ಅತ್ತಿಮಬ್ಬೆಯ ಲಕ್ಕುಂಡಿ ಶಾಸನ

ವಿಕಿಪೀಡಿಯ ಇಂದ
Jump to navigation Jump to search

ಅತ್ತಿಮಬ್ಬೆಯ ಲಕ್ಕುಂಡಿ ಶಾಸನ ಗದಗ ಜಿಲ್ಲೆಲಕ್ಕಂಡಿ[೧] ಗ್ರಾಮದ ಜೈನಬಸದಿಯ ಹತ್ತಿರ ನೆಟ್ಟಿರುವ ಕಲ್ಲಿನಲ್ಲಿ ಬರೆಯಲ್ಪಟ್ಟಿದೆ. ಅತ್ತಿಮಬ್ಬೆಯ ಆಧ್ಯಾತ್ಮಿಕ ಬದುಕಿನ ಇಡೀ ಚಿತ್ರಣವು ಲಕ್ಕುಂಡಿ ಶಾಸನದಲ್ಲಿ ದೊರೆಯುತ್ತದೆ. ತನ್ನ ಗಂಡ ಮೃತ್ಯುವಶನಾದಾಗ ತನ್ನ ತಂಗಿಯೂ, ಸವತಿಯೂ ಆಗಿದ್ದ ಗುಂಡಬ್ಬೆ ಸತಿಯಾದಾಗ, ಪುತ್ರ ಅಣ್ಣಿಗ ದೇವನಿಗಾಗಿ ಸಾಯದೆ ಉಳಿದ ಅತ್ತಿಮಬ್ಬೆ, ಜೈನ ಧರ್ಮಾವಲಂಬಿಯಾಗಿ ಉಗ್ರ ದೀಕ್ಷೆ ವಹಿಸಿದ ತಪಸ್ವಿನಿ. ಅವಳು ಜೈನ ಧರ್ಮಕ್ಕೆ ಮಾಡಿದ ಸೇವೆ ಸ್ತುತ್ಯರ್ಹವಾದುದು. ಇದು ಸುಮಾರು ಕ್ರಿ.ಶ.1175-1184 ಕಾಲದ್ದು ಎಂದು ಗುರುತಿಸಲಾಗಿದೆ.[೨]

ಇತಿವೃತ್ತ[ಬದಲಾಯಿಸಿ]

ಶಾಸನ ವೈಶಿಷ್ಟ್ಯ[ಬದಲಾಯಿಸಿ]

  • ಅತ್ತಿಮಬ್ಬೆ ಮಹಾಕವಿ ರನ್ನನ ಆಶ್ರಯದಾತೆ. ಈಕೆ ಪೊನ್ನ ಕವಿಯ 'ಶಾಂತಿನಾಥ ಪುರಾಣ'ದ ಸಹಸ್ರ ಪ್ರತಿಗಳನ್ನು ಮಾಡಿಸಿ ಸಾಮಾನ್ಯ ಜನರಿಗೆ ಉಚಿತವಾಗಿ ದಾನ ನೀಡಿದಳೆಂದು ತಿಳಿದು ಬರುತ್ತದೆ. ಅಲ್ಲದೆ ರನ್ನನಿಂದ 'ಅಜಿತನಾಥ ಪುರಾಣವನ್ನು ಬರೆಸಿದಳೆಂಬುದು ಈ ಶಾಸನದಿಂದ ತಿಳಿದು ಬರುತ್ತದೆ. ಅವಳು ರನ್ನನಿಂದ ಅಜಿತ ಪುರಾಣ ಪ್ರವಚನ ಮಾಡಿಸಿದಳು. ಮಣಿಕನಕ ಅಲಂಕೃತ ಸಾವಿರದ ಐನೂರು ಜಿನಪ್ರತಿಗಳನ್ನು ಮಾಡಿಸಿ ದಾನ ಮಾಡಿದಳು.
  • ಪೊನ್ನನ ಶಾಂತಿಪುರಾಣದ ಸಾವಿರ ಪ್ರತಿಗಳನ್ನು ಸಿದ್ಧಪಡಿಸಿ ಹಂಚಿ ಶಾಸ್ತ್ರ ದಾನ ಮಾಡಿದಳು. ಲಕ್ಕುಂಡಿಯಲ್ಲಿ ಒಂದು ಸುಂದರವಾದ ಬಸದಿಯನ್ನು ಮಾಡಿಸಿದಳು. ಅವಳ ತಪಸ್ಸು, ಕಠೋರ ನಿಯಮಾನುಸರಣೆ, ತ್ಯಾಗ, ಔದಾರ್ಯವನ್ನು ಶಾಸನಗಳು ಕೊಂಡಾಡಿವೆ ಹಾಗೂ ಅವಳ ಅನೇಕ ಪವಾಡಗಳನ್ನು ವಿವರಿಸಿವೆ.
  • ಲಕ್ಕುಂಡಿಯನ್ನು 'ಶಾಸನಗಳ ಊರು' ಎಂದರೆ ಬಹುಶಃ ತಪ್ಪಾಗಲಾರದು. ಇಲ್ಲಿ 11-12ನೇ ಶತಮಾನಕ್ಕೆ ಸೇರಿದ ದೇಗುಲಗಳು ಹಾಗೂ ಶಾಸನಗಳು ನಾಡಿನ ಗತ ವೈಭವದ ಮೇಲೆ ಬೆಳಕು ಚೆಲ್ಲುತ್ತವೆ. ಲಕ್ಕುಂಡಿ ಗ್ರಾಮಕ್ಕೆ ಸಂಬಂಧಿಸಿದ ಈ ಶಾಸನವನ್ನು 15-20 ವರ್ಷಗಳ ಹಿಂದೆ ಇಲ್ಲಿ ತಂದು ಇಡಲಾಗಿದೆ ಎಂಬುದು ಸ್ಥಳೀಯರ ಹೇಳಿಕೆ.
  • ಈ ಶಾಸನಗಳಲ್ಲಿ ಬ್ರಹ್ಮನು ಅಮರಾವತಿ ಮತ್ತು ಲಕ್ಕುಂಡಿಯಲ್ಲಿ ಯಾವುದು ಶ್ರೇಷ್ಠ ಎಂದು ಪರೀಕ್ಷಿಸಿದಾಗ, ಅಮರಾವತಿ ಹಗುರವಾಗಿದ್ದು, ಮೇಲೆ ಹಾರಿ ಹೋಯಿತಂತೆ. ಭಾರವಾಗಿದ್ದ ಲಕ್ಕುಂಡಿಯು ಭೂಮಿಯ ಮೇಲೆ ಉಳಿಯಿತಂತೆ! ಅಮರಾವತಿಗಿಂತ ಲಕ್ಕುಂಡಿ ಹೆಚ್ಚು ತೂಕವುಳ್ಳದ್ದು ಹಾಗೂ ಶ್ರೇಷ್ಠವಾದದ್ದು ಎಂಬುದು ಶಾಸನದ ಸಾರ.

ಉಲ್ಲೇಖಗಳು[ಬದಲಾಯಿಸಿ]

  1. http://www.kannadaprabha.com/districts/dharwad/ಗದಗ-3-ಶಾಸನಗಳು-ಪತ್/224572.html
  2. http://asi.nic.in/pdf_data/7.pdf