ಜೈವಿಕ ಇಂಧನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸಸ್ಯ ಬೀಜಗಳು, ಕೃಷಿತ್ಯಾಜ್ಯ, ಪ್ರಾಣಿಗಳ ಕೊಬ್ಬು,ಆಮ್ಲಜನಕ ರಹಿತ ಜೀರ್ಣಕ್ರಿಯೆ ಮೊದಲಾದವುಗಳಿಂದ ಪಡೆದ ಇಂಧನವನ್ನು ಜೈವಿಕ ಇಂಧನ ಎಂದು ಕರೆಯಲಾಗಿದೆ.

ವಿಧಗಳು[ಬದಲಾಯಿಸಿ]

ಎರಡು ಪ್ರಮುಖ ಜೈವಿಕ ಇಂಧನಗಳೆಂದರೆ ಜೈವಿಕ ಎಥನಾಲ್ ಹಾಗೂ ಬಯೋ ಡೀಸೆಲ್. ಎಥೆನಾಲ್ ಅನ್ನು ಪೆಟ್ರೋಲ್ ನೊಂದಿಗೆ ಬೆರೆಸಿದರೆ, ಬಯೋ ಡೀಸೆಲ್ ಅನ್ನು ಡೀಸೆಲ್ ನೊಂದಿಗೆ ಮಿಶ್ರಣಮಾಡಲಾಗುತ್ತದೆ. ಎಥೆನಾಲ್ ವಾಹನ ಇಂಧನಕ್ಕೆ ಪೂರಕವಾಗಿ ಬಳಸಬಹುದಾದ ಇಂಧನವಾದರೆ, ಬಯೋ ಡೀಸೆಲ್ ಪೆಟ್ರೋಲಿಯಂ ಗೆ ಪರ್ಯಾಯವಾಗಿ ಬಳಸಬಹುದಾದ ಇಂಧನವಾಗಿದೆ.

ಜೈವಿಕ ಎಥನಾಲ್[ಬದಲಾಯಿಸಿ]

ಸಕ್ಕರೆ ಅಂಶವಿರುವ ಸಸ್ಯೋತ್ಪನ್ನಗಳಾದ ಕಬ್ಬು, ಕಬ್ಬಿನ ತ್ಯಾಜ್ಯವಾದ ಕಾಕಂಬಿ, ಜೋಳ, ಬೀಟ್ ರೂಟ್, ಮೆಕ್ಕೆ ಜೋಳ,ತಾಳೆ ಮೊದಲಾದವುಗಳಿಂದ ಎಥನಾಲ್ ಉತ್ಪಾದನೆ ಮಾಡಬಹುದು.ಉಪಯೋಗಕ್ಕೆ ಬಾರದ, ಕೊಳೆತ ಹಣ್ಣುಗಳು ಹಾಗೂ ಅವುಗಳ ಸಿಪ್ಪೆಗಳಿಂದಲೂ ಎಥನಾಲ್ ತಯಾರಿಸಬಹುದು. ಭವಿಷ್ಯದಲ್ಲಿ ಸಮುದ್ರದಡಿ ಬೆಳೆಯುವ ಹುಲ್ಲು, ನೀರಿನ ಮೇಲೆ ಕಟ್ಟುವ ಪಾಚಿಯಿಂದಲೂ ಎಥನಾಲ್ ತಯಾರಿಸುವ ಸಾಧ್ಯತೆಗಳ ಬಗೆಗೆ ಪ್ರಯೋಗಗಳು ನಡೆದಿವೆ.

ಉಲ್ಲೇಖಗಳು[ಬದಲಾಯಿಸಿ]

[೧]

ಘನ ಜೈವಿಕ ಇಂಧನ[ಬದಲಾಯಿಸಿ]

ಮರದ ತುಂಡುಗಳು, ಕಡ್ಡಿ ಪುಡಿ, ಇದ್ದಿಲು, ಗೊಬ್ಬರ ಈ ವಿಭಾಗಕ್ಕೆ ಸೇರುತ್ತವೆ.

  1. http://nammakpsc.com/wp/%E0%B2%9C%E0%B3%88%E0%B2%B5%E0%B2%BF%E0%B2%95-%E0%B2%87%E0%B2%82%E0%B2%A7%E0%B2%A8/