಲಾಯಿಸಿ]ಹಳೆಯ ಆಂಗ್ಲ ಪದ rēad ನಿಂದ ಕೆಂಪು ಎಂಬ ಪದ ಬಂದಿದೆ.[೪] ಮತ್ತೂ ಹಿಂದೆ ಹೋಗುವುದಾದರೆ, ಪ್ರೋಟೋ-ಜರ್ಮೇನಿಕ್ ಪದ ರಾಥಾಜ್ ಹಾಗೂ ಪ್ರೋಟೊ-ಇಂಡೋ ಐರೋಪ್ಯ ಮೂಲಪದ ರಿಯೂದ್- ಮೂಲದ್ದಾಗಿದೆ. ಸಂಸ್ಕೃತದಲ್ಲಿ, ರುಧಿರ ಎಂದರೆ ಕೆಂಪು ಅಥವಾ ರಕ್ತ. ಆಂಗ್ಲ ಭಾಷೆಯಲ್ಲಿ, ಕೆಂಪು ಎಂಬ ಪದವನ್ನು ರಕ್ತದ, ನಿರ್ದಿಷ್ಟ ಹೂವುಗಳ (e.g. ಗುಲಾಬಿಗಳು) ಕಳಿತ ಹಣ್ಣುಗಳ (e.g. ಸೇಬುಗಳು, ಚೆರ್ರಿಗಳು) ಮುಂತಾದವುಗಳ ಬಣ್ಣಗಳನ್ನು ಸೂಚಿಸಲು ಬಳಸಲಾಗುತ್ತದೆ. ಅಷ್ಟೇ ದೃಢವಾಗಿ ಬೆಂಕಿಯನ್ನು, ಸೂರ್ಯನನ್ನು, ಸೂರ್ಯ ಮುಳುಗುವಾಗಿನ ಆಕಾಶವನ್ನು ಸಹಾ ಸೂಚಿಸಲಾಗುತ್ತದೆ. ಆರೋಗ್ಯಕರ ತೆಳುವರ್ಣದ-ಚರ್ಮ ಹೊಂದಿರುವ ಜನರನ್ನು ಕೆಲವೊಮ್ಮೆ "ಕೆಂಪು-ಕಳೆಯ" ಮುಖಛಾಯೆಯನ್ನು ಹೊಂದಿದ್ದಾರೆಂದು ಹೇಳಲಾಗುತ್ತದೆ (ಬಿಳಿಚಿಕೊಂಡಂತೆ ಕಾಣಿಸಿಕೊಳ್ಳುವುದರ ವಿರುದ್ಧವಾಗಿ). 19ನೇ ಶತಮಾನದ ಮಧ್ಯದಲ್ಲಿ ಸಮಾಜವಾದದ ಪ್ರಗತಿಗೊಂಡ ನಂತರ, ಕೆಂಪನ್ನು ಕ್ರಾಂತಿಕಾರಿ ಚಳುವಳಿಗಳನ್ನು ನಿರೂಪಿಸಲು ಕೂಡಾ ಬಳಸಲಾಗುತ್ತದೆ.[೫]
ವಿಜ್ಞಾನದಲ್ಲಿ
[ಬದಲಾಯಿಸಿ]ವರ್ಣಮಾಪನ, ವರ್ಣ ವಿಜ್ಞಾನ, ದೃಷ್ಟಿ, ಹಾಗೂ ಛಾಯಾಗ್ರಹಣ
[ಬದಲಾಯಿಸಿ]ಸ್ಥೂಲವಾಗಿ 630–700 nmಗಳಷ್ಟು ತರಂಗದೂರ ವ್ಯಾಪ್ತಿಯಲ್ಲಿ ಪ್ರಧಾನವಾಗಿ ಮಾನವ ಕಣ್ಣು ಗ್ರಹಿಸಬಲ್ಲ ದೀರ್ಘವಾದ ತರಂಗದೂರಗಳಲ್ಲಿರುವ ಬೆಳಕಿನಲ್ಲಿರುವ ಬಹು ಸಂಖ್ಯೆಯ ಸದೃಶ ವರ್ಣ/ಬಣ್ಣಗಳಲ್ಲಿ ಯಾವುದೇ ಬಣ್ಣವು ಕೆಂಪು ಆಗಿರುತ್ತದೆ.[೨] ಇದಕ್ಕಿಂತ ಉದ್ದವಾದ ತರಂಗದೂರಗಳನ್ನು ಅವಗೆಂಪು (ಕೆಂಪಿಗಿಂತ ಕೆಳಗಿನದು ) ಎಂದು ಕರೆಯಲಾಗುವುದಲ್ಲದೇ ಇವನ್ನು ಮಾನವನ ಬರಿಗಣ್ಣಿಂದ ನೋಡಲು ಸಾಧ್ಯವಿಲ್ಲ.[೬] ಕೆಂಪು ಬಣ್ಣ'ದ ತರಂಗದೂರವು ಹಿಂದಿನ ಕಾಂಪ್ಯಾಕ್ಟ್ ಡಿಸ್ಕ್ ತಂತ್ರಜ್ಞಾನಗಳಲ್ಲಿ ಬಳಸುತ್ತಿದ್ದ ಕೆಂಪು ಲೇಸರ್‌ಗಳಂತಹಾ ಲೇಸರ್ ತಂತ್ರಜ್ಞಾನಗಳಲ್ಲಿ ಪ್ರಮುಖ ಅಂಶವಾಗಿದೆ, ಅವುಗಳನ್ನು ಬದಲಿಸಿ ಈಗ ಕೆಂಪಿನ ತರಂಗದೂರವು ದೀರ್ಘವಾದದ್ದರಿಂದ ಲೇಸರ್'ನ ಮುದ್ರಣಗಳು ಡಿಸ್ಕ್‌ನಲ್ಲಿ ನೀಲಿ ಲೇಸರ್‌ಗಳಿಗಿಂತ ಹೆಚ್ಚು ಸ್ಥಳವನ್ನು ತೆಗೆದುಕೊಳ್ಳುವಂತೆ ಮಾಡುವುದರಿಂದ ನೀಲಿ ಲೇಸರ್‌ಗಳನ್ನು ಬಳಸಲಾಗುತ್ತಿದೆ.[೭] ಪ್ರೈಮೇಟುಗಳು ಕೆಂಪು ವರ್ಣದ ಸಂವೇದನೆಯನ್ನು ಏಕೆ ಬೆಳೆಸಿಕೊಂಡವೆಂಬುದಕ್ಕೆ ಪ್ರಧಾನ ಸಿದ್ಧಾಂತದ ಪ್ರಕಾರ ಅದು ಕಳಿತ ಹಣ್ಣನ್ನು ಕಳಿಯದ ಹಣ್ಣಿನಿಂದ ಹಾಗೂ ಸೇವನಾರ್ಹವಲ್ಲದ ಸಸ್ಯವರ್ಗಗಳಿಂದ ಪ್ರತ್ಯೇಕಗೊಳಿಸಲು ಸಹಾಯ ಮಾಡುತ್ತಿತ್ತು ಎಂಬುದು.[೮] ಈ ಹೊಸ ಸಾಮರ್ಥ್ಯದ ಅನುಕೂಲವನ್ನು ಪಡೆಯಲು ಸಾಧ್ಯವಾಗುವಂತೆ ಇದು ಕೆಂಪು ಮುಖಚರ್ಯೆಗಳಂತಹಾ ಮತ್ತಷ್ಟು ಇತರೆ ಅಳವಡಿಕೆಗಳ ಬಳಕೆಗೆ ಕಾರಣವಾಯಿತು.[೯] ಮಾನವನ ಕಣ್ಣಿನಲ್ಲಿರುವ ಕಡ್ಡಿ ಕೋಶಗಳು ಕೆಂಪು ಬಣ್ಣದ ಸಂವೇದನೆ ಹೊಂದಿಲ್ಲವಾದ್ದರಿಂದ ಕೆಂಪು ಬೆಳಕನ್ನು ಅಲ್ಪ-ಬೆಳಕಿನ ಅಥವಾ ರಾತ್ರಿ-ಸಮಯದ ಸಂದರ್ಭಗಳಲ್ಲಿ ರಾತ್ರಿ ನೋಟವನ್ನು ಕಾಪಾಡಿಕೊಳ್ಳಲು ಬಳಸಲಾಗುತ್ತದೆ.[೧೦][೧೧] ಕೆಂಪು ಬೆಳಕಿನ ಮೂರು ಸಂಯೋಜನೀಯ/ಸೇರಿಸುವ ಮೂಲ/ಪ್ರಾಥಮಿಕ ವರ್ಣ/ಬಣ್ಣಗಳಲ್ಲಿ ಒಂದಾಗಿದೆಯಲ್ಲದೇ, RGB ವರ್ಣ/ಬಣ್ಣ ವ್ಯವಸ್ಥೆಗಳಲ್ಲಿ ಹಸಿರುನೀಲಿಗೆ ಪೂರಕವಾಗಿದೆ. RYB ವರ್ಣಾವಕಾಶದಲ್ಲಿ ಕೂಡಾ ಕಳೆಯುವ/ತೆಗೆಯುವ ಮೂಲ/ಪ್ರಾಥಮಿಕ ವರ್ಣ/ಬಣ್ಣಗಳಲ್ಲಿ ಕೂಡಾ ಒಂದಾಗಿರುವ ಕೆಂಪು CMYK ವರ್ಣಾವಕಾಶದಲ್ಲಿ ಹಾಗಿಲ್ಲ.[೧೨]
ಸಂಯೋಜನೀಯ/ಸೇರಿಸುವ ಮೂಲ/ಪ್ರಾಥಮಿಕ ವರ್ಣವಾಗಿ ಕೆಂಪಿನ ಒಂದು ಪ್ರಧಾನ ಬಳಕೆಯೆಂದರೆ RGB ವರ್ಣ ಮಾದರಿಯದು. ಕೆಂಪು ವರ್ಣವು ತಾನೇ ಪ್ರಮಾಣಾನುಸಾರಿಯಲ್ಲದ ಕಾರಣ ಕೆಂಪನ್ನು ಆಧಾರವಾಗಿಟ್ಟುಕೊಂಡ ವರ್ಣಮಿಶ್ರಣಗಳು ಕೂಡಾ ವರ್ಣದ ನಿರ್ದಿಷ್ಟ ನಿಷ್ಕೃಷ್ಟ ನಿರೂಪಣೆಯನ್ನೂ ಹೊಂದಿರುವುದಿಲ್ಲ. ಯುನೈಟೆಡ್ ಸ್ಟೇಟ್ಸ್ ಸರ್ಕಾರವು ವಿನ್ಯಾಸದಲ್ಲಿ ಕೆಂಪನ್ನು ನಮೂದಿಸಿದ್ದಾಗ ಯಾವ ಪೇಂಟ್‌ಗಳನ್ನು ಬಳಸಬೇಕೆಂಬುದಕ್ಕೆ ನಿರ್ದಿಷ್ಟ ನಿಷ್ಕೃಷ್ಟ ನಿರೂಪಣೆಯನ್ನು ನೀಡಿದೆ.[೧೩] ಗಣಕಗಳು ನಿಷ್ಕೃಷ್ಟ ವರ್ಣ/ಬಣ್ಣಗಳನ್ನು ಬಿಂಬಿಸಬೇಕೆಂದಾಗ, ಕೆಂಪು ವರ್ಣವನ್ನು sRGBನಂತಹಾ ಸಮಗ್ರ ವರ್ಣಾವಕಾಶದ ಮಾನಕದಲ್ಲಿ ನಿರೂಪಿಸಬೇಕಿರುತ್ತದೆ.[೧೪] ವರ್ಣ ಸರಿಪಡಿಕೆ (ವಾಸ್ತವವಾಗಿ ಸಂಪೂರ್ಣವಾಗಿ ಕೆಂಪು ವರ್ಣದ್ರವ್ಯವನ್ನು ಮಾತ್ರವೇ ಸಂಪೂರ್ಣ ಗಾಢವಿಲ್ಲದಿರುವಂತಹಾ ಮಾನಕ ಕೆಂಪು ಉತ್ಪಾದನೆಯಾಗುವಂತೆ ಇರುತ್ತದೆ).
ಕೆಂಪು ಬೆಳಕನ್ನು ಬಹುತೇಕ ಛಾಯಾಗ್ರಾಹಿ ಹಾಳೆಗಳು ಹಾಗೂ ಕೆಲವು ಫಿಲ್ಮ್‌ಗಳನ್ನು ಅದು ನಷ್ಟಗೊಳಿಸಲಾರದಾದ್ದರಿಂದ ಈ ಹಿಂದೆ (ಹಾಗೂ ಕೆಲವೊಮ್ಮೆ ಈಗಲೂ) ಕತ್ತಲೆ/ಛಾಯಾಸಂಸ್ಕರಣಕೋಣೆಯಲ್ಲಿ ಸುರಕ್ಷಿತ ಬೆಳಕಾಗಿ ಬಳಸಲಾಗುತ್ತಿತ್ತು.[೧೫] ಅನೇಕ ಆಧುನಿಕ ಕತ್ತಲೆ/ಛಾಯಾಸಂಸ್ಕರಣಕೋಣೆಗಳು ಹಳದಿದೀಪವನ್ನು ಸುರಕ್ಷಿತ ದೀಪವನ್ನಾಗಿ ಬಳಸುವರಾದರೂ, ಕೆಂಪು ಬೆಳಕು ಅದರೊಂದಿಗೆ ಸಾರ್ವಜನಿಕ ಮಾನಸದಲ್ಲಿ ಸ್ಥಾಯಿಯಾಗಿ ಉಳಿದು ಬಿಟ್ಟಿದೆ.[೧೬]
ಪರಿಸರದಲ್ಲಿ
[ಬದಲಾಯಿಸಿ]ಮಂಗಳ ಗ್ರಹವನ್ನು ಅದರಲ್ಲಿ ಲಭ್ಯವಿರುವ ಯಥೇಚ್ಚ ಕಬ್ಬಿಣದ ಆಕ್ಸೈಡ್‌ನಿಂದಾಗಿ ಅದರ ಮೇಲ್ಮೈಯನ್ನು ಆವರಿಸಿರುವ ಕೆಂಪುಬಣ್ಣದಿಂದಾಗಿ ಕೆಂಪು ಗ್ರಹ ವೆಂದೇ ಕರೆಯಲಾಗುತ್ತದೆ.[೧೭] ನೋಡುಗನ ದೃಷ್ಟಿಯಿಂದಾಚೆಗೆ ಹೋಗುತ್ತಿರುವ ಖಗೋಳೀಯ ವಸ್ತುಗಳು ಕೆಂಪು ರೂಪಾಂತರವನ್ನು ತೋರ್ಪಡಿಸುತ್ತವೆ. ಗುರು ಗ್ರಹದ ಮೇಲ್ಮೈ ಗ್ರಹದ ಮಧ್ಯರೇಖೆಯ ದಕ್ಷಿಣಕ್ಕೆ ಫುಟ್‌ಬಾಲ್ ಆಕೃತಿಯ ಬೃಹತ್ ಕೆಂಪು ಕುಳಿಯ/ಸ್ಥಳವನ್ನು ತೋರ್ಪಡಿಸುತ್ತದೆ. ಖಗೋಳಶಾಸ್ತ್ರಜ್ಞರು ಆ ಸ್ಥಳವನ್ನು ಅದೊಂದು ರೀತಿಯ ಬಿರುಗಾಳಿಯೆಂದು ಅಭಿಪ್ರಾಯಪಡುತ್ತಾರೆ.[೧೮]
ಆಮ್ಲಜನಕೀಕರಿಸಿದ ರಕ್ತವು ಅದರಲ್ಲಿ ಲಭ್ಯವಿರುವ ಆಮ್ಲಜನಕೀಕರಿಸಿದ ಹಿಮೋಗ್ಲೋಬಿನ್‌ನಿಂದಾಗಿ ಕೆಂಪು ಬಣ್ಣವನ್ನು ಹೊಂದಿರುತ್ತದೆ.[೧೯] ಪ್ರಾಣಿಗಳ ಬಣ್ಣಗಳೊಂದಿಗೆ ಪ್ರಸ್ತಾಪಿತವಾದಾಗ ಕೆಂಪು ಸಾಮಾನ್ಯವಾಗಿ ಕಂದುಬಣ್ಣದ, ಕೆಂಪು ಛಾಯೆಯ ಕಂದು ಅಥವಾ ಶುಂಠಿಯ ಬಣ್ಣವನ್ನು ಹೊಂದಿರುತ್ತದೆ. ಈ ಅರ್ಥದಲ್ಲಿ ಇದನ್ನು ಕೆಂಪುಛಾಯೆಯ ಕಂದು ಬಣ್ಣದ ಹಸುಗಳು ಹಾಗೂ ನಾಯಿಗಳ ತುಪ್ಪಳದ ವರ್ಣ/ಬಣ್ಣಗಳನ್ನು ವಿವರಿಸುವಾಗ ಹಾಗೂ, ಕೆಂಪು ನರಿ, ಕೆಂಪು ಅಳಿಲು, ಕೆಂಪು ಜಿಂಕೆ, ರಾಬಿನ್ ರೆಡ್‌ಬ್ರೆಸ್ಟ್ ಹಕ್ಕಿ, ಕೆಂಪು ಗ್ರೌಸ್‌ಹಕ್ಕಿ, ಕೆಂಪು ಗಂಟುಹಕ್ಕಿ, ಕೆಂಬಾಲದಹಕ್ಕಿ, ಕೆಂಪುರೆಕ್ಕೆ ಹಕ್ಕಿ, ಕೆಂಪು ಸುಳಿವುನಾಯಿ, ಕೆಂಪು ಡೆವನ್ ಹಸು ಮುಂತಾದ etc. ಅನೇಕ ಪ್ರಾಣಿಗಳ ತಳಿಗಳು ಅಥವಾ ಕುಲವರ್ಗಗಳ ಹೆಸರುಗಳೊಂದಿಗೆ ಬಳಸಲಾಗುತ್ತದೆ. ಕೆಂಪು ಕಾವಿಮಣ್ಣು, ಕೆಂಪು ಕೂದಲು ಹಾಗೂ ರೆಡ್/ಕೆಂಪು ಇಂಡಿಯನ್‌ಗಳಂತೆ ಪ್ರಾಣಿಗಳ ಬಣ್ಣಗಳನ್ನು ಸೂಚಿಸಲು ಬಳಕೆ ಮಾಡಲಾಗುತ್ತದೆ. ಹೂವುಗಳ ವಿಚಾರದಲ್ಲಿ ಬಳಸಿದಾಗ ಕೆಂಪು ಅನೇಕ ವೇಳೆ ಊದಾಬಣ್ಣ (ಕೆಂಪು ಮುಳ್ಳಿಲ್ಲದ ತುರುಚಿ, ಕೆಂಪು ತ್ರಿದಳಪರ್ಣಿ, ಕೆಂಪು ಹೆಲ್ಲೆಬರೀನ್) ಅಥವಾ ನಸುಗೆಂಪು/ಪಾಟಲವರ್ಣ (ಕೆಂಪು ಕ್ಯಾಂಪಿಯನ್, ಕೆಂಪು ವ್ಯಾಲೆರಿಯನ್) ವರ್ಣ/ಬಣ್ಣಗಳನ್ನು ಸೂಚಿಸುತ್ತದೆ.
ಸಾಂಕೇತಿಕತೆ
[ಬದಲಾಯಿಸಿ]ಪಾಪ, ತಪ್ಪಿತಸ್ಥತೆ/ಅಪರಾಧ, ನೋವು/ಯಾತನೆ, ಉದ್ರೇಕ/ಭಾವಾವೇಶ, ರಕ್ತ ಹಾಗೂ ಕೋಪ
[ಬದಲಾಯಿಸಿ]ಕೆಂಪು ವರ್ಣವನ್ನು ರಕ್ತ ಅಥವಾ ಕಾಮದೊಂದಿಗೆ ಸಂಬಂಧಿಸಿದ ತಪ್ಪಿತಸ್ಥತೆ/ಅಪರಾಧ, ಪಾಪ ಹಾಗೂ ಕೋಪಗಳ ಚಿಹ್ನೆಯಾಗಿ ಬಳಸಲಾಗುತ್ತದೆ.[೨೦] ಇಸಯ್ಯದಲ್ಲಿ ಬೈಬಲಿನ ಉದಾಹರಣೆಯೊಂದನ್ನು ನೋಡಬಹುದು : "ನಿನ್ನ ಪಾಪಗಳು ಕಡುಗೆಂಪು ಬಣ್ಣದ್ದಾಗಿದ್ದರೂ, ಅವು ಮಂಜಿನಷ್ಟು ಶ್ವೇತವಾಗಿ ಕಂಗೊಳಿಸುತ್ತವೆ."[೨೧] ಅಷ್ಟೇ ಅಲ್ಲದೇ, ದ ಸ್ಕಾರ್ಲೆಟ್ ಲೆಟರ್ , ಒಂದು 1850ರ ನಥಾನಿಯೆಲ್ ಹಾಥಾರ್ನೆ ವಿರಚಿತ ಅಮೇರಿಕನ್ ಕಾದಂಬರಿಯಲ್ಲಿ ವ್ಯಭಿಚಾರ ಮಾಡಿದುದಕ್ಕಾಗಿ ಬಹಿಷ್ಕಾರಕ್ಕೊಳಗಾದ ಪ್ಯೂರಿಟನ್ ನವ ಇಂಗ್ಲೆಂಡ್ ಸಮುದಾಯದಲ್ಲಿನ ಓರ್ವ ಮಹಿಳೆಯನ್ನು ಹೊಂದಿದ್ದು, ಆಕೆಯ ಪಾಪವನ್ನು ಆಕೆಯ ವಸ್ತ್ರಗಳಿಗೆ ಕೆಂಪು ಅಕ್ಷರ 'A'ಅನ್ನು ಹೊಲಿಯುವುದರ ಮೂಲಕ ಸೂಚಿಸಲಾಗುತ್ತದೆ.[೨೨] ಇದೆಲ್ಲವೂ ಕ್ರೈಸ್ತ ಧರ್ಮವು ಅಳವಡಿಸಿಕೊಂಡ ಕೆಂಪು ಬಣ್ಣವನ್ನು ಕೊಲೆಯ ರಕ್ತ,[೨೩] ದೊಂದಿಗೆ ಹಾಗೂ ಸಾಧಾರಣವಾಗಿ ತಪ್ಪಿತಸ್ಥತೆ/ಅಪರಾಧಯೊಂದಿಗೆ ಏಕೀಕರಿಸಲಾಗುವ ಸಾರ್ವತ್ರಿಕ ಹೀಬ್ರ್ಯೂ ಮನೋಭಾವದಿಂದ ಬಂದಿದೆ. ಅನೇಕವೇಳೆ ವಸ್ತುಗಳು ಭಯ ಹುಟ್ಟಿಸಲೆಂದೇ ಕೆಂಪು ವರ್ಣದ್ದಾಗಿರುತ್ತವೆ.[೨೪] ಇದಕ್ಕೆ ಮತ್ತೊಂದು ಜನಪ್ರಿಯ ಉದಾಹರಣೆಯೆಂದರೆ "ಕಾಟ್ ರೆಡ್ -ಹ್ಯಾಂಡೆಡ್ " ಎಂಬ ಅಪರಾಧದಲ್ಲಿ ತೊಡಗಿರುವಾಗಲೇ ಸಿಕ್ಕಿಬಿದ್ದ, ಅಥವಾ ಕೊಲೆಯ ರಕ್ತವು ಕೈಯಲ್ಲಿ ಇನ್ನೂ ಉಳಿದಿರುವಾಗಲೇ ಸಿಕ್ಕಿಬಿದ್ದುದನ್ನು ಸೂಚಿಸುವ ಪದಪುಂಜ.[೨೫] ಒಂದು ಹಂತದಲ್ಲಿ, ಕೆಂಪು ಬಣ್ಣವನ್ನು ವೇಶ್ಯೆಯರ ವಿಚಾರದಲ್ಲಿ ಬಳಸಲಾಗುತ್ತಿತ್ತು, ಅಥವಾ ಈಗಿನ ವೇಶ್ಯಾಗೃಹಗಳನ್ನು ಸೂಚಿಸಲು ಬಳಸಲಾಗುತ್ತದೆ (ಕೆಂಪು-ದೀಪ ಜಿಲ್ಲೆಗಳು).[೨೬][೨೭] ರೋಮನ್ ಕ್ಯಾಥೋಲಿಕ್ ಪಂಥದಲ್ಲಿ, ಕೆಂಪು ಏಳು ಮಾರಕ ಪಾಪಗಳಲ್ಲಿ ಒಂದಾದ ಕಡುಕ್ರೋಧವನ್ನು ಸೂಚಿಸುತ್ತದೆ. ಕ್ರೈಸ್ತಧರ್ಮದಲ್ಲಿ, ಸೈತಾನನು ಕೆಂಪುಬಣ್ಣವನ್ನು ಹೊಂದಿರುತ್ತಾನೆ ಎಂದು ಮತ್ತು/ಅಥವಾ ಕೆಂಪು ಪೋಷಾಕನ್ನು ಧರಿಸಿರುತ್ತಾನೆ ಎಂದು ಪ್ರತಿಮಾಶಿಲ್ಪ ಹಾಗೂ ಜನಪ್ರಿಯ ಸಂಸ್ಕೃತಿಗಳೆರಡರಲ್ಲೂ ಬಿಂಬಿಸಲಾಗಿದೆ.[೨೮] ಅಂಕಿ ಅಂಶಗಳು ತೋರಿಸುವ ಹಾಗೆ ಕೆಂಪು ಕಾರುಗಳು ಅಪಘಾತಗಳಿಗೆ ಹೆಚ್ಚು ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ.[೨೯]
ಕೆಂಪು ಬಣ್ಣವನ್ನು ಕಾಮಾಸಕ್ತಿ, ಭಾವಾವೇಶ, ಪ್ರೇಮ, ಹಾಗೂ ಸೌಂದರ್ಯಗಳನ್ನು ಸೂಚಿಸಲು ಕೂಡಾ ಬಳಸಲಾಗುತ್ತದೆ. ಪ್ರೇಮ ಹಾಗೂ ಸೌಂದರ್ಯದೊಂದಿಗೆ ಇದರ ಬಳಕೆಯು ಬಹುಶಃ ಪ್ರೇಮ ಸಂಕೇತವನ್ನಾಗಿ ಕೆಂಪು ಗುಲಾಬಿಗಳ ಬಳಕೆಯಿಂದಾಗಿದೆ.[೩೦] ಗ್ರೀಕರು ಹಾಗೂ ಹೀಬ್ರ್ಯೂಗಳು ಕೆಂಪು ಬಣ್ಣವನ್ನು ಪ್ರೇಮ ಹಾಗೂ ತ್ಯಾಗದ ಸಂಕೇತವನ್ನಾಗಿ ಪರಿಗಣಿಸುತ್ತಾರೆ.[೩೧] ಮನಶ್ಶಾಸ್ತ್ರದ ಸಂಶೋಧನೆಯ ಪ್ರಕಾರ ಕೆಂಪು ಬಣ್ಣದ ವಸ್ತ್ರವನ್ನು ಧರಿಸಿದ ಸ್ತ್ರೀಯರೆಡೆಗೆ ಪುರುಷರು ಹೆಚ್ಚು ಆಕರ್ಷಿತರಾಗುತ್ತಾರೆ.[೩೨]
ಧೈರ್ಯ ಹಾಗೂ ತ್ಯಾಗ
[ಬದಲಾಯಿಸಿ]ಕೆಂಪು ಬಣ್ಣವನ್ನು ತ್ಯಾಗದ ಸಂದರ್ಭದಲ್ಲಿ ಚೆಲ್ಲುವ ರಕ್ತ ಅಥವಾ ಘಾತಕ ಅಪಾಯದ ಸಂದರ್ಭದಲ್ಲಿ ತೋರುವ ಧೈರ್ಯಗಳ ವಿಚಾರದಲ್ಲಿ ಧೈರ್ಯ ಹಾಗೂ ತ್ಯಾಗದ ಸಂಕೇತವನ್ನಾಗಿ ಬಳಸಲಾಗುತ್ತದೆ.[೩೩] ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಅನೇಕ ರಾಷ್ಟ್ರಗಳ ಧ್ವಜಗಳಲ್ಲಿ ಹಾಗೂ ಅಮೇರಿಕದ ಅಂತರ್ಯುದ್ಧದ ಸಂದರ್ಭದಲ್ಲಿ ಸೈನಿಕನೋರ್ವ ಧೈರ್ಯ ಎಂಬುದರ ಅರ್ಥವನ್ನರಿಯುವ ದ ರೆಡ್ ಬ್ಯಾಡ್ಜ್ ಆಫ್ ಕರೇಜ್ ಎಂಬ ಕಾದಂಬರಿಯಲ್ಲೂ ಇದರ ಉದಾಹರಣೆಗಳು ಕಂಡುಬರುವುದು.[೩೪] ಹಿಂದೆ ಪ್ರಸ್ತಾಪಿಸಿದ ತಪ್ಪಿತಸ್ಥತೆ/ಅಪರಾಧದೊಂದಿಗಿನ ಬಳಕೆಯ ಜೊತೆಗೆ, ಕ್ರೈಸ್ತಧರ್ಮದಲ್ಲಿ, ಕೆಂಪು ತಮ್ಮ ಶ್ರದ್ಧೆಗಾಗಿ ಸಾವನ್ನಪ್ಪಿದ ಕ್ರೈಸ್ತ ಹುತಾತ್ಮರುಗಳ ಬಣ್ಣವನ್ನಾಗಿ ಬಳಸಲಾಗುತ್ತದೆ. ಪವಿತ್ರ ಗುರುವಾರ ಹಾಗೂ ಈಸ್ಟರ್ ಅವಧಿಗಳನ್ನು ನಿರೂಪಿಸಲು ಕೆಲವೊಮ್ಮೆ ಅದನ್ನು ಬಳಸುತ್ತಾರಲ್ಲದೇ, ಕೆಂಪು, ಹಸಿರು ಹಾಗೂ ಶ್ವೇತವರ್ಣ/ಬಿಳಿಗಳು ಕ್ರಿಸ್‌ಮಸ್‌ನ ವರ್ಣ ವ್ಯವಸ್ಥೆಯಾಗಿವೆ. ರೋಮನ್ ಕ್ಯಾಥೊಲಿಕ್ ಸಂಪ್ರದಾಯದಲ್ಲಿ ಕ್ರೈಸ್ತ ಹುತಾತ್ಮರುಗಳ ಔತಣದ ಎಲ್ಲಾ ದಿನಗಳಲ್ಲೂ ಹಾಗೂ ಪಾಮ್ ಭಾನುವಾರ/ಈಸ್ಟರ್ ಹಿಂದಿನ ಭಾನುವಾರದಂದೂ ಏಸುವಿನ ಸಾವಿನ ಪೂರ್ವನಿರೀಕ್ಷೆಯಲ್ಲಿ ಕೂಡಾ ಇದನ್ನು ಬಳಸುತ್ತಾರೆ.[೨೮] ರೋಮನ್ ದಂತಕಥೆಗಳಲ್ಲಿ ಯುದ್ಧ ದೇವತೆಯಾದ ಮಂಗಳ/ಮಾರ್ಸ್‌ನನ್ನು ಪ್ರತಿನಿಧಿಸಲು ಕೆಂಪು ಬಣ್ಣವನ್ನು ಬಳಸಲಾಗುತ್ತದೆ.[೩೩] ವಿಜಯೋತ್ಸವವನ್ನು ಆಚರಿಸುವ ಓರ್ವ ರೋಮನ್ ಜನರಲ್ ತನ್ನ ಸಾಧನೆಯ ಗೌರವಕ್ಕಾಗಿ ತನ್ನ ಇಡೀ ದೇಹವನ್ನು ಕೆಂಪು ರಂಗನ್ನು ಬಳಿದುಕೊಂಡಿರುತ್ತಿದ್ದ.[೩೫] "ರೆಡ್ -ಬ್ಲಡೆಡ್" ಎಂಬ ಪದಪುಂಜವು ಓರ್ವ ಧೈರ್ಯಶಾಲಿ, ದೃಢಕಾಯ ಹಾಗೂ ಪೌರುಷವುಳ್ಳವನನ್ನು ನಿರೂಪಿಸುತ್ತದೆ.[೨೫] ಆಂಗ್ಲ ವಂಶಲಾಂಛನಕಲೆಯಲ್ಲಿ , ಕೆಂಪು (ಗೂಲ್ಸ್ ಎಂದು ಕರೆಯಲಾಗುವ) ಉತ್ಕಟ ಅನುರಾಗ ಅಥವಾ ಪ್ರೀತಿಯನ್ನು ಬಿಂಬಿಸಿದರೆ, ಕಡುಗೆಂಪು(ರಕ್ತ-ವರ್ಣ) ಬಣ್ಣವು ದಿಟ್ಟತನ, ಉತ್ಸಾಹ ಅಥವಾ ದುಡುಕಿನ ವರ್ತನೆಯನ್ನು ಬಿಂಬಿಸುತ್ತದೆ.[೩೬]
ಎಚ್ಚರಿಕೆ
[ಬದಲಾಯಿಸಿ]ಕೆಂಪು ಜನರ ಗಮನವನ್ನು ಸೆಳೆಯುತ್ತದಲ್ಲದೇ, ಅಪಾಯ ಹಾಗೂ ತುರ್ತನ್ನು ಸೂಚಿಸಲು ನೇತ್ಯಾತ್ಮಕವಾಗಿ ಅಥವಾ ಪ್ರಚಾರದಲ್ಲಿ ಹೆಚ್ಚು ಜನರನ್ನು ಸೆಳೆಯಲು ಅಥವಾ ಪ್ರಕೃತಿಯಲ್ಲಿ ಪಕ್ವವಾದ ಹಣ್ಣು ತನ್ನ ಕೆಂಪು ಬಣ್ಣದಿಂದ ತಾನು ಸಿದ್ಧವಿರುವುದನ್ನು ಘೋಷಿಸುವ ಹಾಗೆ ಅದನ್ನು ಬಳಸಬಹುದಾಗಿದೆ.[೩೭] ಅನೇಕ ಅಧ್ಯಯನಗಳು ಸೂಚಿಸಿರುವ ಹಾಗೆ ಕೆಂಪು ಬಣ್ಣವು ಇತರೆಲ್ಲಾ ವರ್ಣ/ಬಣ್ಣಗಳಿಗಿಂತಾ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡುತ್ತದಲ್ಲದೇ, ಅನುಕ್ರಮವಾಗಿ ಕಿತ್ತಳೆ, ಹಳದಿ ಹಾಗೂ ಶ್ವೇತವರ್ಣ/ಬಿಳಿಗಳೊಂದಿಗೆ ಪ್ರತಿಕ್ರಿಯಾ ಪ್ರಮಾಣ, ಇಳಿಮುಖವಾಗುತ್ತಾ ಹೋಗುತ್ತದೆ.[೩೮] ಇದೇ ಕಾರಣದಿಂದಾಗಿ, ಕೆಂಪು ಬಣ್ಣವನ್ನು ಅನೇಕವೇಳೆ ವಿವಿಧ ಸಂದರ್ಭಗಳಲ್ಲಿ ಜನರ ಗಮನ ಸೆಳೆಯಲು ಬಳಸಲಾಗುತ್ತದೆ (ನೋಡಿ: ಪೆನಾಲ್ಟಿ ಪತ್ರ/ಕಾರ್ಡು).[೩೯]
ಬಂದರು ಅಥವಾ ಸಮುದ್ರದಲ್ಲಿ ಹೋಗುತ್ತಿರುವ ಹಡಗಿನ ಎಡಬದಿಯು ಘರ್ಷಣೆಯನ್ನು ತಪ್ಪಿಸುವುದಕ್ಕಾಗಿ ಆ ಬದಿಯಿಂದ ಬರುವ ಇತರೆ ಹಡಗುಗಳಿಗೆ ತಮ್ಮ ದಾರಿಯನ್ನು ಬದಲಿಸಿಕೊಳ್ಳಲು ಅನುವಾಗುವಂತೆ ಕೆಂಪು ನೌಕಾಯಾನ ದೀಪವನ್ನು ಹೊಂದಿರುತ್ತವೆ.[೪೦]
ಪೌರಸ್ತ್ಯ ಹಾಗೂ ಆಫ್ರಿಕನ್/ಕಾದ ಸಂಪ್ರದಾಯಗಳು
[ಬದಲಾಯಿಸಿ]ಚೀನಾದಲ್ಲಿ, ಕೆಂಪು (红 ಪಿನ್‌ಯಿನ್ : ಹಾಂಗ್ ) ಬೆಂಕಿಯ ಹಾಗೂ ದಕ್ಷಿಣದ (ಸಾರ್ವತ್ರಿಕವಾಗಿ ದಕ್ಷಿಣ ಹಾಗೂ ನಿರ್ದಿಷ್ಟವಾಗಿ ದಾಕ್ಷಿಣಾತ್ಯ ಚೀನಾ) ಸಂಕೇತವಾಗಿದೆ. ಧೈರ್ಯ, ನಿಷ್ಠೆ, ಗೌರವ, ಯಶಸ್ಸು, ಅದೃಷ್ಠ, ಫಲವತ್ತತೆ/ಸಂತಾನಶೀಲತೆ, ಸೌಭಾಗ್ಯ, ಆವೇಗ, ಹಾಗೂ ಬೇಸಿಗೆ ಮುಂತಾದುವುಗಳೊಂದಿಗೆ ಸಂಬಂಧಿಸಿ ಬಹಳವೇ ಧನಾತ್ಮಕವಾದ ಲಕ್ಷಣಾರ್ಥಗಳನ್ನು ಇದು ಹೊಂದಿದೆ.[೪೧][೪೨][೪೩] ಚೀನೀಯ ಸಾಂಸ್ಕೃತಿಕ ಪರಂಪರೆಗಳಲ್ಲಿ, ಕೆಂಪು ಬಣ್ಣವನ್ನು ಮದುವೆಗಳೊಂದಿಗೆ (ವಧುಗಳು ಸಾಂಪ್ರದಾಯಿಕವಾಗಿ ಕೆಂಪು ವಸ್ತ್ರಗಳನ್ನು ಧರಿಸುತ್ತಾರೆ) ಹಾಗೂ ಕೆಂಪು ಕಾಗದವನ್ನು ಕೂಡಾ ಹಣ ಹಾಗೂ ಇತರೆ ವಸ್ತುಗಳ ಉಡುಗೊರೆಗಳನ್ನು ಕಟ್ಟಲು ಯಾವಾಗಲೂ ಬಳಸಲಾಗುತ್ತದೆ. ವಿಶೇಷ ಕೆಂಪು ಪೊಟ್ಟಣ/ಪ್ಯಾಕೆಟ್‌ಗಳನ್ನು (ಮ್ಯಾಂಡರಿನ್‌ನಲ್ಲಿ ಹಾಂಗ್ ಬಾವೊ ಅಥವಾ ಕ್ಯಾಂಟೊನೀಸ್ ಉಪಭಾಷೆಯಲ್ಲಿ ಲೈ ಸೀ ) - ನಿರ್ದಿಷ್ಟವಾಗಿ ಚೀನೀಯ ನವವರ್ಷದ ಸಂದರ್ಭದಲ್ಲಿ ಹಣದ ಉಡುಗೊರೆಗಳನ್ನು ನೀಡಲು ನಿರ್ದಿಷ್ಟವಾಗಿ ಬಳಸಲಾಗುತ್ತದೆ. ಹೆಚ್ಚು ನೇತ್ಯಾತ್ಮಕವಾಗಿ ನೋಡುವುದಾದರೆ ಮೃತ್ಯುಲೇಖ/ಮರಣಪ್ರಕಟಣೆಗಳನ್ನು ಸಾಂಪ್ರದಾಯಿಕವಾಗಿ ಕೆಂಪು ಶಾಯಿಯಲ್ಲಿ ಬರೆಯಲಾಗುತ್ತದಲ್ಲದೇ, ಯಾರದ್ದಾದರೂ ಹೆಸರನ್ನು ಕೆಂಪು ಬಣ್ಣದಲ್ಲಿ ಬರೆಯುವುದು ಅವರನ್ನು ತಮ್ಮ ಜೀವನದಿಂದ ಹೊರಗೆ ಹಾಕುವುದು ಅಥವಾ ಅವರು ಮರಣಿಸಿದ್ದಾರೆಂದು ಸೂಚನೆ ನೀಡಿದಂತಿರುತ್ತದೆ.[೪೩] ಕೆಂಪು ಬಣ್ಣವನ್ನು ಸ್ತ್ರೀಲಿಂಗ ಹಾಗೂ ಪುಲ್ಲಿಂಗಗಳೆರಡರಲ್ಲೂ ಮೂಲಕ್ಕೆ ಆಧಾರಿತವಾಗಿ (ಅನುಕ್ರಮವಾಗಿ ಯಿನ್ ಹಾಗೂ ಯಾಂಗ್) ಬಳಸಲಾಗುತ್ತದೆ.[೪೩][೪೪]
ಜಪಾನ್‌ನಲ್ಲಿ, ವೀರ ವ್ಯಕ್ತಿಗಳನ್ನು ಪ್ರತಿನಿಧಿಸಲು ಕೆಂಪು ಒಂದು ಸಾಂಪ್ರದಾಯಿಕ ಬಣ್ಣವಾಗಿದೆ.[೪೫] ಭಾರತೀಯ ಉಪಖಂಡದಲ್ಲಿ, ವಧುವಿನ ವಸ್ತ್ರಗಳಲ್ಲಿ ಕೆಂಪನ್ನು ಸಾಂಪ್ರದಾಯಿಕ ಬಣ್ಣವಾಗಿ ಹಾಗೂ ಮಾಧ್ಯಮದಲ್ಲಿ ಕೂಡಾ ವಿವಾಹಿತ ಮಹಿಳೆಯರನ್ನು ಪ್ರತಿನಿಧಿಸುವ ಬಣ್ಣವಾಗಿ ಬಳಸಲಾಗುತ್ತದೆ. ಬೆದೆ ಹಾಗೂ ಸಂತಾನಶೀಲತೆಗಳೊಂದಿಗೆ ಹೊಂದಿರುವ ಸಂಬಂಧದಿಂದಾಗಿ ಮದುವೆ ಸಂಬಂಧಗಳಲ್ಲಿ ಶುದ್ಧತೆ ಹಾಗೂ ಲೈಂಗಿಕತೆಗಳೊಂದಿಗೆ ಈ ಬಣ್ಣವನ್ನು ಬಳಸಲಾಗುತ್ತದೆ.[೪೬] ಇದು ಐಶ್ವರ್ಯ, ಸೌಂದರ್ಯ ಹಾಗೂ ಲಕ್ಷ್ಮೀದೇವಿಯ ಬಣ್ಣವೂ ಆಗಿದೆ.[೩೩]
ಮಧ್ಯ ಆಫ್ರಿಕಾದಲ್ಲಿ, ಎನ್‌ಡೆಂಬು ಯೋಧರು ಉತ್ಸವಗಳ ಆಚರಣೆಗಳಲ್ಲಿ ತಮ್ಮ ದೇಹಪೂರ್ತಿ ಕೆಂಪು ಬಣ್ಣವನ್ನು ತೀಡಿಕೊಂಡಿರುತ್ತಾರೆ. ಅವರ ಸಂಸ್ಕೃತಿಯು ಈ ಬಣ್ಣವನ್ನು ಜೀವನ ಹಾಗೂ ಆರೋಗ್ಯದ ಸಂಕೇತವನ್ನಾಗಿ, ರೋಗಿಗಳಿಗೆ ಈ ಬಣ್ಣವನ್ನು ಬಳಿಯಲಾಗುತ್ತದೆ. ಅವರ ಸಂಸ್ಕೃತಿಯು ಈ ಬಣ್ಣವನ್ನು ಜೀವನ ಹಾಗೂ ಆರೋಗ್ಯದ ಸಂಕೇತವನ್ನಾಗಿ, ರೋಗಿಗಳಿಗೆ ಈ ಬಣ್ಣವನ್ನು ಬಳಿಯಲಾಗುತ್ತದೆ.[೪೭] ಆಫ್ರಿಕಾದ ಇತರೆ ಭಾಗಗಳಲ್ಲಿ, ಆದಾಗ್ಯೂ, ಕೆಂಪು ಸಾವನ್ನು ಪ್ರತಿನಿಧಿಸುವ ಶೋಕಸೂಚಕವಾದ ಬಣ್ಣವಾಗಿದೆ.[೪೮] ಆಫ್ರಿಕಾದ ಅನೇಕ ಭಾಗಗಳಲ್ಲಿ ಸಾವಿನೊಂದಿಗೆ ಕೆಂಪು ಬಣ್ಣವನ್ನು ತಳಕು ಹಾಕುವುದರಿಂದ, ಕೆಂಪು ಶಿಲುಬೆಯ ಬಣ್ಣವನ್ನು ಈ ಖಂಡದ ಭಾಗಗಳಲ್ಲಿ ಹಸಿರು ಹಾಗೂ ಶ್ವೇತವರ್ಣ/ಬಿಳಿ ವರ್ಣ/ಬಣ್ಣವಾಗಿ ಬದಲಿಸಲಾಗಿದೆ.[೪೯]
ಭೂಗೋಳಶಾಸ್ತ್ರ, ಕ್ರೀಡೆ ಹಾಗೂ ರಾಜಕೀಯ
[ಬದಲಾಯಿಸಿ]ಕ್ರೀಡೆಗಳಲ್ಲಿ
[ಬದಲಾಯಿಸಿ]ವಿಶ್ವದಾದ್ಯಂತ ತಂಡಗಳು ತಾವು ಧರಿಸುವ ಸಮವಸ್ತ್ರದಲ್ಲಿ ಕೆಂಪು ಬಣ್ಣವನ್ನು ಹೊಂದಿರುತ್ತವೆ. ಪ್ರಮುಖ ಲೀಗ್ ಬೇಸ್‌ಬಾಲ್ ವಿಶೇಷವಾಗಿ ಕೆಂಪು ತಂಡಗಳಿಗಾಗಿ ಹೆಸರುವಾಸಿಯಾಗಿದೆ. ವಿವಿಧ ಕ್ರೀಡೆಗಳ ಅನೇಕ ತಂಡಗಳು ತಮ್ಮ ತಂಡದ ವರ್ಣ/ಬಣ್ಣಗಳಲ್ಲಿ ಕೆಂಪು ಬಣ್ಣವನ್ನು ಬಳಸುತ್ತವೆ.[೫೦]
ಸಿನ್‌ಸಿನ್ನಾಟಿ/ತಿ ರೆಡ್ ಸ್ಟಾಕಿಂಗ್ಸ್ ಎಂಬುದು 1869ರಷ್ಟು ಹಿಂದಿನ ವೃತ್ತಿಪರ ಬೇಸ್‌ಬಾಲ್ ತಂಡವಾಗಿದೆ.[೫೧] ಇದರ ಫ್ರಾಂಚೈಸಿ ಹಕ್ಕು ಅಲ್ಪಕಾಲದಲ್ಲೇ ಬಾಸ್ಟನ್‌ಗೆ ಹಸ್ತಾಂತರಗೊಂಡುದಲ್ಲದೇ ಈಗ ಅದು ಅಟ್ಲಾಂಟಾ ಬ್ರೇವ್ಸ್ ಆಗಿದ್ದರೂ, ಸಿನ್‌ಸಿನ್ನಾಟಿ/ತಿ ರೆಡ್ಸ್ ಹಾಗೂ ಬಾಸ್ಟನ್ ಕೆಂಪು ಸಾಕ್ಸ್ ಎರಡೂ ತಂಡಗಳ ಹೆಸರುಗಳ ಮೂಲವಾಗಿಯೇ ಉಳಿದುಕೊಂಡಿದೆ. 1950ರ ದಶಕದಲ್ಲಿ ಕೆಂಪು ಬಣ್ಣವನ್ನು ಕಮ್ಯುನಿಸ್ಟ್ ಸಿದ್ಧಾಂತದೊಂದಿಗೆ ದೃಢವಾಗಿ ತಳಕು ಹಾಕಿಕೊಂಡಿದ್ದಾಗ, ಆಧುನಿಕ ಸಿನ್‌ಸಿನ್ನಾಟಿ/ತಿ ತಂಡವನ್ನು "ರೆಡ್‌ಲೆಗ್ಸ್" ಎಂದು ಕರೆಯಲಾಗುತ್ತಿದ್ದುದಲ್ಲದೇ ಅದೇ ಪದವನ್ನು ಬೇಸ್‌ಬಾಲ್ ಕಾರ್ಡ್‌ಗಳೊಂದಿಗೆ ಕೂಡಾ ಬಳಸಲಾಗುತ್ತಿತ್ತು. ಕೆಂಪು ಬಣ್ಣದ ಮೇಲಿನ ಭಯವು ಕಡಿಮೆಯಾದ ನಂತರ ತಂಡವು ಮತ್ತೆ ರೆಡ್ಸ್ ಎಂದು ಕರೆಯಲಾಗುತ್ತಿದೆ.[೫೨]
ಧ್ವಜಗಳು
[ಬದಲಾಯಿಸಿ]ಕೆಂಪು ರಾಷ್ಟ್ರೀಯ ಧ್ವಜಗಳಲ್ಲಿ ಬಳಸಲಾಗುವ ವರ್ಣ/ಬಣ್ಣಗಳಲ್ಲಿ ಬಹುಸಾಮಾನ್ಯವಾದ ವರ್ಣ/ಬಣ್ಣವಾಗಿದೆ. ರಾಷ್ಟ್ರದಿಂದ ರಾಷ್ಟ್ರಕ್ಕೆ ಕೆಂಪು ಬಣ್ಣದ ಬಳಕೆಯು ಸದೃಶವಾದ ಲಕ್ಷಣಾರ್ಥಗಳನ್ನು ಹೊಂದಿದೆ : ತಮ್ಮ ರಾಷ್ಟ್ರವನ್ನು ರಕ್ಷಿಸಲು ಯತ್ನಿಸಿದವರ ರಕ್ತ, ಬಲಿದಾನ/ತ್ಯಾಗ,ಹಾಗೂ ಧೈರ್ಯಗಳನ್ನು; ಸೂರ್ಯ ಮತ್ತು ಅದು ನೀಡುವ ಆಶಯ ಹಾಗೂ ಹಿತೋಷ್ಣತೆ; ಕ್ರಿಸ್ತನ ರಕ್ತದ ಬಲಿದಾನಗಳು (ಕೆಲ ಐತಿಹಾಸಿಕ ಕ್ರೈಸ್ತ ರಾಷ್ಟ್ರಗಳಲ್ಲಿ) ಅದರ ಕೆಲ ಉದಾಹರಣೆಗಳು. ಕೆಂಪು ಒಂದು ಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರಿದ್ದ ಅನೇಕ ರಾಷ್ಟ್ರಗಳ ಧ್ವಜಗಳ ಬಣ್ಣವಾಗಿದೆ. ಬ್ರಿಟಿಷ್ ಧ್ವಜವು ಕೆಂಪು, ಶ್ವೇತವರ್ಣ/ಬಿಳಿ ಹಾಗೂ ನೀಲಿ ವರ್ಣ/ಬಣ್ಣಗಳನ್ನು ಹೊಂದಿದೆ ; ಇಂಗ್ಲೆಂಡ್‌ನ ಪ್ರವರ್ತಕ ಸಂತರಾದ, ಸಂತ ಜಾರ್ಜ್ರ ಶಿಲುಬೆ ಹಾಗೂ ಐರ್‌ಲೆಂಡ್‌ನ ಪ್ರವರ್ತಕ ಸಂತರಾದ ಸಂತ ಪ್ಯಾಟ್ರಿಕ್ರ ಕತ್ತರಿ ಗುರುತುಗಳೆರಡಲ್ಲೂ ಇರುವ ಶ್ವೇತ/ಬಿಳಿವರ್ಣದ ಮೇಲೆ ಕೆಂಪು ಪಟ್ಟಿಯನ್ನು ಕೂಡಾ ಇದು ಹೊಂದಿದೆ.[೫೩] ಯುನೈಟೆಡ್ ಸ್ಟೇಟ್ಸ್‌ನ ಧ್ವಜ ಬ್ರಿಟನ್‌ನ,[೫೪] ವರ್ಣ/ಬಣ್ಣಗಳನ್ನು ಹೊಂದಿದೆ, ಫ್ರೆಂಚ್ ಧ್ವಜದ ವರ್ಣ/ಬಣ್ಣಗಳು ಅಮೇರಿಕನ್ ಧ್ವಜದಿಂದ ಪ್ರೇರಿತವಾಗಿದೆಯೆಂದು ನಂಬಲಾಗಿದೆಯಲ್ಲದೇ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಫಿಜಿಗಳಂತಹಾ ಇತರ ರಾಷ್ಟ್ರಗಳ' ಧ್ವಜಗಳು ಬ್ರಿಟಿಷ್ ಧ್ವಜದ ಅಂತರ್ನಿವೇಶವನ್ನು ಆ ರಾಷ್ಟ್ರದೊಂದಿಗಿನ ತಮ್ಮ ಸಂಬಂಧದ ನೆನಪಿಗಾಗಿ ಇಟ್ಟುಕೊಂಡಿವೆ.[೫೫] ಮೆಕ್ಸಿಕೋ, ಕೊಲಂಬಿಯಾ, ಈಕ್ವೆಡಾರ್ ಹಾಗೂ ವೆನೆಜ್ಯುವೆಲಾದಂತಹಾ ಸ್ಪೇನ್‌ನ ಪೂರ್ವ ವಸಾಹತುಗಳು ಕೂಡಾ ಸ್ಪ್ಯಾನಿಷ್ ಧ್ವಜದ ವರ್ಣ/ಬಣ್ಣಗಳಲ್ಲಿ ಒಂದಾದ ಕೆಂಪು ಬಣ್ಣವನ್ನು ತಮ್ಮ ಸ್ವಂತ ಧ್ವಜಗಳಲ್ಲಿ ಹೊಂದಿವೆ. ಕೆಂಪು ಧ್ವಜಗಳನ್ನು ಚಂಡಮಾರುತಗಳು, ಕಡಲಿನ ಪ್ರಕ್ಷುಬ್ಧ ಸ್ಥಿತಿ ಹಾಗೂ ಇನ್ನಿತರ ವಿಚಾರಗಳನ್ನು ಸಂಕೇತಿಸಲು ಕೂಡಾ ಬಳಸಲಾಗುತ್ತದೆ. ನೌಕಾಪಡೆಗಳ ಧ್ವಜಗಳು ಸಾಮಾನ್ಯವಾಗಿ ಕೆಂಪು ಹಾಗೂ ಹಳದಿ ಬಣ್ಣವನ್ನು ಹೊಂದಿರುತ್ತವೆ.
ಹತ್ತೊಂಭತ್ತನೇ ಶತಮಾನದ ಕೊನೆ ಭಾಗದಲ್ಲಿ ಸ್ಲಾವಿಕ್ ಐಕಮತ್ಯ ಚಳುವಳಿಯಲ್ಲಿ ಅಳವಡಿಸಿಕೊಂಡ ಅಖಿಲ-ಸ್ಲಾವಿಕ್ ವರ್ಣ/ಬಣ್ಣಗಳಲ್ಲಿ ಕೆಂಪು, ನೀಲಿ ಹಾಗೂ ಶ್ವೇತವರ್ಣ/ಬಿಳಿ ವರ್ಣಗಳನ್ನು ಸೇರಿಸಿಕೊಂಡಿವೆ. ಮೊದಲಿಗೆ ಇವು ರಷ್ಯನ್ ಧ್ವಜದ ವರ್ಣ/ಬಣ್ಣಗಳಾಗಿದ್ದವು ; ಸ್ಲಾವಿಕ್ ಚಳುವಳಿಯು ಮುಂಚೂಣಿಗೆ ಬರುತ್ತಿದ್ದಂತೆ, ಅವುಗಳನ್ನು ಸ್ಲೋವ್ಯಾಕ್ ಜನರು, ಸ್ಲೋವೇನರು ಹಾಗೂ ಸರ್ಬಿಯನ್ನರು ಸೇರಿದಂತೆ ಇತರೆ ಸ್ಲಾವಿಕ್ ಜನರು ಕೂಡಾ ಅಳವಡಿಸಿಕೊಂಡರು. ಕೆಂಪು ಬಣ್ಣವನ್ನು ಹೊಂದಿರುವ ಝೆಕ್ ಗಣರಾಜ್ಯ ಹಾಗೂ ಪೋಲೆಂಡ್‌ಗಳ ಧ್ವಜಗಳು ಅವುಗಳನ್ನು ತಮ್ಮ ಐತಿಹಾಸಿಕ ವಂಶಲಾಂಛನಗಳ ಕಾರಣದಿಂದಾಗಿ ಹೊಂದಿವೆಯೇ ಹೊರತು (ನೋಡಿ ಪೋಲೆಂಡ್‌ನ ವಂಶಲಾಂಛನ ಹಾಗೂ ಝೆಕ್ ಗಣರಾಜ್ಯದ ವಂಶಲಾಂಛನ) ಅಖಿಲ-ಸ್ಲಾವಿಕ್ ಲಕ್ಷಣಾರ್ಥಗಳಾಗಿ ಅಲ್ಲ.
ಕೆಂಪು, ಶ್ವೇತವರ್ಣ/ಬಿಳಿ, ಹಾಗೂ ಕಪ್ಪು ಅಖಿಲ-ಅರಬ್‌ಧರ್ಮ/ವ್ಯವಸ್ಥೆಯ ವರ್ಣ/ಬಣ್ಣಗಳಾಗಿದ್ದು, ಅವುಗಳನ್ನು ಅನೇಕ ಅರಬ್ ರಾಷ್ಟ್ರಗಳು ಬಳಸುತ್ತಿವೆ.[೫೬]
ಕೆಂಪು, ಸ್ವರ್ಣವರ್ಣ, ಹಸಿರು ಹಾಗೂ ಕಪ್ಪು ಅಖಿಲ-ಆಫ್ರಿಕನ್ ಧರ್ಮ/ವ್ಯವಸ್ಥೆಯ ವರ್ಣ/ಬಣ್ಣಗಳಾಗಿವೆ. ಹಾಗಾಗಿ ದಕ್ಷಿಣ ಆಫ್ರಿಕಾ, ಘಾನಾ, ಸೆನೆಗಲ್, ಮಾಲಿ, ಇಥಿಯೋಪಿಯಾ, ಟೋಗೋ, ಗಿನಿಯಾ, ಬೆನಿನ್, ಹಾಗೂ ಝಿಂಬಾಬ್ವೆಗಳೂ ಸೇರಿದಂತೆ ಅನೇಕ ಆಫ್ರಿಕನ್/ಕಾದ ರಾಷ್ಟ್ರಗಳು ಈ ವರ್ಣ/ಬಣ್ಣವನ್ನು ತಮ್ಮ ಧ್ವಜಗಳಲ್ಲಿ ಬಳಸಿವೆ. ಅಖಿಲ-ಆಫ್ರಿಕನ್/ಕಾದ ವರ್ಣ/ಬಣ್ಣಗಳನ್ನು ಅತ್ಯಂತ ಹಳೆಯ ಸ್ವತಂತ್ರ ಆಫ್ರಿಕನ್ ರಾಷ್ಟ್ರಗಳಲ್ಲಿ ಒಂದಾದ ಇಥಿಯೋಪಿಯಾದ ಧ್ವಜದಿಂದ ಎರವಲು ಪಡೆಯಲಾಗಿದೆ.[೫೬][೫೭] ರ್ರ್ವಾಂಡಾ, ಗಮನಾರ್ಹವಾಗಿ, ರ್ರ್ವಾಂಡಾದ ಸಾಮೂಹಿಕ ನರಮೇಧದ ನಂತರ ಅಖಿಲ-ಆಫ್ರಿಕನ್ ಧರ್ಮ/ವ್ಯವಸ್ಥೆಯು ಈ ಘಟನೆಯೊಂದಿಗೆ ಬಲವಾದ ಸಂಬಂಧ ಹೊಂದಿದ್ದರಿಂದ ಹಾಗೂ ರಕ್ತದೊಂದಿಗೆ ಕೆಂಪು ಬಣ್ಣದ ತಳುಕು ಹಾಕುವಿಕೆಯಿಂದಾಗಿ ತನ್ನ ಧ್ವಜದಿಂದ ಕೆಂಪು ಬಣ್ಣವನ್ನು ತೆಗೆಯಿತು.[೫೮]
ಇತರೆ ಕಾರಣಗಳಿಂದಾಗಿ ಜಪಾನ್‌ನ ಧ್ವಜವು ಮಧ್ಯದಲ್ಲಿ ಕೆಂಪು ವೃತ್ತವನ್ನು ಹೊಂದಿದ್ದರೆ ಫಿಲಿಪ್ಪೀನ್ಸ್‌ನ ಧ್ವಜವು ಕೆಳಭಾಗದಲ್ಲಿ ಕೆಂಪು ವಿಷಮ ಸಮಾಂತರ ಚತುರ್ಭುಜವನ್ನು ಹೊಂದಿದ್ದು ಸಿಂಗಪೂರ್‌ನ ಧ್ವಜವು ಮೇಲ್ಭಾಗದಲ್ಲಿ ಕೆಂಪು ಆಯತ/ಸಮತಲವನ್ನು ಹೊಂದಿದೆ.
ರಾಜಕೀಯ ಚಳುವಳಿಗಳು
[ಬದಲಾಯಿಸಿ]9ನೇ ಶತಮಾನದಷ್ಟು ಹಿಂದೆಯೇ, ಮಝ್‌ಡಕ್ ಧರ್ಮದ ಉತ್ತರಾಧಿಕಾರಿಗಳಾದ ಖುರ್ರಮೈಟ್‌ಗಳು ಹಾಗೂ ಪೂರ್ವ-ಕಮ್ಯೂನಿಸ್ಟರು ಮಧ್ಯಪ್ರಾಚ್ಯದ ಮಧ್ಯಯುಗದಲ್ಲಿ ಕೆಂಪು ಬಣ್ಣವನ್ನು ಕ್ರಾಂತಿಗೆ ತಮ್ಮ ಸಂಕೇತವನ್ನಾಗಿ ಬಳಸಿದರು. 1848ರ ಯೂರೋಪ್‌ನ ಕ್ರಾಂತಿಗಳಿಗೂ ಮುಂಚೆಯೇ, ಸಮಾಜವಾದಿ ಕೆಂಪು ಬಣ್ಣವನ್ನು ಸಾಮಾನ್ಯವಾಗಿ ಕೆಂಪು ಧ್ವಜದ ರೂಪದಲ್ಲಿ ಐರೋಪ್ಯ ಕ್ರಾಂತಿಕಾರರ ಬಣ್ಣವನ್ನಾಗಿ ಬಳಸಲಾಗುತ್ತಿತ್ತು. ಇದನ್ನು ಇಟಲಿಯ ಏಕೀಕರಣದ ಸಮಯದಲ್ಲಿ ಗ್ಯಾರಿಬಾಲ್ಡಿಯ ಕ್ಯಾಮಿಸೀ ರಾಸ್ಸೆ (ಕೆಂಪು ಅಂಗಿಗಳು) ಯಲ್ಲಿ ಬಳಸಲಾಯಿತಲ್ಲದೇ, ಎಡಪಂಥೀಯರು ಹಾಗೂ ಸಾರ್ವತ್ರಿಕ ಕ್ರಾಂತಿಕಾರಿ ಗುಂಪುಗಳು ಇದನ್ನು ಅಳವಡಿಸಿಕೊಂಡರೆ, ಶ್ವೇತವರ್ಣ/ಬಿಳಿ ವರ್ಣವನ್ನು ಶಾಸನಬದ್ಧ ಬೌರ್ಬನ್ ಗೆರಿಲ್ಲಾಗಳು/ಪಕ್ಷದವರು ಪೂರ್ವ-ವಿಶ್ವಸಮರ Iರ ಸಂಪ್ರದಾಯವಾದಿಗಳೊಂದಿಗೆ ತಳಕು ಹಾಕಲಾಯಿತು. ಕಾರ್ಮಿಕ ವರ್ಗವು ಅನುಭವಿಸುತ್ತಿರುವ ಶೋಷಣೆಯನ್ನು ಬಿಂಬಿಸುವ "ಕಾರ್ಮಿಕರ ರಕ್ತ" ಎಂಬ ಪದ ಟಂಕಿಸುವಿಕೆಗೆ ಇದು ದಾರಿಯಾಯಿತು. ಉದಾಹರಣೆಗೆ ರಷ್ಯಾದಲ್ಲಿನ ಅಂತರ್ಯುದ್ಧ ಹಾಗೂ ಫಿನ್‌ಲೆಂಡ್‌ನಲ್ಲಿನ ಅಂತರ್ಯುದ್ಧಗಳು ಕೆಂಪು ಸೈನ್ಯ ಹಾಗೂ ಅನೇಕ ಶ್ವೇತವರ್ಣ/ಬಿಳಿ ಸೈನ್ಯಗಳ ನಡುವೆ ನಡೆಯಿತು.
ಸಮಾಜವಾದಿ ಕೆಂಪು ಬಣ್ಣದೊಡನೆ (ಕೆಂಪು ಧ್ವಜವು ಸೋವಿಯೆತ್ ಒಕ್ಕೂಟದ ಧ್ವಜದ ಪ್ರಾಥಮಿಕ ಬಣ್ಣವಾಗಿದ್ದುಕೊಂಡು) ಕಮ್ಯುನಿಸ್ಟ್ ಪಂಥದ ಗುರುತಿಸಿಕೊಳ್ಳುವಿಕೆಯು ಹಾಗೂ ಕೆಂಪು ನಕ್ಷತ್ರವು ಕಮ್ಯುನಿಸ್ಟ್ ಪಂಥದ ಲಾಂಛನವಾಗಿದ್ದುದು "ಕೆಂಪು ವಿಪತ್ತು" ಹಾಗೂ "ಕೆಂಪು ಚೀನಾ"ದಂತಹಾ (ರಾಷ್ಟ್ರೀಯತಾವಾದಿ ಚೀನಾ , "ನೀಲಿ ಚೀನಾ" ಅಥವಾ "ಮುಕ್ತ ಚೀನಾ"ಗಳಿಗಿಂತ ಭಿನ್ನವಾಗಿ) ಶೀತಲ ಸಮರದ ಪದಪುಂಜಗಳ ಸೃಷ್ಟಿಗೆ ಕಾರಣವಾಯಿತು.
ಮಾವೋ ಝೆಡಾಂಗ್‌ರ ಅಧಿಪತ್ಯದಡಿ ಚೀನಾ'ದ ವಸ್ತುತಃ ರಾಷ್ಟ್ರಗೀತೆಯು "ದ ಈಸ್ಟ್ ಈಸ್ ರೆಡ್" ಆಗಿತ್ತು.[೫೯] ಮಾವೋ ಝೆಡಾಂಗ್‌ರನ್ನು ಕೆಲವೊಮ್ಮೆ "ಕೆಂಪು ಸೂರ್ಯ"ನೆಂದೂ ಕರೆಯಲಾಗುತ್ತದೆ.[೬೦] ಈ ಬಣ್ಣವನ್ನು ಚೀನಾದಲ್ಲಿನ ಕೆಂಪು ಪಡೆ ಹಾಗೂ 1917ರ ರಷ್ಯನ್ ಕ್ರಾಂತಿಯಲ್ಲಿನ ಕೆಂಪು ಸೈನಿಕರುಗಳಂತಹಾ ರಾಜಕೀಯ ಅಭಿವ್ಯಕ್ತಿಗಳೊಂದಿಗೂ ತಳುಕು ಹಾಕಲಾಗಿದೆ, ಅಷ್ಟೇ ಅಲ್ಲದೇ ಅದನ್ನು ಜರ್ಮನಿಯ ರೆಡ್ ಆರ್ಮಿ ಫ್ಯಾಕ್ಷನ್ ಹಾಗೂ ಜಪಾನ್‌ನ ರೆಡ್ ಆರ್ಮಿಗಳಂತಹಾ ಎಡಪಂಥೀಯ ಭಯೋತ್ಪಾದಕ ಗುಂಪುಗಳೊಂದಿಗೆ ಕೂಡಾ ಬಳಸಲಾಗುತ್ತದೆ. ರಾಜಕೀಯ ಸಮುದಾಯದ ಎಡಬದಿಯಲ್ಲಿ ಇರುವ ಪಕ್ಷಗಳೊಂದಿಗೆ ಕೆಂಪು ಬಣ್ಣವು ಈಗಲೂ ತಳುಕು ಹಾಕಿಕೊಂಡಿದೆ. ಆದಾಗ್ಯೂ ಇದಕ್ಕೆ ಪ್ರಮುಖ ಅಪವಾದವೆಂದರೆ ಯುನೈಟೆಡ್ ಸ್ಟೇಟ್ಸ್. ಅಲ್ಲಿ, ಕೆಂಪು ಬಣ್ಣವನ್ನು ಬಲ-ಪಂಥೀಯವಾದ ರಿಪಬ್ಲಿಕನ್ ಪಕ್ಷದೊಂದಿಗೆ ತಳುಕು ಹಾಕಲಾಗುತ್ತದೆ. (ಇದಕ್ಕೆ ಕಾರಣವೆಂದರೆ U.S. ಕಿರುತೆರೆ ಜಾಲಗಳು ಸುದ್ದಿ ನಕ್ಷೆಗಳಲ್ಲಿ ನೀಲಿ ಹಾಗೂ ಕೆಂಪು ಬಣ್ಣಗಳನ್ನು ಅನುಕ್ರಮವಾಗಿ ರಿಪಬ್ಲಿಕನ್ ಪಕ್ಷ ಹಾಗೂ ಡೆಮೋಕ್ರಾಟ್ ಪಕ್ಷಗಳು ಮೇಲುಗೈ ಸಾಧಿಸಿದ ರಾಜ್ಯಗಳಿಗೆ ನೀಡುವುದು; ಪ್ರತಿ ಅಧ್ಯಕ್ಷೀಯ ಚುನಾವಣೆಗಳಲ್ಲಿಯೂ ಬಣ್ಣ ಹಂಚಿಕೆಯು ಪರ್ಯಾಯವಾಗಿಸಲಾಗುತ್ತದಾದರೂ 2000ರ ಚುನಾವಣೆಯು ವಿವಾದಾಸ್ಪದಗೊಂಡಿದ್ದು ವೀಕ್ಷಕ ವಿವರಣೆಕಾರರು ಬಣ್ಣದ ಆಯ್ಕೆಯನ್ನು ಮಾಡಬೇಕಾಗಿ ಬಂದದ್ದು.) ಕೆಂಪು ಹಾಗೂ ಕಪ್ಪು ವರ್ಣ/ಬಣ್ಣಗಳನ್ನು ಅರಾಜಕತ್ವ ಹಾಗೂ ನಿರ್ದಿಷ್ಟವಾಗಿ, ಕಾರ್ಮಿಕಸ್ವಾಮ್ಯದ-ಅರಾಜಕತೆಯೊಂದಿಗೆ ತಳಕು ಹಾಕಲಾಗುತ್ತದೆ.
ಆಹಾರ ಮತ್ತು ಪಾನೀಯ
[ಬದಲಾಯಿಸಿ]ಬಹುತೇಕ ಕೆಂಪು ಆಹಾರಗಳು ಎರಡು ಮೂಲಗಳಲ್ಲಿ ಯಾವುದಾದರೂ ಒಂದರಿಂದ ವ್ಯುತ್ಪನ್ನವಾಗಿರುತ್ತದೆ. ಸಸ್ಯಗಳು ಕ್ಯಾರೋಟಿನಾಯ್ಡ್‌ನ ವಿವಿಧ ರೂಪಗಳಿಂದ ಸಾಮಾನ್ಯವಾಗಿ ಬಣ್ಣಗಳನ್ನು ಪಡೆದಿರುವುದಲ್ಲದೇ, ಮೂಲವಾಗಿ ದ್ಯುತಿಸಂಶ್ಲೇಷಣೆಯಲ್ಲಿ ಸಹಾಯಕವಾಗುವಂತೆ ಅಭಿವೃದ್ಧಿಪಡಿಸಿದ ಕೆಂಪು ರಂಗುಗಳಿಂದಲೂ ಪಡೆಯುತ್ತವೆ.[೬೧] ಮಾಂಸವು ತನ್ನ ಬಣ್ಣವನ್ನು ಸ್ನಾಯುಗಳಲ್ಲಿ ಹಾಗೂ ಶೇಷ ರಕ್ತಗಳಲ್ಲಿ ಕಂಡುಬರುವ ಮೈಯೋಗ್ಲೋಬಿನ್ ಹಾಗೂ ಹಿಮೋಗ್ಲೋಬಿನ್‌ಗಳಿಂದಾಗಿ ಕಬ್ಬಿಣದಂಶದಿಂದಾಗಿ ಪಡೆದುಕೊಳ್ಳುತ್ತದೆ.[೬೨]
ಸಮಾಜ
[ಬದಲಾಯಿಸಿ]ಕೆಂಪು ಟೋಪಿ/ರೆಡ್ ಹ್ಯಾಟ್ ಸಂಸ್ಥೆಯು 1998ರಲ್ಲಿ 50 ಹಾಗೂ ಅದಕ್ಕಿಂತ ಹೆಚ್ಚಿನ ವಯೋಮಾನದ ಮಹಿಳೆಯರಿಗಾಗಿ ಸ್ಥಾಪಿಸಿದ ಸಾಮಾಜಿಕ ಗುಂಪಾಗಿದೆ.
ಇವನ್ನೂ ಗಮನಿಸಿ
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ Thomas J. Bruno, Paris D. N. Svoronos. CRC Handbook of Fundamental Spectroscopic Correlation Charts. CRC Press, 2005.
Color - ↑ ೨.೦ ೨.೧ ೨.೨ Craig F. Bohren (2006). Fundamentals of Atmospheric Radiation: An Introduction with 400 Problems. Wiley-VCH. p. 214. ISBN 3527405038. Archived from the original on 2015-04-06. Retrieved 2021-07-17.
- ↑ The RGB values are taken by converting from the CIECAM02 defined red (h = 20.14°) to sRGB using Argyll CMS, at lightness J = 60, and the maximum chroma (C = 74.21) for that lightness at that hue angle. See here Archived 2012-04-05 ವೇಬ್ಯಾಕ್ ಮೆಷಿನ್ ನಲ್ಲಿ. for more on CIECAM02’s definition of red.
- ↑ Eric Partridge (1966). Origins: An Etymological Dictionary of Modern English. Routledge. ISBN 0415050774.
- ↑ Douma, Michael (2008). "Color of Power". Pigments Through the Ages. Institute for Dynamic Educational Development. Archived from the original on 10 ಏಪ್ರಿಲ್ 2010. Retrieved 18 April 2010.
- ↑ "What Wavelength Goes With a Color?". Atmospheric Science Data Center. Archived from the original on 2012-02-04. Retrieved 2009-04-15.
- ↑ DVD
- ↑ O'Neil, Dennis (March 19, 2010). "Primate Color Vision". Primates. San Marcos, CA: Palomar Community College. Archived from the original on 20 ಜುಲೈ 2011. Retrieved 22 April 2010.
- ↑ Hogan, Dan (May 25, 2007). "Color Vision Drove Primates To Develop Red Skin And Hair, Study Finds". Science News. Rockville, MD: ScienceDaily. Retrieved 22 April 2010.
{{cite web}}
: Unknown parameter|coauthors=
ignored (|author=
suggested) (help) - ↑ "Human Vision and Color Perception". Olympus Microscopy Resource Center. Archived from the original on 2011-01-15. Retrieved 2007-09-19.
- ↑ "Be a Stargazer". Sensitize Your Eyes. Retrieved 2007-09-25.
- ↑ ಪ್ರೈಮರಿ ಕಲರ್ಸ್: ಅಡಿಟಿವ್ ಅಂಡ್ ಸಬ್ಜೆಕ್ಟೀವ್ - ಆನ್ ಎಡುಕೇಟರ್ಸ್ ರೆಫರೆನ್ಸ್ ಡೆಸ್ಕ್ ಲೆಸನ್ ಪ್ಲಾನ್
- ↑ U.S. Army (December 15, 1989). "Federal Standard 595b Colors Used In Government Procurement" (PDF). 595 Paint Spec. Stanton, CA: FastPoint Technologies. p. 3. Archived from the original (PDF) on 7 ಅಕ್ಟೋಬರ್ 2009. Retrieved 22 April 2010.
- ↑ Süsstrunk, Sabine. "Standard RGB Color Spaces" (PDF). Laboratory of audio-visual Communication. p. 1. Retrieved 18 April 2010.
{{cite web}}
: Unknown parameter|coauthors=
ignored (|author=
suggested) (help) - ↑ "Important Facts About Safelights". How Safe is Your Safelight?. Eastman Kodak. Archived from the original on 22 ಜನವರಿ 2009. Retrieved 18 April 2010.
- ↑ Smith, S.E (August 20, 2009). "What Is a Safelight?". WiseGeek. Conjecture Corporation. Retrieved 18 April 2010.
- ↑ Adams, Melanie (9/19/94-03/12/09). "Mars, The Red Planet". MidLink Magazine. North Carolina State University. Retrieved 12 April 2010.
{{cite web}}
: Check date values in:|date=
(help); Unknown parameter|coauthors=
ignored (|author=
suggested) (help) - ↑ Cardall, Christian (2003). "The Great Red Spot". The Solar System. University of Tenesee. Retrieved 12 April 2010.
{{cite web}}
: Unknown parameter|coauthors=
ignored (|author=
suggested) (help) - ↑ Nabili, Siamak. "Hemoglobin". Procedures and Tests. MedicineNet. p. 1. Retrieved 12 April 2010.
- ↑ ಓಯೆಹ್ಲರ್, ಗುಸ್ತಾವ್ ಫ್ರೀಡ್‌ರಿಚ್ ಹಾಗೂ ಜಾರ್ಜ್ ಎಡ್ವರ್ಡ್ ಡೇ, ಥಿಯಾಲಜಿ ಆಫ್ ದ ಓಲ್ಡ್ ಟೆಸ್ಟಾಮೆಂಟ್ . pg. 320
- ↑ KJV ಇಸಯ್ಯ 1:18
- ↑ ಹಾಥಾರ್ನೆ, ನಥಾನಿಯೆಲ್. ದ ಸ್ಕಾರ್ಲೆಟ್ ಲೆಟರ್ . ನ್ಯೂಯಾರ್ಕ್ : ಪಾಕೆಟ್, 2004. ISBN 0-7434-8756-7 pg. 136
- ↑ Hecht, Mendy. "Seven Things You Can Do for America". Archived from the original on 2010-11-14. Retrieved 2009-10-05.
- ↑ ಅಟ್ವಾಟರ್, ಎಡ್ವರ್ಡ್. ಸೇಕ್ರೆಡ್ ಟೇಬರ್‌ನೇಕಲ್ ಆಫ್ ದ ಹೀಬ್ರ್ಯೂಸ್ . ಸಿಟಿ: ಕೆಸ್ಸಿಂಗರ್ ಪಬ್ಲಿಷಿಂಗ್, LLC, 2004. ISBN 1-4179-7818-X pg. 223
- ↑ ೨೫.೦ ೨೫.೧ [36] ^ ಆಕ್ಸ್‌ಫರ್ಡ್ ಆಂಗ್ಲ ನಿಘಂಟು
- ↑ ಹಾರ್ಮನ್, ಹರಾಲ್ಡ್. ಲ್ಯಾಂಗ್ವೇಜ್ ಇನ್ ಇಟ್ಸ್ ಕಲ್ಚರಲ್ ಎಂಬೆಡ್ಡಿಂಗ್ . ಬರ್ಲಿನ್ : ಮೌಟನ್ ಡೆ ಗ್ರೂಯ್ಟರ್, 1990. ISBN 0-89925-583-3 pg. 13
- ↑ ಡೆಲಾನೆ, ಕೆರೋಲ್. ಇನ್‌ವೆಸ್ಟಿಂಗ್ ಕಲ್ಚರ್ . ಕೇಂಬ್ರಿಡ್ಜ್ : ಬ್ಲಾಕ್‌ವೆಲ್ Pub, 2004. ISBN 0-631-22237-5 pg. 324
- ↑ ೨೮.೦ ೨೮.೧ ಸ್ಟೆಫ್ಲರ್, ಆಲ್ವಾ. ಸಿಂಬಲ್ಸ್ ಆಫ್ ದ ಕ್ರಿಶ್ಚಿಯನ್ ಫೇತ್ . ಸಿಟಿ: Wm. B. ಎರ್ಡ್‌ಮನ್ಸ್ ಪಬ್ಲಿಷಿಂಗ್ ಕಂಪೆನಿ, 2002. ISBN 0-8028-4676-9 pg. 132
- ↑ ಕೋಪಾಕ್ಜ್, ಜೀಯೆನ್ನೆ. ಕಲರ್ ಇನ್ ಥ್ರೀ-ಡೈಮೆನ್ಷನಲ್ ಡಿಸೈನ್ . ನ್ಯೂಯಾರ್ಕ್: McGraw-Hill, 2004. ISBN 0-07-141170-4 pg. 76
- ↑ ಸೆಬೆಓಕ್, ಥಾಮಸ್ ಹಾಗೂ ಮಾರ್ಸೆಲ್ ಡನೇಸಿ. ದ ಫಾರ್ಮ್ಸ್ ಆಫ್ ಮೀನಿಂಗ್ : ಮಾಡೆಲಿಂಗ್ ಸಿಸ್ಟಂಸ್ ಥಿಯರಿ ಅಂಡ್ ಸೀಮಿಯಾಟಿಕ್ ಅನಾಲಿಸಿಸ್ . ಬರ್ಲಿನ್ : ಮೌಟನ್ ಡೆ ಗ್ರೂಯ್ಟರ್, 1999. ISBN 3-11-016751-4 pgs. 150-152
- ↑ ಡ್ರೇಫಸ್ , ಹೆನ್ರಿ. ಸಿಂಬಲ್ ಸೋರ್ಸ್‌ಬುಕ್ . ನ್ಯೂಯಾರ್ಕ್ : ವಿಲೇ, 1984. ISBN 0-471-28872-1 pg. 239
- ↑ ರೆಡ್ ಆನ್ ವಿಮೆನ್ ಡ್ರೈವ್ಸ್ ಮೆನ್ ವೈಲ್ಡ್ ಆಲ್ಸೋ http://www.foxnews.com/story/0,2933,444415,00.html
- ↑ ೩೩.೦ ೩೩.೧ ೩೩.೨ ಪೇಸ್ನರ್ , ಎಡಿತ್. ಬಣ್ಣ ಸಿಟಿ: ಕಿಂಗ್ ಲಾರೆನ್ಸ್ ಪಬ್ಲಿಷ್, 2006. ISBN 1-85669-441-0 pg. 127
- ↑ ಹಾಫ್‌ಮನ್, ಡೇನಿಯೆಲ್. ದ ಪೊಯೆಟ್ರಿ ಆಫ್ ಸ್ಟೀಫನ್ ಕ್ರೇನ್ . ನ್ಯೂಯಾರ್ಕ್: ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್, 2006. ISBN 0-231-08662-8 pg. 150
- ↑ Ramsay, William (1875). "Triumphus". Retrieved 2007-12-09.
- ↑ ದ ಅಮೇರಿಕನ್ ಗರ್ಲ್ಸ್ ಹ್ಯಾಂಡಿ ಬುಕ್ , p. 369-370
- ↑ ಜುಡ್, ಚಾರ್ಲ್ಸ್ ಹಬ್ಬರ್ಡ್. ಸೈಕಾಲಜಿ : ಜನರಲ್ ಇಂಟ್ರೊಡಕ್ಷನ್ . Pgs. 131-132
- ↑ ರಾಬರ್ಟ್‌ಸನ್, S. (ಸಂಪಾದಕ). ಕಾಂಟೆಂಪೋರರಿ ಎರ್ಗೋನಾಮಿಕ್ಸ್ 1996. ಬೊಕಾ ರೇಟನ್: CRC, 1996. ISBN 0-7484-0549-6 pgs. 148-150
- ↑ ಕಾರ್ವೋವ್‌ಸ್ಕಿ, ವಾಲ್ಡೆಮರ್. ಇಂಟರ್‌ನ್ಯಾಷನಲ್ ಎನ್‌ಸೈಕ್ಲೋಪೀಡಿಯಾ ಆಫ್ ಎರ್ಗೋನಾಮಿಕ್ಸ್ ಅಂಡ್ ಹ್ಯೂಮನ್ ಫ್ಯಾಕ್ಟರ್ಸ್, ದ್ವಿತೀಯ ಆವೃತ್ತಿ - 3 ಸಂಪುಟಗಳ ಸಂಗ್ರಹ. ಬೊಕಾ ರೇಟನ್: CRC, 2006. ISBN 0-415-30430-X pg. 1518
- ↑ Llana, Chris (October 23, 2006). "22". Handbook of the Nautical Rules of the Road. Vol. A (2/3 ed.). Annapolis, Md.: Naval Institute Press. p. 103. ISBN 978-1557505040. Archived from the original on ಅಕ್ಟೋಬರ್ 1, 2009. Retrieved April 18, 2010.
{{cite book}}
: Unknown parameter|coauthors=
ignored (|author=
suggested) (help) - ↑ ಲಿ ಸುಜುನ್ (李素军), ಚೀನಾ ಕೆಂಪು (中国红) Archived 2007-12-15 ವೇಬ್ಯಾಕ್ ಮೆಷಿನ್ ನಲ್ಲಿ.. (ಚೀನೀಭಾಷೆಯಲ್ಲಿ.)
- ↑ ಷೆರ್ಡಿಯಾ ಡೇವಿಸ್-ಬ್ರಿಯಾನ್, ಎ ಕಾಲ್ ಟು ಆರ್ಮ್ಸ್ : A ಕಂಪ್ಯಾರಿಸನ್ ಆಫ್ ದ ಸೀಮಿಯಾಟಿಕ್ಸ್ ಆಫ್ ದ ಪೀಕಿಂಗ್ ರೆವೊಲ್ಯೂಷನರಿ ಒಪೆರಾ ಅಂಡ್ 9/11 ಮೀಡಿಯಾ ಇಮೇಜಸ್
- ↑ ೪೩.೦ ೪೩.೧ ೪೩.೨ ಕಲ್ಲೆನ್, ಚೆರಿಲ್. ಗ್ಲೋಬಲ್ ಗ್ರಾಫಿಕ್ಸ್. ಗ್ಲೌಸೆಸ್ಟರ್ : ರಾಕ್‌ಪೋರ್ಟ್ ಪಬ್ಲಿಷರ್ಸ್, 2000. ISBN 1-56496-293-8 pg. 147
- ↑ ಹಾಡ್ಜ್, ಬಾಬ್ ಹಾಗೂ ಕಾಮ್ ಲೂಯೀ. ದ ಪಾಲಿಟಿಕ್ಸ್ ಆಫ್ ಚೈನೀಸ್ ಲ್ಯಾಂಗ್ವೇಜ್ ಅಂಡ್ ಕಲ್ಚರ್ . ನ್ಯೂಯಾರ್ಕ್ : ರೂಟ್‌ಲೆಡ್ಜ್, 1998. ISBN 0-415-17266-7 pg. 132
- ↑ "PS2 News: CVG goes straight to hell with Devil May Cry director - ComputerAndVideoGames.com:". Retrieved 2007-10-14.
- ↑ ಲ್ಯಾಂಬ್, ಸಾರಾ. ವ್ಹೈಟ್ ಸ್ಯಾರೀಸ್ ಅಂಡ್ ಸ್ವೀಟ್ ಮ್ಯಾಂಗೋಸ್ . ಬರ್ಕೆಲಿ: ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರೆಸ್, 1979. ISBN 0-520-22001-3 pg. 188
- ↑ ಬಾಂಟನ್, ಮೈಕೆಲ್. ಆಂಥ್ರೋಪಾಲಾಜಿಕಲ್ ಅಪ್ರೋಚಸ್ ಟು ದ ಸ್ಟಡಿ ಆಫ್ ರಿಲಿಜನ್ . ನ್ಯೂಯಾರ್ಕ್ : ರೂಟ್‌ಲೆಡ್ಜ್, 2004. ISBN 0-415-33021-1 pg. 57
- ↑ ಬ್ರಾಡ್ಲೆ, ಕೆರೋಲಿನ್. ವೆಸ್ಟರ್ನ್ ವರ್ಲ್ಡ್ ಕಾಸ್ಟ್ಯೂಮ್ . ನ್ಯೂಯಾರ್ಕ್ : ಡೋವರ್ ಪಬ್ಲಿಕೇಷನ್ಸ್, 2001. ISBN 0-486-41986-X pg. 8
- ↑ ಆಸ್ಟಿನ್, ಎರಿಕಾ ಹಾಗೂ ಬ್ರೂಸ್ ಪಿಂಕಲ್‌ಟನ್. ಸ್ಟ್ರಾಟೆಜಿಕ್ ಪಬ್ಲಿಕ್ ರಿಲೇಷನ್ಸ್ ಮ್ಯಾನೇಜ್‌ಮೆಂಟ್ : ಪ್ಲಾನಿಂಗ್ ಅಂಡ್ ಮ್ಯಾನೇಜಿಂಗ್ ಎಫೆಕ್ಟೀವ್ ಕಮ್ಯೂನಿಕೇಷನ್ ಪ್ರೋಗ್ರಾಮ್ಸ್ . ಹಿಲ್ಸ್‌ಡೇಲ್ : ಲಾರೆನ್ಸ್ ಅರ್ಲ್‌ಬಾಮ್ ಅಸೋಸಿಯೇಟ್ಸ್ , 2006. ISBN 0-8058-5381-2 pg. 301
- ↑ Dart, Tom (March 12, 2008). "Teams with red shirts have a head start". Times Online. News International Group. Archived from the original on 29 ಜೂನ್ 2011. Retrieved 13 April 2010.
- ↑ Frommer, Harvey (April 9, 2010). "First Professional Baseball Team: Flashback". Dr. Harvey Frommer on Sports. Diamond Bar, California: Travel Watch. Archived from the original on 30 ಮಾರ್ಚ್ 2010. Retrieved 18 April 2010.
- ↑ ಕ್ಯುಯೋರ್ಡಿಲಿಯೋನ್, K.A. ಮ್ಯಾನ್‌ಹುಡ್ ಅಂಡ್ ಅಮೇರಿಕನ್ ಪೊಲಿಟಿಕಲ್ ಕಲ್ಚರ್ ಇನ್ ದ ಕೋಲ್ಡ್ ವಾರ್ . ನ್ಯೂಯಾರ್ಕ್ : ರೂಟ್‌ಲೆಡ್ಜ್, 2005. ISBN 0-415-92599-1 pg. XIII
- ↑ ಬ್ರಾಬಾಜಾನ್, ತಾರಾ/ಟಾರಾ. ಟ್ರ್ಯಾಕಿಂಗ್ ದ ಜ್ಯಾಕ್ . ಸಿಡ್ನಿ: UNSW ಪ್ರೆಸ್ , 2000. ISBN 0-86840-699-6 pg. 10
- ↑ "The United States Flag - Public and Intergovernmental Affairs". United States Department of Veterans Affairs. Archived from the original on ಡಿಸೆಂಬರ್ 31, 2006. Retrieved December 7, 2006.
- ↑ ಬ್ರಾಬಾಜಾನ್, ತಾರಾ/ಟಾರಾ. ಟ್ರ್ಯಾಕಿಂಗ್ ದ ಜ್ಯಾಕ್ . ಸಿಡ್ನಿ: UNSW ಪ್ರೆಸ್, 2000. ISBN 0-86840-699-6 pgs. 13-20
- ↑ ೫೬.೦ ೫೬.೧ ಕಲರ್ಸ್ ಆಸ್ ಸಿಂಬಲ್ಸ್ ಇನ್ ಫ್ಲಾಗ್ಸ್: EnchantedLearning.com
- ↑ ಮರ್ರೆಲ್, ನಥಾನಿಯೆಲ್ et al. ಚಾಂಟಿಂಗ್ ಡೌನ್ ಬ್ಯಾಬಿಲೋನ್ . ಫಿಲಡೆಲ್ಫಿಯಾ : ಟೆಂಪಲ್ ಯೂನಿವರ್ಸಿಟಿ ಪ್ರೆಸ್, 1998. ISBN 1-56639-584-4 pg. 135
- ↑ "ರ್ರ್ವಾಂಡನ್: ಅಡಾಪ್ಷನ್ ಆಫ್ ದ ನ್ಯೂ ಫ್ಲಾಗ್". Archived from the original on 2008-09-13. Retrieved 2010-05-31.
- ↑ "The East Is Red". TIME. Archived from the original on 2009-02-11. Retrieved 2009-04-10.
- ↑ "The Reddest Red Sun". Morning Sun. Retrieved 2009-04-10.
- ↑ Speer, Brian. "Photosynthetic Pigments". UCMP Glossary. University of California: University of California Museum of Palentology. Retrieved 22 April 2010.
- ↑ Fleming, H.P. (1960). "Quantitative Estimations Of Myoglobin And Hemoglobin In Beef Muscle Extracts" (PDF). Journal of Animal Sciences. North Carolina Agricultural Experiment Station, Raleigh: American Society of Animal Science. p. 2. Retrieved 22 April 2010.
{{cite web}}
: Unknown parameter|coauthors=
ignored (|author=
suggested) (help)
Find more about ಕೆಂಪು at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |