ತಮ್ಮಟ ಕಲ್ಲು ಶಾಸನ

ವಿಕಿಪೀಡಿಯ ಇಂದ
Jump to navigation Jump to search

ತಮ್ಮಟಕಲ್ಲು ಶಾಸನ ಚಿತ್ರದುರ್ಗ ತಾಲ್ಲೋಕು 'ತಮ್ಮಟಕಲ್ಲು' ಎಂಬ ಹಳ್ಳಿಯಲ್ಲಿ ದೊರೆತಿದೆ. ಗುಣಮಧುರಾಂಕನನ್ನು ಹೊಗಳಿ ಬರೆದ ಶಾಸನವಿದು. ಇವನು ರತ್ನದಂತೆ ತೇಜಸ್ಸುಳ್ಳವನು. ಯುದ್ದಭೂಮಿಯಲ್ಲಿ ರಣ ಉತ್ಸಾಹಿ. ಇವನು ಅನಂತ ಗುಣನು, ಪುರುಷಶ್ರೇಷ್ಠನು.[೧]

ಶಾಸನದ ಇತಿವೃತ್ತ[ಬದಲಾಯಿಸಿ]

ಬಿನಮಣಿಅನ್ತುಭೋಗಿಬಿಣದುಳ್ಮಣಿಲ್ಮನದೋನ್
ರಣಮುಖದುಳ್ಳಕೋಲಂನೆರಿಯರ್ಕುಮನಿನ್ದ್ಯಗುಣನ್
ಪ್ರಣಯಿಜನಕ್ಕೆ ಕಾಮನರಸಿ ತೋತ್ಪಲವರ್ಣ್ಣನವನ್
ಗುಣಮಧುರಾಂಕೃದಿವುಪುರುಷನ್ಪುರುಷಪ್ರವರನ್||

ಗುಣಮಧುರಾಂಕ ಎಂಬುವವನು ರತ್ನದಂತೆ ತೇಜಸ್ವಿಯಾಗಿದ್ದಾನೆ. ಇವನು ರಣರಂಗದಲ್ಲಿ ಬಿಲ್ಲು ಹಿಡಿದು ನಿಂತನೆಂದರೆ ಯಾರೂ ತಡೆಯಲಾಗದು. ಇವನು ಅನಂತ ಗುಣವಂತನಾಗಿಯೂ, ಪ್ರಣಯಿಜನಕ್ಕೆ ಕಾಮನ ಬಿಳಿಯ ತಾವರೆಯ ಬಾಣದಂತಹವನೂ, ಪುರುಷ ಶ್ರೇಷ್ಠನೂ ಆದ ಇವನೂ ಪುರುಷರಲ್ಲೆ ಉತ್ಕೃಷ್ಠನಾದವನಾಗಿದ್ದಾನೆ ಎಂದು ಗುಣಮಧುರಾಂಕನನ್ನು ಹೊಗಳಲಾಗಿದೆ. ಈ ಸಾಸನ ಭಾಷಾದೃಷ್ಟಿಯಿಂದ ಬಹಳ ಮುಖ್ಯವಾದುದು.

ಉಲ್ಲೇಖ[ಬದಲಾಯಿಸಿ]

<referebces />

  1. http://karnatakaitihasaacademy.org/karnataka-epigraphy/types-of-inscriptions/hero-stones/