ರಕ್ತ ದಾನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಓರ್ವ ಪುರುಷ ರಕ್ತದಾನ ಮಾಡುತ್ತಿರುವುದು.

ಒಬ್ಬ ವ್ಯಕ್ತಿ ಸ್ವಯಿಚ್ಛೆಯಿಂದ ರಕ್ತ ನೀಡಲು ಬಂದಾಗ ರಕ್ತದಾನ ಪ್ರಕ್ರಿಯೆ ನಡೆಯುವುದು. ಅಂತಹ ರಕ್ತವನ್ನು ರಕ್ತವರ್ಗಾವಣೆಗಳಿಗೆ ಬಳಸಲಾಗುತ್ತದೆ ಅಥವಾ ವಿಭಾಗೀಕರಣ ಎನ್ನುವ ಪ್ರಕ್ರಿಯೆಯ ಮೂಲಕ ಔಷಧಿ ತಯಾರಿಕೆಗಾಗಿ ಬಳಸಲಾಗುತ್ತದೆ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಹುತೇಕ ರಕ್ತದಾನಿಗಳು ಹಣವನ್ನು ತೆಗೆದುಕೊಳ್ಳದೆ ಸ್ವ ಇಚ್ಛೆಯಿಂದ ಸಮೂಹ ಪೂರೈಕೆಗೆಂದು ರಕ್ತದಾನ ಮಾಡುತ್ತಾರೆ. ಬಡ ರಾಷ್ಟ್ರಗಳಲ್ಲಿ ವ್ಯವಸ್ಥಿತ ರಕ್ತಪೂರೈಕೆಯು ಬಹಳ ಕಡಿಮೆ ಮತ್ತು ರಕ್ತದಾನಿಗಳು ತಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ರಕ್ತವರ್ಗಾವಣೆಯ ಅಗತ್ಯ ಇದ್ದಾಗ ಮಾತ್ರ ರಕ್ತದಾನ ಮಾಡುತ್ತಾರೆ. ಬಹುತೇಕರು ದಾನವಾಗಿ ನೀಡುತ್ತಾರೆ ಆದರೂ ಕೆಲವರು ಹಣಕ್ಕಾಗಿ ಮತ್ತು ಕೆಲವು ಸಂದರ್ಭಗಳಲ್ಲಿ ಸಂಬಳ ಸಹಿತ ರಜೆಯಂತಹಾ ಸವಲತ್ತಿಗೋಸ್ಕರ ಮಾಡುತ್ತಾರೆ. ರಕ್ತದಾನಿಗಳು ತಮ್ಮದೇ ಭವಿಷ್ಯದ ಅಗತ್ಯಕ್ಕಾಗಿಯೂ ತೆಗೆದಿರಿಸಬಹುದು. ರಕ್ತದಾನ ಮಾಡುವುದು ಸುರಕ್ಷಿತವಾದರೂ, ಸೂಜಿ ಚುಚ್ಚುವಾಗ ಅಥವಾ ಆಯಾಸವಾದಾಗ ಕೆಲವರಿಗೆ ನೋವಾಗುವ ಅನುಭವವಾಗಬಹುದು.

ಸಂಭಾವ್ಯ ರಕ್ತ ದಾನಿಗಳು ತಮ್ಮ ರಕ್ತವು ದಾನಮಾಡಲು ಅರ್ಹವಾಗದಿರಬಹುದಾದ ಸಾಧ್ಯತೆ ಇದೆಯೇ ಎಂಬ ಪರೀಕ್ಷೆಗೊಳಪಡುತ್ತಾರೆ. ಈ ಪರೀಕ್ಷೆಗಳಲ್ಲಿ ರಕ್ತ ವರ್ಗಾವಣೆಯಿಂದ ಹರಡಬಹುದಾದ HIV ಮತ್ತು ವೈರಸ್‌ ಪೂರಿತ ಹೆಪಟೈಟಿಸ್‌ನಂತಹಾ ರೋಗಗಳ ಸಾಧ್ಯತೆಯ ಪರೀಕ್ಷೆಯೂ ಇರುತ್ತದೆ. ರಕ್ತದಾನ ಸಂದರ್ಭದಲ್ಲಿ ದಾನಿಗಳಲ್ಲಿ ಅವರ ಆರೋಗ್ಯದ ಇತಿಹಾಸದ ಬಗ್ಗೆ ವಿಚಾರಿಸಲಾಗುವುದು ಮತ್ತು ರಕ್ತ ಕೊಡಲು ಆಕೆ ಅಥವಾ ಆತ ಆರೋಗ್ಯವಂತರೇ ಹಾಗೂ ರಕ್ತದಾನದಿಂದ ಅವರಿಗೆ ತೊಂದರೆಯಾಗುವುದೊ ಇಲ್ಲವೊ ಎಂಬುವುದನ್ನು ತಿಳಿಯಲು ಅವರ ದೈಹಿಕ ಪರೀಕ್ಷೆ ನಡೆಸಲಾಗುವುದು. ಆತ ಅಥವಾ ಆಕೆ ಏನನ್ನು ದಾನ ಮಾಡುತ್ತಾರೆ ಎಂಬುದರ ಮೇಲೆ ಮತ್ತು ದಾನ ನಡೆಯುವ ದೇಶದ ನೀತಿ ನಿಯಮಾವಳಿಗಳ ಮೇಲೆ ದಾನಗಳ ನಡುವಿನ ಅವಧಿಯು ತಿಂಗಳುಗಳು ಮತ್ತು ದಿನಗಳ ಮಟ್ಟಿಗೆ ವ್ಯತ್ಯಾಸವಾಗಬಹುದು. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್‌‌ನಲ್ಲಿ ದಾನಿಯು ಒಂದು ಬಾರಿ ರಕ್ತದಾನ ಮಾಡಿದರೆ ಎಂಟುವಾರಗಳ (56 ದಿನಗಳು) ನಂತರ ಮತ್ತೊಮ್ಮೆ ಸಂಪೂರ್ಣ ರಕ್ತದಾನ ಮಾಡಲು ಅರ್ಹ ಆದರೆ ರಕ್ತದಕಿರುಬಿಲ್ಲೆ ದಾನಗಳಿಗೆ ಮೂರು ದಿನಗಳ ಸಡಿಲಿಕೆ ಸಾಕಾಗುತ್ತದೆ.[೧]

ಪಡೆದುಕೊಳ್ಳುವ ರಕ್ತದ ಪ್ರಮಾಣ ಹಾಗೂ ವಿಧಾನಗಳು ಬದಲಾವಣೆಗಳಾಗಬಹುದು, ಆದರೆ ಒಬ್ಬ ವ್ಯಕ್ತಿ 450 ಮಿಲಿಲೀಟರ್‌ಗಳಷ್ಟು (ಅಥವಾ ಒಂದು US ಪಿಂಟ್) ಸಂಪೂರ್ಣ ರಕ್ತವನ್ನು ತಮ್ಮ ರಕ್ತದಿಂದ ನೀಡಬಹುದು. ರಕ್ತ ಸಂಗ್ರಹಣೆಯನ್ನು ಸಾಮಾನ್ಯ ರೂಢಿಯಂತೆ ಅಥವಾ ಸ್ವಯಂಚಾಲಿತ ರಕ್ತಸಂಗ್ರಹಣ ಯಂತ್ರದಿಂದಲೂ ರಕ್ತದ ನಿಗದಿತ ಭಾಗಗಳನ್ನು ಮಾತ್ರ ಸಂಗ್ರಹಿಸಬಹುದು. ರಕ್ತವರ್ಗಾವಣೆ ನಡೆಸಲು ಬಳಸಲಾಗುವ ರಕ್ತದ ಬಹುತೇಕ ಘಟಕಗಳ ಶೇಖರಣಾ ಅವಧಿ ಅತಿ ಕಡಿಮೆ ಅವುಗಳ ನಿರಂತರ ಪೂರೈಕೆಯನ್ನು ಮಾಡುವುದು ಚಿರಸ್ಥಾಯಿ ಸಮಸ್ಯೆಯಾಗಿದೆ.

ರಕ್ತದಾನದ ವಿಧಗಳು[ಬದಲಾಯಿಸಿ]

ರಕ್ತ ಸಂಗ್ರಹಣಾ ಬಸ್‌ (ಬ್ಲಡ್‌ಮೊಬೈಲ್‌) ಬಾಸ್ಟನ್‌ನಲ್ಲಿನ ಚಿಲ್ಡ್ರನ್ಸ್‌ ಹಾಸ್ಪಿಟಲ್‌ನಿಂದ ಮೆಸಾಚುಸೆಟ್ಸ್‌ನಲ್ಲಿನ ತಯಾರಿಕಾ ಘಟಕಕ್ಕೆ ಹೋಗುತ್ತಿರುವುದು. ರಕ್ತನಿಧಿಗಳು ಕೆಲವೊಮ್ಮೆ ಮಾರ್ಪಡಿಸಿದ ಬಸ್‌ ಅಥವಾ ಇತರೆ ದೊಡ್ಡ ವಾಹನಗಳನ್ನು ರಕ್ತದಾನಕ್ಕೆ ಸಂಚಾರಿ ಸೌಲಭ್ಯ ನೀಡಲು ಬಳಸುತ್ತವೆ.

ಸಂಗ್ರಹಿಸಿದ ರಕ್ತವನ್ನು ಯಾರು ಪಡೆಯುತ್ತಾರೆ ಎಂಬುದರ ಆಧಾರದ ಮೇರೆಗೆ ರಕ್ತದಾನಗಳನ್ನು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.[೨] ಅಲೋಜೆನಿಕ್ (ಸದೃಶ ಎಂದೂ ಕರೆಯಲಾಗುತ್ತದೆ) ರಕ್ತದಾನ ಎಂದರೆ ಒಬ್ಬ ದಾನಿಯು ರಕ್ತವನ್ನು ರಕ್ತಸಂರಕ್ಷಣಾಕೇಂದ್ರಕ್ಕೆ ನೀಡುವುದು ಮತ್ತು ಆ ರಕ್ತವನ್ನು ಅಪರಿಚಿತರಿಗೆ ರಕ್ತವರ್ಗಾವಣೆ ಮಾಡಲು ಬಳಸುವುದು. ನಿರ್ದೇಶಿತ ರಕ್ತದಾನ ಎಂದರೆ ಒಬ್ಬ ವ್ಯಕ್ತಿಯು ತನ್ನ ಕುಟುಂಬದ ಇನ್ನೊಬ್ಬ ವ್ಯಕ್ತಿಗೆ ರಕ್ತ ವರ್ಗಾವಣೆ ಮಾಡುವುದಕ್ಕೆಂದು ದಾನ ಮಾಡುವುದು.[೩] ನಿರ್ದೇಶಿತ ರಕ್ತದಾನಗಳು ತುಲನಾತ್ಮಕವಾಗಿ ಕಡಿಮೆ.[೪] ಬದಲಿ ದಾನಿ ರಕ್ತದಾನ ಎಂಬುದು ಮೇಲಿನೆರಡರ ಮಿಶ್ರವಿಧಾನ ಹಾಗೂ ಇದು ಘಾನಾದಂತಹಾ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬಹುಸಾಮಾನ್ಯ.[೫] ಈ ರೀತಿಯ ರಕ್ತದಾನದಲ್ಲಿ ಸ್ವೀಕೃತ ವ್ಯಕ್ತಿಯ ಕುಟುಂಬದ ಸದಸ್ಯರು ಅಥವಾ ಸ್ನೇಹಿತರು ರಕ್ತವರ್ಗಾವಣೆಯಲ್ಲಿ ಬಳಕೆಯಾದ ಸಂಗ್ರಹಿಸಿಟ್ಟ ರಕ್ತದ ಬದಲಿಗೆ ರಕ್ತದ ಪೂರೈಕೆ ನಿರಂತರವಾಗುವ ಹಾಗೆ ರಕ್ತ ನೀಡುತ್ತಾರೆ. ಸ್ವೀಕರಿಸುವ ವ್ಯಕ್ತಿ ಮೊದಲೇ ರಕ್ತ ಸಂರಕ್ಷಿಸಿ, ಕೆಲಕಾಲಾನಂತರ, ಸಾಧಾರಣವಾಗಿ ಶಸ್ತ್ರಚಿಕಿತ್ಸೆಯ ನಂತರ ಅವರಿಗೆ ಮರುವರ್ಗಾವಣೆ ಮಾಡುವುದಕ್ಕೆ ಸ್ವಯಂಪೂರಣ ದಾನವೆನ್ನುತ್ತಾರೆ.[೬] ಔಷಧಿಗಳನ್ನು ಉತ್ಪಾದಿಸಲು ಬಳಸುವ ರಕ್ತವನ್ನು ಅಲೋಜೆನಿಕ್‌ ರಕ್ತದಾನಗಳು ಅಥವಾ ಉತ್ಪಾದನೆಗೆಂದೇ ಉದ್ದೇಶಿತವಾದ ರಕ್ತದಾನಗಳ ಮೂಲಕ ಪಡೆಯಲಾಗುತ್ತದೆ.[೭]

ರಕ್ತದಾನ ಪ್ರಕ್ರಿಯೆಯು ಆಯಾ ರಾಷ್ಟ್ರದ ನಿಯಮದ ಪ್ರಕಾರ ವ್ಯತ್ಯಾಸಗೊಳ್ಳುತ್ತದೆ ಹಾಗೂ ದಾನಿಗಳು ಪಾಲಿಸಬೇಕಾದ ಶಿಫಾರಸುಗಳು ರಕ್ತ ಸಂಗ್ರಹಣ ಘಟಕಗಳ ಅವಶ್ಯಕತೆಯಂತೆ ಬದಲಾಗುತ್ತದೆ.[೮][೯][೧೦] ವಿಶ್ವ ಅರೋಗ್ಯ ಸಂಸ್ಥೆಯು ರಕ್ತದಾನದ ಬಗ್ಗೆ ನಿಯಮಾವಳಿಗಳನ್ನು,[೧೧] ರೂಪಿಸಲು ಶಿಫಾರಸುಗಳನ್ನು ಮಾಡಿದೆ ಆದರೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಇವುಗಳಲ್ಲಿ ಹಲವನ್ನು ಪಾಲಿಸಲಾಗುತ್ತಿಲ್ಲ. ಉದಾಹರಣೆಗೆ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಶಿಫಾರಸು ಮಾಡಲಾದ ರಕ್ತ ತಪಾಸಣೆಗೆ ಬೇಕಾದ ಅಗತ್ಯವಿರುವ ಪ್ರಯೋಗಾಲಯ ಸೌಲಭ್ಯಗಳು, ತರಬೇತಿ ಹೊಂದಿದ ಸಿಬ್ಬಂದಿ ಹಾಗೂ ವಿಶೇಷ ಕಾರಕಗಳಲ್ಲಿ ಬಹಳಷ್ಟು ಲಭ್ಯವೇ ಇರುವುದಿಲ್ಲ ಅಥವಾ ದುಬಾರಿಯಾಗಿರುತ್ತವೆ.[೧೨]

ದಾನಿಗಳು ಬಂದು ರಕ್ತದಾನ ಮಾಡುವ ಶಿಬಿರಗಳನ್ನು ಕೆಲವು ವೇಳೆ ರಕ್ತದಾನ ಮೇಳ ಅಥವಾ ರಕ್ತದಾನ ಕೂಟ ಎಂದು ಕರೆಯಲಾಗುತ್ತದೆ. ಇವುಗಳು ರಕ್ತಸಂಗ್ರಹಣಾ ಕೇಂದ್ರದಲ್ಲಿ ನಡೆಯಬಹುದಾದರೂ, ಸಾಧಾರಣವಾಗಿ ಸಾಮಗ್ರಿಗಳ ಮಾರಾಟ ಮಳಿಗೆಯಲ್ಲಿ, ಕಛೇರಿಗಳಲ್ಲಿ , ಶಾಲೆಗಳಲ್ಲಿ ಅಥವಾ ದೇವಾಲಯಗಳಲ್ಲಿ ನಡೆಸಲಾಗುತ್ತದೆ.[೧೩]

ರೋಗ ತಪಾಸಣೆ[ಬದಲಾಯಿಸಿ]

ಸಾಧಾರಣವಾಗಿ ದಾನಿಗಳು ಈ ಪ್ರಕ್ರಿಯೆ ನಡೆಸಲು ಒಪ್ಪಿಗೆ ಸೂಚಿಸಬೇಕಾಗುತ್ತದೆ, ಇದರಿಂದಾಗಿ ಅಪ್ರಾಪ್ತರು ಪೋಷಕರ ಅನುಮತಿಯಿಲ್ಲದೆ ದಾನ ಮಾಡುವಂತಿಲ್ಲ.[೧೪] ಕೆಲವು ರಾಷ್ಟ್ರಗಳಲ್ಲಿ ರಕ್ತದಾನಿಯ ಮಾಹಿತಿಯನ್ನು ಅನಾಮಿಕತ್ವ ಸೂಚಿಸಲು ಹೆಸರಿನ ಬದಲಿಗೆ ದಾನಿಯ ರಕ್ತದೊಂದಿಗೆ ಪರಿಗಣಿಸಲಾಗುತ್ತದೆ. ಆದರೆ ಯುನೈಟೆಡ್ ಸ್ಟೇಟ್ಸ್‌ನಂತಹಾ ಇತರ ರಾಷ್ಟ್ರಗಳಲ್ಲಿ ರಕ್ತದಾನಿಗಳ ಹೆಸರನ್ನೂ ನಮೂದಿಸಿ ಅನರ್ಹ ದಾನಿಗಳನ್ನು ಪಟ್ಟಿ ಮಾಡಲಾಗುತ್ತದೆ.[೧೫] ಸಂಭಾವ್ಯ ದಾನಿಯು ಈ ನಿಯಮಗಳನ್ನು ಪಾಲಿಸದಿದ್ದಲ್ಲಿ ಅವರ ದಾನವನ್ನು ಮುಂದೂಡಲಾಗುತ್ತದೆ . ಈ ಪರಿಭಾಷೆಯನ್ನು ಏಕೆ ಬಳಸುತ್ತಾರೆಂದರೆ ಅನರ್ಹರಾಗಿರುವ ದಾನಿಗಳಲ್ಲಿ ಕೆಲವರು ಕೆಲಕಾಲದ ನಂತರ ಅರ್ಹತೆ ಹೊಂದಬಹುದು.

ದಾನಿಯ ವಂಶ ಅಥವಾ ಜನಾಂಗೀಯ ಮೂಲವು ಕೆಲವೊಮ್ಮೆ ಮುಖ್ಯವಾಗುತ್ತದೆ ಏಕೆಂದರೆ ಕೆಲ ರಕ್ತದ ವಿಧಗಳು, ವಿಶೇಷವಾಗಿ ಅಪರೂಪದವು, ನಿರ್ದಿಷ್ಟ ಜನಾಂಗಗಳಲ್ಲಿ ಸಾಧಾರಣವಾಗಿ ಲಭ್ಯವಿರುತ್ತವೆ.[೧೬] ಐತಿಹಾಸಿಕವಾಗಿ, ದಾನಿಗಳನ್ನು ವಂಶ, ಧರ್ಮ ಅಥವಾ ಜನಾಂಗದ ಮೇಲೆ ಆಧಾರಿತವಾಗಿ ವಿಂಗಡಣೆ ಅಥವಾ ಬೇರ್ಪಡಿಕೆಗಳು ನಡೆಯುತ್ತಿದ್ದವಾದರೂ, ಪ್ರಸ್ತುತ ಈ ವ್ಯವಸ್ಥೆ ಬಳಕೆಯಲ್ಲಿಲ್ಲ.[೧೭]

ರಕ್ತ ಪಡೆಯುವವರ ಸುರಕ್ಷತೆ[ಬದಲಾಯಿಸಿ]

ರಕ್ತಗ್ರಾಹಕರಿಗೆ ದಾನವು ಅಸುರಕ್ಷಿತವಾಗಬಾರದೆಂದು ದಾನಿಗಳನ್ನು ಅನೇಕ ರೀತಿಯ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಈ ನಿರ್ಬಂಧಗಳಲ್ಲಿ HIV ರೋಗದ ಅಪಾಯದಿಂದ ದೂರವಿರಲು ಸಲಿಂಗಕಾಮಿ ಪುರುಷರನ್ನು ರಕ್ತದಾನ ಮಾಡದಂತೆ ತಡೆಯುವಂತಹಾ ಕೆಲವು ವಿವಾದಾತ್ಮಕವಾಗಿವೆ.[೧೮] ರಕ್ತವನ್ನು ಸ್ವೀಕರಿಸುವವರು ತಾವೇ ಆದ ಕಾರಣದಿಂದ ಸ್ವಯಂಪೂರಣ ದಾನಿಗಳನ್ನು ಸುರಕ್ಷತಾ ಕಾರಣಕ್ಕೆಂದು ಪ್ರತಿಬಾರಿಯೂ ತಪಾಸಣೆ ಮಾಡಲಾಗುತ್ತದೆ ಎಂದೇನಿಲ್ಲ.[೧೯] ದಾನಿಗಳನ್ನು ಡುಟೆಸ್ಟರೈಡ್‌ನಂತಹ ಔಷಧಿಗಳನ್ನು ಬಳಸಿದ್ದೀರಾ ಎಂಬುದಾಗಿ ವಿಚಾರಿಸಲಾಗುತ್ತದೆ, ಏಕೆಂದರೆ ಅವು ರಕ್ತ ಪಡೆಯುವ ಗರ್ಭಿಣಿ ಮಹಿಳೆಗೆ ಅಪಾಯಕಾರಿಯಾಗಬಲ್ಲದಾಗಿರುತ್ತವೆ.[೨೦]

HIV, ಮಲೇರಿಯಾ, ಹಾಗೂ ವೈರಸ್‌ ಪೂರಿತ ಹೆಪಟೈಟಿಸ್‌ನಂತಹಾ ರಕ್ತ ವರ್ಗಾವಣೆಯಿಂದ ಹರಡಬಹುದಾದ ರೋಗಗಳ ಚಿಹ್ನೆಗಳು ಹಾಗೂ ಲಕ್ಷಣಗಳನ್ನು ದಾನಿಗಳು ಹೊಂದಿದ್ದಾರೆಯೇ ಎಂದು ಪರೀಕ್ಷಿಸಲಾಗುತ್ತದೆ. ತಪಾಸಣೆಗಳಲ್ಲಿ ಅನೇಕ ರೋಗಗಳಲ್ಲಿನ ಅಪಾಯಕಾರಿ ಅಂಶಗಳ ಸಾಧ್ಯತೆಯ ಬಗ್ಗೆ ಮಲೇರಿಯಾ ಅಥವಾ ಮತ್ತೊಂದು ರೂಪದ ಕ್ರ್ಯೂಟ್ಜ್‌ಫೆಲ್ಡ್‌ಟ್‌-ಜಾಕೊಬ್‌ ರೋಗದಂತಹಾ (vCJD) ರೋಗಪೀಡಿತ ರಾಷ್ಟ್ರಗಳಿಗೆ ಮಾಡಿದ ಪ್ರಯಾಣದಂತಹವೂ ಒಳಗೊಂಡಿರುತ್ತವೆ.[೨೧] ಈ ಅಪಾಯಗಳು ರಾಷ್ಟ್ರದಿಂದ ರಾಷ್ಟ್ರಕ್ಕೆ ವ್ಯತ್ಯಾಸಗೊಳ್ಳುತ್ತವೆ. ಉದಾಹರಣೆಗೆ, ಕ್ಯು/ಕ್ವಿಬೆಕ್‌ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ವಾಸವಿದ್ದ ದಾನಿಗಳನ್ನು vCJD,[೨೨] ಯ ಅಪಾಯ ನಿವಾರಣೆಗೆಂದು ನಿರಾಕರಿಸಿದರೆ ಯುನೈಟೆಡ್‌ ಕಿಂಗ್‌ಡಮ್‌ನಲ್ಲಿನ ದಾನಿಗಳು ತಾವು ಯುನೈಟೆಡ್‌ ಕಿಂಗ್‌ಡಮ್‌ನಲ್ಲಿಯೇ ರಕ್ತ ವರ್ಗಾವಣೆ ನಡೆಸುವುದಾದರೆ ಮಾತ್ರ vCJD ತಪಾಸಣೆಗೆ ಒಳಪಡಬೇಕಾಗುತ್ತದೆ.[೨೩]

ದಾನಿಗಳ ಸುರಕ್ಷತೆ[ಬದಲಾಯಿಸಿ]

ದಾನಿಗಳನ್ನು ತಪಾಸಣೆ ಮಾಡಲಾಗುವುದಲ್ಲದೇ ರಕ್ತದಾನ ಮಾಡುವಾಗ ಇದರಿಂದ ನಿಮ್ಮ ಆರೋಗ್ಯಕ್ಕೆ ಅಪಾಯ ಇದೆಯೇ ಎಂದು ಅವರ ಆರೋಗ್ಯ ಇತಿಹಾಸದ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಲಾಗುತ್ತದೆ. ದಾನಿಯ ಹಿಮಟೋಕ್ರಿಟ್ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಪರೀಕ್ಷಿಸಿ ರಕ್ತದಾನ ಮಾಡುವುದರಿಂದ ಅವರು ರಕ್ತಹೀನರಾಗುವ ಸಾಧ್ಯತೆ ಇದೆಯೇ ಎಂದು ಪತ್ತೆಹಚ್ಚಲಾಗುತ್ತದೆ ಇದರಿಂದ ರೋಗಿಯು ರಕ್ತ ನೀಡಲು ಅರ್ಹನೋ ಇಲ್ಲವೋ ಎಂಬುದು ತಿಳಿಯುತ್ತದೆ. ಈ ಪರೀಕ್ಷೆಯ ಫಲಿತಾಂಶವೇ ಬಹು ಸಾಮಾನ್ಯವಾಗಿ ದಾನಿಗಳನ್ನು ಅನರ್ಹರನ್ನಾಗಿಸುತ್ತದೆ.[೨೪] ನಾಡಿಮಿಡಿತ, ರಕ್ತದೊತ್ತಡ, ಹಾಗೂ ದೇಹದ ಉಷ್ಣತೆಗಳನ್ನೂ ಕೂಡಾ ತಪಾಸಿಸಲಾಗುತ್ತದೆ. ಹಿರಿಯ ದಾನಿಗಳನ್ನು ಆರೋಗ್ಯದ ಹಿತದೃಷ್ಟಿಯಿಂದ ಕೇವಲ ವಯಸ್ಸಿನ ಆಧಾರದ ಮೇಲೆಯೇ ಅನರ್ಹಗೊಳಿಸಲಾಗುತ್ತದೆ.[೨೫] ಗರ್ಭಿಣಿಯರು ರಕ್ತದಾನ ಮಾಡುವುದರ ಸುರಕ್ಷತೆ ಬಗ್ಗೆ ವಿಸ್ತೃತ ಅಧ್ಯಯನ ನಡೆದಿಲ್ಲವಾದರೂ, ಸಾಮಾನ್ಯವಾಗಿ ಅವರ ರಕ್ತದಾನವನ್ನು ಮುಂದೂಡಲಾಗುತ್ತದೆ.[೨೬]

ರಕ್ತ ತಪಾಸಣೆ[ಬದಲಾಯಿಸಿ]

ರಕ್ತ ವರ್ಗಾವಣೆಗೆ ಬಳಸುವುದಾದರೆ ದಾನಿಯ ರಕ್ತದ ವಿಧವನ್ನು ಕಡ್ಡಾಯವಾಗಿ ನಿರ್ಧರಿಸಬೇಕಾಗುತ್ತದೆ. ಸಂಗ್ರಹಣಾ ಸಂಸ್ಥೆಯು ಸಾಧಾರಣವಾಗಿ ರಕ್ತವನ್ನು A, B, AB, ಅಥವಾ O ವಿಧಗಳಾಗಿ ಹಾಗೂ ದಾನಿಯ Rh (D) ವಿಧಗಳನ್ನು ನಿರ್ಧರಿಸುತ್ತದಲ್ಲದೇ ಸಾಮಾನ್ಯವಲ್ಲದ ಪ್ರತಿಕಾರಕಗಳಿಗೆ ಪ್ರತಿಕಾಯಗಳಾಗಿ ಪರಿಣಮಿಸಬಲ್ಲ ಸಾಧ್ಯತೆಯನ್ನು ತಪಾಸಿಸಲಾಗುತ್ತದೆ. ಪ್ರತಿಹೊಂದಾಣಿಕೆಯೂ ಸೇರಿದಂತೆ ಅನೇಕ ತಪಾಸಣೆಗಳನ್ನು, ರಕ್ತ ವರ್ಗಾವಣೆಯ ಸಂದರ್ಭದಲ್ಲಿ ಮಾಡಲಾಗುತ್ತದೆ. O ಗುಂಪನ್ನು ಸಾಧಾರಣವಾಗಿ "ಸಾರ್ವತ್ರಿಕ ದಾನಿ"[೨೭] ಎಂದು ಪರಿಗಣಿಸುವರಾದರೂ ಇದು ಕೇವಲ ಕೆಂಪು ಕೋಶ ವರ್ಗಾವಣೆಗಳಿಗೆ ಮಾತ್ರ ಅನ್ವಯವಾಗುತ್ತದೆ. ಪ್ಲಾಸ್ಮಾ ವರ್ಗಾವಣೆಗಳಲ್ಲಿ ಇದರ ವಿರುದ್ಧವಾಗಿ ಗುಂಪನ್ನು ಸಾರ್ವತ್ರಿಕ ದಾನಿ ಗುಂಪಾಗಿ ಪರಿಗಣಿಸಲಾಗುತ್ತದೆ.[೨೮]

ಬಹಳಷ್ಟು ಬಾರಿ ಕೆಲ STDಗಳೂ ಸೇರಿದಂತೆ ರಕ್ತವನ್ನು ಅನೇಕ ರೋಗಗಳ ಸಾಧ್ಯತೆಗೆ ತಪಾಸಿಸಲಾಗುತ್ತದೆ.[೨೯] ಈ ತಪಾಸಣೆಗಳು ಅತಿ-ಸೂಕ್ಷ್ಮ ಶೋಧನೆಗಳಾಗಿದ್ದು ಪ್ರತ್ಯಕ್ಷ ರೋಗನಿದಾನವನ್ನು ಮಾಡಲಾಗುವುದಿಲ್ಲ. ಕೆಲ ತಪಾಸಣಾ ಫಲಿತಾಂಶಗಳು ಹೆಚ್ಚು ನಿರ್ದಿಷ್ಟ ತಪಾಸಣೆಗಳ ನಂತರ ಮಿಥ್ಯಪತ್ತೆಗಳಾಗಿ ಪರಿಣಮಿಸುತ್ತದೆ.[೩೦] ಮಿಥ್ಯಾ ನಿರಾಕರಣೆಗಳು ಅಪರೂಪವಾದರೂ, ಮಿಥ್ಯಾ ನಿರಾಕರಣೆಯು ಕಲುಷಿತ ಘಟಕವನ್ನು ಸೂಚಿಸುವುದರಿಂದ ಅನಾಮಿಕ STD ತಪಾಸಣೆಯ ಉದ್ದೇಶಕ್ಕಾಗಿ ದಾನಿಗಳಿಗೆ ರಕ್ತದಾನ ಮಾಡದಿರುವಂತೆ ಸಲಹೆ ನೀಡಲಾಗುತ್ತದೆ. ಈ ತಪಾಸಣೆಗಳ ಫಲಿತಾಂಶವು ಧನಾತ್ಮಕವಾದರೆ ರಕ್ತವನ್ನು, ಸ್ವಯಂಪೂರಣ ದಾನಗಳಂತಹಾ ಸಂದರ್ಭಗಳನ್ನು ಬಿಟ್ಟರೆ ಉಳಿದಂತೆ ನಿರಾಕರಿಸಲಾಗುತ್ತದೆ. ಸಾಮಾನ್ಯವಾಗಿ ದಾನಿಗೆ ತಪಾಸಣೆಯ ಫಲಿತಾಂಶವನ್ನು ತಿಳಿಸಲಾಗುತ್ತದೆ.[೩೧]

ದಾನ ಮಾಡಿದ ರಕ್ತವನ್ನು ಅನೇಕ ವಿಧಾನಗಳ ಮೂಲಕ ತಪಾಸಿಸಲಾಗುತ್ತದಾದರೂ ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡಿರುವ ಪ್ರಮುಖ ತಪಾಸಣೆಗಳು ಇವು ನಾಲ್ಕು :

2006ರಲ್ಲಿ WHO ಸಂಸ್ಥೆಯು ನೀಡಿದ ವರದಿಯ ಪ್ರಕಾರ ಸಮೀಕ್ಷೆ ನಡೆಸಿದ ಒಟ್ಟು 124ರಲ್ಲಿ 56 ರಾಷ್ಟ್ರಗಳು ಎಲ್ಲಾ ರಕ್ತದಾನಗಳಿಗೆ ಮೂಲಭೂತ ಪರೀಕ್ಷೆಗಳನ್ನು ಮಾಡಿಸುತ್ತಿಲ್ಲ.[೧೨]

ಸ್ಥಳೀಯ ಅಗತ್ಯಗಳ ಮೇರೆಗೆ ವರ್ಗಾವಣೆಯಿಂದ ಹರಡಬಹುದಾದ ಸಾಂಕ್ರಾಮಿಕಗಳ ಇತರ ತಪಾಸಣೆಗಳನ್ನೂ ನಡೆಸಲಾಗುತ್ತದೆ. ಹೆಚ್ಚುವರಿ ತಪಾಸಣೆಗಳು ದುಬಾರಿಯಾಗಿವೆ, ಕೆಲ ಸಂದರ್ಭಗಳಲ್ಲಿ ವೆಚ್ಚದ ಕಾರಣಕ್ಕಾಗಿಯೇ ತಪಾಸಣೆಗಳನ್ನು ಮಾಡಲಾಗುವುದಿಲ್ಲ.[೩೨] ಪಶ್ಚಿಮ ನೈಲ್‌ ವೈರಸ್‌ನಂತಹಾ ಸಾಂಕ್ರಾಮಿಕ ರೋಗಗಳ ತಪಾಸಣೆಯೂ ಇದರಲ್ಲಿ ಸೇರಿದೆ.[೩೩] ಕೆಲವೊಮ್ಮೆ ಒಂದೇ ರೋಗದ ಪತ್ತೆಗೆ ಹಲವು ತಪಾಸಣೆಗಳನ್ನು ಮಾಡಿ ಅವುಗಳಲ್ಲಿನ ಕೊರತೆಗಳನ್ನು ನೀಗಲಾಗುತ್ತದೆ. ಉದಾಹರಣೆಗೆ, HIV ಪ್ರತಿಕಾಯ ತಪಾಸಣೆಯು ದಾನಿಯ ಇತ್ತೀಚಿನ ಸೋಂಕುಗಳನ್ನು ಪತ್ತೆಹಚ್ಚುವುದಿಲ್ಲ, ಆದ್ದರಿಂದ ಕೆಲ ರಕ್ತನಿಧಿಗಳು p24 ಪ್ರತಿಕಾರಕ ಅಥವಾ HIV ನ್ಯೂಕ್ಲಿಯಿಕ್‌ ಆಮ್ಲ ತಪಾಸಣೆಗಳನ್ನು ಮೂಲಭೂತ ಪ್ರತಿಕಾಯಗಳ ತಪಾಸಣೆಯೊಂದಿಗೆ ಹೆಚ್ಚುವರಿಯಾಗಿ ನಡೆಸಿ ನಡುವಿನ ಅವಧಿಯಲ್ಲಿ ಸೋಂಕಿತರಾದವರನ್ನು ಪತ್ತೆಹಚ್ಚುತ್ತವೆ. ಸೈಟೊಮೆಗಾಲೋವೈರಸ್‌ ಎಂಬುದು ವಿಶೇಷ ಸ್ಥಿತಿಯಾಗಿದ್ದು ತಪಾಸಣೆಯಲ್ಲಿ ದಾನಿಗಳು ಅನೇಕ ಬಾರಿ ಧನಾತ್ಮಕ ಫಲಿತಾಂಶ ಪಡೆಯುತ್ತಾರೆ.[೩೪] ಈ ವೈರಸ್‌ ಆರೋಗ್ಯವಂತ ಗ್ರಾಹಕರಿಗೆ ತೊಂದರೆ ಉಂಟುಮಾಡದಿದ್ದರೂ ಶಿಶುಗಳಿಗೆ[೩೫] ಹಾಗೂ ದುರ್ಬಲ ರೋಗನಿರೋಧಕ ಶಕ್ತಿಯಿರುವವರಿಗೆ ಹಾನಿ ಉಂಟುಮಾಡಬಲ್ಲದು.[೩೪]

ರಕ್ತ ಪಡೆಯುವಿಕೆ[ಬದಲಾಯಿಸಿ]

ರಕ್ತದಾನದ ವಿವಿಧ ಹಂತಗಳಲ್ಲಿ ದಾನಿಯ ತೋಳು. ಎಡದಲ್ಲಿರುವ ಎರಡು ಛಾಯಾಚಿತ್ರಗಳು ರಕ್ತದೊತ್ತಡದ ಪಟ್ಟಿಯನ್ನು ರಕ್ತಬಂಧಕ ಪಟ್ಟಿಯಾಗಿ ಬಳಸಿರುವುದನ್ನು ತೋರಿಸುತ್ತಿದೆ.

ದಾನಿಯಿಂದ ರಕ್ತವನ್ನು ಪಡೆಯುವ ಎರಡು ಪ್ರಮುಖ ವಿಧಾನಗಳಿವೆ. ಸಾಧಾರಣವಾದ ವಿಧಾನವೆಂದರೆ ರಕ್ತನಾಳದಿಂದ ನೇರವಾಗಿ ಸಂಪೂರ್ಣ ರಕ್ತವಾಗಿ ಪಡೆಯುವುದು. ಈ ರಕ್ತವನ್ನು ಕೆಂಪು ರಕ್ತಕಣಗಳು ಹಾಗೂ ಪ್ಲಾಸ್ಮಾಗಳಾಗಿ ಸಾಧಾರಣವಾಗಿ ಪ್ರತ್ಯೇಕಿಸಲಾಗುತ್ತದೆ, ಏಕೆಂದರೆ ಬಹಳಷ್ಟು ಗ್ರಾಹಕರು ವರ್ಗಾವಣೆಗೆ ಕೇವಲ ಒಂದು ಘಟಕದ ಅಗತ್ಯ ಮಾತ್ರವೇ ಹೊಂದಿರುತ್ತಾರೆ. ಮತ್ತೊಂದು ವಿಧಾನವೆಂದರೆ ದಾನಿಯಿಂದ ರಕ್ತವನ್ನು ಪಡೆದು, ಅಪಕೇಂದ್ರಕ ಅಥವಾ ಶೋಧಕಗಳನ್ನು ಬಳಸಿ ಪ್ರತ್ಯೇಕಿಸಿ, ಅಗತ್ಯವಿರುವ ಘಟಕವನ್ನು ಉಳಿಸಿಕೊಂಡು, ಉಳಿದ ಭಾಗವನ್ನು ದಾನಿಗೆ ಮರಳಿಸುವುದು. ಈ ಪ್ರಕ್ರಿಯೆಯನ್ನು ಅಫೆರೆಸಿಸ್‌ ಎಂದು ಕರೆಯಲಾಗುತ್ತದಲ್ಲದೇ, ಇದೇ ಉದ್ದೇಶಕ್ಕೆಂದೇ ನಿರ್ಮಿತವಾದ ಸಾಧನದ ಮೂಲಕವೇ ಇದನ್ನು ಮಾಡಲಾಗುತ್ತದೆ.

ನೇರ ವರ್ಗಾವಣೆಗಳಿಗೆ ರಕ್ತನಾಳವನ್ನು ಬಳಸಬಹುದು, ಅಥವಾ ಬದಲಿಗೆ ಧಮನಿಗಳಿಂದಲೂ ರಕ್ತವನ್ನು ಪಡೆಯಬಹುದು.[೩೬] ಈ ಸಂದರ್ಭದಲ್ಲಿ ರಕ್ತವನ್ನು ಶೇಖರಿಸಿಡದೇ ದಾನಿಯಿಂದ ಗ್ರಾಹಕನಿಗೆ ನೇರವಾಗಿ ಹರಿಸಲಾಗುತ್ತದೆ. ಇದೊಂದು ರಕ್ತ ವರ್ಗಾವಣೆಯ ಹಳೆಯ ವಿಧಾನವಾಗಿದ್ದು, ಆಧುನಿಕ ಪದ್ಧತಿಗಳಲ್ಲಿ ಅಪರೂಪವಾಗಿದೆ.[೩೭] ಈ ವಿಧಾನದ ಬಳಕೆಯನ್ನು ವಿಶ್ವ ಸಮರ IIರ ಸಮಯದಲ್ಲಿ ವ್ಯವಸ್ಥಾಪನೆಯಲ್ಲಾದ ಸಮಸ್ಯೆಗಳಿಂದಾಗಿ ನಿಲ್ಲಿಸಲಾಯಿತಲ್ಲದೇ, ಗಾಯಗೊಂಡ ಸೈನಿಕರನ್ನು ಉಪಚರಿಸುತ್ತಿದ್ದ ವೈದ್ಯರು ನಾಗರಿಕ ಜೀವನಕ್ಕೆ ಮರಳಿದ ನಂತರ ಶೇಖರವಾಗುವ ರಕ್ತಕ್ಕೆ ಸಂಗ್ರಹನಿಧಿಯನ್ನು ಆರಂಭಿಸಿದರು.[೩೮]

ರಕ್ತ ಪಡೆಯುವಿಕೆ ಹಾಗೂ ಸಿದ್ಧತೆ[ಬದಲಾಯಿಸಿ]

ತೋಳಿನ ದೀರ್ಘವಾದ ಚರ್ಮಕ್ಕೆ ಸಮೀಪವಾಗಿರುವ ರಕ್ತನಾಳದಿಂದ, ಸಾಧಾರಣವಾಗಿ ಮೊಣಕೈನ ಒಳಭಾಗದ ಮುಂಗೈ ಮಧ್ಯಸ್ಥ ರಕ್ತನಾಳದಿಂದ ಪಡೆಯಲಾಗುತ್ತದೆ. ರಕ್ತನಾಳದ ಮೇಲಿನ ಚರ್ಮವನ್ನು ಅಯೋಡಿನ್‌ ಅಥವಾ ಕ್ಲಾರಹೆಕ್ಸಿಡಿನ್‌[೩೯] ನಂತಹಾ ಪೂತಿನಾಶಕಗಳ ಮೂಲಕ ಚರ್ಮದ ಮೇಲಿರುವ ಕ್ರಿಮಿಗಳು ಸಂಗ್ರಹಿಸುವ ರಕ್ತವನ್ನು ಕಲುಷಿತಗೊಳಿಸದಂತೆ[೩೯] ಹಾಗೂ ದಾನಿಯ ಚರ್ಮದೊಳಕ್ಕೆ ಸೂಜಿಯನ್ನು ಚುಚ್ಚುವ ಸ್ಥಳದಲ್ಲಿ ಸೋಂಕು ಉಂಟಾಗದಂತೆ ಸ್ವಚ್ಛ ಮಾಡಲಾಗುತ್ತದೆ.[೪೦]

ದೊಡ್ಡ[೪೧] ಸೂಜಿಯನ್ನು (16ರಿಂದ 17 ರವರೆಗಿನ ಮಾಪನದವು) ಸೂಜಿಯ ಮೂಲಕ ಹಾದುಹೋಗುವಾಗ ಕೆಂಪು ರಕ್ತಕಣಗಳನ್ನು ಭೌತಿಕವಾಗಿ ಹಾನಿಗೊಳಿಸದಂತೆ ಸುಲಿತದ ಒತ್ತಡವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ.[೪೨] ತೋಳಿನ ರಕ್ತನಾಳಗಳಲ್ಲಿ ರಕ್ತದ ಒತ್ತಡ ಹೆಚ್ಚಿಸಲು ಹಾಗೂ ಪ್ರಕ್ರಿಯೆಯನ್ನು ವೇಗಗೊಳಿಸಲು ಅನೇಕ ವೇಳೆ ರಕ್ತಬಂಧಕ ಪಟ್ಟಿಯನ್ನು ತೋಳಿನ ಮೇಲ್ಭಾಗಕ್ಕೆ ಕಟ್ಟಲಾಗುತ್ತದೆ. ದಾನಿಯು ವಸ್ತುವೊಂದನ್ನು ಪದೇ ಪದೇ ಹಿಚುಕುವಂತೆ ಮಾಡಲು ಹೇಳುವ ಮೂಲಕ ರಕ್ತನಾಳದಲ್ಲಿ ರಕ್ತ ಹರಿವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತದೆ.

ಯಾಂತ್ರಿಕ ತಟ್ಟೆ/ಟ್ರೇಯೊಂದು ಚೀಲವೊಂದನ್ನು ಕಲಕುತ್ತಾ ರಕ್ತ ಹೆಪ್ಪುಗಟ್ಟುವುದನ್ನು ತಪ್ಪಿಸಲು ರಕ್ತಹೆಪ್ಪುನಿರೋಧಕದೊಂದಿಗೆ ರಕ್ತವನ್ನು ಮಿಶ್ರಮಾಡುತ್ತಿರುವುದು.

ಸಂಪೂರ್ಣ ರಕ್ತ[ಬದಲಾಯಿಸಿ]

ಬಹುಸಾಮಾನ್ಯ ವಿಧಾನವೆಂದರೆ ದಾನಿಯ ರಕ್ತನಾಳನಿಂದ ಧಾರಕವೊಂದರಲ್ಲಿ ಸಂಗ್ರಹಿಸುವುದು. ಪಡೆಯುವ ರಕ್ತದ ಪ್ರಮಾಣವು 200 ಮಿಲಿಲೀಟರ್‌ಗಳಿಂದ 550 ಮಿಲಿಲೀಟರ್‌ಗಳವರೆಗೆ ರಾಷ್ಟ್ರದ ಮೇಲೆ ಆಧಾರಿತವಾಗಿ ವ್ಯತ್ಯಾಸಗೊಳ್ಳುತ್ತದೆ, ಆದರೆ 450-500 ಮಿಲಿಲೀಟರ್‌ಗಳ ಪ್ರಮಾಣ ಸಾಮಾನ್ಯ.[೩೪] ರಕ್ತವನ್ನು ಸಾಮಾನ್ಯವಾಗಿ ಸೋಡಿಯಂ ಸಿಟ್ರೇಟ್‌, ಫಾಸ್ಫೇಟ್‌, ಗ್ಲೂಕೋಸ್‌/ಡೆಕ್ಸ್‌ಟ್ರೋಸ್‌‌, ಹಾಗೂ ಕೆಲವೊಮ್ಮೆ ಆಡನೀನ್‌ಗಳನ್ನೂ ಹೊಂದಿರುವ ನಮ್ಯ ಪ್ಲಾಸ್ಟಿಕ್‌ ಚೀಲವೊಂದರಲ್ಲಿ ಸಂಗ್ರಹಿಸಲಾಗುತ್ತದೆ. ಈ ಸಂಯೋಜನೆಯು ಶೇಖರಗೊಂಡ ಅವಧಿಯಲ್ಲಿ ರಕ್ತವನ್ನು ಹೆಪ್ಪುಗಟ್ಟದಂತೆ ಹಾಗೂ ಸಂರಕ್ಷಿಸಿಡುತ್ತದೆ.[೪೩] ಸಂಸ್ಕರಣದ ಅವಧಿಯಲ್ಲಿ ಇತರೆ ರಾಸಾಯನಿಕಗಳನ್ನು ಕೆಲವೊಮ್ಮೆ ಸೇರಿಸಲಾಗುತ್ತದೆ.

ಸಂಪೂರ್ಣ ರಕ್ತದ ಪ್ಲಾಸ್ಮಾವನ್ನು ವರ್ಗಾವಣೆಯ ಪ್ಲಾಸ್ಮಾವನ್ನು ತಯಾರಿಸಲು ಬಳಸಬಹುದು ಅಥವಾ ವಿಭಾಗೀಕರಣ ಎನ್ನುವ ಪ್ರಕ್ರಿಯೆಯ ಮೂಲಕ ಇತರೆ ಔಷಧೀಯ ಉದ್ದೇಶಗಳಲ್ಲಿ ಬಳಸಬಹುದು. ವಿಶ್ವ ಸಮರ IIರ ಅವಧಿಯಲ್ಲಿ ಗಾಯಗೊಂಡವರನ್ನು ಉಪಚರಿಸಲು ಒಣ ಪ್ಲಾಸ್ಮಾವನ್ನು ಬಳಸಲಾಗುತ್ತಿತ್ತು ಹಾಗೂ ಅದರ ರೂಪಾಂತರ ಪ್ರಕ್ರಿಯೆಗಳನ್ನು ಈಗಲೂ ಇತರೆ ವೈವಿಧ್ಯದ ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ.[೪೪] [೪೫]

ಅಫೆರೆಸಿಸ್‌[ಬದಲಾಯಿಸಿ]

ತುಲನಾತ್ಮಕವಾಗಿ ದೊಡ್ಡ ಸೂಜಿಯನ್ನು ರಕ್ತದಾನಗಳಲ್ಲಿ ಬಳಸಲಾಗುತ್ತದೆ.

ಅಫೆರೆಸಿಸ್‌ ಎಂಬುದು ಸಾಧನವೊಂದರ ಮೂಲಕ ರಕ್ತವನ್ನು ಹರಿಸಿ ನಿರ್ದಿಷ್ಟ ಘಟಕವನ್ನು ಪ್ರತ್ಯೇಕಿಸಿ ಉಳಿದ ಭಾಗವನ್ನು ದಾನಿಗೆ ಮರಳಿಸುವ ರಕ್ತದಾನದ ವಿಧಾನವಾಗಿದೆ. ಸಾಧಾರಣವಾಗಿ ಮರಳಿಸುವ ಘಟಕವು ಕೆಂಪು ರಕ್ತಕಣಗಳಾಗಿದ್ದು, ಇವು ಬದಲಿಕೆಯಾಗಲು ಅತಿ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಈ ವಿಧಾನದ ಮೂಲಕ ಓರ್ವ ವ್ಯಕ್ತಿಯು ಸಂಪೂರ್ಣ ರಕ್ತವನ್ನು ದಾನ ಮಾಡುವುದಕ್ಕಿಂತ ಹೆಚ್ಚು ಬಾರಿ ಸುರಕ್ಷಿತವಾಗಿ ಪ್ಲಾಸ್ಮಾ ಅಥವಾ ಪ್ಲೇಟ್‌ಲೆಟ್‌ಗಳನ್ನು ದಾನ ಮಾಡಬಹುದು[೪೬]. ಓರ್ವ ವ್ಯಕ್ತಿಯು ಪ್ಲಾಸ್ಮಾ ಹಾಗೂ ಪ್ಲೇಟ್‌ಲೆಟ್‌ಗಳೆರಡನ್ನು ನೀಡುವುದಾದರೆ ಒಂದೇ ಪ್ರಕ್ರಿಯೆಯಲ್ಲಿ ಎರಡನ್ನೂ ಸಂಯೋಜಿಸಲೂಬಹುದು.

ಪ್ಲೇಟ್‌ಲೆಟ್‌ಗಳನ್ನು ಸಂಪೂರ್ಣ ರಕ್ತದಿಂದ ಪ್ರತ್ಯೇಕಿಸಬಹುದಾಗಿದ್ದರೂ, ಅವನ್ನು ಅನೇಕ ದಾನಗಳಿಂದ ಒಟ್ಟುಗೂಡಿಸಬೇಕಾಗುತ್ತದೆ. ಒಂದು ಚಿಕಿತ್ಸಕ ಪ್ರಮಾಣಕ್ಕೆ ಮೂರರಿಂದ ಹತ್ತು ಘಟಕಗಳಷ್ಟು ಸಂಪೂರ್ಣ ರಕ್ತವು ಬೇಕಾಗುತ್ತದೆ.[೪೭] ಪ್ಲೇಟ್‌ಲೆಟ್‌ಫೆರೆಸಿಸ್‌ ಪ್ರತಿ ದಾನದಿಂದ ಒಂದು ಪೂರ್ಣ ಘಟಕದಷ್ಟನ್ನು ನೀಡುತ್ತದೆ.

ಸಂಪೂರ್ಣ ರಕ್ತದಿಂದ ಪ್ಲಾಸ್ಮಾ ಪಡೆಯುವ ರೀತಿಯಲ್ಲಿಯೇ ಔಷಧಿಗಳನ್ನು ತಯಾರಿಸಲು ಬಳಸುವ ಮೂಲ ಪ್ಲಾಸ್ಮಾವನ್ನು ಪಡೆಯಲು ಪ್ಲಾಸ್ಮಾಫೆರೆಸಿಸ್‌ ಪ್ರಕ್ರಿಯೆಯನ್ನು ಆಗ್ಗಾಗ್ಗೆ ಬಳಸಲಾಗುತ್ತದೆ. ಪ್ಲೇಟ್‌ಲೆಟ್‌ಫೆರೆಸಿಸ್‌ ಸಮಯದಲ್ಲಿಯೇ ಪಡೆದ ಪ್ಲಾಸ್ಮಾವನ್ನು ಕೆಲವೊಮ್ಮೆ ಏಕಕಾಲೀನ ಪ್ಲಾಸ್ಮಾ ಎಂದು ಕರೆಯಲಾಗುತ್ತದೆ.

ಅಫೆರೆಸಿಸ್‌ಅನ್ನು ಒಂದೇ ದಾನದಲ್ಲಿ ರೂಢಿಗಿಂತ ಹೆಚ್ಚಿನ ಪ್ರಮಾಣದ ಕೆಂಪು ರಕ್ತಕಣಗಳನ್ನು ಪಡೆದುಕೊಳ್ಳಲು ಹಾಗೂ ಬಿಳಿ ರಕ್ತಕಣಗಳನ್ನು ವರ್ಗಾವಣೆಗೆಂದು ಸಂಗ್ರಹಿಸಲು ಬಳಸಲಾಗುತ್ತದೆ.[೪೮][೪೯]

ಚೇತರಿಕೆ ಹಾಗೂ ದಾನಗಳ ನಡುವಿನ ಅವಧಿ[ಬದಲಾಯಿಸಿ]

ದಾನ ಮಾಡಿದ ನಂತರ 10–15 ನಿಮಿಷಗಳ ಕಾಲ ದಾನ ಮಾಡಿದ ಸ್ಥಳದಲ್ಲಿಯೇ ದಾನಿಗಳನ್ನು ಇರಿಸಿಕೊಳ್ಳಲಾಗುತ್ತದೆ, ಏಕೆಂದರೆ ಬಹಳಷ್ಟು ಪ್ರತಿಕೂಲ ಪರಿಣಾಮಗಳು ರಕ್ತದಾನದ ಸಮಯದಲ್ಲಿಯೇ ಅಥವಾ ರಕ್ತದಾನದ ಮಾಡಿದ ಸ್ವಲ್ಪಕಾಲದಲ್ಲಿಯೇ ಕಾಣಿಸಿಕೊಳ್ಳುತ್ತವೆ.[೫೦] ರಕ್ತಕೇಂದ್ರಗಳು ಸಾಧಾರಣವಾಗಿ ದಾನಿಗಳಿಗೆ ಟೀ ಹಾಗೂ ಬಿಸ್ಕೆಟ್‌ಗಳಂತಹಾ ಲಘು ಉಪಹಾರಗಳನ್ನು ಅಥವಾ ಆಹಾರ ಭತ್ಯೆಯನ್ನು ದಾನಿಯು ಚೇತರಿಸಿಕೊಳ್ಳಲು ಅನುಕೂಲವಾಗುವಂತೆ ನೀಡುತ್ತವೆ.[೫೧] ಸೂಜಿ ಚುಚ್ಚಿದ ಪ್ರದೇಶದ ಸುತ್ತ ಔಷಧೀಯ ಪಟ್ಟಿಯನ್ನು ಕಟ್ಟಿರಲಾಗುತ್ತದಲ್ಲದೇ ದಾನಿಯು ಅದನ್ನು ಅನೇಕ ಗಂಟೆಗಳ ಕಾಲ ಧರಿಸಿರುವಂತೆ ನಿರ್ದೇಶಿಸಲಾಗುತ್ತದೆ.[೫೨] ಸಾಧಾರಣ ಸಂಪೂರ್ಣ ರಕ್ತದಾನವು ಸುಮಾರು 650 ಕ್ಯಾಲೊರಿಗಳಷ್ಟು ವ್ಯಯಿಸುವುದಕ್ಕೆ ಸಮ.[೫೩]

ದಾನ ಮಾಡಿದ ಪ್ಲಾಸ್ಮಾ 2-3 ದಿನಗಳಲ್ಲಿ ಮರುಪೂರಣಗೊಳ್ಳುತ್ತದೆ.[೫೪] ಕೆಂಪು ರಕ್ತಕಣಗಳು ಅಸ್ಥಿಮಜ್ಜೆಯ ಮೂಲಕ ಪರಿಚಲನಾ ವ್ಯವಸ್ಥೆಗೆ ನಿಧಾನಗತಿಯಲ್ಲಿ, ಅಂದರೆ ಆರೋಗ್ಯವಂತ ಪ್ರಾಪ್ತವಯಸ್ಕ ಪುರುಷರಲ್ಲಿ ಸರಾಸರಿ 36 ದಿನಗಳ ಸಮಯ ತೆಗೆದುಕೊಳ್ಳುತ್ತದೆ. ಇದು ತಿಳಿದು ಬಂದ ಅಧ್ಯಯನದ ಸಂದರ್ಭದಲ್ಲಿ, ಚೇತರಿಕೆಯ ವ್ಯಾಪ್ತಿಯು 20ರಿಂದ 59 ದಿನಗಳಷ್ಟಿತ್ತು.[೫೫] ಈ ಪೂರಣ ವೇಗಗಳೇ ದಾನಿಯು ಅವಧಿಯೊಂದರಲ್ಲಿ ಎಷ್ಟು ಬಾರಿ ದಾನ ಮಾಡಬಹುದೆಂಬುದನ್ನು ನಿರ್ಧರಿಸುತ್ತವೆ.

ಪ್ಲಾಸ್ಮಾಫೆರೆಸಿಸ್‌ ಹಾಗೂ ಪ್ಲೇಟ್‌ಲೆಟ್‌ಫೆರೆಸಿಸ್‌ ದಾನಿಗಳು ಹೆಚ್ಚು ಬಾರಿ ದಾನ ನೀಡಬಹುದು ಏಕೆಂದರೆ ಅವರು ಕೆಂಪು ರಕ್ತಕಣಗಳನ್ನು ಗಮನಾರ್ಹ ಪ್ರಮಾಣದಲ್ಲಿ ಕಳೆದುಕೊಳ್ಳುವುದಿಲ್ಲ. ದಾನಿಯೊಬ್ಬ ಎಷ್ಟು ಕಾಲಕ್ಕೊಮ್ಮೆ ರಕ್ತನೀಡಬಲ್ಲ ಎಂಬುದು ರಾಷ್ಟ್ರದಿಂದ ರಾಷ್ಟ್ರಕ್ಕೆ ವ್ಯತ್ಯಾಸಗೊಳ್ಳುತ್ತದೆ. ಉದಾಹರಣೆಗೆ, ಯುನೈಟೆಡ್‌ ಸ್ಟೇಟ್ಸ್‌ನ ಪ್ಲಾಸ್ಮಾ ದಾನಿಗಳು ವಾರದಲ್ಲಿ ಎರಡು ಬಾರಿ ಹೆಚ್ಚಿನ ಪ್ರಮಾಣದಲ್ಲಿ ಹಾಗೂ ವರ್ಷವೊಂದಕ್ಕೆ ಸರ್ವೇಸಾಧಾರಣವಾಗಿ 83 ಲೀಟರ್‌ಗಳಷ್ಟು (ಸುಮಾರು 22 ಗ್ಯಾಲನ್‌ಗಳಷ್ಟು) ನೀಡಬಹುದಾಗಿದ್ದರೆ, ಜಪಾನ್‌ನಲ್ಲಿ ಅದೇ ದಾನಿಯು ಪರ್ಯಾಯ ವಾರಗಳಲ್ಲಿ ಮಾತ್ರವೇ ನೀಡಬಹುದಾಗಿದ್ದು, ವರ್ಷವೊಂದಕ್ಕೆ ಸುಮಾರು 16 ಲೀಟರ್‌ಗಳಷ್ಟು ಮಾತ್ರವೇ (ಸುಮಾರು 4 ಗ್ಯಾಲನ್‌ಗಳಷ್ಟು) ನೀಡಬಹುದಾಗಿದೆ.[೫೬] ಕೆಂಪುರಕ್ತಕಣಗಳು ಸಂಪೂರ್ಣ ರಕ್ತದಾನಕ್ಕೆ ಮಿತಿಯನ್ನು ನಿಗದಿಪಡಿಸುವ ಮಾನಕವಾಗಿದ್ದು, ದಾನದ ಪುನರಾವರ್ತನೆಯ ಅವಧಿಯು ವ್ಯಾಪಕವಾಗಿ ವ್ಯತ್ಯಾಸಗೊಳ್ಳುತ್ತವೆ. ಹಾಂಗ್‌ಕಾಂಗ್‌ನಲ್ಲಿ ಇದು ಮೂರರಿಂದ ಆರು ತಿಂಗಳಾದರೆ,[೫೭] ಆಸ್ಟ್ರೇಲಿಯಾದಲ್ಲಿ ಇದು ಹನ್ನೆರಡು ವಾರಗಳು,[೫೮] ಯುನೈಟೆಡ್‌ ಸ್ಟೇಟ್ಸ್‌ನಲ್ಲಿ ಎಂಟು ವಾರಗಳು[೫೯] ಹಾಗೂ UKಯಲ್ಲಿ ಇದು ಸಾಧಾರಣವಾಗಿ ಹದಿನಾರು ವಾರಗಳು ಆದರೆ ಹನ್ನೆರಡು ವಾರಗಳಷ್ಟು ಮುಂಚೆಯೂ ನೀಡಬಹುದಾಗಿದೆ.[೬೦]

ತೊಡಕುಗಳು[ಬದಲಾಯಿಸಿ]

ದಾನಿಗಳು ರಕ್ತ ನೀಡುವುದರಿಂದ ಉಂಟಾಗಬಹುದಾದ ಗಮನಾರ್ಹ ಆರೋಗ್ಯ ಸಮಸ್ಯೆಗಳ ಸಾಧ್ಯತೆಗಳ ತಪಾಸಣೆಗಳನ್ನು ನಡೆಸಲಾಗುತ್ತದೆ. ಪ್ರಥಮ-ಬಾರಿಯ ದಾನಿಗಳು, ಹದಿಹರೆಯದವರು, ಹಾಗೂ ಮಹಿಳೆಯರು ಪ್ರತಿರೋಧಕ್ಕೊಳಪಡುವ ಹೆಚ್ಚಿನ ಸಾಧ್ಯತೆಯನ್ನು ಹೊಂದಿರುತ್ತಾರೆ.[೬೧][೬೨] ಅಧ್ಯಯನವೊಂದರ ಪ್ರಕಾರ ದಾನಿಗಳಲ್ಲಿ 2%ರಷ್ಟು ಜನ ಪ್ರತಿರೋಧ ಸಮಸ್ಯೆಯನ್ನು ಎದುರಿಸಿದ್ದರು.[೬೩] ಈ ಪ್ರತಿರೋಧಗಳಲ್ಲಿ ಬಹಳಷ್ಟು ಗೌಣವಾದವು. 194,000 ದಾನಗಳ ಅಧ್ಯಯನವೊಂದರಲ್ಲಿ ದೀರ್ಘಕಾಲೀನ ತೊಡಕುಗಳುಂಟಾದ ದಾನಿಯು ಕೇವಲ ಒಬ್ಬರೇ ಇದ್ದರು.[೬೪] ಯುನೈಟೆಡ್‌ ಸ್ಟೇಟ್ಸ್‌‌ನಲ್ಲಿ, ರಕ್ತದಾನಕ್ಕೆ ಸಂಬಂಧಿಸಬಹುದಾದ ಯಾವುದೇ ಸಾವನ್ನು ರಕ್ತನಿಧಿಯು ವರದಿ ಮಾಡಬೇಕಾಗಿರುತ್ತದೆ. 2004ರ ಅಕ್ಟೋಬರ್‌ನಿಂದ 2006ರ ಸೆಪ್ಟೆಂಬರ್‌ವರೆಗಿನ ಎಲ್ಲಾ ವರದಿಗಳ ಸಮೀಕ್ಷೆಯು 22 ಘಟನೆಗಳನ್ನು ಗಮನಿಸಿ, ಯಾವುದೊಂದೂ ರಕ್ತದಾನಕ್ಕೆ ಸಂಬಂಧಪಟ್ಟದ್ದೆಂದು ನಿಗದಿಪಡಿಸಲಾಗಲಿಲ್ಲವಾದರೂ, ಒಂದರಲ್ಲಿ ಆ ಸಾಧ್ಯತೆಯನ್ನು ತಳ್ಳಿಹಾಕಲಿಲ್ಲ.[೬೫]

ರಕ್ತದಾನದ ಮೂರು ದಿನಗಳ ನಂತರ ಹಿಸುಕಿದಂತಾಗಿರುವುದು

ಹೈಪೋವಾಲೆಮಿಕ್‌‌ ಪ್ರತಿಕ್ರಿಯೆಗಳು ರಕ್ತದ ಒತ್ತಡದಲ್ಲಿ ಉಂಟಾದ ದಿಢೀರ್‌ ವ್ಯತ್ಯಾಸಗಳಿಂದಾಗಿ ಆಗಬಲ್ಲವು. ಮೂರ್ಛೆ ಹೋಗುವುದು ಇದರಿಂದಾಗಬಹುದಾದ ಪರಮಾವಧಿಯ ಸಮಸ್ಯೆಯಾಗಿದೆ.[೬೬]

ಈ ಪ್ರಕ್ರಿಯೆಯು ನಾಳಛೇದನದ ಇತರೆ ರೂಪಾಂತರಗಳಿಗೆ ಸಮಾನವಾದ ಅಪಾಯಗಳನ್ನು ಹೊಂದಿದೆ. ಸೂಜಿಯ ಚುಚ್ಚುವಿಕೆಯಿಂದುಂಟಾಗುವ ತೋಳಿನ ಹಿಸುಕುವಿಕೆಯು ಸರ್ವೇ ಸಾಧಾರಣ ಸಮಸ್ಯೆಯಾಗಿದೆ. ಅಧ್ಯಯನವೊಂದರ ಪ್ರಕಾರ ದಾನಿಗಳಲ್ಲಿ 1%ಗಿಂತ ಕಡಿಮೆ ಮಂದಿ ಈ ಸಮಸ್ಯೆಗೊಳಪಟ್ಟಿದ್ದರು.[೬೭] ರಕ್ತದಾನದಿಂದುಂಟಾಗಬಹುದಾದ ತೀರಾ ಅಪರೂಪವಲ್ಲದ ಅನೇಕ ತೊಡಕುಗಳು ಕಂಡುಬಂದಿವೆ. ಇವುಗಳಲ್ಲಿ ಧಮನಿಯ ರಂಧ್ರವಾಗುವಿಕೆ, ತಡವಾದ ರಕ್ತಸ್ರಾವ, ನರ ಕೆರಳಿಕೆ, ನರ ಹಾನಿ, ಸ್ನಾಯುರಜ್ಜು ಹಾನಿ, ಥ್ರೋಂಬೋಫ್ಲೆಬಿಟಿಸ್‌, ಹಾಗೂ ಒಗ್ಗದಿರುವಿಕೆಯ ಪ್ರತಿಕ್ರಿಯೆಗಳು ಸೇರಿವೆ.[೬೮]

ಅಫೆರೆಸಿಸ್‌ ಸಂಗ್ರಹಣಾ ವಿಧಾನದಲ್ಲಿ ರಕ್ತವನ್ನು ಹೆಪ್ಪುಗಟ್ಟದಂತೆ ಮಾಡಲು ಬಳಸುವ ಸೋಡಿಯಂ ಸಿಟ್ರೇಟ್‌ನಿಂದ ದಾನಿಗಳು ಕೆಲವೊಮ್ಮೆ ವಿರುದ್ಧ ಪ್ರತಿಕ್ರಿಯೆ ಹೊಂದುತ್ತಾರೆ. ಸಂಗ್ರಹಿಸದೆ ರಕ್ತದಾನಿಗೆ ಮರಳಿಸುವ ರಕ್ತಘಟಕಗಳೊಂದಿಗೆ ಹೆಪ್ಪುನಿರೋಧಕವೂ ಸೇರಿಸುವುದರಿಂದ, ಅದು ದಾನಿಯ ರಕ್ತಕ್ಕೆ ಕ್ಯಾಲ್ಷಿಯಂಅನ್ನು ಸೇರಿಸಿ ಸೈಪೋಕ್ಯಾಲ್ಷೀಮಿಯಾವನ್ನು ಉಂಟುಮಾಡಬಹುದು.[೬೯] ಈ ಪ್ರತಿಕ್ರಿಯೆಗಳು ತುಟಿಗಳಲ್ಲಿ ಜುಮ್ಮೆನ್ನಿಸುವಂತ ಅನುಭವ ಉಂಟುಮಾಡುವುದಲ್ಲದೇ, ಸೆಳೆತ ಹಾಗೂ ಇನ್ನಿತರ ಗಂಭೀರ ಸಮಸ್ಯೆಗಳನ್ನು ಕೂಡ ಉಂಟು ಮಾಡಬಲ್ಲವು. ದಾನಿಗಳಿಗೆ ಈ ಅಡ್ಡಪರಿಣಾಮಗಳನ್ನು ತಪ್ಪಿಸಲು ಕ್ಯಾಲ್ಷಿಯಂ ಪೂರಕಗಳನ್ನು ದಾನದ ಸಂದರ್ಭದಲ್ಲಿ ನೀಡಲಾಗುತ್ತದೆ.[೭೦]

ಅಫೆರಿಸಿಸ್‌ ಪ್ರಕ್ರಿಯೆಗಳಲ್ಲಿ, ಕೆಂಪು ರಕ್ತಕಣಗಳನ್ನು ಸಾಧಾರಣವಾಗಿ ಮರಳಿಸಲಾಗುತ್ತದೆ. ಇದನ್ನು ಅಯಾಂತ್ರಿಕವಾಗಿ ಮಾಡುವುದಾದರೆ ದಾನಿಯು ಬೇರೊಬ್ಬ ವ್ಯಕ್ತಿಯಿಂದ ರಕ್ತವನ್ನು ಪಡೆದರೆ, ರಕ್ತವರ್ಗಾವಣೆಯ ಪ್ರತಿರೋಧ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಅಪಾಯದಿಂದಾಗಿಯೇ ಅಯಾಂತ್ರಿಕ ಅಫೆರಿಸಿಸ್‌, ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಹಳ ಅಪರೂಪದ್ದಾಗಿದ್ದು, ಸ್ವಯಂಚಾಲಿತ ಪ್ರಕ್ರಿಯೆಗಳು ಸಂಪೂರ್ಣ ರಕ್ತದಾನಗಳಷ್ಟೇ ಸುರಕ್ಷಿತವಾಗಿರುತ್ತವೆ.[೭೧]

ರಕ್ತದಾನಿಗಳಿಗೆ ಒದಗಬಹುದಾದ ಅಂತಿಮ ಅಪಾಯವೆಂದರೆ ಸರಿಯಾಗಿ ಕ್ರಿಮಿಶುದ್ಧೀಕರಿಸದ ಸಾಧನಗಳಿಂದುಂಟಾಗುವುದು. ಬಹಳಷ್ಟು ಸಂದರ್ಭಗಳಲ್ಲಿ, ರಕ್ತದ ಸಂಪರ್ಕ ಹೊಂದಿದ ಉಪಕರಣವನ್ನು ಬಳಕೆಯ ನಂತರ ತಿರಸ್ಕರಿಸಲಾಗುತ್ತದೆ.[೭೨] ಮರು-ಬಳಕೆಯಾದ ಉಪಕರಣಗಳು 1990ರ ದಶಕದಲ್ಲಿ ಚೀನಾದಲ್ಲಿ ಗಮನಾರ್ಹ ಸಮಸ್ಯೆ ಉಂಟುಮಾಡಿದ್ದವು, ಹಾಗೂ 250,000ರಷ್ಟು ಮಂದಿ ರಕ್ತದ ಪ್ಲಾಸ್ಮಾ ದಾನಿಗಳು ಒಂದೇ ಉಪಕರಣವನ್ನು ಬಳಸಿದ ದಾನಿಗಳು HIV ಸೋಂಕನ್ನು ಹೊಂದಿದ್ದರು.[೭೩][೭೪]

ಸಂಗ್ರಹ, ಸರಬರಾಜು ಹಾಗೂ ಬೇಡಿಕೆ[ಬದಲಾಯಿಸಿ]

ಸಂಗ್ರಹಿತ ರಕ್ತವನ್ನು ಸಾಮಾನ್ಯವಾಗಿ ಪ್ರತ್ಯೇಕ ಘಟಕಗಳಾಗಿ ಶೇಖರಿಸಲಾಗುತ್ತದೆ, ಹಾಗೂ ಇವುಗಳಲ್ಲಿ ಕೆಲವು ಅಲ್ಪಕಾಲದ ಶೇಖರಣಾ ಅವಧಿಯನ್ನು ಹೊಂದಿರುತ್ತವೆ. ಪ್ಲೇಟ್‌ಲೆಟ್‌ಗಳನ್ನು ಹೆಚ್ಚುವರಿ ಅವಧಿಗೆ ಶೇಖರಿಸುವ ಬಗ್ಗೆ ಯಾವುದೇ ಸಾಧ್ಯತೆಗಳು ಕಂಡುಬಂದಿಲ್ಲ 2008ರ ಹಾಗೆ ಕೆಲ ಸಾಧ್ಯತೆಗಳನ್ನು ಅಧ್ಯಯನ ಮಾಡಲಾಗಿದ್ದು,[೭೫] ಅವುಗಳಲ್ಲಿ ದೀರ್ಘಕಾಲೀನ ಶೇಖರಣಾ ಅವಧಿಯೆಂದರೆ ಏಳು ದಿನಗಳು.[೭೬] ಬಹು ಸಾಮಾನ್ಯ ಬಳಕೆಯ ಕೆಂಪು ರಕ್ತಕಣಗಳು 35–42 ದಿನಗಳ ಶೇಖರಣಾ ಅವಧಿಯನ್ನು ಶೀತಲೀಕರಣ ತಾಪಮಾನದಲ್ಲಿ ಹೊಂದಿರುತ್ತವೆ.[೭೭][೭೮] ಈ ಅವಧಿಯನ್ನು ಕೂಡಾ ಗ್ಲಿಸೆರಾಲ್‌[೩೪] ನ ಮಿಶ್ರಣದೊಂದಿಗೆ ಶೀತಲೀಕರಿಸುವ ಮೂಲಕ ಹೆಚ್ಚಿಸಬಹುದಾಗಿದ್ದರೂ, ಆ ಪ್ರಕ್ರಿಯೆ ದುಬಾರಿಯಾಗಿರುವುದರಿಂದ ಅಪರೂಪವಾಗಿ ಮಾತ್ರವೇ ಮಾಡಲಾಗುತ್ತದೆ ಹಾಗೂ ವಿಪರೀತ ಅಲ್ಪ ಉಷ್ಣತೆಯ ಶೀತಕದ ಅಗತ್ಯವಿರುತ್ತದೆ. ಪ್ಲಾಸ್ಮಾವನ್ನು ಶೀತಲೀಕರಿಸಿ ಹೆಚ್ಚುವರಿ ಅವಧಿಗೆ ಶೇಖರಿಸಿಡಬಹುದು ಹಾಗೂ ಸಾಧಾರಣವಾಗಿ ಒಂದು ವರ್ಷದ ಅವಧಿಯನ್ನು ಹೊಂದಿರುತ್ತದೆ[೭೯] ಆದ್ದರಿಂದ ಅದರ ಸರಬರಾಜು ಸಮಸ್ಯೆಯೆನಿಸಿಲ್ಲ.

ಮಿತಿಗೊಳಪಟ್ಟ ಶೇಖರಣಾ ಅವಧಿಯೆಂದರೆ ವಿಪತ್ತಿನ ಸಂದರ್ಭದಲ್ಲಿ ರಕ್ತದ ದಾಸ್ತಾನು ಮಾಡುವಿಕೆಯು ಕಷ್ಟಸಾಧ್ಯ ಎಂದರ್ಥ. ಯುನೈಟೆಡ್‌‌‌ ಸ್ಟೇಟ್ಸ್‌ನಲ್ಲಿನ ಸೆಪ್ಟೆಂಬರ್‌ 11ರ ದಾಳಿಯ ನಂತರ ಇದೇ ಹೆಚ್ಚು ಚರ್ಚಿತ ವಿಷಯವಾಗಿದೆ, ಹಾಗೂ ಒಮ್ಮತಾಭಿಪ್ರಾಯವು ವಿಪತ್ತಿನ ಸಮಯದಲ್ಲಿ ಸಂಗ್ರಹಿಸುವುದು ಕಾರ್ಯಸಾಧ್ಯವಲ್ಲ ಹಾಗೂ ಎಲ್ಲಾ ಅವಧಿಯಲ್ಲೂ ನಿರಂತರ ಸರಬರಾಜು ಇರುವಂತೆ ನೋಡಿಕೊಳ್ಳುವುದರೆಡೆ ಗಮನ ಹರಿಸಬೇಕು ಎಂಬುದಾಗಿತ್ತು.[೮೦] U.S.ನಲ್ಲಿನ ರಕ್ತಕೇಂದ್ರಗಳು ಸಾಧಾರಣವಾಗಿ ರೂಢಿಗತ ವರ್ಗಾವಣಾ ಅಗತ್ಯಗಳನ್ನು ಪೂರೈಸುವಷ್ಟು ಮೂರು ದಿನಗಳ ಮಟ್ಟಿನ ನಿರಂತರ ಸರಬರಾಜು ನಿರ್ವಹಿಸುವುದು ಸಹಾ ಕಷ್ಟಸಾಧ್ಯವಾಗಿದೆ.[೮೧]

ರಕ್ತದಾನವನ್ನು ಉತ್ತೇಜಿಸಲು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷದ ಜೂನ್‌ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಘೋಷಿಸಿದೆ. ಈ ದಿನವು ABO ರಕ್ತದ ಗುಂಪಿನ ವ್ಯವಸ್ಥೆಯನ್ನು ಆವಿಷ್ಕರಿಸಿದ ವಿಜ್ಞಾನಿ ಕಾರ್ಲ್‌ ಲ್ಯಾಂಡ್‌ಸ್ಟೀನರ್‌ರ ಹುಟ್ಟಿದ ದಿನವಾಗಿದೆ.[೮೨] 2008ರ ಹಾಗೆ, WHO ವಾರ್ಷಿಕವಾಗಿ 81 ದಶಲಕ್ಷ ಘಟಕಗಳಿಗೂ ಹೆಚ್ಚಿನ ಪ್ರಮಾಣದ ರಕ್ತವನ್ನು ಸಂಗ್ರಹಿಸಲಾಗುತ್ತಿದೆ ಎಂದು ಅಂದಾಜಿಸಿದೆ.[೮೩]

ಸೌಕರ್ಯ ಹಾಗೂ ಪ್ರೋತ್ಸಾಹಧನಗಳು[ಬದಲಾಯಿಸಿ]

ವಿಶ್ವ ಆರೋಗ್ಯ ಸಂಸ್ಥೆಯು 1997ರಲ್ಲಿ ಹಣಕ್ಕಾಗಿಯಲ್ಲದೇ ಐಚ್ಛಿಕ ದಾನಿಗಳ ಎಲ್ಲಾ ರಕ್ತದಾನಗಳಿಗೆ ಗುರಿಯನ್ನು ಏರ್ಪಡಿಸಿತ್ತು,[೧೨] ಆದರೆ 2006ರ ಹಾಗೆ, ಸಮೀಕ್ಷೆ ನಡೆದ 124ರಲ್ಲಿ ಕೇವಲ 49 ರಾಷ್ಟ್ರಗಳು ಮಾತ್ರವೇ ಇದನ್ನು ಮಾನಕವನ್ನಾಗಿ ಹೊಂದಿವೆ. ಯುನೈಟೆಡ್‌ ಸ್ಟೇಟ್ಸ್‌ನಲ್ಲಿನ ಪ್ಲಾಸ್ಮಾಫೆರೆಸಿಸ್‌ ದಾನಿಗಳು ಈಗಲೂ ಸಹಾ ತಮ್ಮ ದಾನಗಳಿಗೆ ಹಣ ಪಡೆಯುತ್ತಾರೆ.[೮೪] ಕೆಲ ರಾಷ್ಟ್ರಗಳು ನಿರಂತರ ಸರಬರಾಜಿಗಾಗಿ ಹಣಕ್ಕಾಗಿ ದಾನ ಮಾಡುವವರನ್ನೇ ಅವಲಂಬಿಸಿವೆ.[೮೫] ತಾನ್ಜೇನಿಯಾದಂತಹಾ ಅನೇಕ ರಾಷ್ಟ್ರಗಳು, ಈ ಮಾನಕದೆಡೆಗೆ ದಾಪುಗಾಲು ಹಾಕಿದ್ದು 2005ರಲ್ಲಿನ 20 ಪ್ರತಿಶತ ದಾನಿಗಳು ಐಚ್ಛಿಕ ದಾನಿಗಳಾಗಿದ್ದರೆ 2007ರಲ್ಲಿ,[೫] 80 ಪ್ರತಿಶತವನ್ನು ಮುಟ್ಟಿತ್ತು, ಆದರೆ ಸಮೀಕ್ಷೆಗೊಳಪಟ್ಟ 124ರಲ್ಲಿ 68 ರಾಷ್ಟ್ರಗಳು ಅಲ್ಪ ಪ್ರಮಾಣದ ಉನ್ನತಿ ಅಥವಾ ಯಾವುದೇ ಉನ್ನತಿ ಸಾಧಿಸಿರಲಿಲ್ಲ. ಕೆಲ ರಾಷ್ಟ್ರಗಳಲ್ಲಿ, ಉದಾಹರಣೆಗೆ ಬ್ರೆಜಿಲ್,[೮೬] ನಂತಹವುಗಳಲ್ಲಿ ರಕ್ತದಾನ ಅಥವಾ ಇತರೆ ಮಾನವ ಅಂಗಾಂಶಗಳನ್ನು ದಾನ ಮಾಡುವುದರ ಬದಲಿಗೆ ಆರ್ಥಿಕ ಅಥವಾ ಇನ್ಯಾವುದೇ ರೀತಿಯ ಪರಿಹಾರವನ್ನು ಪಡೆಯುವುದು ಕಾನೂನುಬಾಹಿರ.

ಕಬ್ಬಿಣಾಂಶದ ಅತಿಪೂರಣಕ್ಕೆ ಒಳಗಾಗಿರುವ ರೋಗಿಗಳಿಗೆ ರಕ್ತದಾನವು ವಿಷಕಾರಿ ಪದಾರ್ಥಗಳ ಸಂಗ್ರಹವನ್ನು ತಡೆಗಟ್ಟುತ್ತದೆ.[೮೭] ಯುನೈಟೆಡ್‌ ಸ್ಟೇಟ್ಸ್‌ನಲ್ಲಿನ ರಕ್ತನಿಧಿಗಳು ಚಿಕಿತ್ಸಕ ದಾನಿಯಿಂದ ಪಡೆದ ರಕ್ತವಾಗಿದ್ದರೆ ರಕ್ತದ ಮಾಹಿತಿಯನ್ನು ದಾಖಲಿಸುವುದು ಕಡ್ಡಾಯವಾಗಿರುವುದರಿಂದ ಬಹಳಷ್ಟು ಮಂದಿ ಯಾವುದೇ ರಕ್ತರೋಗಪೀಡಿತರ ರಕ್ತವನ್ನು ಸ್ವೀಕರಿಸುವುದಿಲ್ಲ.[೮೮] ಆಸ್ಟ್ರೇಲಿಯನ್‌ ರೆಡ್‌ಕ್ರಾಸ್‌ ಬ್ಲಡ್‌ ಸರ್ವಿಸ್‌ನಂತಹಾ ಇತರೆ ಸಂಸ್ಥೆಗಳು, ಹಿಮೊಕ್ರೊಮಾಟೊಸಿಸ್‌ನಂತಹಾ ರೋಗಪೀಡಿತ ದಾನಿಗಳಿಂದ ರಕ್ತವನ್ನು ಸ್ವೀಕರಿಸುತ್ತವೆ. ಇದೊಂದು ವಂಶವಾಹಿ ವಿಕೃತಿಯಾಗಿದ್ದು ರಕ್ತದ ಸುರಕ್ಷತೆಗೆ ಯಾವುದೇ ಅಪಾಯ ಉಂಟುಮಾಡುವುದಿಲ್ಲ.[೮೯] ಪುರುಷರಿಗೆ ರಕ್ತದಾನವು ಹೃದಯದ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುವುದೆಂಬ ಅಭಿಪ್ರಾಯವಿದ್ದರೂ,[೯೦] ಅವುಗಳ ನಡುವಿನ ಸಂಬಂಧ ಇನ್ನೂ ದೃಢಪಟ್ಟಿಲ್ಲ.

ಇಟಲಿಯಲ್ಲಿ, ರಕ್ತದಾನಿಗಳಿಗೆ ರಕ್ತದಾನ ಮಾಡುವ ದಿನವು ವೇತನಸಹಿತ ರಜಾದಿನವಾಗಿರುತ್ತದೆ.[೯೧] ಇತರೆ ಪ್ರೋತ್ಸಾಹಕಗಳೂ ಕೂಡಾ ಸಂಸ್ಥೆಗಳಿಂದ ಸೇರಿಸಲ್ಪಡುತ್ತವೆ, ಇವುಗಳಲ್ಲಿ ಬಹುಸಾಮಾನ್ಯವಾಗಿದ್ದು ರಕ್ತದಾನಕ್ಕೆ ಬೇಕಾದ ಸಮಯದ ಬಿಡುವು ಇದರಲ್ಲಿ ಸೇರಿದೆ.[೯೨] ರಕ್ತಕೇಂದ್ರಗಳು ಕೆಲವೊಮ್ಮೆ ದಾನಿಗಳಿಗೆ ಕೊರತೆಯ ಸಂದರ್ಭದಲ್ಲಿ ಆದ್ಯತೆ ನೀಡುವಂತಹಾ, ಉಚಿತ ಟೀಷರ್ಟ್‌ಗಳು ಹಾಗೂ ಇತರೆ ಸಣ್ಣ ಪ್ರೋತ್ಸಾಹಕಗಳನ್ನು (e.g., ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಕಾರಿನ ಗಾಜು ಒರೆಸುಗ, ಲೇಖನಿಗಳು, etc.), ಅಥವಾ ದಾನಿಗಳಿಗೆ ಪ್ರಶಸ್ತಿಗಳನ್ನು ನೀಡುವುದು ಹಾಗೂ ಯಶಸ್ವಿ ಮೇಳಗಳ ಆಯೋಜಕರಿಗೆ ಇನಾಮುಗಳಂತಹಾ ಇತರೆ ಕಾರ್ಯಕ್ರಮಗಳನ್ನು ಸೇರಿಸುತ್ತವೆ.[೯೩] ಬಹಳಷ್ಟು ಅಲ್ಲೋಜೆನಿಕ್‌ ರಕ್ತದಾನಿಗಳು ಪರೋಪಕಾರಾರ್ಥವೆಂಬಂತೆ ದಾನ ಮಾಡುತ್ತಿದ್ದು, ದಾನದಿಂದ ಯಾವುದೇ ನೇರ ಪ್ರತಿಫಲವನ್ನು ಅಪೇಕ್ಷಿಸುವುದಿಲ್ಲ.[೯೪]

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. M. E. ಬ್ರೆಚರ್‌, ಸಂಪಾದಕ (2005), AABB ಟೆಕ್ನಿಕಲ್‌ ಮ್ಯಾನ್ಯುಯಲ್‌ , ಹದಿನೈದನೇ ಆವೃತ್ತಿ, ಬೆಥೆಸ್ಡಾ, MD: AABB, ISBN 1-56935-19607, p.98-103
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 5. ೫.೦ ೫.೧ T. ಬ್ರೌನ್‌ "ಆಫ್ರಿಕಾದಲ್ಲಿ ರಕ್ತ ವ್ಯವಸ್ಥೆಗಳ ಬಲಪಡಿಸುವಿಕೆ: ಪ್ರೋಗ್ರೆಸ್‌ ಅಂಡರ್‌‌ PEPFARನಡಿಯ ಅಭಿವೃದ್ಧಿ ಹಾಗೂ ಉಳಿದ ಸವಾಲುಗಳು" AABB ನ್ಯೂಸ್‌ . ಏಪ್ರಿಲ್‌, 1998:ಪುಟ 30
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. ೧೨.೦ ೧೨.೧ ೧೨.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Heim MU, Mempel W (1991). "[The need for thorough infection screening in donors of autologous blood]". Beitr Infusionsther (in German). 28: 313–6. PMID 1725645. 
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 25. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. "Plasma fact sheet" (PDF). American Red Cross. Archived from the original (PDF) on 2008-06-25. 
 29. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. R. Miller, P.E. Hewitt, R. Warwick, M.C. Moore, B. Vincent (1998). "Review of counselling in a transfusion service: the London (UK) experience". Vox Sang. 74 (3): 133–9. doi:10.1046/j.1423-0410.1998.7430133.x. PMID 9595639. 
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. ೩೪.೦ ೩೪.೧ ೩೪.೨ ೩೪.೩ "Circular of Information for use of Blood and Blood Products" (PDF). AABB, ARC, America's Blood Centers. Archived from the original (pdf) on 2006-06-18. 
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. ೩೯.೦ ೩೯.೧ Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 40. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 41. ಸಂಗ್ರಹ ಸಾಧನಗಳ ಓರ್ವ ಪ್ರಮುಖ ತಯಾರಕರು 16 ಮಾನಕ (1.651 mm) ಗಾತ್ರವನ್ನು ಬಳಸುತ್ತಾರೆ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 42. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 43. Akerblom O, Kreuger A (1975). "Studies on citrate-phosphate-dextrose (CPD) blood supplemented with adenine". Vox Sang. 29 (2): 90–100. doi:10.1111/j.1423-0410.1975.tb00484.x. PMID 238338. 
 44. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 45. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. ಘಟಕಗಳ ದಾನ UK ರಾಷ್ಟ್ರೀಯ ರಕ್ತ ಸೇವೆ. 2009-10-10ರಲ್ಲಿ ಪುನರ್ ಸ್ಥಾಪಿಸಲಾಗಿದೆ.
 47. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 49. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 50. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 51. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 52. Cite error: Invalid <ref> tag; no text was provided for refs named Mayo
 53. "Did you know?". mayoclinic.org. Retrieved 2009=10-26.  Check date values in: |access-date= (help)
 54. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 55. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 56. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 57. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 58. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 59. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 60. "Who can't give blood". National Blood Service for England and Wales. Retrieved 2009-02-026.  Check date values in: |access-date= (help)
 61. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 62. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 63. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 64. B. Newman, S. Graves (2001). "A study of 178 consecutive vasovagal syncopal reactions from the perspective of safety". Transfusion. 41 (12): 1475–9. doi:10.1046/j.1537-2995.2001.41121475.x. PMID 11778059. 
 65. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 66. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 67. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 68. Working Group on Complications Related to Blood Donation JF (2008). "Standard for Surveillance of Complications Related to Blood D Donation" (PDF). European Haemovigilance Network: 11. Archived from the original (PDF) on 2010-02-15.  line feed character in |title= at position 29 (help)
 69. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 70. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 71. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 72. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 73. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 74. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 75. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 76. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 77. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 78. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 79. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 80. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 81. "Current status of America's Blood Centers blood supply". America's Blood Centers. 
 82. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 83. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 84. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 85. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 86. L. ಫುಸ್ಕೋ "ಲ್ಯಾಟಿನ್‌ ಅಮೇರಿಕಾದಿಂದ ಏಷ್ಯಾವರೆಗೆ, ಸಮಸ್ಯೆಗಳನ್ನು ಎದುರಿಸಿ, ಸಾಧನೆಯೆತ್ತರವನ್ನು ಏರುವುದು" AABB ನ್ಯೂಸ್‌ . ಏಪ್ರಿಲ್‌, 1998:ಪುಟ 30
 87. Fields AC, Grindon AJ (1999). "Hemochromatosis, iron, and blood donation: a short review". Immunohematology. 15 (3): 108–12. PMID 15373512. 
 88. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 89. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 90. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 91. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 92. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 93. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 94. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

"https://kn.wikipedia.org/w/index.php?title=ರಕ್ತ_ದಾನ&oldid=492079" ಇಂದ ಪಡೆಯಲ್ಪಟ್ಟಿದೆ