ಸಬ್ಬಕ್ಕಿ
ಗೋಚರ
ಸಬ್ಬಕ್ಕಿ ಎನ್ನುವುದು ಮರಗೆಣಸಿನಿಂದ ತಯಾರಿಸಲಾಗುವ ಪಿಷ್ಠ. ಇದನ್ನು ಆಹಾರಪದಾರ್ಥವಾಗಿ ಅಡುಗೆ ಮಾಡಲು ಬಳಸಲಾಗುತ್ತದೆ. ಶಾಬಕ್ಕಿ, ಸಾಬೂದಾನಿ, ಸೀಮೆಅಕ್ಕಿ ಎನ್ನುವ ಹೆಸರುಗಳಿಂದಲೂ ಇದು ಕರೆಯಲ್ಪಡುತ್ತದೆ.[೧] ಭಾರತದಲ್ಲಿ ೯೫% ಸಬ್ಬಕ್ಕಿಯನ್ನು ತಮಿಳುನಾಡಿನಲ್ಲಿ (ಸೇಲಂನಲ್ಲಿ ಹೆಚ್ಚು) ತಯಾರಿಸಲಾಗುತ್ತದೆ. ಸಬ್ಬಕ್ಕಿಯಿಂದ ಉಪ್ಪಿಟ್ಟು, ವಡೆ, ಪಾಯಸ ಮುಂತಾದ ತಿನಿಸುಗಳನ್ನು ತಯಾರಿಸಲಾಗುತ್ತದೆ. ಭಾರತದ ವಿವಿಧ ಭಾಷೆಗಳಲ್ಲಿ ಇದರ ಹೆಸರು ಹೀಗಿದೆ - (ಉರ್ದು: ساگودانه;ಹಿಂದಿ: साबुदाना; ಮರಾಠಿ : साबुदाणा; ಗುಜರಾತಿ: સાબુદાણા; ತೆಲುಗು: సగ్గు బియ్యం ತಮಿಳು : ஜவ்வரிசி).
- ಮೊದಲು ರಾಶಿರಾಶಿ ಗೆಣಸುಗಳನ್ನು ತೊಳೆದು ಸಿಪ್ಪೆ ಸುಲಿಯಲಾಗುತ್ತದೆ.
- ನಂತರ ಅವುಗಳನ್ನು ಕ್ರಶರ್‍ಗಳಲ್ಲಿ ಹಿಸುಕಲಾಗುತ್ತದೆ. ಈ ಕ್ರಶಿಂಗ್ ಪ್ರಕ್ರಿಯೆಯಲ್ಲಿ ನಾರಿನ ಭಾಗವು ಬೇರೆಯಾಗುತ್ತದೆ.
- ಹಿಸುಕಿದಾಗ ಬಂದ ಹಾಲಿನಂತ ದ್ರವವನ್ನು ಟ್ಯಾಂಕ್ ಗಳಲ್ಲಿ ಶೇಖರಿಸಿ ೨-೮ ತಾಸಿನವರೆಗೆ ಸೆಟ್ಲ್ ಆಗಲು ಬಿಡಲಾಗುತ್ತದೆ. ಅ ಹಾಲಿನಲ್ಲಿ ಕಲ್ಮಶಗಳು ಮೇಲೆ ತೇಲುತ್ತವೆ ಮತ್ತು ಕೆಳಗೆ ಪೇಸ್ಟಿನಂತಹ starch (ಪಿಷ್ಟ,ಹಿಟ್ಟು) ವಸ್ತುವು ಉಳಿಯುತ್ತದೆ.
- ತೇಲುವ ಕೊಳೆ ಇತ್ಯಾದಿಗಳನ್ನು ತೆಗೆದ ನಂತರ ಉಳಿದ ಪೇಸ್ಟನ್ನು ಭಾಗಶಃ ಒಣಗಿಸಿ cakes ಪಡೆಯಲಾಗುತ್ತದೆ.
- ನಂತರ ತೂತುಗಳುಳ್ಳ ಉಕ್ಕಿನ ಹಾಳೆಗಳನ್ನು ಅಥವಾ ಯಂತ್ರಗಳನ್ನು ಬಳಸಿ ಬೇಕಾದ ಗಾತ್ರದಲ್ಲಿ ಸಣ್ಣ ಸಣ್ಣ ಗುಂಡುಗಳ ಆಕಾರಕ್ಕೆ ತರಲಾಗುತ್ತದೆ.
- ಅವುಗಳನ್ನು ೧೦೦ ಡಿಗ್ರಿ ಸೆಲಿಷಿಯಸ್ ಬಿಸಿಯಲ್ಲಿ ೬-೮ ನಿಮಿಷಗಳು ಹುರಿಯಲಾಗುತ್ತದೆ (roasting).
- ಸೂರ್ಯನ ಬೆಳಕಿನಲ್ಲಿ ೮-೧೨ ಗಂಟೆಗಳ ಕಾಲ ಒಣಗಿಸಲಾಗುತ್ತದೆ.
- ಕೊನೆಯದಾಗಿ ಪಾಲಿಶಿಂಗ್ ಮಾಡಿದ ಮೇಲೆ ಸಬ್ಬಕ್ಕಿ ತಯಾರಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ ಸಬ್ಬಕ್ಕಿ ತಿನ್ನೋ ಕಾಲ , ಕನ್ನಡಪ್ರಭ, 19 Aug 2014
- ↑ Production Process of Tapioca Sago Archived 2016-01-21 ವೇಬ್ಯಾಕ್ ಮೆಷಿನ್ ನಲ್ಲಿ., sabuindia.com
ಹೊರಕೊಂಡಿಗಳು
[ಬದಲಾಯಿಸಿ]- SabuIndia website
- ಕೆಲವು ಸಬ್ಬಕ್ಕಿ ತಿನಿಸುಗಳು, ಪ್ರಜಾವಾಣಿ, Sat, 02/08/2014