ಜೂರಾ ಶಾಸನ

ವಿಕಿಪೀಡಿಯ ಇಂದ
Jump to navigation Jump to search

ಜೂರಾ ಶಾಸನ ಮಧ್ಯ ಪ್ರದೇಶದ ಜಬ್ಬಲ್‍ಪುರ ಗ್ರಾಮದಲ್ಲಿ ದೊರೆತ ಕನ್ನಡ ಶಾಸನವಾಗಿದೆ. ಇದರ ಕಾಲ ಸುಮಾರು ೯೪೭. ರಾಷ್ಟ್ರಕೂಟ ಮೂರನೆ ಕೃಷ್ಣನು ಪರಾಂಗನ ಪುತ್ರತ್ವ ಮತ್ತು ಶೌರ್ಯವನ್ನು ಕೊಂಡಾಡಿರುವ ಶಾಸನವಿದು. ಉಬ್ಬಿಕಾಮೈಸೆಟ್ಟಿಯ ತಮ್ಮ ತುಯ್ಯಲ ಚನ್ದಯ್ಯನು ಈ ಪ್ರಶಸ್ತಿ ಶಾಸನವನ್ನು ಬರೆಸಿದನೆಂದು, ಏಚಿಮಯ್ಯ ಎಂಬುವವನು ಬರೆದಿದ್ದಾನೆಂದು ತಿಳಿದು ಬರುತ್ತದೆ.

ಇತಿವೃತ್ತ[ಬದಲಾಯಿಸಿ]

ಉತ್ತರ ಭಾರತದ ದಿಗ್ವಿಜಯ ಸಂದರ್ಭದಲ್ಲಿ ಬರೆದ ಈ ಶಾಸನ ರಾಷ್ಟ್ರಕೂಟ ಮೂರನೆ ಕೃಷ್ಣನ ವಿಜಯಸ್ತಂಭದಂತಿದೆ. ಹೊರನಾಡಿನಲ್ಲಿ ದೊರೆತಿರುವ ಅಪೂರ್ವ ಕನ್ನಡ ಶಾಸನವೆಂಬ ಮಹತ್ವ್ತ ಇದಕ್ಕಿದೆ. ರಾಷ್ಟ್ರಕೂಟರ ಕಾಲದ ಜನರು ನಂಬಿ ಎತ್ತಿಡಿದ ಜೀವನಮೌಲ್ಯಗಳಲ್ಲಿ ಪರನಾರಿ ಸೋದರತ್ವವೂ ಒಂದು. ಕನ್ನರದೇವನಂತಹ ಪರಾಂಗನ ಪುತ್ರರನ್ನು ಗುರ್ತಿಸಿದ ಶಾಸನಕವಿ, ಸಹಜವಾಗಿ ಈ ಬಗ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದಾನೆ.

ಜೂರಾ ಶಾಸನ ತಾತ್ಪರ್ಯ[ಬದಲಾಯಿಸಿ]

ಸೋಲದೆ ಪರವನಿತೆಗೆ ಕಣ್
ಸೋಲದು ಮೊಲೆವಾಲನೂಡಿ ನಡಪಿದ ತಾಯಿಂ
ಮೇಲೆನೆ ಬಗೆಗುಂ ನೋಡಿರೆ
ಸೋಲದು ಚಿತ್ತಂ ಪರಾಂಗನಾಪುತ್ರಕನಾ

ಅವನು ಪರಸ್ತ್ರೀಗೆ ಸೋಲುವವನಲ್ಲ. ಅವರನ್ನು ನೋಡಿದರೆ ಮೊಲೆಹಾಲನ್ನು ಕುಡಿಸಿ ಬದುಕು ನೀಡಿದ ತಾಯಿಗಿಂತ ಹೆಚ್ಚಾಗಿ ಗೌರವಿಸುತ್ತಿದ್ದ. ಎಂತಹ ಪರಿಸ್ಥಿತಿಯಲ್ಲೂ ಪರಸ್ತ್ರೀಗೆ ಆತನ ಚಿತ್ತ ಸೋತುದ್ದಿಲ್ಲವಂತೆ! ಇನ್ನೊಂದು ಪದ್ಯದಲ್ಲಿ -

ನೋಡಿರೆ ಪರವಧುಗೆ ಮನಂ
ಕೂಡದು ಸೂೞ್ಸೂೞೊಳೆತ್ತಿ ನಡಪಿದ ತೋಳು
ಣ್ಡಾಡಿದ ಮೊಲೆ ಬಸಿಱೊಳಗಿ
ೞ್ದಾಡಿದ ಚಿತ್ತಂ ಪರಾಂಗನಾಪುತ್ರಕನಾ

ಶಾಸನದ ಪೂರ್ಣಪಾಠ[ಬದಲಾಯಿಸಿ]

ಸ್ವಸ್ತಿ|| ಪರಮಭಟ್ಟಾರ
ಕ ಪರಮೇಶ್ವರ ಶ್ರೀ ಪ್ರಿ
ಥ್ವೀವಲ್ಲಭ ಮಹಾರಾಜಾಧಿ
ರಾಜನೆಲ್ಲರ ಮರುಳನಾ
ನೆವೆಡೆಂಗಂ ಚಲಕೆನಲ್ಲಾ
ತಂ ವೈರಿವಿಳಾಸಂ ಮದಗ
ಜಮಲ್ಲಂ ಪರಾಂಗನಾಪು
ತ್ರಂ ಗಣ್ಡಮಾರ್ತ್ತಣ್ಡನ್ ಅಕಾಳವ
ರಿಷಂ ನೃಪತುಂಗಂ ಕಚ್ಚೆಗಂ ಶ್ರೀ
ಮತ್ಕನ್ನರದೇವಂ ||ಕನ್ದ||
. . . . . . ವನಿತೆಯರ್ಕ್ಕ
. . . . . . ಗಳುಂ ಬಮ
. . . . . . ಕಣ್ಡುಂ ನೋಡ
ದು ಕಣ್ಣುಡಿಯದು ಬಾಯ್ಕೂ
ಡದು ಚಿತ್ತಂ ಪರಾಂಗನಾ
ಪುತ್ರಕನ ||೧||
ಭಾರತದೊಳಿಱದನಿ ನ್ದ್ರನೊಳೋರಾ
ಸನ ಜಾಣನೆನಿಪ ಪಾ
ಣ್ಡ್ಯನ ಕುಲಮಂ ಬೇರಿನ್ದೆ
ಕಿೞ್ತ ಚೋೞನ ಬೇರಂ
ಬೇರಿನ್ದ ಕಿೞ್ತನಾನೆವೆಡಙ್ಗಂ ||೨||
ಸೋಲದೆ ಪರವ
ನಿತೆಗೆ ಕಣ್ಸೋಲದು ಮೊ
ಲೆವಾಲನೂಡಿ ನಡಪಿದ
ತಾಯಿಂ ಮೇಲೆನೆ ಬಗೆಗುಂ
ನೋಡಿರೆ ಸೋಲದು ಚಿತ್ತಂ
ಪರಾಂಗನಾಪುತ್ರಕನ ||೩||
ನೋಡಿರೆ ಪರವಧುಗೆ
ಮನಂ ಕೂಡದು ಸೂೞ್ಸೂ
ೞೊಳೆತ್ತಿ ನಡಪಿದ
ತೋಳುಣ್ಡಾಡಿದ ಮೊಲೆ ಬ
ಸಿಱೊಳಗಿೞಡಿದ ಚಿತ್ತಂ
ಪರಾಂಗನಾ ಪುತ್ರಕನ ||೪||
ಸ್ವಸ್ತಿ || ಉಬ್ಬಿಕಾಮೈಸೆಟ್ಟಿಯ
ತಮ್ಮಂ ತುಯ್ಯಲ ಚನ್ದ
ಯ್ಯಂ ಪ್ರಸಸ್ತಿಯಂ ಬರೆಯಿಸಿ
೩೭ ದಂ|| ಬರೆದನೆ ಚಿಮ್ಮಯ್ಯಂ ||