ಲಕ್ಕುಂಡಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Lakkundi
ಲಕ್ಕುಂಡಿ
Lakkigundi
town
Brahma Jainalaya at Lakkundi
Brahma Jainalaya at Lakkundi
Lakkundi is located in ಕರ್ನಾಟಕ
Lakkundi
Lakkundi
Location in Karnataka, India
Coordinates: 15°23′23″N 75°43′06″E / 15.38972°N 75.71833°E / 15.38972; 75.71833Coordinates: 15°23′23″N 75°43′06″E / 15.38972°N 75.71833°E / 15.38972; 75.71833
Country  India
State Karnataka
Languages
 • Official Kannada
Time zone IST (UTC+5:30)
Vehicle registration KA-26
Nearest city Gadag
Jaina image in sanctum and door panel decoration at Jain Temple in Lakkundi
Chaturmukha, a four-faced Brahma image at Jain Temple in Lakkundi, 11th century CE
Kirtimukha decoration at Kasivisvesvara Temple at Lakkundi
A pierced window screen brings light into the mantapa at Manikesvara Temple in Lakkundi
Nanneshwara Temple at Lakkundi

ಲಕ್ಕುಂಡಿ ಗದಗ ಜಿಲ್ಲೆಯ ಒಂದು ಮಹತ್ವದ ಊರು. ಇದರ ಐತಿಹಾಸಿಕ ಹೆಸರು ಲೊಕ್ಕಿಗುಂಡಿ. ಲೊಕ್ಕಿ ಎನ್ನುವ ದೇವತೆ ಈ ಊರಿನ ಅಧಿದೇವತೆ. ಇವಳು ಜೈನ ದೇವತೆಯಾಗಿರಬಹುದು.

ಇತಿವೃತ್ತ[ಬದಲಾಯಿಸಿ]

ಲಕ್ಕುಂಡಿಯನ್ನು ಕಲ್ಯಾಣಚಾಲುಕ್ಯರು, ಕಳಚೂರಿಗಳು, ಯಾದವರು ಹಾಗು ಹೊಯ್ಸಳರು ಆಳಿದ್ದಾರೆ. ೧೧೯೨ರಲ್ಲಿ ೨ನೆಯ ವೀರಬಲ್ಲಾಳನು ಲಕ್ಕುಂಡಿಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಲಕ್ಕುಂಡಿಯೊಂದಿಗೆ ದಾನಚಿಂತಾಮಣಿ ಅತ್ತಿಮಬ್ಬೆಯ ಹೆಸರು ಚಿರಸ್ಥಾಯಿಯಾಗಿ ನೆಲೆನಿಂತಿದೆ. ಇರಿವ ಬೆಡಂಗ ಸತ್ಯಾಶ್ರಯದೇವನು ಗುಜರಾಥವನ್ನು ಗೆದ್ದು ಬಂದ ಸಂದರ್ಭದಲ್ಲಿ ಅತ್ತಿಮಬ್ಬೆ ಲೊಕ್ಕಿಗುಂಡಿಯಲ್ಲಿ (ಲಕ್ಕುಂಡಿಯಲ್ಲಿ) ೧೫೦೦ ಜಿನಬಸದಿಗಳನ್ನು ಕಟ್ಟಿಸಿದಳು. ಶರಣ ಶಿರೋಮಣಿಗಳಾದ ಅಣ್ಣ, ತಂಗಿ ಅಜಗಣ್ಣ ಹಾಗು ಮುಕ್ತಾಯಕ್ಕರಿಗೆ ಆಶ್ರಯ ನೀಡಿದ ತಾಣ ಲಕ್ಕುಂಡಿ.

ವಿಶೇಷತೆ[ಬದಲಾಯಿಸಿ]

ಲಕ್ಕುಂಡಿಯಲ್ಲಿ ಸುಮಾರು ೨೦ರಷ್ಟು ಸುಂದರ ಪ್ರಾಚೀನ ದೇವಸ್ಥಾನಗಳಿವೆ. ಉತ್ತರ ಕರ್ನಾಟಕ ಹಾಗು ದಕ್ಷಿಣ ಕರ್ನಾಟಕಗಳ ಅದ್ಭುತ ಮಿಶ್ರಣವಾದ ವೇಸರ ಶೈಲಿಯಲ್ಲಿ ರಚಿತವಾದ ಕಾಶಿ ವಿಶ್ವೇಶ್ವರ ದೇವಸ್ಥಾನವು ಇಲ್ಲಿಯ ಅತ್ಯಂತ ಖ್ಯಾತ ಪ್ರಾಚೀನ ದೇವಸ್ಥಾನ. ಕ್ರಿ.ಶ.೧೧-೧೨ ನೆಯ ಶತಮಾನದಲ್ಲಿ ಇಲ್ಲಿ ನಾಣ್ಯ ಟಂಕಿಸುವ ಟಂಕಶಾಲೆ ಇದ್ದುದಾಗಿ ಶಾಸನಗಳು ಹೇಳುತ್ತವೆ.

"https://kn.wikipedia.org/w/index.php?title=ಲಕ್ಕುಂಡಿ&oldid=587888" ಇಂದ ಪಡೆಯಲ್ಪಟ್ಟಿದೆ