ಆಲೂಗಡ್ಡೆ
ಆಲೂಗಡ್ಡೆ | |
---|---|
ಆಲೂಗಡ್ಡೆ | |
Scientific classification | |
ಸಾಮ್ರಾಜ್ಯ: | plantae
|
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಕುಲ: | |
ಪ್ರಜಾತಿ: | S. tuberosum
|
Binomial name | |
ಸೊಲನಮ್ ಟುಬೆರೋಸಮ್ |
ಆಲೂಗಡ್ಡೆಯು ಸೊಲ್ಯಾನೇಸೀ ಕುಟುಂಬದ ಬಹುವಾರ್ಷಿಕ ಸಲೇನಮ್ ಟ್ಯೂಬರೋಸಮ್‌ನ ಒಂದು ಪಿಷ್ಟವುಳ್ಳ, ಗೆಡ್ಡೆ ಬೆಳೆ. ಆಲೂಗಡ್ಡೆ ಶಬ್ದ ಆ ಸಸ್ಯವನ್ನೂ ನಿರ್ದೇಶಿಸಬಹುದು. ಆಂಡೀಸ್‌ನ ಪ್ರದೇಶದಲ್ಲಿ, ಕೆಲವು ಇತರ ನಿಕಟವಾಗಿ ಸಂಬಂಧಿತ ಸಾಗುವಳಿ ಮಾಡಲಾದ ಆಲೂಗಡ್ಡೆ ಜಾತಿಗಳಿವೆ. ಆಲೂಗಡ್ಡೆಗಳು, ಅಕ್ಕಿ, ಗೋಧಿ, ಮತ್ತು ಮೆಕ್ಕೆ ಜೋಳದ ನಂತರ, ವಿಶ್ವದ ನಾಲ್ಕನೇ ಅತಿ ದೊಡ್ಡ ಆಹಾರ ಬೆಳೆಯಾಗಿವೆ.
ಸಸ್ಯಮೂಲ-ಪರಿಚಯ
[ಬದಲಾಯಿಸಿ]ಬಡವರಿಗೂ, ಬಳಲ್ಲಿದರಿಗೂ ಆಲೂಗಡ್ಡೆ ರುಚಿ ಅಂಟಿಕೊಂಡಿದೆ.ಆದ್ದರಿಂದ ಬಿ.ಜಿ.ಎಲ್.ಸ್ವಾಮಿಯವರು ಇದಕ್ಕೆ 'ಕಲ್ಪಕಂದ' ಎಂದು ಹೆಸರಿಸಿದ್ದಾರೆ. ಈ ಕಲ್ಪಕಂದವು ವಿದೇಶೀಯರ ದೈನಂದಿನ ಆಹಾರಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕರ್ನಾಟಕದ ಹಲವು ಪ್ರದೇಶಗಲ್ಲಿ ಬಟಾಟೆ ಎಂದು ಕರೆಯಲ್ಪಡುವ ಈ ಹೆಸರು ಮೂಲದ ಪೊಟಾಟೋದಿಂದಲೇ ಬಂದದ್ದು. ನಾವು ಅಕ್ಕಿಯನ್ನೂ, ಉತ್ತರ ಭಾರತೀಯರು ಗೋಧಿಯನ್ನು ಬಳಸುವಂತೆ, ಬೇಯಿಸಿದ, ಬಾಡಿಸಿದ, ಹುರಿದ ಆಲೂ ಪಾಶ್ಚಾತ್ಯರಿಗೆ ಅನ್ನದಂತೆ.
ಔಷಧೀಯ ಗುಣಗಳು
[ಬದಲಾಯಿಸಿ]ನಾವು ಸಾಮಾನ್ಯವಾಗಿ ಆಲೂಗಡ್ಡೆಯನ್ನು ಆರೋಗ್ಯಕರ ಆಹಾರವೆಂದು ಪರಿಗಣಿಸುವುದಿಲ್ಲ, ಆದರೆ ಫೈಬರ್, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಹಣ್ಣುಗಳು ಮತ್ತು ತರಕಾರಿಗಳಿಂದ ನೀವು ಪಡೆಯುವ ಅದೇ ಪೋಷಕಾಂಶಗಳಲ್ಲಿ ಆಲೂಗಡ್ಡೆ ನಿಜವಾಗಿಯೂ ಸಮೃದ್ಧವಾಗಿವೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ಕ್ಯಾನ್ಸರ್-ಉಂಟುಮಾಡುವ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.[೧]
- ಈ ಪೋಷಕಾಂಶಗಳಲ್ಲದೆ ಅವಶ್ಯಕ ಅಮೈನೋ ಆಮ್ಲಗಳು ಕೂಡ ಇರುವುದರಿಂದ ರುಚಿ ಹಿತರಕವಾಗಿದ್ದು ಎಲ್ಲಾ ತಿಂಡಿತಿನಿಸುಗಳಲ್ಲಿ ಬಳಸಬಹುದಾದ, ಸುಲಭವಾಗಿ ದೊರೆಯುವ, ಪ್ರಪಂಚದಾದ್ಯಂತ ಬಳಕೆಯಲ್ಲಿರುವ ಗೆಡ್ಡೆ ತರಕಾರಿ.
- ಆಲೂಗಡ್ಡೆಯನ್ನು ೩ ಭಾಗಗಳಾಗಿ ವಿಂಗಡಿಸಬಹುದು.
- ಮೊದಲನೆಯದು,ಮೇಲ್ಭಾಗದ ಸಿಪ್ಪೆ,ಎರಡನೆಯದು,ಸಿಪ್ಪೆಯ ಮೇಲ್ಬಾಗದಲ್ಲಿರುವ ತೆಳುವಾದ ಪೊರೆ,ಮೂರನೆಯದು, ಒಳ ಪಿಷ್ಟ ಭಾಗ.
- ಮೊದಲನೆಯ ಭಾಗದಲ್ಲಿ ಖನಿಜಾಂಶಾ ಮತ್ತು ಜೀವಸತ್ವಗಳಿರುತ್ತವೆ.
- ಎರಡನೆಯ ಪದರದಲ್ಲಿ ಸಸಾರಜನಕ ಮತ್ತು ವರ್ಣದ್ರವ್ಯ ಇರುತ್ತವೆ.
- ಈ ವರ್ಣದ್ರವ್ಯ ನಾವು ಆಲೂಗಡ್ಡೆಯನ್ನು ಕತ್ತರಿಸಿದಾಗ ಗಾಳಿಯ ಸಂಪರ್ಕಕ್ಕೆ ಬಂದು ಆಲೂಗಡ್ಡೆಯ ಬಣ್ಣವನ್ನು ಬದಲಾಯಿಸುತ್ತದೆ.
- ಮೂರನೇಯ ಭಾಗವು ಪಿಷ್ಟ ಮತ್ತು ನೀರಿನಿಂದ ಕೂಡಿರುತ್ತದೆ.
- ಆದುದರಿಂದಲೇ ಆಲೂಗಡ್ಡೆಯ ಸಿಪ್ಪೆಯನ್ನು ತೆಗೆಯುದರಿಂದ ಅಥವಾ ತೊಳೆಯುದರಿಂದ ಪೋಷಕಾಂಶಗಳು ನಷ್ಟವಾಗಿ ಕೇವಲ ಪಿಷ್ಟ ಪದಾರ್ಥ ಮಾತ್ರ ಉಳಿಯುತ್ತದೆ.
ತಿಂಡಿಗಳು
[ಬದಲಾಯಿಸಿ]- ಆಲೂ ಪಾಯಸ:ಬೇಯಿಸಿದ ಆಲೂಗಡ್ಡೆಯನ್ನು ರುಬ್ಬಿ ಹಾಲಿಗೆ ಸೇರಿಸಿ ಕುದಿಸಿ, ರುಚಿಗೆ ತಕ್ಕಷ್ಟು ಸಕ್ಕರೆ ಸೇರಿಸಬೇಕು.ಹುರಿದ ಗೋಡಂಬಿ ಮತ್ತು ದ್ರಾಕ್ಷಿ ಸೇರಿಸಬಹುದು. ಹೆಚ್ಚಿನ ರುಚಿ ಬೇಕಾದರೆ ಹಾಲಿನೊಂದಿಗೆಖೋವಾ ಸೇರಿಸಿದರೆ ವಿಶೇಷ ರುಚಿ ಬರುತ್ತದೆ.
- ಆಲೂ ಹಲ್ವ:ಆಲೂಗಡ್ಡೆಯನ್ನು ಶುಚಿಮಾಡಿ ಬೇಯಿಸಿ ಚೆನ್ನಾಗಿ ಮಸೆದು ಸಕ್ಕರೆ ಬೆರೆಸಿ ಬಾಣಲೆಯಲ್ಲಿ ಹಾಕಿ ಒಲೆಯ ಮೇಲಿಟ್ಟು ಮಗಚುತ್ತಾ ತುಪ್ಪ ಸೇರಿಸಿದರೆ ಒಳ್ಳೆಯ ವಾಸನೆ ಬಂದು ಪಾತ್ರೆ ಬಿಡುವಾಗ ತುಪ್ಪ ಸವರಿದ ತಟ್ಟೆಗೆ ಹರಡಿ ಇಡಬೇಕು.ಆರಿದ ಮೇಲೆ ಬೇಕಾದ ಆಕಾರಕ್ಕೆ ಕತ್ತರಿಸಿ ಉಪಯೋಗಿಸಬವುದು.
ತಳಿಗಳು
[ಬದಲಾಯಿಸಿ]ಇದು ಬಹುಬೇಗ ೯೦ ದಿನಗಳಲ್ಲಿ ಇಳುವರಿಗೆ ಬರುವ ಮತ್ತು ವಿವಿಧ ಹವಾಗುಣಗಳಿಗೆ ಹೊಂದಿಕೊಂಡು ಬೇಳೆಯುವ ಭಾರತದ ಉತ್ತಮ ತಳಿ.ಚಪ್ಪಟೆಯದ ಗೆಡ್ಡೆಗಳು ವಿಶಾಲವಾದ, ನಯವಾದ ಮೇಲ್ಮೈ ಹೊಂದಿರುತ್ತವೆ.
ಬೀಜ ಮತ್ತು ಬಿತ್ತನೆ
[ಬದಲಾಯಿಸಿ]ಈ ಬೆಳೆಯನ್ನು ಗೆಡ್ಡೆಗಳ ಮುಖಾಂತರ ಸಸ್ಯಾಭಿವ್ರದ್ಧಿ ಮಾಡಲಾಗುವುದು. ಈ ಉದೇಶಕ್ಕೆ ಇಡೀ ಗೆಡ್ಡೆ ಅಥವಾ ಗೆಡ್ಡೆಯ ಚೂರುಗಳನ್ನು ಬೀಜವಾಗಿ ಬಳಸುತ್ತಾರೆ. ಆಲೂಗಡ್ಡೆಗೆ ಮಾರಕವಾದ ರೋಗಗಳು ಗೆಡ್ಡೆಗಳ ಮುಖಾಂತರ ಹರಡುವುದರಿಂದ ರೋಗರಹಿತ ಗೆಡ್ಡೆಗಳನ್ನು ಮಾತ್ರ ಬಳಸಬೇಕು.
ನೀರಾವರಿ ಮತ್ತು ಅಂತರಬೇಸಾಯ
[ಬದಲಾಯಿಸಿ]ನಾಟಿಮಾಡಿದ ಕೂಡಲೆ ತೆಳು ನೀರಾವರಿ ಒದಗಿಸಬೇಕು.ನಂತರದ ನೀರಾವರಿಗಳನ್ನು ಮಣ್ಣು ಮತ್ತು ಹವಾಗುಣಗಳಿಗನುಗುಣವಾಗಿ ೫-೭ ದಿನಗಳ ಅಂತರದಲ್ಲಿ ಕೊಡಬೇಕು ಮತ್ತು ಕಳೆ ಬರದಂತೆ ಎಚ್ಚರ ವಹಿಸಬೇಕು.[೨]
ಆರೋಗ್ಯ ಉಪಯೋಗಗಳು
[ಬದಲಾಯಿಸಿ]ಹೃದಯರಕ್ತನಾಳದ ಆರೋಗ್ಯಕ್ಕೆ ಸಹಕಾರಿ
[ಬದಲಾಯಿಸಿ]- ಇದಕ್ಕೆ ಕಾರಣ ಆಲೂಗಡ್ಡೆ ತನ್ನಲ್ಲಿ ಹೆಚ್ಚಿನ ಪ್ರಮಾಣದ ದೇಹಕ್ಕೆ ಅಗತ್ಯವಾಗಿ ಬೇಕಾದ ಒಳ್ಳೆಯ ನಾರಿನ ಅಂಶ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಮತ್ತು ವಿಟಮಿನ್ ಬಿ6 ಅಂಶಗಳನ್ನು ಒಳಗೊಂಡಿದೆ. ಇವುಗಳು ನಿಮ್ಮ ಹೃದಯಕ್ಕೆ ತುಂಬಾ ಒಳ್ಳೆಯದು.
- ಇದರಲ್ಲಿರುವ ನಾರಿನ ಅಂಶವು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಮತ್ತು ನಿಮ್ಮ ಕೆಟ್ಟ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಅಧ್ಯಯನದ ಪ್ರಕಾರ, ಆಲೂಗಡ್ಡೆ ತಿನ್ನುವುದರಿಂದ ರಕ್ತಹೀನತೆಯ ಸಮಸ್ಯೆ ದೂರವಾಗಿ ಹೃದ್ರೋಗ ಸಮಸ್ಯೆಯನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ, ನೀವು ಆಲೂಗಡ್ಡೆಯನ್ನು ಸರಿಯಾದ ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ನಿಮ್ಮ ಹೃದಯಕ್ಕೆ ಸಂಬಂಧಪಟ್ಟ ಇರುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.
ಕ್ಯಾನ್ಸರ್ ತಡೆಗಟ್ಟುವಿಕೆ ಆಲೂಗಡ್ಡೆಯಿಂದ ಸಾಧ್ಯ
[ಬದಲಾಯಿಸಿ]ಅಧ್ಯಯನದ ಪ್ರಕಾರ, ಆಲೂಗಡ್ಡೆ ಸೇವನೆ ಮಾಡುವುದರಿಂದ ಕ್ಯಾನ್ಸರ್ ಸಮಸ್ಯೆಯಿಂದ ದೂರವಿರಲು ಸಹಾಯ ಆಗುತ್ತದೆ. ಏಕೆಂದರೆ ಆಲೂಗಡ್ಡೆಯಲ್ಲಿ ಅದ್ಭುತವಾದ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ಸಿಗುತ್ತದೆ ಮತ್ತು ಇದು ನಿಮ್ಮ ಹೊಟ್ಟೆಯ ಕ್ಯಾನ್ಸರ್ ಸಮಸ್ಯೆಯನ್ನು ದೂರಮಾಡುತ್ತದೆ. ಆದ್ದರಿಂದ, ನೀವು ಆಲೂಗಡ್ಡೆಯನ್ನು ಬೇಯಿಸಿದ, ಹಿಸುಕಿದ ರೂಪದಲ್ಲಿ ಸೇವನೆ ಮಾಡಬಹುದು. ಆದರೆ ಇದನ್ನು ಎಣ್ಣೆಯಲ್ಲಿ ಕರಿದು ತಿನ್ನುವುದನ್ನು ತಪ್ಪಿಸಿ.
ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ
[ಬದಲಾಯಿಸಿ]ಆಲೂಗಡ್ಡೆ ತನ್ನಲ್ಲಿ ಆಲ್ಫಾ ಲಿಪೊಯಿಕ್ ಆಸಿಡ್ ಪ್ರಮಾಣದಿಂದ ತುಂಬಿರುತ್ತವೆ. ಇದು ನಿಮ್ಮ ಮೆದುಳಿನ ಕಾರ್ಯ ನಿರ್ವಹಣೆಯನ್ನು ಸುಧಾರಿಸಲು ಮತ್ತು ನಿಮ್ಮ ನೆನಪಿನ ಶಕ್ತಿಯ ಕುಸಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ನಿಮ್ಮನ್ನು ಮಾನಸಿಕ ಖಿನ್ನತೆಯ ಸಮಸ್ಯೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹೌದು. ಆಲೂಗಡ್ಡೆಗಳು ನಿಮ್ಮ ಮನಸ್ಥಿತಿಯ ಮಟ್ಟವನ್ನು ನಿರ್ವಹಿಸುವ ಜವಾಬ್ದಾರಿಯುತ ಮೆದುಳಿನ ನರಪ್ರೇಕ್ಷಕಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಮೆದುಳಿಗೆ ನೈಸರ್ಗಿಕ ರೂಪದಲ್ಲಿರುವ ಮಾನಸಿಕ ಔಷಧಿಯಾಗಿ ಕೆಲಸ ಮಾಡುತ್ತವೆ. ಆಲೂಗಡ್ಡೆಗಳಲ್ಲಿ ವಿಟಮಿನ್ ಸಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಮತ್ತು ಇದರಿಂದ ನಿಮ್ಮ ಜೀವಕೋಶದ ಹಾನಿಯನ್ನು ತಡೆಯಲು ಸಹಾಯವಾಗುತ್ತದೆ.[೩]
ಉಲ್ಲೇಖ
[ಬದಲಾಯಿಸಿ]- ↑ "ಆರೋಗ್ಯಕರ ಜೀವನಕ್ಕಾಗಿ 8 ಆಲೂಗಡ್ಡೆ ಪ್ರಯೋಜನಗಳು –". kannadanews.today.
- ↑ ಡಾ||ಪಿ.ನಾರಾಯಣ ಸ್ವಾಮಿ,ಡಾ||ಎಲ್.ವಸಂತ ನವಕರ್ಣಾಟಕ ಪ್ರಕಾಶನ ಪುಟಸಂಖ್ಯೆ ೫
- ↑ "ಆಲೂಗಡ್ಡೆ ಬೇಡ ಎಂದು ಜರಿಯುವವರು ಮೊದಲು ಈ ಮಾಹಿತಿ ತಿಳಿದುಕೊಳ್ಳಿ". Vijay Karnataka. Retrieved 31 August 2024.