ಪ್ರಜ್ಞಾಶೂನ್ಯತೆ
Jump to navigation
Jump to search
ಪ್ರಜ್ಞಾಶೂನ್ಯತೆ (ಮೂರ್ಛೆ ಹೋಗುವುದು) ಎಂದರೆ ಪ್ರಜ್ಞೆ ತಪ್ಪುವುದು ಮತ್ತು ಸ್ನಾಯುಶಕ್ತಿಯನ್ನು ಕಳೆದುಕೊಳ್ಳುವುದು. ಇದರ ಲಕ್ಷಣಗಳೆಂದರೆ ಕ್ಷಿಪ್ರ ಆರಂಭ, ಲಘು ಅವಧಿವರೆಗೆ ಇರುವುದು, ಮತ್ತು ಸಹಜ ಚೇತರಿಕೆ.[೧] ಸಾಮಾನ್ಯವಾಗಿ ಕಡಿಮೆ ರಕ್ತದೊತ್ತಡದ ಕಾರಣದಿಂದ ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುವುದರಿಂದ ಇದು ಉಂಟಾಗುತ್ತದೆ. ಮೂರ್ಛೆ ಹೋಗುವ ಮೊದಲು ಕೆಲವೊಮ್ಮೆ ತಲೆಸುತ್ತು, ಬೆವರುವಿಕೆ, ಬಿಳಿಚಿಕೊಂಡ ಚರ್ಮ, ಮಂಕಾದ ದೃಷ್ಟಿ, ವಾಕರಿಕೆ, ವಾಂತಿ, ಅಥವಾ ಉಷ್ಣವೆನಿಸುವಂತಹ ಲಕ್ಷಣಗಳು ಇರುತ್ತವೆ. ಪ್ರಜ್ಞಾಶೂನ್ಯತೆಯನ್ನು ಸ್ನಾಯು ಸೆಳೆತದ ಲಘು ಅನುಭವದೊಂದಿಗೆ ಕೂಡ ಸಂಬಂಧಿಸಬಹುದು.