ವಿಷಯಕ್ಕೆ ಹೋಗು

ಸಬ್ಬಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಬ್ಬಕ್ಕಿ ಎನ್ನುವುದು ಮರಗೆಣಸಿನಿಂದ ತಯಾರಿಸಲಾಗುವ ಪಿಷ್ಠ. ಇದನ್ನು ಆಹಾರಪದಾರ್ಥವಾಗಿ ಅಡುಗೆ ಮಾಡಲು ಬಳಸಲಾಗುತ್ತದೆ. ಶಾಬಕ್ಕಿ, ಸಾಬೂದಾನಿ, ಸೀಮೆಅಕ್ಕಿ ಎನ್ನುವ ಹೆಸರುಗಳಿಂದಲೂ ಇದು ಕರೆಯಲ್ಪಡುತ್ತದೆ.[] ಭಾರತದಲ್ಲಿ ೯೫% ಸಬ್ಬಕ್ಕಿಯನ್ನು ತಮಿಳುನಾಡಿನಲ್ಲಿ (ಸೇಲಂನಲ್ಲಿ ಹೆಚ್ಚು) ತಯಾರಿಸಲಾಗುತ್ತದೆ. ಸಬ್ಬಕ್ಕಿಯಿಂದ ಉಪ್ಪಿಟ್ಟು, ವಡೆ, ಪಾಯಸ ಮುಂತಾದ ತಿನಿಸುಗಳನ್ನು ತಯಾರಿಸಲಾಗುತ್ತದೆ. ಭಾರತದ ವಿವಿಧ ಭಾಷೆಗಳಲ್ಲಿ ಇದರ ಹೆಸರು ಹೀಗಿದೆ - (ಉರ್ದು: ساگودانه;ಹಿಂದಿ: साबुदाना; ಮರಾಠಿ : साबुदाणा; ಗುಜರಾತಿ: સાબુદાણા; ತೆಲುಗು: సగ్గు బియ్యం ತಮಿಳು : ஜவ்வரிசி).

Pearl sago

ತಯಾರಿಕೆಯ ವಿಧಾನ[]

[ಬದಲಾಯಿಸಿ]
  • ಮೊದಲು ರಾಶಿರಾಶಿ ಗೆಣಸುಗಳನ್ನು ತೊಳೆದು ಸಿಪ್ಪೆ ಸುಲಿಯಲಾಗುತ್ತದೆ.
  • ನಂತರ ಅವುಗಳನ್ನು ಕ್ರಶರ್‍ಗಳಲ್ಲಿ ಹಿಸುಕಲಾಗುತ್ತದೆ. ಈ ಕ್ರಶಿಂಗ್ ಪ್ರಕ್ರಿಯೆಯಲ್ಲಿ ನಾರಿನ ಭಾಗವು ಬೇರೆಯಾಗುತ್ತದೆ.
  • ಹಿಸುಕಿದಾಗ ಬಂದ ಹಾಲಿನಂತ ದ್ರವವನ್ನು ಟ್ಯಾಂಕ್ ಗಳಲ್ಲಿ ಶೇಖರಿಸಿ ೨-೮ ತಾಸಿನವರೆಗೆ ಸೆಟ್ಲ್ ಆಗಲು ಬಿಡಲಾಗುತ್ತದೆ. ಅ ಹಾಲಿನಲ್ಲಿ ಕಲ್ಮಶಗಳು ಮೇಲೆ ತೇಲುತ್ತವೆ ಮತ್ತು ಕೆಳಗೆ ಪೇಸ್ಟಿನಂತಹ starch (ಪಿಷ್ಟ,ಹಿಟ್ಟು) ವಸ್ತುವು ಉಳಿಯುತ್ತದೆ.
  • ತೇಲುವ ಕೊಳೆ ಇತ್ಯಾದಿಗಳನ್ನು ತೆಗೆದ ನಂತರ ಉಳಿದ ಪೇಸ್ಟನ್ನು ಭಾಗಶಃ ಒಣಗಿಸಿ cakes ಪಡೆಯಲಾಗುತ್ತದೆ.
  • ನಂತರ ತೂತುಗಳುಳ್ಳ ಉಕ್ಕಿನ ಹಾಳೆಗಳನ್ನು ಅಥವಾ ಯಂತ್ರಗಳನ್ನು ಬಳಸಿ ಬೇಕಾದ ಗಾತ್ರದಲ್ಲಿ ಸಣ್ಣ ಸಣ್ಣ ಗುಂಡುಗಳ ಆಕಾರಕ್ಕೆ ತರಲಾಗುತ್ತದೆ.
  • ಅವುಗಳನ್ನು ೧೦೦ ಡಿಗ್ರಿ ಸೆಲಿಷಿಯಸ್ ಬಿಸಿಯಲ್ಲಿ ೬-೮ ನಿಮಿಷಗಳು ಹುರಿಯಲಾಗುತ್ತದೆ (roasting).
  • ಸೂರ್ಯನ ಬೆಳಕಿನಲ್ಲಿ ೮-೧೨ ಗಂಟೆಗಳ ಕಾಲ ಒಣಗಿಸಲಾಗುತ್ತದೆ.
  • ಕೊನೆಯದಾಗಿ ಪಾಲಿಶಿಂಗ್ ಮಾಡಿದ ಮೇಲೆ ಸಬ್ಬಕ್ಕಿ ತಯಾರಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]


ಹೊರಕೊಂಡಿಗಳು

[ಬದಲಾಯಿಸಿ]