ಮದ್ದೂರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮದ್ದೂರು ಮಂಡ್ಯ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇದು ವಡೆಗೆ ಪ್ರಸಿದ್ಧಿಯಾಗಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಎಸ್. ಎಂ. ಕೃಷ್ಣ ಇಲ್ಲಿಗೆ ಕೂಗಳತೆ ದೂರದಲ್ಲಿರುವ ಸೋಮನಹಳ್ಳಿಯವರು. ಮದ್ದೂರಿನ ಹತ್ತಿರದಲ್ಲಿರುವ ಶಿವಪುರದಲ್ಲಿ ೧೯೩೮ರಲ್ಲಿ ಧ್ವಜ ಸತ್ಯಾಗ್ರಹ ನಡೆಯಿತು ಮತ್ತು ಮ್ಯೆಸೂರು ಕಾಂಗ್ರೆಸ್ಸಿನ ಪ್ರಥಮ ಅಧಿವೇಶನ ನಡೆಯಿತು.ಮದ್ದೂರು ಎರಡೂ ಕಡೆ ಕರಾರಸಾನಿಬಸ್ ನಿಲ್ದಾಣ ಹೊಂದಿದೆ. ಮದ್ದೂರು ಬೆಂಗಳೂರು ಮತ್ತು ಮೈಸೂರು ಮಧ್ಯದಲ್ಲಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ೨೭೫ ಹಾದು ಹೋಗುತ್ತದೆ. ಹಾಗಾಗಿ ಹೋಟೆಲ್‌ಗಳು ಹೆಚ್ಚಾಗಿವೆ. ಅಡಿ ಗಾಸ್,ತಿಮ್ಮ ದಾಸ್,ಮದ್ದೂರು ಕಫೆ ಹಾಗೂ ಏಟುಬಿ ಹೋಟೆಲ್‌ಗಳು ಪ್ರಸಿದ್ಧಿ ಪಡೆದಿವೆ. ಮದ್ದೂರಿನಿಂದ ನೇರವಾಗಿಕುಣಿಗಲ್, ತುಮಕೂರು, ಮಳವಳ್ಳಿ, ಕೊಳ್ಳೇಗಾಲ,ಚಾಮರಾಜನಗರ ಹಾಗೂ ಬೆಂಗಳೂರು ಮೈಸೂರು ಕಡೆಗೆ ಹೋಗಬಹುದು. ಮದ್ದೂರಿನಲ್ಲಿ ರೈಲು ನಿಲ್ದಾಣ ಕೂಡ ಇದೆ. ಮದ್ದೂರಿನಲ್ಲಿ ಮದ್ದೂರಮ್ಮ ದೇವಸ್ಥಾನ, ಉಗ್ರ ನರಸಿಂಹ ದೇವಸ್ಥಾನ ಹಾಗೂ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಗಳು ಪ್ರಸಿದ್ಧಿ ಹೊಂದಿವೆ.

ಭೌಗೋಳಿಕ[ಬದಲಾಯಿಸಿ]

ಮದ್ದೂರು 12°35′03″N 77°02′42″E / 12.584169°N 77.0449°E ಯಲ್ಲಿ ಕಾಣಸಿಗುತ್ತದೆ. ಸಮುದ್ರ ಮಟ್ಟದಿಂದ ೨೧೭೫ ಅಡಿ ಎತ್ತರದಲ್ಲಿದೆ.

ಸಾಮಾಜಿಕ[ಬದಲಾಯಿಸಿ]

೨೦೦೧ ರ ಜನಗಣತಿಯ ಪ್ರಕಾರ ಮದ್ದೂರಿನಲ್ಲಿ ಸುಮಾರು ೩೦,೦೦೦ ಜನಸಂಖ್ಯೆಯಿದೆ, ಇವರಲ್ಲಿ ಶೇ ೫೧ ರಷ್ಟು ಪುರುಷರು ‍‍ಮತ್ತು ೪೯ ಅಷ್ಟು ಮಹಿಳೆಯರು ಇದ್ದಾರೆ. ಒಕ್ಕಲಿಗ ಜನಾಂಗದ ಪ್ರಾಬಲ್ಯವಿರುವ ಇಲ್ಲಿ ಇತರ ಜನಾಂಗದವರೂ ಸಹ ಸಾಮರಸ್ಯದ ಬಾಳು ನಡೆಸುತ್ತಿದ್ದಾರೆ

ವಿಶೇಷ ತಿನಿಸುಗಳು[ಬದಲಾಯಿಸಿ]

ಮದ್ದೂರು ವಡೆ ಇಲ್ಲಿಯ ಬಹಳ ಜನಪ್ರಿಯ ತಿನಿಸು. ಇದರ ರುಚಿ ಸವಿದವರು ಜೀವಮಾನದಲ್ಲೆಂದು ಮರೆಯಲು ಸಾದ್ಯವೇ ಇಲ್ಲ.. ಈ ವಡೆಯು ಮದ್ದೂರಲ್ಲಿ ಮಾತ್ರವಲ್ಲದೆ ಇಡ್ಡಿ ಕರ್ನಾಟಕದಲ್ಲೆ ಪ್ರಸಿದ್ಧಿ ಪಡೆದಿದೆ.ರೈಲು ನಿಲ್ದಾಣಗಳಲ್ಲಿ ಮದ್ದೂರು ವಡೆ ಬಹಳ ಪ್ರಸಿದ್ಧಿ ಹೊಂದಿದೆ. ಬೆಂಗಳೂರು- ಮೈಸೂರು ರೈಲು ನಿಲ್ದಾಣಗಳಲ್ಲಿ ಅತಿ ಹೆಚ್ಚು ಬೇಡಿಕೆ ಇದೆ.ಮದ್ದೂರಿನಲ್ಲಿ ದಕ್ಷಿಣ ಭಾರತ ಶೈಲಿಯ ತಿನಿಸುಗಳು ದೊರೆಯುತ್ತವೆ ಹಾಗೂ ಬೇಕರಿ ತಿನಿಸುಗಳು, ಪಾನಿಪುರಿ,ಮಸಾಲ ಪುರಿ,ಬೇಲ್ ಪುರಿ,ಗೋಬಿ,ಎಗ್ ರೈಸ್ ಹಾಗೂ ಪ್ರೈಡ್ ರೈಸ್ ದೊರೆಯುತ್ತವೆ.

ಪ್ರೇಕ್ಷಣಿಯ ಸ್ಥಳಗಳು[ಬದಲಾಯಿಸಿ]

|| ಎಸ್ ಐ ಹಾಗಲಹಳ್ಳಿ|| ಇದು ಒಂದು ಮದ್ದೂರು ತಾಲ್ಲೂಕಿನ ಪುಟ್ಟ ಗ್ರಾಮ. ಸುಮಾರು ಮದ್ದೂರಿನಿ೦ದ ೧೫ ಕೀ. ಮೀಟರ್ ಅ೦ತರವಿದ್ದು.. ಹಾಗೂ ಕೆ ಎಮ್ ದೊಡ್ಡಿಯಿ೦ದ ಸುಮಾರು ೯ ಕೀ. ಮೀಟರ್ ಅ೦ತರವಿದ್ದೆ. ಈ ಗ್ರಾಮದ ಬಳ್ಳಿ ಶಿ೦ಷಾ ನದಿ ಹರಿಯುವುದರಿ೦ದ ಆ ಗ್ರಾಮಕ್ಕೆ ದೂರದ ಪಟ್ಟಣಗಳಿ೦ದ ವಲಸೆ ಬ೦ದು ಮೀನುಗಾರಿಕ್ಕೆ ಮತ್ತು ವಿಶಾ೦ತಿ ಪಡೆದುಕೊಳ್ಳುತ್ತರೆ.. ಮತ್ತು ಆ ಗ್ರಾಮದ ಬಳ್ಳಿಯೇ ಶಿ೦ಷಾ ನದಿಗೆ ಅಡ್ಡವಾಗಿ ದೊಡ್ಡ ಅಣೇಕಟ್ಟವನ್ನು ಮಾರ್ಪಡಾಗಿ ಇರುವುದರಿ೦ದ ಆ ಸ್ಥಳದಲ್ಲಿ ಚಿತ್ರಿಕರಣವು ಕೂಡ ಮಾಡುತ್ತರೆ. ಆ ಅಣೇಕಟ್ಟೆಯನು ಎಚ್. ಡಿ ದೇವೆಗೌಡರು ಪ್ರಧಾನಮ೦ತ್ರಿಯಾಗಿದಾಗ ಈ ಅಣೇಕಟ್ಟನ್ನು ಕಟ್ಟಿಸಿಕೊಟ್ಟರು.

ವೈದ್ಯನಾಥಪುರದ ವೈದ್ಯನಾಥೇಶ್ವರ ದೇವಸ್ಥಾನ ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲೊಂದು. ಈ ದೇವಾಲಯ ಕರ್ನಾಟಕದಲ್ಲಿ ಬಹಳ ಪ್ರಸಿದ್ಧಿ.ಇದು ಗೋವಿನ ಹಾಡು ಕವಿಯ ತವರೂರು ಎಂದು ಕರೆಯುತ್ತಾರೆ. ಇಲ್ಲಿ ದೇವಸ್ಥಾನದ ಸೀಡಿಗಳು ಹಾಗೂ ಡಿವಿಡಿಗಳು ದೊರೆಯುತ್ತವೆ.

ನೀಲಕಂಠನ ಹಳ್ಳಿ- ಇದು ಮದ್ದೂರಿನಿಂದ ಏಳು(೭)ಕಿಲೋಮೀಟರ್ ದೂರವಿದೆ. ಇದು ಕಸಬಾ ಹೋಬಳಿ, ಆಲೂರು ಅಂಚೆಗೆ ಒಳಪಡುತ್ತದೆ. ಪಿನ್ ಕೋಡ್ ಸಂಖ್ಯೆ-೫೭೧೪೩೩(571433). ಮಂಥನ ನಡೆಸಿ ಬಂದ ಮೇಲೆ ಇಲ್ಲಿ ಶಿವನ ಕಂಠ ನೀಲಿಯಾಗಿದ್ದರಿಂದ ಈ ಊರಿಗೆ ನೀಲಕಂಠನ ಹಳ್ಳಿ ಎಂಬ ಹೆಸರು ಬಂದಿದೆ. ಇಲ್ಲಿ ತುಂಬ ದೇವಾಲಯಗಳಿವೆ -ಬಸವೇಶ್ವರ,ವೀರಭದ್ರೇಶ್ವರ, ಮಾಯಮ್ಮ,ಕ್ಯಾತಮ್ಮ ಹಾಗೂ ರಾಕಸಮ್ಮ ದೇವಸ್ಥಾನ.ಈ ಊರಿನಲ್ಲಿ ಶಿಂಷಾ ನದಿಗೆ ಅಡ್ಡಲಾಗಿ ಒಂದು ಅಣೆಕಟ್ಟು ಕಟ್ಟಲಾಗಿದೆ ಇಲ್ಲಿಂದ ನೀರನ್ನು ಕೆ.ಹೊನ್ನಲಗೆರೆಯ ಕೆರೆಗೆ ಹರಿಸಲಾಗುತ್ತದೆ.ಇಲ್ಲಿ ಭತ್ತ, ರಾಗಿ,ಕಬ್ಬು ಹೆಚ್ಚಾಗಿ ಬೆಳೆಯುತ್ತಾರೆ.

ಆಲೂರುಆಲೂರಿನಲ್ಲಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಹಾಗೂ ಆಲೂರಮ್ಮ ದೇವಾಲಯಗಳಿವೆ.

ತೊಪ್ಪನ ಹಳ್ಳಿಯಲ್ಲಿ ಆಂಜನೇಯ ಸ್ವಾಮಿ ಬೆಟ್ಟವಿದೆ ಹಾಗೂ ಭೀಮನ ಕೆರೆಯಲ್ಲಿ ಬೆಟ್ಟದ ಅರಸಮ್ಮನ ಬೆಟ್ಟವಿದೆ.

ಕೊಕ್ಕರೆ ಬೆಳ್ಳೂರು ವಲಸೆ ಬರುವ ಹಕ್ಕಿಗಳ ಪ್ರಾಕೃತಿಕ ಪಕ್ಷಿಧಾಮ.ಹಾಗೂ ಕರ್ನಾಟಕದಲ್ಲೆ ಒಂದು ಸು೦ದರ ಪಕ್ಷಿಧಾಮ ಎಂದು ಹೇಸರಿದೆ. || ''ಚಿಕ್ಕ ಅರಸಿನಕೆರೆ ' ಶ್ರಿ ಬಸವೆಶ್ವರ ಮತ್ತು ಭೈರವೆಶ್ವರ ದೇವಲಾಯವು ಪ್ರಸಿದ್ಧ ಯಾತ್ರಾಸ್ಥಳವಾಗಿ ಮಾರ್ಪಡಾಗಿದೆ ,ಇಲ್ಲಿನ ಬಸವ ಬಹಳ ಪ್ರಸಿದ್ಧಿ. ಇದು ಮದ್ದೂರಿನಿಂದ ಎಂಟು ಕಿಲೋಮೀಟರ್ ದೂರದಲ್ಲಿದೆ.

                                                                                                                |ಶಿವಪುರ ಇತಿಹಾಸ ಪ್ರಸಿದ್ಧ ಸತ್ಯಾಗ್ರಹ ಸೌಧವಿರುವುದು ಇಲ್ಲಿಯೆ.

ಹನುಮಂತನಗರ ಆತ್ಮಲಿಂಗೆಶ್ವರ ದೇವಾಲಯ, ಈ ದೇವಾಲಯವು ಭಾರತಿ ನಗರದಿಂದ(ಕೆ.ಎಮ್.ದೊಡ್ಡಿಯಿಂದ) ೩ ಕಿ.ಮಿ. ದೂರದಲ್ಲಿದೆ.

ಆಲೂರು ಶ್ರೀ ಬೀರೇಶ್ವರ ದೇವಾಲಯ
    ಈ ದೇವಾಲಯವು ಮದ್ದೂರು ತಾಲ್ಲೂಕು ಕಸಬಾ ಹೋಬಳಿಯ ವ್ಯಾಪ್ತಿಗೆ ಬರುತ್ತದೆ. ಈ ದೇವಾಲಯವು ಮುಖ್ಯವಾಗಿ ಕುರುಬ ಜನಾಂಗಕ್ಕೆ ಸೇರಿದ ಒಂದು ಅತಿಮುಖ್ಯವಾದ ದೇವಾಲಯ. ಇಲ್ಲಿ ಪ್ರತಿ ಸೋಮವಾರ ಮತ್ತು ಗುರುವಾರಗಳಲ್ಲಿ ಬೀರೇಶ್ವರ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ಈ ದೇವರ ಜೊತೆಯಲ್ಲಿ ಇತರ ದೇವರುಗಳಾದ ಶ್ರೀ ಸಣ್ಣಕ್ಕರಾಯ ಸ್ವಾಮಿ-ಅರಸಿನಕೆರೆ, ಶ್ರೀ ಹುಲಿ ಹುಚ್ಚಪ್ಪ ಸ್ವಾಮಿ -ಕೋಡಂಬಳ್ಳಿ ಮತ್ತು ಶ್ರೀ ಮಲವಪ್ಪ ಸ್ವಾಮಿ-ಮಾಗಡಿ ಸೇರಿ ಅದ್ಧೂರಿಯಾಗಿ ದಸರಾವನ್ನು ಆಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ನಾಡಿನ ವಿವಿಧ ಭಾಗಗಳಲ್ಲಿ ನೆಲಸಿರುವ ಜನರು-ಭಕ್ತಾದಿಗಳು ಬಂದು ಈ ದೇವರುಗಳ ಕೃಪೆಗೆ ಒಳಗಾಗುತ್ತಾರೆ.

ನಂಬಿನಾಯಕನಳ್ಳಿ ಪಟ್ಟಲದಮ್ಮ ದೇವಾಲಯ. ಚಿಕ್ಕಹೊಸಗಾವಿ.

ಕಾಡುಕೊತ್ತನಹಳ್ಳಿ ಶ್ರೀ ವೀರಭಧ್ರೆಶ್ವರ ದೇವಾಲಯ, ಕಾಡುಕೋತ್ತನಹಳ್ಳಿ, ಕೆ.ಎಮ್.ದೊಡ್ಡಿಯಿ೦ದ ೮ ಕೀಮೀ ದೂರದಲ್ಲಿದೆ.ಸುಮಾರು ನೂರಾರು ವರ್ಷಗಳ ಇತಿಹಾಸ ಇದೆ ಅಲ್ಲದೆ, ಶಿವನ ದೇವಾಲಯ, ಮಹದೇಶ್ವರ ದೇವಾಲಯ, ಚಾಮು೦ಡೇಶ್ವರಿ ದೇವಾಲಯ, ಮಾರಮ್ಮ ದೇವಾಲಯ ಇನ್ನು ಅನೇಕ ದೇವಾನುದೇವತೇಗಳ ದೇವಾಲಯಗಳಿವೆ. ಹಲವು ವಿವಿಧ ರೀತಿಯ ವೀರಗಲ್ಲು ಸ್ಥಾಪಿತವಾಗಿವೆ.

ಪ್ರಸಿದ್ಧ ವ್ಯಕ್ತಿಗಳು[ಬದಲಾಯಿಸಿ]

ಹೆಚ್.ಕೆ.ವೀರಣ್ಣಗೌಡ ಖ್ಯಾತ ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಶಿಕ್ಷಣ ಸಚಿವರು.

ಎಸ್.ಎಂ.ಕೃಷ್ಣಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು, ಹಾಲಿ ಕೇಂದ್ರ ಸಚಿವರು.

ಅಂಬರೀಷ್ ಹಾಲಿ ವಸತಿ ಸಚಿವರು ಮತ್ತು ಚಿತ್ರನಟರು.

ಜಿ.ಮಾದೇಗೌಡರ ಶಿಕ್ಷಣ ತಜ್ನರು, ಸಾಮಾಜಿಕ ಹೋರಾಟಗಾರರು ಎಂ.ಎಸ್. ಸಿದ್ದರಾಜು, ದಿವಂಗತ ಶಾಸಕರು, ಕಲ್ಪನ ಸಿದ್ದರಾಜು ಮಾಜಿ ಶಾಸಕಿ, ಮದ್ದೂರು ಕ್ಷೇತ್ರ ಎಂ.ಮಂಚಯ್ಯ ಮಾಜಿ ಶಾಸಕರು ಡಿ.ಸಿ. ತಮ್ಮಣ್ಣ, ಮದ್ದೂರಿನ ಶಾಸಕರು, ಮಹೇಶ್ ಚಂದ್, ಮಾಜಿ ಶಾಸಕರು, ಎಸ್.ಎಂ. ಶಂಕರ್, ವಿಧಾನ ಪರಿಷತ್ ಮಾಜಿ ಸದಸ್ಯರು ಎಸ್. ಗುರುಚರಣ್ ಜಿ.ಪಂ. ಮಾಜಿ ಅಧ್ಯಕ್ಷರು.

ಹೋಬಳಿಗಳು[ಬದಲಾಯಿಸಿ]

ಕಸಬಾ

ಕೊಪ್ಪ

ಆತಗೂರು

ಚಿಕ್ಕ ಅರಸಿನಕೆರೆ

ಶ್ರೀ ನರಸಿಂಹಸ್ವಾಮಿ

ಶ್ರೀ ನರಸಿಂಹಸ್ವಾಮಿ ಕ್ಷೇತ್ರ , ಮದ್ದೂರು (ಅರ್ಜುನಪುರಿ , ಅಥವಾ ಮರದೂರು) ಮಂಡ್ಯಜಿಲ್ಲೆ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಚೆನ್ನಪಟ್ಟಣ ಹಾಗೂ ಮಂಡ್ಯದ ನಡುವೆ ಇರುವ ಊರೇ ಮದ್ದೂರು. ಮದ್ದೂರು ವಡೆಯಿಂದ ಖ್ಯಾತವಾದ ಈ ಊರು, ಪುರಾಣ ಪ್ರಾಚೀನ ಪುಣ್ಯಕ್ಷೇತ್ರವೂ ಹೌದು. ಕದಂಬ ಋಷಿಗಳು ಇಲ್ಲಿ ನರಸಿಂಹ ದೇವರನ್ನು ಪೂಜಿಸಿದ ಕಾರಣ ಈ ಇದು ಕದಂಬಕ್ಷೇತ್ರ ಎಂದು ಖ್ಯಾತವಾಗಿದೆ.

ದ್ವಾಪರಯುಗದಲ್ಲಿ ಶ್ರೀಕೃಷ್ಣ ಪರಮಾತ್ಮನ ಜೊತೆ ತೀರ್ಥಯಾತ್ರೆಗಾಗಿ ಇಲ್ಲಿಗೆ ಬಂದ ಅರ್ಜುನನು ಈ ಸ್ಥಳದಲ್ಲಿ ತನಗೆ ಉಗ್ರನರಸಿಂಹನ ರೂಪ ತೋರಿಸುವಂತೆ ಕೋರುತ್ತಾನೆ. ಮತ್ತೆ ಉಗ್ರರೂಪ ತಳೆಯಲು ಸಾಧ್ಯವಿಲ್ಲ ಎಂದು ಹೇಳಿದ ಶ್ರೀಕೃಷ್ಣ ಶಿಲಾರೂಪದಲ್ಲಿ ಬ್ರಹ್ಮದೇವರಿಂದ ಇಲ್ಲಿ ನರಸಿಂಹ ವಿಗ್ರಹ ಪ್ರತಿಷ್ಠಾಪಿಸಿದರಂತೆ. ಹೀಗಾಗಿ ಈ ಊರು ಅರ್ಜುನಪುರಿ ಎಂದೂ ಹೆಸರಾಗಿತ್ತು. ಬಣ್ಣದ ಬೊಂಬೆಗೆ ಹೆಸರಾದ ಚನ್ನಪಟ್ಟಣಕ್ಕೆ ಇಲ್ಲಿಂದ ಮರತೆಗೆದುಕೊಂಡು ಹೋಗುತ್ತಿದ್ದ ಕಾರಣ ಇದಕ್ಕೆ ನಂತರ ಮರದೂರು ಎಂಬ ಹೆಸರು ಬಂತು. ಇದೇ ಮದ್ದೂರಾಯಿತೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಇಲ್ಲಿ ತನ್ನ ಮದ್ದುಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದನಂತೆ. ಮದ್ದು ಸಂಗ್ರಹಿಸಿದ, ಮದ್ದು ತಯಾರಿಸಿದ ಊರು ಮದ್ದೂರಾಯಿತೆನ್ನುತ್ತದೆ ಐತಿಹ್ಯ.

ಹೊಯ್ಸಳರ ಕಾಲದಲ್ಲಿ ಮದ್ದೂರು ಕೆರೆ ಹಾಗೂ ವರದರಾಜ ದೇವಸ್ಥಾನ ನಿರ್ಮಾಣವಾಯಿತೆಂದು ತಿಳಿದುಬರುತ್ತದೆ. ಮದ್ದೂರಿನಲ್ಲಿ ನರಸಿಂಹ, ವರದರಾಜೇಶ್ವರ ಎಂಬ ಮೂರು ಪ್ರಮುಖ ದೇವಾಲಯಗಳಿವೆ. ಪಕ್ಕದಲ್ಲಿ ಪಟ್ಟಾಭಿರಾಮದೇವರ ದೇವಾಲಯವೂ ಇದೆ.

ನರಸಿಂಹ ದೇವಾಲಯ ಹೊಯ್ಸಳ ಶೈಲಿಯಲ್ಲಿದೆ. ಐದು ಅಂತಸ್ತುಗಳ ದ್ರಾವಿಡ ಶೈಲಿಯ ಗೋಪುರವನ್ನು ಈಚೆಗೆ ಕಟ್ಟಲಾಗಿದೆ. ಪ್ರತಿ ಹಂತದಲ್ಲೂ ಜಯ ವಿಜಯರ ಗಾರೆಯ ವಿಗ್ರಹಗಳಿವೆ. ಗರ್ಭಗೃಹದಲ್ಲಿ ಎತ್ತರವಾದ ಕೃಷ್ಣಶಿಲೆಯ ಸುಂದರ ಉಗ್ರನರಸಿಂಹ ಮೂರ್ತಿ ಇದೆ. ಗರ್ಭಗೃಹದ ಮುಂದಿರುವ ಪ್ರಾಕಾರದಲ್ಲಿ ಸುಂದರವಾದ ಕಪ್ಪುಕಲ್ಲಿನ ವೃತ್ತಾಕಾರದ ಕಂಬಗಳಿದ್ದು ಇದರಲ್ಲಿ ಸೂಕ್ಷ್ಮಕೆತ್ತನೆಗಳಿವೆ. ಹೊರ ಪ್ರಾಕಾರದಲ್ಲಿ ಕಲ್ಲಿನ ಕಂಬಗಳಿವೆಯಾದರೂ ಅದರಲ್ಲಿ ಹೇಳಿಕೊಳ್ಳುವಂಥ ಯಾವುದೇ ಕೆತ್ತನೆ ಇಲ್ಲ.

ಗರ್ಭಗೃಹದಲ್ಲಿರುವ ಉಗ್ರನರಸಿಂಹಸ್ವಾಮಿಗೆ ಎಂಟು ಕೈಗಳು, ಮೂರು ಕಣ್ಣು ಇರುವುದು ವಿಶೇಷ. ತ್ರಿನೇತ್ರನಾದ ಶಿವ ಮುಕ್ಕಣ್ಣ ಎಂದು ಹೆಸರಾಗಿದ್ದಾರೆ. ಆದರೆ, ಮದ್ದೂರಿನಲ್ಲಿ ಬಹು ಅಪರೂಪದ ಮೂರು ಕಣ್ಣಿನ ನರಸಿಂಹಸ್ವಾಮಿಯ ವಿಗ್ರಹವಿದೆ. ಎಂಟು ಕೈಗಳ ಪೈಕಿ ಎರಡುಗಳಿಂದ ತೊಡೆಯ ಮೇಲೆ ಮಲಗಿಸಿಕೊಂಡ ಹಿರಣ್ಯಕಶಿಪುವಿನ ಕರಳು ಬಗೆದು ಮಾಲೆ ಹಾಕಿಕೊಳ್ಳುತ್ತಿರುವ ನರಸಿಂಹ ದೇವರ, ಇನ್ನೆರೆಡು ಕೈಗಳಲ್ಲಿ ಪಾಶಾಂಕುಶಗಳನ್ನು, ಉಳಿದೆರೆಡು ಕೈಗಳಲ್ಲಿ ಶಂಖ, ಚಕ್ರಗಳಿವೆ,

ದೇವತಾವಿಗ್ರಹದ ಎಡಭಾಗದಲ್ಲಿ ವಿಷ್ಣುವಿನ ವಾಹನ ಗರುಡನಿದ್ದನೆ, ಬಲಭಾಗದಲ್ಲಿ ಹಿರಣ್ಯಕಶಿಪುವಿನ ಪುತ್ರ ಹಾಗೂ ನರಸಿಂಹಾವತಾರಕ್ಕೆ ಕಾರಣರಾದ ಪ್ರಹ್ಲಾದರಿದ್ದಾರೆ. ಸ್ವಾಮಿಗಿರುವ ಮೂರನೇ ಕಣ್ಣು ಹಿರಣ್ಯಕಶಿಪುವಿನ ಸಂಹಾರದ ವೇಳೆ ಸೃಷ್ಟಿಯಾಯಿತೆಂದು ಹೇಳಲಾಗುತ್ತದೆ. ಉಗ್ರಸ್ವರೂಪಿಯಾದ ಈ ನರಸಿಂಹನನ್ನು

ಉಗ್ರಂ ವೀರಂ ಮಹಾ ವಿಷ್ಣುಂ ಜ್ವಲಂತಂ ಸರ್ವತೋಮುಖಂ ನರಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ ಎಂದು 48 ಬಾರಿ ಹೇಳಿಕೊಂಡು ಪೂಜಿಸಿದರೆ ಸಕಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ ಎಂದು ಪುರೋಹಿತರಾದ ಶ್ರೀ.ಸಿಂಗಾಯಂಗಾರ್ ಹೇಳುತ್ತಾರೆ.

ದೇವಾಲಯದ ಒಳಾಂಗಣದಲ್ಲಿ ಶ್ರೀನಿವಾಸದೇವರ ಹಾಗೂ ಶ್ರೀಕೃಷ್ಣನಿಗೆ ಹಾಲುಣಿಸುತ್ತಿರುವ ಯಶೋಧಾ ವಿಗ್ರಹಗಳು ಅತ್ಯಂತ ಅಪರೂಪದ ವಿಗ್ರಹಗಳೆಂಬುದರಲ್ಲಿ ಸಂದೇಹವೇ ಇಲ್ಲ. ಒಳಪ್ರಕಾರದಲ್ಲಿ ಸೌಮ್ಯನಾಯಕಿ ಹಾಗೂ ನರಸಿಂಹನಾಯಕಿ ವಿಗ್ರಹಗಳೂ ಇವೆ. ದೇವಾಲಯದಲ್ಲಿ ಸೀತಾ, ಲಕ್ಷ್ಮಣ, ಆಂಜನೇಯ ಹಾಗೂ ಶ್ರೀರಾಮ ದೇವರ ವಿಗ್ರಹಗಳಿವೆ.

ಊರಿನಲ್ಲಿರುವ ದೇಶೇಶ್ವರ ದೇವಾಲಯ ಗಂಗರ ಕಾಲದ ವಾಸ್ತು ವಿನ್ಯಾಸ ಒಳಗೊಂಡಿದೆ. ಇದರ ಹೊರಗೋಡೆಗಳನ್ನು ಇತ್ತೀಚೆಗೆ ಬಳಪದ ಕಲ್ಲಿನಲ್ಲಿ ನಿರ್ಮಿಸಲಾಗಿದೆ. ದೇವಾಲಯದ ನಂದಿಮಂಟಪ ಸುಂದರವಾಗಿದೆ. ಗ್ರಾಮದೇವತೆ ಮದ್ದೂರಮ್ಮನ ದೇವಾಲಯವೂ ಇಲ್ಲಿದೆ. ಪ್ರತಿವರ್ಷ ಏಪ್ರಿಲ್-ಮೇ ತಿಂಗಳಿನಲ್ಲಿ ಜಾತ್ರೆ ನಡೆಯುತ್ತದೆ.


"https://kn.wikipedia.org/w/index.php?title=ಮದ್ದೂರು&oldid=781075" ಇಂದ ಪಡೆಯಲ್ಪಟ್ಟಿದೆ