ವಿಷಯಕ್ಕೆ ಹೋಗು

ಕೊಡಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡಲಿಯು (ಕುಠಾರ) ಮರವನ್ನು ಕಡಿಯಲು, ಸೀಳಲು ಮತ್ತು ಅದಕ್ಕೆ ಆಕಾರ ಕೊಡಲು; ದಾರುವನ್ನು ಕೊಯ್ಯಲು; ಆಯುಧವಾಗಿ; ಮತ್ತು ವಿಧ್ಯುಕ್ತ ಅಥವಾ ವಂಶಲಾಂಛನ ಸಂಕೇತವಾಗಿ ಸಹಸ್ರಮಾನಗಳಿಂದ ಬಳಸಲ್ಪಡುತ್ತಿರುವ ಒಂದು ಉಪಕರಣ. ಕೊಡಲಿಯು ಅನೇಕ ರೂಪಗಳು ಮತ್ತು ವಿಶೇಷೀಕೃತ ಉಪಯೋಗಗಳನ್ನು ಹೊಂದಿದೆ ಆದರೆ ಸಾಮನ್ಯವಾಗಿ ಕೊಡಲಿ ತಲೆ ಮತ್ತು ಹಿಡಿಕೆಯನ್ನು ಹೊಂದಿದೆ. ಆಧುನಿಕ ಕೊಡಲಿಗಿಂತ ಮೊದಲು, ಶಿಲಾಯುಗದ ಕೈ ಕೊಡಲಿಯನ್ನು ಹಿಡಿಕೆ ಇಲ್ಲದೆಯೇ ೧.೫ ಮಿಲಿಯ ವರ್ಷಗಳಿಂದ ಬಳಸಲಾಗಿತ್ತು. ನಂತರ ಅದಕ್ಕೆ ಕಟ್ಟಿಗೆಯ ಹಿಡಿಕೆಯನ್ನು ಜೋಡಿಸಲಾಯಿತು. ಹಿಡಿಕೆಯಿರುವ ಕೊಡಲಿಗಳ ಅತ್ಯಂತ ಮುಂಚಿನ ಉದಾಹರಣೆಗಳು ಕಲ್ಲಿನ ಶಿರಗಳು ಮತ್ತು ಲಭ್ಯವಿರುವ ವಸ್ತುಗಳು ಹಾಗೂ ಉಪಯೋಗಕ್ಕೆ ಅನುಕೂಲಕರವಾಗುವ ವಿಧಾನದಲ್ಲಿ ಯಾವುದೋ ರೂಪದ ಜೋಡಿಸಲಾದ ಕಟ್ಟಿಗೆಯ ಹಿಡಿಕೆಯನ್ನು ಹೊಂದಿವೆ. ಈ ತಂತ್ರಜ್ಞಾನಗಳು ಅಭಿವೃದ್ಧಿಗೊಂಡಂತೆ, ತಾಮ್ರ, ಕಂಚು, ಕಬ್ಬಿಣ ಮತ್ತು ಉಕ್ಕಿನಿಂದ ತಯಾರಿಸಲ್ಪಟ್ಟ ಕೊಡಲಿಗಳು ಕಾಣಿಸಿಕೊಂಡವು.

"https://kn.wikipedia.org/w/index.php?title=ಕೊಡಲಿ&oldid=889344" ಇಂದ ಪಡೆಯಲ್ಪಟ್ಟಿದೆ