ವಿಷಯಕ್ಕೆ ಹೋಗು

ಖರೋಷ್ಠಿ ಲಿಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಖರೋಷ್ಠಿ ಲಿಪಿ[]ಯನ್ನು ಖರೋಷ್ಠ ಎಂಬುವನು ಬಳಕೆಗೆ ತಂದಿದ್ದಾನೆ ಎನ್ನಲಾಗಿದೆ. ಅರಾಮೇಯಿಕ್ ಭಾಷೆಯಲ್ಲಿನ 'ಖರೋಷ್ಠ' ಎಂಬ ಪದವು ಸಂಸ್ಕೃತದಲ್ಲೂ 'ಖರೋಷ್ಠಿ' ಎಂದಾಗಿದೆ ಎಂದು ಡಿರಿಂಜರ್ ಅಭಿಪ್ರಾಯ ಪಟ್ಟಿದ್ದಾರೆ. ಈ ಹೇಳಿಕೆಗಳನ್ನು ಗಮನಿಸಿದ ದಾಸಗುಪ್ತ ಎಂಬುವವರು, 'ಖರೋಷ್ಠಿ' ಎಂಬ ಪದವು ಇರಾನಿಯನ್ ಭಾಷೆಯ 'ಖರಪೂಸ್ತ' ಎಂಬ ಪದದಿಂದ ಬಂದಿದೆ. 'ಖರಪೂಸ್ತ' ಎಂದರೆ ಕತ್ತೆಯ ಚರ್ಮ ಎಂದರ್ಥ. ಪುಸ್ತಕ ಎಂಬ ಪದವು 'ಪೂಸ್ತ' ಎಂಬುದರಿಂದ ಬಂದಿರಬೇಕೆಂದು ಅಭಿಪ್ರಾಯ ಪಟ್ಟಿದ್ದಾರೆ.

ಇತಿವೃತ್ತ

[ಬದಲಾಯಿಸಿ]

ಖರೋಷ್ಠಿ ಲಿಪಿಯನ್ನು ಹಾಗೆ ಕರೆಯಲು ಕಾರಣಗಳೇನು? ಎಂಬುದಕ್ಕೆ ಉತ್ತರ ಹುಡುಕುವುದು ಬಹಳ ಕಷ್ಟ. ಮೊದಲಿಗೆ ಇದು ಮ್ಲೇಚ್ಛರ ಲಿಪಿಯಾಗಿತ್ತು. ಇದನ್ನು ಕತ್ತೆಯ ಚರ್ಮದ ಮೇಲೆ ಬರೆಯುತ್ತಿದ್ದರು. ಇದು ಅಂಕುಡೊಂಕಾದ ಬರವಣಿಗೆಯಾದ್ದರಿಂದ, ಭಾರತೀಯರು 'ಕತ್ತೆಯ ತುಟಿ'(ಖರ-ಓಷ್ಠ) ಎಂದು ಕುಚೋದ್ಯದಿಂದ ಕರೆದಿರಬಹುದೆಂದು ಹೇಳಲಾಗುತ್ತಿದೆ. ಅರಾಮೇಯಿಕ್ ಲಿಪಿಗೂ ಖರೋಷ್ಠಿ ಲಿಪಿಗೂ ಬಹಳ ಹೋಲಿಕೆಗಳಿವೆ. ಖರೋಷ್ಠಿಲಿಪಿ ಸು. ಪ್ರ.ಶ..ಪು. 5ನೆಯ ಶತಮಾನದಲ್ಲಿ ಉಗಮ ವಾಗಿರಬೇಕು. ಭಾರತದಲ್ಲಿ ಈ ಲಿಪಿ ಇನ್ನೆಲ್ಲಿಯೂ ಬಳಕೆಗೆ ಬರದೆ, ಕೇವಲ ವಾಯುವ್ಯಗಡಿಯಲ್ಲಿ ಮಾತ್ರ ಉಪಯೋಗದಲ್ಲಿತ್ತು. ಅಶೋಕನ ಶಾಬಾಸ್ಗರಿ ಮುಂತಾದಲ್ಲಿನ ಶಾಸನಗಳು ಖರೋಷ್ಠಿ ಲಿಪಿಯಲ್ಲಿವೆ. ಮತ್ತೊಂದು ಹೇಳಿಕೆಯ ಪ್ರಕಾರ ಅರಾಮೇಯಿಕ್ ಲಿಪಿಗೂ ಖರೋಷ್ಠಿ ಲಿಪಿಗೂ ತುಂಬ ಹತ್ತಿರದ ಹೋಲಿಕೆ ಇರುವುದರಿಂದ, ಈ ಭಾಷೆ ಅರಾಮೇಯಿಕ್ ಲಿಪಿಯಿಂದ ಉಗಮಗೊಂಡಿರಬಹುದೆಂದು ಹೇಳಲಾಗಿದೆ. ಈ ಎರಡು ಲಿಪಿಗಳು ಬಲಭಾಗದಿಂದ ಎಡಭಾಗಕ್ಕೆ ಬರೆಯಲ್ಪಡುತ್ತಿದ್ದವು[]. ಆಧುನಿಕ ಖರೋಷ್ಠಿ ಲಿಪಿಯನ್ನು ಎಡಭಾಗದಿಂದ ಬಲಭಾಗದಲ್ಲಿ ಬರೆಯಲಾಗುತ್ತಿದೆ. ಖರೋಷ್ಠಿ ಲಿಪಿಯ ಶಾಸನಗಳನ್ನು ಮೊದಲಿಗೆ ಓದಿದ ಪಾಶ್ಚಾತ್ಯ ವಿದ್ವಾಂಸ ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್.

ಉಲ್ಲೇಖಗಳು

[ಬದಲಾಯಿಸಿ]
  1. http://kn.vikaspedia.in/education/child-rights/c85c95ccdcb7cb0ca4cc6
  2. http://indianhistorypr.blogspot.in/2011_03_01_archive.html