ವಿಷಯಕ್ಕೆ ಹೋಗು

ಗ್ಲುಕೋಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಿ-ಗ್ಲೂಕೋಸ್
ಹೆಸರುಗಳು
ಐಯುಪಿಎಸಿ ಹೆಸರು
6-(hydroxymethyl)oxane-2,3,4,5-tetrol
Other names
Dextrose, grape sugar, blood sugar, corn sugar
Identifiers
3D model (JSmol)
Abbreviations Glc
ChemSpider
EC Number 200-075-1
 • OC[C@@H](O1)[C@@H](O)[C@H](O)[C@@H](O)[C@@H](O)1 (glucopyranose) ; OC[C@@H](O)[C@@H](O)[C@H](O)[C@@H](O)C=O (acyclic glucose).
ಗುಣಗಳು [೧]
ಅಣು ಸೂತ್ರ C6H12O6
ಮೋಲಾರ್ ದ್ರವ್ಯರಾಶಿ 180.16 g/mol
ಸಾಂದ್ರತೆ 1.54 g/cm3
ಕರಗು ಬಿಂದು

α-D-glucose: 146 °C
β-D-glucose: 150 °C

ಕರಗುವಿಕೆ ನೀರಿನಲ್ಲಿ 91 g/100 ml (25 °C)
ಕರಗುವಿಕೆ ಮೆಥನೋಲ್ 0.037 M
ಕರಗುವಿಕೆ ಎಥನೋಲ್ 0.006 M
ಕರಗುವಿಕೆ ಟೆಟ್ರಾಹೈಡ್ರೋಫುರನ್ 0.016 M
ಉಷ್ಣರಸಾಯನಶಾಸ್ತ್ರ
ರೂಪಗೊಳ್ಳುವ
ಸ್ಟ್ಯಾಂಡರ್ಡ್ ಶಾಖಪ್ರಮಾಣ
ΔfHo298
−1271 kJ/mol
ದಹನದ
ಸ್ಟ್ಯಾಂಡರ್ಡ್ ಶಾಖಪ್ರಮಾಣ
ΔcHo298
−2805 kJ/mol
ಸ್ಟ್ಯಾಂಡರ್ಡ್
ಮೋಲಾರ್ ಎಂಟ್ರಪಿ
So298
209.2 J K−1 mol−1
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ಗ್ಲುಕೋಸ್‌ (Glc) ಒಂದು ಸರಳ ಶರ್ಕರವಾಗಿದ್ದು (ಮೋನೊಸ್ಯಾಕರೈಡ್) ಜೀವಶಾಸ್ತ್ರದಲ್ಲಿನ ಒಂದು ಪ್ರಮುಖ ಕಾರ್ಬೊಹೈಡ್ರೇಟ್‌(ಶರ್ಕರ ಪಿಷ್ಟ)ವಾಗಿದೆ. ಜೀವಕೋಶಗಳು ಇದನ್ನು ಶಕ್ತಿಯ ಮ‌ೂಲವಾಗಿ ಮತ್ತು ಚಯಾಪಚಯ ಕ್ರಿಯೆಯ ಮಧ್ಯವರ್ತಿಯಾಗಿ ಬಳಸಿಕೊಳ್ಳುತ್ತವೆ.ಗ್ ಗ್ಲುಕೋಸ್‌ ದ್ಯುತಿಸಂಶ್ಲೇಷಣೆ ಕ್ರಿಯೆಯ ಒಂದು ಮುಖ್ಯ ಉತ್ಪನ್ನ ಮತ್ತು ಇದು ಜೀವಕೋಶಗಳ ಉಸಿರಾಟ ಕ್ರಿಯೆಯನ್ನು ಆರಂಭಿಸುತ್ತದೆ. ಪಿಷ್ಟ ಮತ್ತು ಸೆಲ್ಯುಲೋಸ್‌ ಗ್ಲುಕೋಸ್‌‌ನ ನಿರ್ಜಲೀಕರಣದಿಂದ ಪಡೆಯುವ ಪಾಲಿಮರ್‌‌ಗಳಾಗಿವೆ. "ಗ್ಲುಕೋಸ್‌" ಪದವು "ಸಿಹಿ" ಎಂಬರ್ಥವಿರುವ ಗ್ರೀಕ್ ಪದ glukus (ಗ್ಲುಕುಸ್) (γλυκύς)ನಿಂದ ಬಂದಿದೆ. ಉತ್ತರ ಪ್ರತ್ಯಯ "-ose" ಶರ್ಕರವನ್ನು ಸೂಚಿಸುತ್ತದೆ.

ಗ್ಲುಕೋಸ್‌ ಅನೇಕ ವಿಧದ ರಚನೆಗಳನ್ನು ಹೊಂದಬಹುದು. ಆದರೆ ಈ ಎಲ್ಲಾ ರಚನೆಗಳನ್ನು ಕನ್ನಡಿ-ಬಿಂಬಗಳ ಎರಡು (ತಂತು)ವಂಶಗಳಾಗಿ (ಸ್ಟೀರಿಯೊಐಸೋಮರ್‌ಗಳು(ಸಮಸ್ಥಾನಿಕಗಳು‌) ವಿಭಾಗಿಸಬಹುದು. ಈ ಐಸೋಮರ್‌ಗಳ ಕೇವಲ ಒಂದು ಜೊತೆ ಮಾತ್ರ ನಿಸರ್ಗದಲ್ಲಿ ಅಸ್ತಿತ್ವದಲ್ಲಿದೆ. ಅದನ್ನು ಗ್ಲುಕೋಸ್‌ನ "ಬಲ-ಭಾಗದ ರೂಪ"ದಿಂದ ಪಡೆಯಲಾಗಿದ್ದು, D-ಗ್ಲುಕೋಸ್‌ ಎಂದು ಸೂಚಿಸಲಾಗುತ್ತದೆ. D-ಗ್ಲುಕೋಸ್‌ಅನ್ನು ಹೆಚ್ಚಾಗಿ, ವಿಶೇಷವಾಗಿ ಆಹಾರ ಉದ್ಯಮದಲ್ಲಿ ಡೆಕ್ಸ್‌ಟ್ರೋಸ್‌ ಎಂದು ನಿರೂಪಿಸಲಾಗುತ್ತದೆ. ಡೆಕ್ಸ್‌ಟ್ರೋಸ್‌ ಪದವನ್ನು ಡೆಕ್ಸ್‌ಟ್ರೊರೊಟೇಟರಿ ಗ್ಲುಕೋಸ್‌ ‌‌ನಿಂದ ಪಡೆಯಲಾಗಿದೆ.[೨] ಡೆಕ್ಸ್‌ಟ್ರೋಸ್‌ನ ದ್ರಾವಣವು ಧ್ರುವೀಕೃತ ಬೆಳಕನ್ನು ಬಲಕ್ಕೆ ತಿರುಗಿಸುತ್ತದೆ (ಲ್ಯಾಟಿನ್‌ನಲ್ಲಿ: ಡೆಕ್ಸ್‌ಟರ್ = "ಬಲ" ). ಈ ವಿಷಯವು D-ಗ್ಲುಕೋಸ್‌‌ಗೆ ಸಂಬಂಧಿಸಿದೆ. ಅಣುವಿನ ಕನ್ನಡಿ-ಬಿಂಬ L-ಗ್ಲುಕೋಸ್‌ನ ಬಗ್ಗೆ ಪ್ರತ್ಯೇಕವಾಗಿ ಚರ್ಚಿಸಲಾಗಿದೆ.

ರಚನಾ ಸ್ವರೂಪ[ಬದಲಾಯಿಸಿ]

ಗ್ಲುಕೋಸ್‌ಅನ್ನು "ಸರಳ ಶರ್ಕರ"ವೆಂದರೂ (ಅಂದರೆ ಮೋನೊಸ್ಯಾಕರೈಡ್), ಅದು ಅನೇಕ ವಿವಿಧ ರಚನೆಗಳನ್ನು ಹೊಂದಿರುವುದರಿಂದ ಅದೊಂದು ಸಂಕೀರ್ಣ ಅಣುವಾಗಿದೆ. ಈ ರಚನೆಗಳನ್ನು ಸಾಮಾನ್ಯವಾಗಿ, ದ್ರಾವಣದಲ್ಲಿ ಕಡಿಮೆ ಪ್ರಮಾಣದಲ್ಲಿರುವ ಅಚಕ್ರೀಯ ಐಸೋಮರ್‌ನ ಸ್ಥಿತಿಯಲ್ಲಿ ವಿವರಿಸಲಾಗುತ್ತದೆ.

ಗ್ಲುಕೋಸ್‌ಅನ್ನು ಒಂದು ಕೊನೆಯಲ್ಲಿ ಆಲ್ಡಿಹೈಡ್ ಗುಂಪಿನೊಂದಿಗೆ ಸೇರಿಕೊಳ್ಳುವ ಆರು ಇಂಗಾಲಪರಮಾಣುಗಳ ಒಂದು ಸರಪಳಿ ಹೆಕ್ಸನಲ್‌ನಿಂದ ಪಡೆಯಲಾಗುತ್ತದೆ. ಇತರ ಐದು ಇಂಗಾಲದ ಪರಮಾಣುಗಳಲ್ಲಿ ಪ್ರತಿಯೊಂದೂ ಆಲ್ಕಹಾಲ್ ಗುಂಪನ್ನು ಹೊಂದಿರುತ್ತವೆ. ಗ್ಲುಕೋಸ್‌ಅನ್ನು ಆಲ್ಡೊ ಹೆಕ್ಸಾಸ್ ಎನ್ನಲಾಗುತ್ತದೆ. ದ್ರಾವಣದಲ್ಲಿ ಗ್ಲುಕೋಸ್‌ ಮುಖ್ಯವಾಗಿ 6-ಹೈಡ್ರಾಕ್ಸಿ ಗುಂಪು ಮತ್ತು ಆಲ್ಡಿಹೈಡ್‌‌ನ ಕ್ರಿಯೆಯಿಂದ ಬರುವ ಒಂದು ಹೆಮಿಅಸೆಟಾಲ್‌ ಗುಂಪನ್ನು ಹೊಂದಿರುವ ಆರು-ಅಂಶಗಳ ಸುರುಳಿಯಾಗಿರುತ್ತದೆ. ಐದು ಇಂಗಾಲದ ಪರಮಾಣುಗಳನ್ನು ಮತ್ತು ಒಂದು ಆಮ್ಲಜನಕ ಪರಮಾಣುವನ್ನು ಹೊಂದಿರುವ ಈ ಸುರುಳಿಯು ಪೈರನ್‌ನಿಂದ ವ್ಯುತ್ಪನ್ನವಾದುದಾಗಿದೆ. ಗ್ಲುಕೋಸ್‌ನ ಈ ಸುರುಳಿಯ ರೂಪವನ್ನು ಗ್ಲುಕೊಪೈರನಾಸ್ ಎಂದು ಕರೆಯುತ್ತಾರೆ, ಇದರಲ್ಲಿ ಎರಡು ಐಸೋಮರ್‌ಗಳಿರುತ್ತವೆ.

ಹೆಮಿಅಸೆಟಾಲ್‌ನ ಸ್ಥಾನವಾದ C-1ರಲ್ಲಿನ ಅಸಮ್ಮಿತ ಕೇಂದ್ರವನ್ನು ಆನೋಮರಿಕ್ ಇಂಗಾಲದ ಪರಮಾಣು ಎಂದು ಕರೆಯುತ್ತಾರೆ. ಈ ಸುರುಳಿಯ ಮುಚ್ಚುವ ಕ್ರಿಯೆಯು α-ಗ್ಲುಕೋಸ್‌ ಮತ್ತು β-ಗ್ಲುಕೋಸ್‌ ಎಂದು ಹೆಸರಿಸಿದ ಆನೋಮರ್‌‌ಗಳೆನ್ನುವ ಎರಡು ಐಸೋಮರ್‌ಗಳನ್ನು ನೀಡುತ್ತದೆ. ಈ ಆನೋಮರ್‌ಗಳು C-1ಕ್ಕೆ ಸಂಬಂಧಿಸಿದ ಹೈಡ್ರಾಕ್ಸಿಲ್ ಗುಂಪಿನ ಸ್ಥಾನದ ವಿಷಯದಲ್ಲಿ ಭಿನ್ನವಾಗಿರುತ್ತವೆ. D-ಗ್ಲುಕೋಸ್‌ಅನ್ನು ಹ್ಯಾವರ್ತ್ ಪ್ರಕ್ಷೇಪವಾಗಿ ಅಥವಾ ಪ್ರಮಾಣಿತ ಸರಪಳಿ ರಚನೆಯಲ್ಲಿ ಚಿತ್ರಿಸಿದಾಗ, αದ ಸ್ಥಾನವು C-1ಗೆ ಅಂಟಿಕೊಂಡಿರುವ ಹೈಡ್ರಾಕ್ಸಿಲ್ ಗುಂಪನ್ನು -CH2OH ಗುಂಪಿಗೆ C-5ರಲ್ಲಿ ಟ್ರಾನ್ಸ್ ಆಗಿ ಇರಿಸಲಾಗಿದೆ ಮತ್ತು βದ ಸ್ಥಾನವು ಅದನ್ನು ಸಿಸ್ ಆಗಿ ಇರಿಸಲಾಗಿದೆ ಎಂಬರ್ಥವನ್ನು ನೀಡುತ್ತದೆ. αವನ್ನು βದಿಂದ ಪ್ರತ್ಯೇಕಿಸುವ ಒಂದು ಕರಾರುವಾಕ್ಕಾಗಿಲ್ಲದ ಆದರೆ ತೋರ್ಕೆಯ ಆಕರ್ಷಕ ಪರ್ಯಾಯ ವಿಧಾನವೆಂದರೆ C-1 ಹೈಡ್ರಾಕ್ಸಿಲ್‌ ಸುರುಳಿಯ-ಸಮತಲದ ಕೆಳಗೆ ಅಥವಾ ಮೇಲೆ ಇದೆಯೇ ಎಂಬುದನ್ನು ಪರಿಶೀಲಿಸುವುದಾಗಿದೆ; ಗ್ಲುಕೋಸ್‌ ಸುರುಳಿಯನ್ನು ಮೇಲ್ಭಾಗ ಕೆಳಗಿರುವಂತೆ ಅಥವಾ ಪರ್ಯಾಯ ಸರಪಳಿ ರಚನೆಯಲ್ಲಿ ಚಿತ್ರಿಸಿದರೆ ಇದು ವಿಫಲವಾಗುತ್ತದೆ. α ಮತ್ತು β ಮ್ಯೂಟರೊಟೇಶನ್ ಎನ್ನುವ ಕ್ರಿಯೆಯಲ್ಲಿ ನೀರಿನ ದ್ರಾವಣದಲ್ಲಿ ಕೆಲವು ಗಂಟೆಗಳ ಅವಧಿಯಲ್ಲಿ α:β 36:64 ರಷ್ಟು ಅಂತಿಮ ಸ್ಥಿರ ಅನುಪಾತದೊಂದಿಗೆ ಪರಸ್ಪರ ಪರಿವರ್ತಿಸುವ ಅಂಶಗಳಾಗಿ ರೂಪುಗೊಳ್ಳುತ್ತವೆ.[೩] ಅವು ಆನೋಮರಿಕ್ ಪರಿಣಾಮದ ಪ್ರಭಾವಕ್ಕೆ ಒಳಗಾಗಿಲ್ಲದಿದ್ದರೆ ಈ ಅನುಪಾತವು α:β 11:89 ರಷ್ಟಿರುತ್ತದೆ.[೪]

ಐಸೋಮರ್‌ಗಳು[ಬದಲಾಯಿಸಿ]

ಆಲ್ಡೊಹೆಕ್ಸೋಸ್‌ಗಳು ಅವುಗಳ ಅಚಕ್ರೀಯ ರೂಪಗಳಲ್ಲಿ (ಅಂದರೆ ಆನೋಮರಿಕ್‌ ಇಂಗಾಲವನ್ನು ಹೊರತುಪಡಿಸಿ) ನಾಲ್ಕು ಕೈರಲ್ ಕೇಂದ್ರಗಳನ್ನು ಹೊಂದಿರುತ್ತವೆ. ನಾಲ್ಕು ಕೈರಲ್ ಕೇಂದ್ರಗಳು 24 = 16 ಸ್ಟೀರಿಯೊಐಸೋಮರ್‌ಗಳನ್ನು ನೀಡುತ್ತವೆ. ಈ ಸ್ಟೀರಿಯೊಐಸೋಮರ್‌ಗಳನ್ನು ಪರಸ್ಪರ ಕನ್ನಡಿ-ಬಿಂಬಗಳಾಗಿರುವ ಪ್ರತಿಯೊಂದು ಎಂಟು ಶರ್ಕರಗಳನ್ನು ಹೊಂದಿರುವಂತೆ ಎರಡು ವರ್ಗಗಳಾಗಿ ವಿಂಗಡಿಸಬಹುದು. ಒಂದು ವರ್ಗವನ್ನು L ಎಂದೂ, ಮತ್ತೊಂದನ್ನು D ಎಂದೂ ಹೆಸರಿಸಲಾಗುತ್ತದೆ. ಈ ಐಸೋಮರ್‌ಗಳಲ್ಲಿ ಕೇವಲ ಏಳು ಮಾತ್ರ ನಿಸರ್ಗದಲ್ಲಿ ಲಭಿಸುತ್ತವೆ. ಅವುಗಳಲ್ಲಿ D-ಗ್ಲುಕೋಸ್‌ (ಗ್ಲು), D-ಗ್ಯಾಲಕ್ಟೋಸ್ (ಗಾಲ್) ಮತ್ತು D-ಮ್ಯಾನೋಸ್ (ಮ್ಯಾನ್) ಬಹು ಮುಖ್ಯವಾದವು. ಈ ಎಂಟು ಐಸೋಮರ್‌ಗಳು (ಗ್ಲುಕೋಸ್‌ಅನ್ನೂ ಒಳಗೊಂಡು) ಡಯಾಸ್ಟೀರಿಯೊಐಸೋಮರ್‌ಗಳಾಗಿದ್ದು, ಅವು D ಸರಣಿಗೆ ಸೇರುತ್ತವೆ.

ಭೌತಿಕ ಲಕ್ಷಣಗಳು[ಬದಲಾಯಿಸಿ]

ಎಲ್ಲಾ ರೀತಿಯ ಗ್ಲುಕೋಸ್‌ ಬಣ್ಣರಹಿತವಾಗಿದ್ದು, ನೀರಿನಲ್ಲಿ ಕರಗುತ್ತವೆ. ಸ್ಥಿತಿಗಳ ಆಧಾರದಲ್ಲಿ, ಮ‌ೂರು ಪ್ರಮುಖ ರೂಪಗಳನ್ನು ಹರಳಾಗಿಸಬಹುದು: α-ಗ್ಲುಕೋಸ್‌, β-ಗ್ಲುಕೋಸ್‌ ಮತ್ತು ಹೈಡ್ರೀಕರಿಸಿದ β-ಗ್ಲುಕೋಸ್‌.[೫]

ಉತ್ಪಾದನೆ[ಬದಲಾಯಿಸಿ]

ಗ್ಲುಕೋಸ್‌ ಗುಳಿಗೆಗಳು

ಜೈವಿಕ ಉತ್ಪತ್ತಿ[ಬದಲಾಯಿಸಿ]

ಸಸ್ಯಗಳಲ್ಲಿ ಮತ್ತು ಕೆಲವು ಪ್ರೊಕ್ಯಾರಿಯಟ್‌ಗಳಲ್ಲಿ ಗ್ಲುಕೋಸ್‌ ದ್ಯುತಿಸಂಶ್ಲೇಷಣೆ ಕ್ರಿಯೆಯ ಒಂದು ಉತ್ಪನ್ನವಾಗಿದೆ. ಪ್ರಾಣಿ ಮತ್ತು ಶಿಲೀಂಧ್ರಗಳಲ್ಲಿ, ಗ್ಲುಕೋಸ್‌ ಗ್ಲೈಕೊಜನಲಿಸಿಸ್ ಎಂಬ ಕ್ರಿಯೆಯಲ್ಲಿ ಗ್ಲೈಕೋಜನ್‌ನ ವಿಭಜನೆಯಿಂದ ಉತ್ಪತ್ತಿಯಾಗುತ್ತದೆ. ಸಸ್ಯಗಳಲ್ಲಿ ವಿಭಜನೆಯ ತಲಾಧಾರವೆಂದರೆ ಪಿಷ್ಟ.

ಪ್ರಾಣಿಗಳಲ್ಲಿ ಗ್ಲುಕೋಸ್‌ ಪಿತ್ತಜನಕಾಂಗ ಮತ್ತು ಮ‌ೂತ್ರಪಿಂಡದಲ್ಲಿ ಗ್ಲುಕೊನಿಯೋಜನಸಿಸ್ ಎಂಬ ಕ್ರಿಯೆಯಲ್ಲಿ ಪೈರುವೇಟ್ ಮತ್ತು ಗ್ಲಿಸರಾಲ್‌ನಂತಹ ಕಾರ್ಬೊಹೈಡ್ರೇಟ್‌-ಅಲ್ಲದ ಮಧ್ಯವರ್ತಿಗಳಿಂದ ಉತ್ಪತ್ತಿಯಾಗುತ್ತದೆ.

ಕೆಲವು ಕಡಲಾಳದ ಬ್ಯಾಕ್ಟೀರಿಯಾಗಳಲ್ಲಿ ಗ್ಲುಕೋಸ್‌ ರಾಸಾಯನಿಕ ಸಂಶ್ಲೇಷಣೆ ಕ್ರಿಯೆಯಿಂದ ಉತ್ಪತ್ತಿಯಾಗುತ್ತದೆ.

ವಾಣಿಜ್ಯ ಬಳಕೆ[ಬದಲಾಯಿಸಿ]

ಗ್ಲುಕೋಸ್‌ಅನ್ನು ವಾಣಿಜ್ಯವಾಗಿ ಪಿಷ್ಟದ ಎಂಜೈಮಿಕ-ಜಲವಿಚ್ಛೇದನೆಯಿಂದ ತಯಾರಿಸಲಾಗುತ್ತದೆ. ಅನೇಕ ಬೆಳೆಗಳನ್ನು ಪಿಷ್ಟದ ಮ‌ೂಲವಾಗಿ ಬಳಸಲಾಗುತ್ತದೆ. ಮೆಕ್ಕೆಜೋಳ, ಭತ್ತ, ಗೋಧಿ, ಮರಗೆಣಸು, ಮುಸುಕಿನ ಜೋಳದ ಹೊಟ್ಟು ಮತ್ತು ಸಬ್ಬಕ್ಕಿ ಮೊದಲಾದವುಗಳನ್ನು ಪ್ರಪಂಚದ ವಿವಿಧೆಡೆಗಳಲ್ಲಿ ಬಳಸುತ್ತಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮೆಕ್ಕೆಜೋಳದ ಪಿಷ್ಟವನ್ನು ವ್ಯಾಪಕವಾಗಿ ಉಪಯೋಗಿಸುತ್ತಾರೆ. ಹೆಚ್ಚಿನ ವಾಣಿಜ್ಯ ಗ್ಲುಕೋಸ್‌, ಗ್ಲುಕೋಸ್‌ ಮತ್ತು ಫ್ರಕ್ಟೋಸ್‌ನ ಸರಿಸುಮಾರು 1:1 ಮಿಶ್ರಣವಾದ ಇನ್ವರ್ಟ್ ಶರ್ಕರದ ರೂಪದಲ್ಲಿ ಕಂಡುಬರುತ್ತದೆ. ಮ‌ೂಲಭೂತವಾಗಿ ಸೆಲ್ಯುಲೋಸ್‌ಅನ್ನು ಜಲವಿಚ್ಛೇದನೆಗೊಳಿಸಿ ಗ್ಲುಕೋಸ್‌ ತಯಾರಿಸಬಹುದು. ಆದರೆ ಈ ಕ್ರಿಯೆಯು ವಾಣಿಜ್ಯವಾಗಿ ಇದುವರೆಗೆ ಬಳಕೆಗೆ ಬಂದಿಲ್ಲ.[೫]

ಕಾರ್ಯ ವಿಧಾನ[ಬದಲಾಯಿಸಿ]

ಗ್ಲುಕೋಸ್‌ ಚಯಾಪಚಯ ಕ್ರಿಯೆ ಮತ್ತು ಆ ಕ್ರಿಯೆಯಲ್ಲಿನ ಅದರ ವಿವಿಧ ರೂಪಗಳು. ಪಿಷ್ಟ, ಗ್ಲೈಕೋಜನ್, ಡಿಸ್ಯಾಕರೈಡ್‌ಗಳು ಮತ್ತು ಮೋನೊಸ್ಯಾಕರೈಡ್‌ಗಳನ್ನೂ ಒಳಗೊಂಡಂತೆ, ಗ್ಲುಕೋಸ್‌-ಹೊಂದಿರುವ ಸಂಯುಕ್ತಗಳು ಮತ್ತು ಐಸೋಮರಿಕ್ ರೂಪಗಳು ಜೀರ್ಣಗೊಂಡು, ಕರುಳಿನಲ್ಲಿ ಶರೀರಕ್ಕೆ ತೆಗೆದುಕೊಳ್ಳಲ್ಪಡುತ್ತವೆ. ಗ್ಲುಕೋಸ್‌ ಮುಖ್ಯವಾಗಿ ಪಿತ್ತಜನಕಾಂಗ ಮತ್ತು ಸ್ನಾಯುಗಳಲ್ಲಿ ಗ್ಲೈಕೋಜನ್ ಆಗಿ ಶೇಖರವಾಗುತ್ತದೆ. ಇದು ಅಂಗಾಂಶಗಳಲ್ಲಿ ಸ್ವತಂತ್ರ ಗ್ಲುಕೋಸ್‌ ಆಗಿ ಹಂಚಲ್ಪಡುತ್ತದೆ ಮತ್ತು ಬಳಸಲ್ಪಡುತ್ತದೆ.

ಫ್ರಕ್ಟೋಸ್‌ನಂತಹ (ಫ್ರು) ಮತ್ತೊಂದು ಮೋನೊಸ್ಯಾಕರೈಡ್ಅನ್ನು ಉಪಯೋಗಿಸದೆ ಏಕೆ ಗ್ಲುಕೋಸ್‌ಅನ್ನು ಮಾತ್ರ ಜೀವಿಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ; ಎಂಬುದರ ಕಾರಣದ ಕುರಿತು ವಿಜ್ಞಾನಿಗಳು ವಿಚಾರ ಮಾಡಿದ್ದಾರೆ. ಇತರ ಹೆಕ್ಸೋಸ್ ಶರ್ಕರಗಳಿಗೆ ಹೋಲಿಸಿದರೆ ಗ್ಲುಕೋಸ್‌, ಪ್ರೋಟೀನ್‌ಗಳ ಅಮೈನೊ ಗುಂಪಿನೊಂದಿಗೆ ಕಡಿಮೆ ಪ್ರಮಾಣದಲ್ಲಿ ಅನಿರ್ದಿಷ್ಟವಾಗಿ ಪ್ರತಿಕ್ರಿಯಿಸುತ್ತದೆ ಎಂಬುದು ಒಂದು ಕಾರಣವಾಗಿರಬಹುದು. ಈ ಪ್ರತಿಕ್ರಿಯೆಯು (ಗ್ಲೈಕೇಶನ್) ಅನೇಕ ಎಂಜೈಮ್‌ಗಳ ಕ್ರಿಯೆಯನ್ನು ಕಡಿಮೆ ಮಾಡುತ್ತದೆ ಅಥವಾ ನಾಶಮಾಡುತ್ತದೆ. ಈ ಗ್ಲೈಕೇಶನ್‌‌ನ ಕಡಿಮೆ ದರಕ್ಕೆ ಕಾರಣವೆಂದರೆ, ಗ್ಲುಕೋಸ್‌‌ ಕಡಿಮೆ ಪ್ರತಿಕ್ರಿಯಾಶೀಲ ಚಕ್ರೀಯ ಐಸೋಮರ್‌‌ಗೆ ಹೆಚ್ಚು ಆದ್ಯತೆ ನೀಡುವುದಾಗಿದೆ. ಮಧುಮೇಹದ ಹೆಚ್ಚಿನ ದೀರ್ಘಕಾಲದ ಸಮಸ್ಯೆಗಳು (ಉದಾ. ಕುರುಡು, ಮ‌ೂತ್ರಪಿಂಡಗಳ ವಿಫಲತೆ ಮತ್ತು ಹೊರಗಿನ ನರರೋಗ) ಪ್ರೋಟೀನ್‌ಗಳ ಅಥವಾ ಲಿಪಿಡ್‌ಗಳ ಗ್ಲೈಕೇಶನ್‌‌ನಿಂದ ಉಂಟಾಗುತ್ತವೆ.[೬] ಇದಕ್ಕೆ ವಿರುದ್ಧವಾಗಿ, ಪ್ರೋಟೀನ್‌ಗಳಿಗೆ ಗ್ಲೈಕೊಸಿಲೇಶನ್‌ನ ಮ‌ೂಲಕ ಗ್ಲುಕೋಸ್‌‌ನ ಎಂಜೈಮ್‌-ನಿಯಂತ್ರಿತ ಸೇರಿಸುವಿಕೆಯು ಅವುಗಳ ಕ್ರಿಯೆಗೆ ಅತಿಮುಖ್ಯವಾಗಿರುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಶಕ್ತಿಯ ಸಂಪನ್ಮೂಲವಾಗಿ[ಬದಲಾಯಿಸಿ]

ಗ್ಲುಕೋಸ್‌ ಜೀವಶಾಸ್ತ್ರದಲ್ಲಿ ಒಂದು ಸರ್ವತ್ರ ಶಕ್ತಿಯಮ‌ೂಲವಾಗಿದೆ. ಇದನ್ನು ಬ್ಯಾಕ್ಟೀರಿಯಾದಿಂದ ಹಿಡಿದು ಮಾನವನವರೆಗೆ ಹೆಚ್ಚಿನ ಜೀವಿಗಳಲ್ಲಿ ಶಕ್ತಿಯ ಮ‌ೂಲವಾಗಿ ಬಳಸಲಾಗುತ್ತದೆ. ಗ್ಲುಕೋಸ್‌ನ ಬಳಕೆಯು ಆಮ್ಲಜನಕದ ಉಸಿರಾಟ, ಆಮ್ಲಜನಕವಿಲ್ಲದ ಉಸಿರಾಟ ಅಥವಾ ಹುದುಗುವಿಕೆ(ಫರ್ಮೆಂಟೇಶನ್)ಯಿಂದ ಆಗುತ್ತದೆ. ಕಾರ್ಬೊಹೈಡ್ರೇಟ್‌ಗಳು ಆಮ್ಲಜನಕದ ಉಸಿರಾಟದ ಮ‌ೂಲಕ ಮಾನವ ಶರೀರಕ್ಕೆ ಶಕ್ತಿಯನ್ನು ಒದಗಿಸುವ ಪ್ರಮುಖ ಮ‌ೂಲವಾಗಿವೆ. ಇವು ಪ್ರತಿ ಗ್ರಾಂಗೆ ಸುಮಾರು 3.75 ಕಿಲೊಕ್ಯಾಲೊರಿಗಳಷ್ಟು (16 ಕಿಲೊಜೌಲ್‌ಗಳು) ಆಹಾರ ಶಕ್ತಿಯನ್ನು ಒದಗಿಸುತ್ತವೆ.[೭] ಕಾರ್ಬೊಹೈಡ್ರೇಟ್‌ಗಳ (ಉದಾ. ಪಿಷ್ಟ) ವಿಭಜನೆಯು ಮೋನೊ- ಮತ್ತು ಡೈಸ್ಯಾಕರೈಡ್‌‌ಗಳನ್ನು ನೀಡುತ್ತದೆ, ಅವುಗಳಲ್ಲಿ ಹೆಚ್ಚಿನವು ಗ್ಲುಕೋಸ್‌ ಆಗಿರುತ್ತವೆ. ಗ್ಲೈಕೋಲಿಸಿಸ್‌‌ ಮತ್ತು ಸಿಟ್ರಿಕ್ ಆಸಿಡ್ ಸೈಕಲ್(ಸಿಟ್ರಿಕ್ ಆಮ್ಲ ಚಕ್ರ)ನ (TCAC) ಕ್ರಿಯೆಗಳಿಂದ, ಗ್ಲುಕೋಸ್‌ ಆಕ್ಸಿಡೀಕರಣಗೊಂಡು ಶಕ್ತಿಯ ಮ‌ೂಲಗಳನ್ನು ಹೆಚ್ಚಾಗಿ ATP ರೂಪಗಳಲ್ಲಿ ಉತ್ಪತ್ತಿ ಮಾಡುವುದರೊಂದಿಗೆ ಅಂತಿಮವಾಗಿ CO2 ಮತ್ತು ನೀರನ್ನು ಬಿಡುಗಡೆ ಮಾಡುತ್ತದೆ. ಇನ್ಸುಲಿನ್ ಪ್ರತಿಕ್ರಿಯೆ ಮತ್ತು ಇತರ ಕ್ರಿಯೆಗಳು ರಕ್ತದಲ್ಲಿನ ಗ್ಲುಕೋಸ್‌ನ ಪ್ರಮಾಣವನ್ನು ನಿಯಂತ್ರಿಸುತ್ತವೆ. ರಕ್ತದಲ್ಲಿನ ಹೆಚ್ಚಿನ ಪ್ರಮಾಣದ ಶರ್ಕರವು ಮಧುಮೇಹ ರೋಗ ಬರುವುದರ ಸೂಚನೆಯಾಗಿರುತ್ತದೆ.

ಗ್ಲುಕೋಸ್‌ ಮಿದುಳಿಗೆ ಶಕ್ತಿ ಪೂರೈಕೆಯ ಪ್ರಾಥಮಿಕ ಮ‌ೂಲವಾಗಿದೆ. ಆದ್ದರಿಂದ ಇದರ ಲಭ್ಯತೆಯು ಮಾನಸಿಕ ಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತದೆ. ಗ್ಲುಕೋಸ್‌ನ ಪ್ರಮಾಣವು ಕಡಿಮೆ ಇದ್ದಾಗ, ಮಾನಸಿಕ ಕಾರ್ಯಕ್ಕೆ (ಉದಾ, ಸ್ವ-ನಿಯಂತ್ರಣ, ಪ್ರಯಾಸದ ನಿರ್ಧಾರ-ಮಾಡುವಿಕೆ) ಅಗತ್ಯವಾಗಿರುವ ಮಿದುಳಿನ ಕ್ರಿಯೆಗಳು ದುರ್ಬಲಗೊಳ್ಳುತ್ತವೆ.[೮][೯][೧೦][೧೧]

ಗ್ಲೈಕೋಲಿಸಿಸ್‌ನಲ್ಲಿ ಗ್ಲುಕೋಸ್‌[ಬದಲಾಯಿಸಿ]

ಟೆಂಪ್ಲೇಟು:Enzymatic Reaction
Compound C00031 at KEGG Pathway Database. Enzyme 2.7.1.1 at KEGG Pathway Database. Compound C00668 at KEGG Pathway Database. Reaction R01786 at KEGG Pathway Database.

ಜೀವಕೋಶಗಳಲ್ಲಿ ಶಕ್ತಿಯ ಮ‌ೂಲವಾಗಿ ಗ್ಲುಕೋಸ್‌ನ ಬಳಕೆಯು ಆಮ್ಲಜನಕದ ಅಥವಾ ಆಮ್ಲಜನಕವಿಲ್ಲದ ಉಸಿರಾಟದಿಂದ ಆಗುತ್ತದೆ. ಇವೆರಡೂ ಗ್ಲೈಕೋಲಿಸಿಸ್‌ ಚಯಾಪಚಯ ಪ್ರತಿಕ್ರಿಯಾಸರಣಿಯ ಆರಂಭಿಕ ಹಂತಗಳೊಂದಿಗೆ ಆರಂಭವಾಗುತ್ತವೆ. ಶಕ್ತಿಯನ್ನು ಒದಗಿಸಲು ಗ್ಲುಕೋಸ್‌ಅನ್ನು ನಂತರದ ವಿಭಜನೆಗೆ ತಯಾರು ಮಾಡಲು ಹೆಕ್ಸೊಕಿನೇಸ್‌ನಿಂದ ಅದರ ಫಾಸ್ಫೊರಿಲೇಶನ್ ಮಾಡುವುದು ಇದರ ಮೊದಲ ಹಂತವಾಗಿದೆ.

ಹೆಕ್ಸೊಕಿನೇಸ್‌ನಿಂದ ಗ್ಲುಕೋಸ್‌ನ ತಕ್ಷಣದ ಫಾಸ್ಫೊರಿಲೇಶನ್‌ಗೆ ಕಾರಣವೆಂದರೆ ಜೀವಕೋಶದಿಂದ ಅದು ಹೊರಗೆ ಚದುರಿ ಹೋಗದಂತೆ ತಡೆಯುವುದಾಗಿದೆ. ಫಾಸ್ಫೊರಿಲೇಶನ್‌ ಕ್ರಿಯೆಯು ಚಾರ್ಜ್ ಆದ ಫಾಸ್ಫೇಟ್ ಗುಂಪೊಂದನ್ನು ಸೇರಿಸುತ್ತದೆ. ಇದರಿಂದಾಗಿ ಗ್ಲುಕೋಸ್‌ 6-ಫಾಸ್ಫೇಟ್ ಜೀವಕೋಶದ ಪೊರೆಯನ್ನು ಸುಲಭವಾಗಿ ದಾಟಿ ಹೋಗುವುದಿಲ್ಲ. ಚಯಾಪಚಯ ಪ್ರತಿಕ್ರಿಯಾಸರಣಿಯ ಬದಲಿಸಲಾಗದ ಮೊದಲ ಹಂತಗಳು ನಿಯಂತ್ರಕ ಉದ್ದೇಶಗಳಲ್ಲಿ ಸಾಮಾನ್ಯವಾಗಿರುತ್ತವೆ.

ಪೂರ್ವಸೂಚಕವಾಗಿ[ಬದಲಾಯಿಸಿ]

ಗ್ಲುಕೋಸ್‌ ಪ್ರೋಟೀನ್‌‌ಗಳ ಉತ್ಪತ್ತಿಯಲ್ಲಿ ಮತ್ತು ಲಿಪಿಡ್ ಚಯಾಪಚಯ ಕ್ರಿಯೆಯಲ್ಲಿ ನಿರ್ಣಾಯಕವಾಗಿ ಕಾರ್ಯನಿರ್ವಹಿಸುತ್ತದೆ. ಸಸ್ಯಗಳಲ್ಲಿ ಮತ್ತು ಹೆಚ್ಚಿನ ಪ್ರಾಣಿಗಳಲ್ಲಿ ಇದು C ಜೀವಸತ್ವದ (ಆಸ್ಕೋರ್ಬಿಕ್ ಆಮ್ಲ) ಉತ್ಪತ್ತಿಗೆ ಪೂರ್ವಸೂಚಕವಾಗಿರುತ್ತದೆ. ಈ ಕ್ರಿಯೆಗಳಲ್ಲಿ ಬಳಸುವುದಕ್ಕಾಗಿ ಇದು ಗ್ಲೈಕೋಲಿಸಿಸ್‌ ಪ್ರತಿಕ್ರಿಯಾಸರಣಿಯಿಂದ ಮಾರ್ಪಡಿಸಲ್ಪಡುತ್ತದೆ.

ಗ್ಲುಕೋಸ್‌ ಅನೇಕ ಪ್ರಮುಖ ಅಂಶಗಳ ಸಂಶ್ಲೇಷಣೆಯಲ್ಲಿ ಪೂರ್ವಸೂಚಕವಾಗಿ ಬಳಸಲ್ಪಡುತ್ತದೆ. ಪಿಷ್ಟ, ಸೆಲ್ಯುಲೋಸ್‌ ಮತ್ತು ಗ್ಲೈಕೋಜನ್ ("ಪ್ರಾಣಿ ಪಿಷ್ಟ") ಮೊದಲಾದವುಗಳು ಸಾಮಾನ್ಯ ಗ್ಲುಕೋಸ್‌ ಪಾಲಿಮರ್‌ಗಳಾಗಿವೆ (ಪಾಲಿಸ್ಯಾಕರೈಡ್‌ಗಳು). ಹಾಲಿನಲ್ಲಿರುವ ಪ್ರಧಾನ ಶರ್ಕರ ಲ್ಯಾಕ್ಟೋಸ್‌ ಒಂದು ಗ್ಲುಕೋಸ್‌-ಗ್ಯಾಲಕ್ಟೋಸ್‌ ಡೈಸ್ಯಾಕರೈಡ್ ಆಗಿದೆ. ಮತ್ತೊಂದು ಪ್ರಮುಖ ಡೈಸ್ಯಾಕರೈಡ್ ಸುಕ್ರೋಸ್‌ನಲ್ಲಿ, ಗ್ಲುಕೋಸ್‌ ಫ್ರಕ್ಟೋಸ್‌ ಒಂದಿಗೆ ಸೇರಿಕೊಂಡಿರುತ್ತದೆ. ಈ ಸಂಶ್ಲೇಷಣೆ ಕ್ರಿಯೆಗಳು ಗ್ಲೈಕೋಲಿಸಿಸ್‌ನ ಮೊದಲ ಹಂತದ ಮ‌ೂಲಕ ಗ್ಲುಕೋಸ್‌ನ ಫಾಸ್ಫೊರಿಲೇಶನ್ಅನ್ನೂ ಅವಲಂಬಿಸಿರುತ್ತವೆ.

ಪ್ರಯೋಗಾಲಯದಲ್ಲಿ ಬಳಸುವ ಗ್ಲುಕೋಸ್‌.

ಕೈಗಾರಿಕೆಯಲ್ಲಿನ ಉಪಯೋಗಗಳು[ಬದಲಾಯಿಸಿ]

ಕೈಗಾರಿಕೆಯಲ್ಲಿ ಸಿಟ್ರಿಕ್ ಆಮ್ಲ, ಗ್ಲುಕೋನಿಕ್ ಆಮ್ಲ, ಜೈವಿಕ-ಎತನಾಲ್, ಪಾಲಿಲ್ಯಾಕ್ಟಿಕ್ ಆಮ್ಲ, ಸಾರ್ಬಿಟಾಲ್ಅನ್ನು ತಯಾರಿಸಲು, ರೈಚ್‌ಸ್ಟೀನ್ ಕ್ರಿಯೆಯಲ್ಲಿ C ಜೀವಸತ್ವವನ್ನು ಮಾಡಲು ಗ್ಲುಕೋಸ್‌ಅನ್ನು ಪೂರ್ವಸೂಚಕವಾಗಿ ಬಳಸಲಾಗುತ್ತದೆ.

ಮ‌ೂಲಗಳು ಮತ್ತು ಹೀರಿಕೆ[ಬದಲಾಯಿಸಿ]

ಹೆಚ್ಚಿನ ಆಹಾರದ ಕಾರ್ಬೊಹೈಡ್ರೇಟ್‌ಗಳು ಗ್ಲುಕೋಸ್‌ಅನ್ನು, ಪಿಷ್ಟ ಮತ್ತು ಗ್ಲೈಕೋಜನ್‌ನಲ್ಲಿರುವಂತೆ ಅವುಗಳ ರಚನೆಯ ಮ‌ೂಲ ಆಧಾರವಾಗಿ ಅಥವಾ ಸುಕ್ರೋಸ್ ಮತ್ತು ಲ್ಯಾಕ್ಟೋಸ್‌‌ನಲ್ಲಿರುವಂತೆ ಮತ್ತೊಂದು ಮೋನೊಸ್ಯಾಕರೈಡ್ ಒಂದಿಗೆ ಹೊಂದಿರುತ್ತವೆ.

ಡ್ಯುಯೊಡಿನಮ್ ಮತ್ತು ಸಣ್ಣ ಕರುಳಿನ ಗೂಡಿನಲ್ಲಿ ಗ್ಲುಕೋಸ್‌ ಆಲಿಗೊ- ಮತ್ತು ಪಾಲಿಸ್ಯಾಕರೈಡ್‌ಗಳು ಮೇದೋಜೀರಕದ ಮತ್ತು ಕರುಳಿನ ಗ್ಲೈಕೊಸಿಡೇಸ್‌ಗಳಿಂದ ವಿಭಜನೆಗೊಂಡು ಮೋನೊಸ್ಯಾಕರೈಡ್‌ಗಳಾಗುತ್ತವೆ. ಇತರ ಪಾಲಿಸ್ಯಾಕರೈಡ್‌ಗಳು ಮಾನವನ ಕರುಳಿನಲ್ಲಿ ಕ್ರಿಯೆಗೊಳಗಾಗುವುದಿಲ್ಲ. ಅಲ್ಲದೇ ಅವನ್ನು ವಿಭಜಿಸಬೇಕಾದರೆ ಕರುಳಿನ ಫ್ಲೋರದ ನೆರವಿನ ಅವಶ್ಯಕತೆ ಇರುತ್ತದೆ; ಇದಕ್ಕೆ ಹೊರತಾಗಿರುವ ಹೆಚ್ಚು ಪ್ರಮುಖವಾದವುಗಳೆಂದರೆ ಸುಕ್ರೋಸ್‌ (ಫ್ರಕ್ಟೋಸ್‌-ಗ್ಲುಕೋಸ್‌) ಮತ್ತು ಲ್ಯಾಕ್ಟೋಸ್‌ (ಗ್ಯಾಲಕ್ಟೋಸ್‌-ಗ್ಲುಕೋಸ್‌). ನಂತರ ಗ್ಲುಕೋಸ್‌ ಎಂಟಿರೊಸೈಟ್‌ಗಳ ತುದಿಯಲ್ಲಿರುವ ಪೊರೆಯ ಮ‌ೂಲಕ SLC5A1ರಿಂದ ಮತ್ತು ನಂತರ ಅವುಗಳ ತಳದ ಪೊರೆಯ ಮ‌ೂಲಕ SLC2A2ರಿಂದ ಸಾಗಿಸಲ್ಪಡುತ್ತದೆ.[೧೨] ಕೆಲವು ಗ್ಲುಕೋಸ್‌ ಮಿದುಳಿನ ಜೀವಕೋಶಗಳು, ಕರುಳಿನ ಜೀವಕೋಶಗಳು ಮತ್ತು ಕೆಂಪು ರಕ್ತಕಣಗಳಿಂದ ನೇರವಾಗಿ ಬಳಸಲ್ಪಡುತ್ತದೆ. ಉಳಿದ ಕೆಲವು ಪಿತ್ತಜನಕಾಂಗ, ಕೊಬ್ಬುಳ್ಳ ಊತಕ ಮತ್ತು ಸ್ನಾಯುವಿನ ಜೀವಕೋಶಗಳನ್ನು ತಲುಪುತ್ತವೆ. ಅಲ್ಲಿ ಅವು ಹೀರಲ್ಪಟ್ಟು, ಗ್ಲೈಕೋಜನ್ ಆಗಿ (ಇನ್ಸುಲಿನ್‌ನ ಪ್ರಭಾವದಡಿಯಲ್ಲಿ) ಶೇಖರವಾಗುತ್ತದೆ. ಇನ್ಸುಲಿನ್ ಕಡಿಮೆ ಪ್ರಮಾಣದಲ್ಲಿದ್ದಾಗ ಅಥವಾ ಇಲ್ಲದಿದ್ದಾಗ ಪಿತ್ತಜನಕಾಂಗ-ಜೀವಕೋಶದ ಗ್ಲೈಕೋಜನ್, ಗ್ಲುಕೋಸ್‌ ಆಗಿ ಪರಿವರ್ತನೆಗೊಂಡು ರಕ್ತಕ್ಕೆ ಹಿಂದಿರುಗಬಹುದು. ಸ್ನಾಯು-ಜೀವಕೋಶದ ಗ್ಲೈಕೋಜನ್, ಎಂಜೈಮ್‌ಗಳ ಕೊರತೆಯಿಂದ ರಕ್ತಕ್ಕೆ ಹಿಂದಿರುಗುವುದಿಲ್ಲ. ಕೊಬ್ಬಿನ ಜೀವಕೋಶಗಳಲ್ಲಿ ಗ್ಲುಕೋಸ್‌, ಕೆಲವು ಕೊಬ್ಬಿನ ಪ್ರಕಾರಗಳನ್ನು ಸಂಶ್ಲೇಷಿಸುವ ಕ್ರಿಯೆಗಳಿಗೆ ಶಕ್ತಿ ಒದಗಿಸಲು ಮತ್ತು ಇತರ ಕಾರಣಗಳಿಗೆ ಬಳಸಲ್ಪಡುತ್ತದೆ. ಗ್ಲೈಕೋಜನ್ ದೇಹದ 'ಗ್ಲುಕೋಸ್‌ ಶಕ್ತಿ ಸಂಗ್ರಹ' ವಿಧಾನವಾಗಿದೆ ಏಕೆಂದರೆ ಇದು ಗ್ಲುಕೋಸ್‌‌ಗಿಂತ ಹೆಚ್ಚು 'ಪರಿಣಾಮಕಾರಿ' ಮತ್ತು ಕಡಿಮೆ ಕ್ರಿಯಾಶೀಲವಾಗಿರುತ್ತದೆ.

ಇತಿಹಾಸ[ಬದಲಾಯಿಸಿ]

ಗ್ಲುಕೋಸ್‌ ಅನೇಕ ಜೀವಿಗಳ ಮ‌ೂಲಭೂತ ಅವಶ್ಯಕತೆ ಆಗಿರುವುದರಿಂದ, ಅದರ ರಾಸಾಯನಿಕ ವ್ಯವಸ್ಥೆ ಮತ್ತು ರಚನೆಯ ಬಗೆಗಿನ ನಿಖರವಾದ ತಿಳಿವಳಿಕೆಯು ಕಾರ್ಬನಿಕ ರಸಾಯನ ವಿಜ್ಞಾನದಲ್ಲಿನ ಮುಖ್ಯ ಅಭಿವೃದ್ಧಿಗೆ ಬಹಳಮಟ್ಟಿನ ಕೊಡುಗೆ ನೀಡಿದೆ. ಈ ತಿಳಿವಳಿಕೆಯು ಹೆಚ್ಚಾಗಿ ಎಮಿಲ್ ಫಿಸ್ಚರ್‌ನ ಸಂಶೋಧನೆಗಳ ಪರಿಮಾಣವಾಗಿ ಕಂಡುಬಂದಿತು. ಜರ್ಮನ್ ರಾಸಾಯನಿಕ ತಜ್ಞನಾದ ಆತನು ತನ್ನ ಸಂಶೋಧನೆಗಳಿಗಾಗಿ ರಸಾಯನ ವಿಜ್ಞಾನದಲ್ಲಿ 1902ರಲ್ಲಿ ನೋಬೆಲ್ ಪ್ರಶಸ್ತಿಯನ್ನು ಗೆದ್ದುಕೊಂಡನು.[೧೩] ಗ್ಲುಕೋಸ್‌ನ ಸಂಶ್ಲೇಷಣೆಯು ಕಾರ್ಬನಿಕ ವಸ್ತುವಿನ ರಚನೆಯನ್ನು ದೃಢಪಡಿಸಿತು. ಆದ್ದರಿಂದ ಇದು ರಾಸಾಯನಿಕ ಚಲನಶಾಸ್ತ್ರದ ಮತ್ತು ಇಂಗಾಲ-ಹೊಂದಿರುವ ಅಣುಗಳ ರಾಸಾಯನಿಕ ಬಂಧಗಳ ಜೋಡಣೆಗಳ ಜ್ಯಾಕೋಬಸ್ ಹೆನ್ರಿಕಸ್ ವ್ಯಾನ್ಟ್ ಹಾಫ್‌ನ ಸಿದ್ಧಾಂತದ ಮೊದಲ ನಿರ್ಣಾಯಕ ಕ್ರಮಬದ್ಧಗೊಳಿಸುವಿಕೆಯನ್ನು ರೂಪಿಸಿತು.[೧೪] ಸುಮಾರು 1891 ಮತ್ತು 1894ರ ಮಧ್ಯದಲ್ಲಿ ಫಿಸ್ಚರ್ ಅಸಮ್ಮಿತ ಇಂಗಾಲ ಪರಮಾಣುಗಳ ವ್ಯಾನ್ಟ್ ಹಾಫ್‌ನ ಸಿದ್ಧಾಂತವನ್ನು ಅನ್ವಯಿಸಿಕೊಂಡು, ಎಲ್ಲಾ ತಿಳಿದ ಶರ್ಕರಗಳ ಸ್ಟೀರಿಯೊಕೆಮಿಕಲ್ ರಚನೆಯನ್ನು ದೃಢಪಡಿಸಿದನು. ಅಲ್ಲದೇ ಸಂಭಾವ್ಯ ಐಸೋಮರ್‌ಗಳನ್ನು ನಿಖರವಾಗಿ ಸೂಚಿಸಿದನು.

ಇದನ್ನೂ ಗಮನಿಸಿ[ಬದಲಾಯಿಸಿ]

ಅನುಬಂಧ[ಬದಲಾಯಿಸಿ]

ಗ್ಲುಕೋಸ್‌ ಒಂದು ಹೆಚ್ಚು ಸಂಕೀರ್ಣ ರಾಸಾಯನಿಕ ಸಂಯುಕ್ತವಾಗಿದೆ, ಏಕೆಂದರೆ ಇದು ಅನೇಕ ಐಸೋಮರಿಕ್ ರೂಪಗಳಲ್ಲಿ ಕಂಡುಬರುತ್ತದೆ ಅಲ್ಲದೇ ಪ್ರತಿ ಐಸೋಮರ್‌ ಆವರ್ತನೀಯ ಐಸೋಮರಿಸಮ್ ಕ್ರಿಯೆಗೆ ಒಳಪಡುತ್ತದೆ.[೧೫]

ಉಲ್ಲೇಖಗಳು[ಬದಲಾಯಿಸಿ]

 1. Solubility of D-glucose in non-aqueous solvents.
 2. "dextrose", Merriam-Webster Online Dictionary, retrieved 2009-09-02.
 3. ಟೆಂಪ್ಲೇಟು:McMurry2nd.
 4. Juaristi, Eusebio; Cuevas, Gabriel (1995), The Anomeric Effect, CRC Press, pp. 9–10, ISBN 0849389410.
 5. ೫.೦ ೫.೧ ಫ್ರೆಡ್ W. ಸ್ಕೆಂಕ್ “ಗ್ಲುಕೋಸ್‌ ಆಂಡ್ ಗ್ಲುಕೋಸ್‌-ಕಂಟೈನಿಂಗ್ ಸಿರಪ್ಸ್” - ಉಲ್‌ಮ್ಯಾನ್ಸ್ ಎನ್‌ಸೈಕ್ಲೊಪೀಡಿಯ ಆಫ್ ಇಂಡಸ್ಟ್ರಿಯಲ್ ಕೆಮೆಸ್ಟ್ರಿ 2006, ವಿಲೆ-VCH, ವೈನ್ಹೈಮ್. doi: 10.1002/14356007.a12_457.pub2
 6. High Blood Glucose and Diabetes Complications: The buildup of molecules known as AGEs may be the key link, American Diabetes Association, 2010, ISSN 0095-8301, archived from the original on 2013-10-14, retrieved 2010-06-11
 7. "Chapter 3: Calculation of the Energy Content of Foods – Energy Conversion Factors", Food energy - methods of analysis and conversion factors, FAO Food and Nutrition Paper 77, Rome: Food and Agriculture Organization, 2003, ISBN 92-5-105014-7.
 8. Fairclough, Stephen H.; Houston, Kim (2004), "A metabolic measure of mental effort", Biol. Psychol., 66 (2): 177–90, doi:10.1016/j.biopsycho.2003.10.001, PMID 15041139.
 9. Gailliot, Matthew T.; Baumeister, Roy F.; DeWall, C. Nathan; Plant, E. Ashby; Brewer, Lauren E.; Schmeichel, Brandon J.; Tice, Dianne M.; Maner, Jon K. (2007), "Self-Control Relies on Glucose as a Limited Energy Source: Willpower is More than a Metaphor", J. Personal. Soc. Psychol., 92 (2): 325–36, doi:10.1037/0022-3514.92.2.325, PMID 17279852.
 10. Gailliot, Matthew T.; Baumeister, Roy F. (2007), "The Physiology of Willpower: Linking Blood Glucose to Self-Control", Personal. Soc. Psychol. Rev., 11 (4): 303–27, doi:10.1177/1088868307303030, PMID 18453466.
 11. Masicampo, E. J.; Baumeister, Roy F. (2008), "Toward a Physiology of Dual-Process Reasoning and Judgment: Lemonade, Willpower, and Expensive Rule-Based Analysis", Psychol. Sci., 19 (3): 255–60, doi:10.1111/j.1467-9280.2008.02077.x, PMID 18315798.
 12. Ferraris, Ronaldo P. (2001), "Dietary and developmental regulation of intestinal sugar transport", Biochem. J., 360 (Pt 2): 265–76, doi:10.1042/0264-6021:3600265, PMC 1222226, PMID 11716754, archived from the original on 2006-04-04, retrieved 2010-06-11.
 13. Emil Fischer, Nobel Foundation, retrieved 2009-09-02.
 14. Fraser-Reid, Bert, "van't Hoff's Glucose", Chem. Eng. News, 77 (39): 8.
 15. ಗ್ಲುಕೋಸ್‌ನ ಚಕ್ರೀಯ ರೂಪದಲ್ಲಿ, ಈ ಕೆಳಗೆ ತೋರಿಸಿದಂತೆ ಮ‌ೂರು ರೊಟೇಮರ್ ರಚನೆಗಳನ್ನು ಉಂಟುಮಾಡಲು ತಿರುಗುವಿಕೆಯು ω -ಕೋನ ಎನ್ನುವ O6-C6-C5-O5 ತಿರುಚಿದ ಕೋನದಲ್ಲಿ ಕಂಡುಬರುತ್ತದೆ. ω -ಕೋನ ಮತ್ತು O6-C6-C5-C4 ಕೋನದ ನೆಲೆಯನ್ನು ನಿರೂಪಿಸಲು, ಮ‌ೂರು ಸ್ಥಿರ ರೊಟೇಮರ್ ರಚನೆಗಳನ್ನು ಗೋಷ್ -ಗೋಷ್ (gg), ಗೋಷ್ -ಟ್ರಾನ್ಸ್ (gt) ಮತ್ತು ಟ್ರಾನ್ಸ್ -ಗೋಷ್ (tg) ಎಂದು ಸೂಚಿಸಲಾಗಿದೆ. ಮೀಥೈಲ್ α-D-ಗ್ಲುಕೊಪೈರನೋಸ್‌ಗೆ ಸಮತೋಲನ ಸ್ಥಿತಿಯಲ್ಲಿ ಪ್ರತಿಯೊಂದು ರೊಟೇಮರ್ ರಚನೆಯಲ್ಲಿನ ಅಣುಗಳ ಅನುಪಾತವು 57:38:5 gg:gt:tg ಎಂದು ವರದಿ ಮಾಡಲಾಗಿದೆ.Kirschner, Karl N.; Woods, Robert J. (2001), "Solvent interactions determine carbohydrate conformation", Proc. Natl. Acad. Sci. USA, 98 (19): 10541–45, doi:10.1073/pnas.191362798, PMC 58501, PMID 11526221. ω -ಕೋನದ ಗೋಷ್ -ರಚನೆಯ ಅಳವಡಿಸಿಕೊಳ್ಳುವಿಕೆಯು ಗೋಷ್ ಪರಿಣಾಮವನ್ನು ನೀಡಿತು.


ಬಾಹ್ಯ ಕೊಂಡಿಗಳು[ಬದಲಾಯಿಸಿ]