ಮೊಣಕೈ
ಗೋಚರ
ಮೊಣಕೈಯು ತೋಳಿನ ಮೇಲಿನ ಮತ್ತು ಕೆಳಗಿನ ಭಾಗಗಳ ನಡುವಿನ ಗೋಚರ ಕೀಲು. ಇದು ಮೊಣಕೈ ಗೆಣ್ಣು, ಮೊಣಕೈ ಕುಳಿ, ಪಾರ್ಶ್ವ ಹಾಗೂ ನಡುವಣ ಮೂಳೆಗೂಜಿನ ಮೇಲಿನ ಉಬ್ಬುಗಳು ಮತ್ತು ಮೊಣಕೈ ಕೀಲಿನಂತಹ ಎದ್ದುಕಾಣುವ ಹೆಗ್ಗುರುತುಗಳನ್ನು ಒಳಗೊಂಡಿದೆ. ಮೊಣಕೈ ಕೀಲು[೧] ಮೇಲಿನ ತೋಳಿನಲ್ಲಿರುವ ಭುಜಾಸ್ಥಿ ಮತ್ತು ಮುಂದೋಳಿನಲ್ಲಿರುವ ರೇಡಿಯಸ್ ಹಾಗೂ ಪ್ರಕೋಷ್ಟಾಸ್ಥಿಯ ನಡುವಿನ ಸೈನೋವಿಯಲ್ ಹಿಂಜ್ ಕೀಲಾಗಿದೆ. ಇದು ಮುಂದೋಳು ಹಾಗೂ ಕೈಯನ್ನು ದೇಹದ ಕಡೆ ಮತ್ತು ದೇಹದಿಂದ ದೂರ ಚಲಿಸಲು ಅವಕಾಶ ನೀಡುತ್ತದೆ.
ಮೊಣಕೈಯು ಮಾನವರು ಮತ್ತು ಇತರ ಪ್ರೈಮೇಟ್‍ಗಳಿಗೆ ನಿರ್ದಿಷ್ಟವಾಗಿದೆ.
ಮಾನವರಲ್ಲಿ, ಮೇಲಿನ ಅವಯವವನ್ನು ಚಿಕ್ಕದು ಹಾಗೂ ಉದ್ದವಾಗಿಸುವ ಮೂಲಕ ಗಾಳಿಯಲ್ಲಿ ಕೈಯನ್ನು ಸರಿಯಾಗಿ ಇರಿಸುವುದು ಮೊಣಕೈಯ ಮುಖ್ಯ ಕಾರ್ಯವಾಗಿದೆ. ಮೇಲಿನ ರೇಡಿಯೊಅಲ್ನಾರ್ ಕೀಲು ಮೊಣಕೈ ಕೀಲಿನೊಂದಿಗೆ ಕೀಲುಕೋಶವನ್ನು ಹಂಚಿಕೊಳ್ಳುತ್ತದಾದರೂ, ಅದು ಮೊಣಕೈಯಲ್ಲಿ ಯಾವುದೇ ಕ್ರಿಯಾತ್ಮಕ ಪಾತ್ರವಹಿಸುವುದಿಲ್ಲ.
ಟಿಪ್ಪಣಿಗಳು
[ಬದಲಾಯಿಸಿ]- ↑ "MeSH Browser". meshb.nlm.nih.gov (in ಇಂಗ್ಲಿಷ್).
ಉಲ್ಲೇಖಗಳು
[ಬದಲಾಯಿಸಿ]