ವಿಷಯಕ್ಕೆ ಹೋಗು

ಪಿಷ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಸುಕಿನ ಜೋಳದ ಪಿಷ್ಟ

ಪಿಷ್ಟವು ಗ್ಲೈಕೊಸಿಡಿಕ್ ಬಂಧಗಳಿಂದ ಜೋಡಣೆಗೊಂಡ ಭಾರೀ ಸಂಖ್ಯೆಯ ಗ್ಲೂಕೋಸ್ ಘಟಕಗಳನ್ನು ಹೊಂದಿರುವ ಒಂದು ಪಾಲಿಮರಿಕ್ ಕಾರ್ಬೋಹೈಡ್ರೇಟು. ಬಹುತೇಕ ಹಸಿರು ಸಸ್ಯಗಳು ಶಕ್ತಿ ಸಂಗ್ರಹವಾಗಿ ಈ ಬಹುಶರ್ಕರವನ್ನು ಉತ್ಪಾದಿಸುತ್ತವೆ. ಇದು ಮಾನವ ಆಹಾರದಲ್ಲಿನ ಅತ್ಯಂತ ಸಾಮಾನ್ಯ ಕಾರ್ಬೋಹೈಡ್ರೇಟಾಗಿದೆ ಮತ್ತು ಆಲೂಗಡ್ಡೆ, ಗೋಧಿ, ಮೆಕ್ಕೆ ಜೋಳ, ಅಕ್ಕಿ, ಹಾಗೂ ಮರಗೆಣಸಿನಂತಹ ಪ್ರಧಾನ ಆಹಾರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಇದೆ.

ಕೈಗಾರಿಕೆಯಲ್ಲಿ, ಪಿಷ್ಟವನ್ನು ಸಕ್ಕರೆಗಳಾಗಿ ಪರಿವರ್ತಿಸಿ, ಉದಾಹರಣೆಗೆ ಅಂಕುರೀಕರಣದಿಂದ, ಹುಳಿಬರಿಸಿ, ಬಿಯರ್, ವಿಸ್ಕಿ ಮತ್ತು ಜೈವಿಕ ಇಂಧನದ ತಯಾರಿಕೆಯಲ್ಲಿ ಎಥನಾಲ್‍ನ್ನು ಉತ್ಪಾದಿಸಲಾಗುತ್ತದೆ. ಸಂಸ್ಕರಿಸಿದ ಆಹಾರಗಳಲ್ಲಿ ಬಳಸಲಾದ ಅನೇಕ ಸಕ್ಕರೆಗಳನ್ನು ಉತ್ಪಾದಿಸಲು ಅದನ್ನು ಸಂಸ್ಕರಿಸಲಾಗುತ್ತದೆ. ಕಾಗದ ತಯಾರಿಕೆ ಪ್ರಕ್ರಿಯೆಯಲ್ಲಿ ಅಂಟಾಗಿ ಬಳಸಲಪಡುವುದು ಪಿಷ್ಟದ ಅತಿ ದೊಡ್ಡ ಕೈಗಾರಿಕಾ ಆಹಾರೇತರ ಉಪಯೋಗವಾಗಿದೆ. ಇಸ್ತ್ರಿ ಮಾಡುವ ಮುನ್ನ, ಅವನ್ನು ಗರಿಗರಿಯಾಗಿಸಲು ಕೆಲವು ಉಡುಪುಗಳ ಭಾಗಗಳಿಗೆ ಪಿಷ್ಟವನ್ನು (ಗಂಜಿ) ಲೇಪಿಸಬಹುದು.

ಬಾಹ್ಯ ಕೊಂಡಿಗಳು

[ಬದಲಾಯಿಸಿ]
  • Starch - Stärke, ಪಿಷ್ಟದ ಮೇಲೆ ವೈಜ್ಞಾನಿಕ ಪತ್ರಿಕೆ
"https://kn.wikipedia.org/w/index.php?title=ಪಿಷ್ಟ&oldid=1056402" ಇಂದ ಪಡೆಯಲ್ಪಟ್ಟಿದೆ