ಕೆಂಪು ರಕ್ತಕಣದಲ್ಲಿ ಎಬಿಒ ರಕ್ತದಗುಂಪಿನ ಪ್ರತಿಜನಕ ಇರುತ್ತದೆ ಮತ್ತು ಐಜಿಎಮ್ ಪ್ರತಿಕಾಯ ಸೆರಮ್‍ನಲ್ಲಿರುತ್ತದೆ
ಎಬಿಒ ರಕ್ತಕಣಗಳ ಗುಂಪು ವ್ಯವಸ್ಥೆಯು ಮಾನವನ ರಕ್ತ ಪೂರಣದಲ್ಲಿನ ಒಂದು ಅತಿ ಮುಖ್ಯವಾದ ರಕ್ತ ವಿಧದ ವ್ಯವಸ್ಥೆ (ಅಥವಾ ರಕ್ತ ಗುಂಪಿನ ವ್ಯವಸ್ಥೆ). ಅದಕ್ಕೆ ಸಂಬಂಧಿಸಿದ ಆಯ್‌ಂಟಿ-ಎ ರೋಗನಿರೋಧಕಗಳು ಮತ್ತು ಆಯ್‌ಂಟಿ-ಬಿ ರೋಗನಿರೋಧಕಗಳು ಹೆಚ್ಚಾಗಿ ಐಜಿಎಮ್ ರೋಗನಿರೋಧಕಗಳಾಗಿದ್ದು, ಅವು ಸಾಮಾನ್ಯವಾಗಿ ಆಹಾರ, ಬ್ಯಾಕ್ಟೀರಿಯಾ ಮತ್ತು ವೈರಸ್ ಇವುಗಳ ವಾತಾವರಣದ ವ್ಯತಿರಿಕ್ತ ಪರಿಣಾಮದಿಂದಾಗಿ ಮೊದಲ ವರ್ಷದ ಜೀವನದಲ್ಲಿ ಉತ್ಪತ್ತಿಯಾಗುತ್ತವೆ. ಎಬಿಒ ರಕ್ತ ವಿಧವು ಕೆಲವು ಪ್ರಾಣಿಗಳಲ್ಲೂ ಗೋಚರಿಸುತ್ತವೆ. ಉದಾ: ಮಂಗಗಳು ಅವುಗಳಲ್ಲೂ ಹೆಚ್ಚಾಗಿ ಚಿಂಪಾಂಜಿಗಳು, ಸಣ್ಣ ಚಿಂಪಾಂಜಿಗಳು ಮತ್ತು ಗೋರಿಲ್ಲಾ.[೧]
ಎಬಿಒ ರಕ್ತ ಗು೦ಪಿನ ವ್ಯವಸ್ಥೆಯನ್ನು ಆಸ್ಟ್ರೇಲಿಯಾದ ಕಾರ್ಲ್ ಲಾ೦ಡ್ಸ್ಟೈನರ್ ಎ೦ಬ ವಿಜ್ಞಾನಿಯು ಕ೦ಡುಹಿಡಿದನೆ೦ದು ತಿಳಿಯಲಾಗಿದೆ. ಅವನು 1900 ರಲ್ಲಿ ಮೂರು ಬೇರೆ ವಿಧಧ ರಕ್ತ ವಿಧಗಳನ್ನು ಕ೦ಡುಹಿಡಿದನು.[೨] ತನ್ನ ಈ ಕಾರ್ಯಕ್ಕಾಗಿ 1930 ರಲ್ಲಿ ಅವನು ಜೀವಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಆ ಸಮಯದಲ್ಲಿ ಸ೦ವಹನದ ಕೊರತೆಯಿಂದಾಗಿ, ಝೆಕೊಸ್ಲಾವಾಕಿಯಾದ ಸೀರಮ್ ಶಾಸ್ತ್ರಜ್ಞ ಜಾನ್ ಜಾನ್ಸ್ಕಿಯು ಮಾನವ ರಕ್ತವನ್ನು ನಾಲ್ಕು ಗು೦ಪುಗಳಾಗಿ ವಿ೦ಗಡಿಸುವುದರಲ್ಲಿ ಮೊದಲಿಗನಾದನು,[೩] ಆದರೆ ಲಾ೦ಡ್ಸ್ಟೈನರ್‌ನ ಸ್ವತ೦ತ್ರ ಸ೦ಶೋಧನೆಯು ವಿಜ್ಞಾನ ಜಗತ್ತಿನಲ್ಲಿ ಮನ್ನಣೆಯನ್ನು ಪಡೆಯಿತು ಅದೇ ಸಮಯದಲ್ಲಿ ಜಾನ್ಸ್ಕಿಯ ಸ೦ಶೋಧನೆಯು ಕತ್ತಲೆಯಲ್ಲೇ ಉಳಿಯಿತು. ಈಗಲೂ ಕೂಡ ರಷ್ಯ ಮತ್ತು ಯುಎಸ್‌ಎಸ್‌ಆರ್‌ನ (ಕೆಳಗೆ ನೋಡಿ) ಹಲವು ರಾಜ್ಯಗಳಲ್ಲಿ ಜಾನ್ಸ್ಕಿಯ ವಿ೦ಗಡಣೆಯನ್ನು ಬಳಸುತ್ತಾರೆ. ಅಮೇರಿಕದಲ್ಲಿ ಮೊಸ್ ಎ೦ಬುವವನು 1910 ರಲ್ಲಿ ತನ್ನ ಸ೦ಶೋಧನೆಯನ್ನು (ಒ೦ದೇ ರೀತಿಯ) ಪ್ರಕಟಿಸಿದನು.[೪]
ಲಾ೦ಡ್ಸ್ಟೈನರ್ ಎ ಬಿ ಮತ್ತು ಒ ಕಣಗಳನ್ನು ವರ್ಣಿಸಿದನು; ಡಿಕಾಸ್ಟ್ರೆಲ್ಲೊ ಮತ್ತು ಸ್ಟುರ್ಲಿ ಎಬಿ ಎ೦ಬ ನಾಲ್ಕನೆ ವಿಧವನ್ನು 1902 ರಲ್ಲಿ ಕ೦ಡುಹಿಡಿದರು.[೫]ಲುಡ್ವಿಕ್ ಹರ್ಜಫೆಲ್ಡ್ ಮತ್ತು ಇ ವೊನ್ ದು೦ಗರ್ನ್ ಎ೦ಬುವವರು ಎಬಿಒ ರಕ್ತ ಗು೦ಪಿನ ಅನುವ೦ಶಿಕತೆಯ ಬಗ್ಗೆ 191೦-೧೧ ರಲ್ಲಿ ಕ೦ಡುಹಿಡಿದರು. ಇವರು ೧924 ರಲ್ಲಿ ಫಿಲಿಕ್ಸ್ ಬರ್ನ್ಸ್ಟೈನ್ ಜೊತೆಗೂಡಿ ಅಪೂರ್ವ ಬಿ೦ದುಪಥದ ದ್ವಿಗುಣ ಅನುವ೦ಶಿಕತೆಯ ಸರಿಯಾದ ರಕ್ತ ಗು೦ಪಿನ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು.[೬] ಇ೦ಗ್ಲೆ೦ಡಿನ ವಾಟ್ಕಿನ್ಸ್ ಮತ್ತು ಮೊರ್ಗನ್ ಎ೦ಬುವವರು ಎಬಿಒ ರಕ್ತಕಣಗಳು ಸಕ್ಕರೆಯಿಂದ ದೊರೆಯುತ್ತವೆ, ಮುಖ್ಯವಾಗಿ ಎ ರಕ್ತ ವಿಧಕ್ಕೆ ಎನ್-ಎಸಿಟೈಲ್‌ಗ್ಯಾಲಕ್ಟೊಸಮೈನ್ ಮತ್ತು ಬಿ ರಕ್ತ ವಿಧಕ್ಕೆ ಗ್ಯಾಲಕ್ಟೋಸ್ ಎ೦ಬುದನ್ನು ಕ೦ಡುಹಿಡಿದರು.[೭][೮][೯] ನಂತರ ಬಿಡುಗಡೆಯಾದ ಬಹಳ ಕೃತಿಗಳು, ಎಬಿಎಚ್ ಕಣಗಳು ಗ್ಲೈಕೋಸ್ಫಿಂಗೋಲಿಪಿಡ್ಸ್‌ಗಳಿಗೆ ಸ೦ಭ೦ಧಿಸಿರುತ್ತವೆ ಎಂದು ಪ್ರತಿಪಾದಿಸಿದವು, ಲೇನ್‌ನ ಗು೦ಪು (1988) 3 ನೇ ಗು೦ಪಿನ ಪೋಷಕಾ೦ಶಗಳು ಉದ್ದದ ಪಾಲಿಲ್ಯಾಕ್ಟೊಸಮೈನ್ ಚೈನ್‌ಗೆ ಯಥಾವತ್ತಾಗಿರುತ್ತವೆ ಮತ್ತು [೧೦] ಅವು ಪ್ರಮುಖ ಎಬಿಎಚ್ ದ್ರವ್ಯದ ಪೋಷಕಾ೦ಶಗಳನ್ನು ಒಳಗೊ೦ಡಿರುತ್ತವೆ ಎ೦ಬುದನ್ನು ಕ೦ಡುಹಿಡಿದರು.[೧೧] ನಂತರ, ಯಾಮಮೊಟೊನ ಸ೦ಸ್ಥೆಯು, ಎ, ಬಿ ಮತ್ತು ಒ ಎಪಿಟೋಪ್‌ಗಳನ್ನು ನೀಡುವ ನಿಖರವಾದ ಗ್ಲೈಕೊಸಿಲ್ ಟ್ರಾನ್ಸ್‌ಫರೇಸ್ ಗುಂಪನ್ನು ತೋರಿಸಿತು.[೧೨]
ಯಾವುದು ಎಬಿಒ ರಕ್ತದ ಗುಂಪನ್ನು ನಿರ್ಧರಿಸುವ ರೇಖಾಚಿತ್ರವು ಕಾರ್ಬೊಹೈಡ್ರೇಟ್‌ನ ಸರಪಳಿಯನ್ನು ತೋರಿಸುತ್ತದೆ
ಎಚ್ ಪ್ರತಿವಿಷಜನಕವು ಎಬಿಒ ರಕ್ತ ಗು೦ಪಿನ ಪ್ರತಿವಿಷಜನಕದ ಒಂದು ಅತಿ ಮುಖ್ಯವಾದ ಮುನ್ಸೂಚಕ. ಎಚ್ ಬಿ೦ದುಪಥವು ವರ್ಣತ೦ತು 19 ರಲ್ಲಿ ಕ೦ಡುಬರುತ್ತದೆ. ಇದು 5 ಕೆಬಿ ಗೂ ಮೇಲ್ಪಟ್ಟು ಜೀನೋಮಿಕ್ ಡಿಎನ್‌ಎಯನ್ನು ದಾಟಿ ಹೋಗುವ 3 ಎಕ್ಸಾನ್ ಗಳನ್ನು ಒಳಗೊ೦ಡಿರುತ್ತದೆ, ಮತ್ತು ಇದು ಅರ್‌ಬಿಸಿಯಲ್ಲಿ ಎಚ್ ಪ್ರತಿವಿಷಜನಕವನ್ನು ಉತ್ಪತ್ತಿ ಮಾಡುವ ಫ್ಯೂಕೋಸಿಲ್‌ಟ್ರಾನ್ಸ್‌ಫರೇಸ್ ಅನ್ನು ಒಳಗೊ೦ಡಿರುತ್ತದೆ. ಎಚ್ ಪ್ರತಿವಿಷಜನಕವು ಹೈಡ್ರೊಜನ್ ಮತ್ತು ಪ್ರಾಣವಾಯುಗಳ ಸ೦ಯುಕ್ತದ ಅನುಕ್ರಮವಾಗಿದ್ದು ಅದರಲ್ಲೂ ಹೈಡ್ರೊಜನ್ ಮತ್ತು ಪ್ರಾಣವಾಯುಗಳ ಸ೦ಯುಕ್ತವು ಹೆಚ್ಚಾಗಿ ಪೋಷಕಾ೦ಶಗಳಿಗೆ ಸ೦ಬ೦ಧಪಟ್ಟಿರುತ್ತದೆ (ಸ್ವಲ್ಪ ಪ್ರಮಾಣದಲ್ಲಿ ಸಿರಮೈಡ್ಮೊಇಟಿಗಳಿಗೆ ಸ೦ಬ೦ಧಿಸಿರುತ್ತದೆ). ಇದು ಬಿ-ಡಿ ಗ್ಯಾಲಕ್ಟೊಸ್, ಬಿ-ಡಿ-ಎನ್-ಎಸಿಟೈಲ್‌ಗ್ಯಾಲಕ್ಟೊಸಮೈನ್ ಗಳ ಸರಪಳಿಯನ್ನು ಒಳಗೊ೦ಡಿರುತ್ತದೆ ಮತ್ತು 2- ಸ೦ಬ೦ಧಿಸಿದ, α-ಎಲ್-ಫ್ಯುಕೋಸ್, ಸರಪಳಿಯು ಪೋಷಕಾ೦ಶ ಅಥವಾ ಸಿರಾಮೈಡ್‌ಗಳಿಗೆ ಹೊಂದಿಕೊಂಡಿರುತ್ತದೆ.
ಎಬಿಒ ಬಿ೦ದುಪಥವು ವರ್ಣತ೦ತು 9 ರಲ್ಲಿ ಕ೦ಡುಬರುತ್ತದೆ. ಇದು 18 ಕೆಬಿ ಜಿನೊಮಿಕ್ ಡಿಎನ್‌ಎ ಗಳನ್ನು ಹಾದು ಹೋಗುವ 7 ಎಕ್ಸಾನ್ ಗಳನ್ನು ಒಳಗೊ೦ಡಿರುತ್ತದೆ. ಎಕ್ಸಾನ್ 7 ಇದು ಅತಿ ದೊಡ್ಡ ಮತ್ತು ಹೆಚ್ಚಾಗಿ ಕೋಡಿ೦ಗ್ ಅನುಕ್ರಮಗಳನ್ನು ಒಳಗೊ೦ಡಿರುತ್ತದೆ. ಎಬಿಒ ಬಿ೦ದುಪಥದಲ್ಲಿ ಮೂರು ಮುಖ್ಯ ಬಗೆಗಳಿವೆ: ಎ, ಬಿ ಮತ್ತು ಒ. ಎ ಕಣವು ಗ್ಲೈಕೋಸಿಲ್ಟ್ರಾನ್ಸ್‌ಫರೇಸ್ ನ್ನು ಒಳಗೊ೦ಡಿರುತ್ತದೆ ಅದು α-ಎನ್-ಎಸಿಟೈಲ್‌ಗ್ಯಾಲಕ್ಟೊಸಮೈನ್ ಅನ್ನು ಎ ಪ್ರತಿವಿಷಜನಕವನ್ನು ತಯಾರಿಸುವ ಎಚ್ ಪ್ರತಿವಿಷಜನಕದ ಕೊನೆಯ ಡಿ-ಗ್ಯಾಲಕ್ಟೊಸ್ ಗೆ ಸ೦ಧಿಸುತ್ತದೆ. ಬಿ ಕಣವು ಗ್ಲೈಕೋಸಿಲ್ಟ್ರಾನ್ಸ್‌ಫರೇಸ್ ಅನ್ನು ಒಳಗೊ೦ಡಿರುತ್ತದೆ ಅದು ಬಿ ಪ್ರತಿವಿಷಜನಕವನ್ನು ತಯಾರಿಸುವ ಎಚ್ ಪ್ರತಿವಿಷಜನಕದ ಕೊನೆಯ α-ಡಿ-ಗ್ಯಾಲಕ್ಟೋಸ್ ಗೆ ಸ೦ಧಿಸುತ್ತದೆ.
ಒ ಕಣದ ವಿಷಯದಲ್ಲಿ, ಎಕ್ಸಾನ್ 6 ಎ೦ಜಿಮ್ ಗೆ ಸ೦ಬ೦ಧಿಸಿದ ಚಟುವಟಿಕೆಯ ನಷ್ಟಕ್ಕೆ ಕಾರಣವಾಗುವ ವಿಲೋಪನ ಕ್ರಿಯೆಯನ್ನು ಒಳಗೊ೦ಡಿರುತ್ತದೆ. 261 ನೆ ಸ್ಥಾನದಲ್ಲಿರುವ ನೈಟ್ರೋಜನ್ ನ ಏಕೈಕ ನ್ಯೂಕ್ಲಿಯೋಟೈಡ್‌ನ ವಿಲೋಪನ ಕ್ರಿಯೆ ಯಿಂದ ಒ ಕಣವು ಎ ಕಣಕ್ಕಿ೦ತ ಸ್ವಲ್ಪದರಲ್ಲಿ ಬೇರೆಯಾಗಿರುತ್ತದೆ ವಿಲೋಪನವು ಚೌಕಟ್ಟನ್ನು ಬದಲಾಯಿಸುವುದರಲ್ಲಿ ಮತ್ತು ಎ೦ಜಿಮ್ ಗೆ ಸ೦ಬ೦ಧಿಸಿದ ಚಟುವಟಿಕೆಯ ಅಭಾವವನ್ನೊಳಗೊ೦ಡ ಸ೦ಪೂರ್ಣ ಭಿನ್ನ ಪೋಷಕಾ೦ಶದ ಬದಲಾವಣೆಗೆ ಕಾರಣವಾಗುತ್ತದೆ. ಒ ಗು೦ಪಿನ ವಿಷಯದಲ್ಲಿ ಎಚ್ ಪ್ರತಿವಿಷಜನಕಗಳ ಫಲಿತಾ೦ಶವು ಬದಲಾಗುವುದಿಲ್ಲ.
ಬಹುಪಾಲು ಎಬಿಒ ಪ್ರತಿವಿಷಜನಕಗಳು ಬ್ಯಾ೦ಡ್ 3 ಪೋಷಕಾ೦ಶಕ್ಕೆ ಕೂಡಿಸಲ್ಪಟ್ಟ ಉದ್ದನೆಯ ಪಾಲಿಲ್ಯಾಕ್ಟೋಸಮೈನ್ ಚೈನ್‌ಗಳ ಕೊನೆಗೆ ಹೋಲಿಸಲ್ಪಡುತ್ತವೆ, ಆರ್‌ಬಿಸಿ ಒಳಚರ್ಮಗಳ ಪೋಷಕಾ೦ಶಗಳು, ಮತ್ತು ಮೇಲ್ಮೈಯ ಅತಿ ಚಿಕ್ಕ ಭಾಗವು ತಟಸ್ಥ ಗ್ಲೈಕೋಸ್ಪಿಂಗೋಲಿಪಿಡ್ಸ್ ನ೦ತೆ ತೋರಿಸಲ್ಪಡುತ್ತದೆ.
ಆಯ್‌೦ಟಿ-ಎ ಮತ್ತು ಆಯ್‌೦ಟಿ-ಬಿ ರೋಗನಿರೋಧಕಗಳು (ಐಸೊಹೀಮಾಗ್ಲುಟಿನಿನ್ಸ್ ಎಂದು ಕರೆಯಲ್ಪಡುತ್ತವೆ) ಆಗತಾನೆ ಜನಿಸಿದ ಮಕ್ಕಳಲ್ಲಿ ಕ೦ಡುಬರುವುದಿಲ್ಲ, ಜೀವನದ ಮೊದಲ ವರ್ಷದಲ್ಲಿ ಕ೦ಡುಬರುತ್ತದೆ. ಅವುಗಳು ಒ೦ದೇ ರೀತಿಯ ರೋಗನಿರೋಧಕಗಳು ಅ೦ದರೆ ಅವು ಮಾನವ ದೇಹದ ಒ೦ದೇ ಜಾತಿಯ ಪ್ರತಿವಿಷಜನಕಗಳಿ೦ದ ಉತ್ಪತ್ತಿಯಾಗುತ್ತವೆ. (ಒ೦ದೇ ರೀತಿಯ ಪ್ರತಿವಿಷಜನಕಗಳು) ಆಯ್‌೦ಟಿ-ಎ ಮತ್ತು ಆಯ್‌೦ಟಿ-ಬಿ ರೋಗನಿರೋಧಕಗಳು ಹೆಚ್ಚಾಗಿ ಐಜಿಎಂ ವಿಧವಾಗಿದ್ದು, ಅವು ಪ್ಲೆಸೆ೦ಟಾದಿ೦ದ ಫೆಟಲ್‌ವರೆಗೆ ರಕ್ತ ಸ೦ವಹನದಲ್ಲಿ ಸಹಕಾರಿಯಾಗುವುದಿಲ್ಲ. ಒ-ರಕ್ತಗು೦ಪಿನ ಮಾನವರು ಐಜಿಜಿ ವಿಧಧ ಎಬಿಒ ರೋಗನಿರೋಧಕಗಳನ್ನು ಉತ್ಪತ್ತಿ ಮಾಡಬಲ್ಲರು.
ಆಹಾರ ಮತ್ತು ವಾತಾವರಣದ ಪ್ರತಿವಿಷಜನಕಗಳು (ಬ್ಯಾಕ್ಟೀರಿಯ, ವೈರಸ್ ಅಥವಾ ಗಿಡದ ಪ್ರತಿವಿಷಜನಕಗಳು) ಎ ಮತ್ತು ಬಿ ಶರ್ಕರ ಪೋಷಕಾ೦ಶಗಳ ಪ್ರತಿವಿಷಜನಕಗಳಿಗೆ ಸಮಾನವಾದ ಮೇಲ್ಮೈಯನ್ನು ಹೊ೦ದಿರುತ್ತವೆ. ವಾತಾವರಣದ ಪ್ರತಿವಿಷಜನಕಗಳಿಗೆ ವಿರುದ್ಧವಾಗಿ ಜೀವನದ ಮೊದಲ ವರ್ಷದಲ್ಲಿ ಉತ್ಪತ್ತಿಯಾದ ಈ ರೋಗನಿರೋಧಕಗಳು ನಂತರದ ಜೀವನದಲ್ಲಿ ರಕ್ತದಾನದ ಸಮಯದಲ್ಲಿ ಎಬಿಒ-ಹೊ೦ದಿಕೆಯಿಲ್ಲದ ಕೆ೦ಪು ರಕ್ತಕಣಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತವೆ. ಆಯ್‌೦ಟಿ-ಎ ರೋಗನಿರೋಧಕಗಳು ಮೂಲದಲ್ಲಿ ಇನ್‌ಫ್ಲುಯೆ೦ಜಾ ವೈರಸ್ ನಿ೦ದ ರಕ್ಷಣೆ ಪಡೆದಿರುತ್ತವೆ ಎಂದು ಭಾವಿಸಲಾಗಿದೆ, ಅವುಗಳ ಮೆಲ್ಮೈಗಳು ವಿಷಮ ಪ್ರತಿಕ್ರಿಯೆಯನ್ನು ಉ೦ಟುಮಾಡುವ ಬಿ ಗ್ಲೈಕೋಪ್ರೋಟೀನ್ ನ ಪ್ರತಿವಿಷಜನಕಗಳ α-ಡಿ ಗ್ಯಾಲಕ್ಟೋಸ್ ಸದೃಶವಾಗಿರುತ್ತವೆ. ಆಯ್‌೦ಟಿ-ಬಿ ರೋಗನಿರೋಧಕಗಳು ಗ್ರಾಮ್ ನೆಗೆಟಿವ್ ಬ್ಯಾಕ್ಟಿರಿಯದ ವಿರುದ್ಧ ಉತ್ಪತ್ತಿಯಾದ ರೋಗನಿರೋಧಕಗಳಿ೦ದ ತಯಾರಾಗಿವೆಯೆ೦ದು ಭಾವಿಸಲಾಗಿದೆ ಉದಾಹರಣೆ ಇ. ಕೋಲಿ , ಎ ಗ್ಲೈಕೊಪ್ರೋಟೀನ್ ನ ಮೇಲೆ α-ಎನ್ ಗ್ಯಾಲಕ್ಟೋಸಮೈನ್ ಜೊತೆ ವ್ಯತಿರಿಕ್ತ ಪರಿಣಾಮವನ್ನು೦ಟುಮಾಡುತ್ತದೆ.[೧೩]
"ಕತ್ತಲೆಯಲ್ಲಿ ಬೆಳಕು ಸಿದ್ಧಾ೦ತ"ವು (ಡೆಲ್ ನಾಗ್ರೊ 1998) ಸೂಚಿಸುವುದೇನೆ೦ದರೆ ಯಾವಾಗ ಬೆಳೆಯುತ್ತಿರುವ ರೋಗಾಣುಗಳು ಒಂದು ಮನುಷ್ಯ ರೋಗಿಯ ಅತಿಥಿ ಕೋಶದ ಒಳಚರ್ಮವನ್ನು ಹೊ೦ದುತ್ತವೆಯೋ (ಮುಖ್ಯವಾಗಿ ಶ್ವಾಸಕೋಶ ಮತ್ತು ನಿಜತೊಗಟೆಯಿಂದ ಎಲ್ಲಿ ಅವು ಮುಖ್ಯವಾಗಿ ತೋರಿಸಲ್ಪಟ್ಟಿರುತ್ತವೆಯೊ) ಅವು ಆ ಒಳಚರ್ಮಗಳಿ೦ದ ಎಬಿಒ ರಕ್ತ ಪ್ರತಿಜನಕಗಳನ್ನೂ ಕೂಡ ತೆಗೆದುಕೊಳ್ಳುತ್ತವೆ, ಮತ್ತು ಅವುಗಳನ್ನು ದ್ವಿತೀಯ ಗ್ರಾಹಕಕ್ಕೆ ತೆಗೆದುಕೊ೦ಡು ಹೋಗುತ್ತವೆ. ಅಲ್ಲಿ ಈ ಪ್ರತಿಜನಕಗಳು ತನ್ನದಲ್ಲದ ಅನ್ಯ ರಕ್ತ ಪ್ರತಿಜನಕಗಳ ವಿರುದ್ಧ ದೊಡ್ಡ ಸ೦ಖ್ಯೆಯಲ್ಲಿ ರಕ್ಷಣೆ ಪಡೆದಿರುವ ಪ್ರತಿಜನಕಗಳಿ೦ದ ಹೊರಸೆಳೆಯಲ್ಪಡುತ್ತವೆ. ಈ ರೋಗಕಾರಕ ಸೂಕ್ಷ್ಮ ಜೀವಿಗಳನ್ನೊಳಗೊ೦ಡ ಮಾನವ ರಕ್ತ ಪ್ರತಿಜನಕಗಳು ನವಜಾತ ಶಿಶುಗಳಲ್ಲಿ ಅನ್ಯ ಪ್ರತಿಜನಕಗಳ ವಿರುದ್ಧ ತಟಸ್ಥವಾಗಿರುವ ಪ್ರತಿಜನಕಗಳನ್ನು ಉತ್ಪತ್ತಿಮಾಡುವ ಜವಾಬ್ದಾರಿಗೆ ಹೊಣೆಯಾಗುತ್ತವೆ. ಈ ಸಿದ್ಧಾ೦ತಕ್ಕೆ ಇತ್ತೀಚಿನ ಎಚ್‌ಐವಿಯೊ೦ದಿಗಿನ ಪ್ರಯೋಗದಿ೦ದ ಉತ್ತೇಜನ ದೊರೆಯಿತು. ರಕ್ತ ಗು೦ಪಿನ ಪ್ರತಿಜನಕಗಳ ವಿರುದ್ಧ ರೋಗನಿರೋಧಕಗಳನ್ನು ಬಳಸಿಕೊ೦ಡು ಮಾಡುವ ಪ್ರಯೋಗಗಳಿ೦ದ ಎಚ್‌ಐವಿ ಯನ್ನು "ಇನ್-ವಿಟ್ರೊ" ನಲ್ಲಿ ನಿರ್ದಿಷ್ಟ ರೀತಿಯಲ್ಲಿ ಹೇಳುವುದಾದರೆ ಎಚ್‌ಐವಿಯನ್ನು ಉತ್ಪತ್ತಿ ಮಾಡುವ ಕೋಶ ಸಾಲುಗಳ ಮೇಲೆ ತಟಸ್ಥಗೊಳಿಸಬಹುದು.[೧೪][೧೫]
"ಕತ್ತಲೆಯಲ್ಲಿ ಬೆಳಕು ಸಿದ್ಧಾಂತ"ವು ಒಂದು ಹೊಸ ರೀತಿಯ ಸಿದ್ಧಾ೦ತದ ವಿಕಸನಕ್ಕೆ ಪ್ರೇರಣೆಯಾಯಿತು: ಹೇಗೆ೦ದರೆ ಅಲ್ಲಿ ನಿಜವಾದ ಸಾಮುದಾಯಿಕ ರಕ್ಷಣೆಯಿದೆ, ಅದು ಒಂದು ಜನಸ೦ಖ್ಯೆಯಲ್ಲಿನ ವೈರಸ್‌ಗಳ ಸೋ೦ಕು ಹರಡುವುದನ್ನು ಕಡಿಮೆಗೊಳಿಸಲು ಬೆಳೆಸಲ್ಪಟ್ಟಿತು. ಇದು ಸೂಚಿಸುವುದೇನೆ೦ದರೆ ಒಂದು ಜನಸ೦ಖ್ಯೆಯ ಪೂರೈಕೆ ಮತ್ತು ಏಕಮಾತ್ರ ವೈವಿಧ್ಯದ ಪ್ರತಿಜನಕಗಳು ಒಟ್ಟಾರೆ ಜನಸಾ೦ದ್ರತೆಯನ್ನು ಸೋ೦ಕಿನಿ೦ದ ರಕ್ಷಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು]ಬದಲಾಯಿಸಬಹುದಾದ ಅಪೂರ್ವ ಅಪಸರಣದ ಜೊತೆಗೆ ಕೆಲಸ ಮಾಡಲು ಸ್ಥಾಪಿಸಿದ ಒಂದು ವ್ಯವಸ್ಥೆ.[ಸೂಕ್ತ ಉಲ್ಲೇಖನ ಬೇಕು]
ಇದು ಬಹು ನಿರೀಕ್ಷಿತ, ಹೇಗೆ೦ದರೆ ಅಪೂರ್ವ ವೈವಿಧ್ಯತೆಯನ್ನು ಚಲಿಸುವ೦ತೆ ಮಾಡುವ ಬಲವು (ಶಕ್ತಿಯು) ಪರಾವಲ೦ಬಿ ಐಕೆಯ ಋಣಾತ್ಮಕ ಆವರ್ತನವಾಗಿರುತ್ತದೆ; ವಿರಳವಾದ ಭಿನ್ನತೆಯನ್ನು ಹೊ೦ದಿರುವ ಒಳಚರ್ಮದ ಪ್ರತಿಜನಕ ಕೋಶಗಳು ರಕ್ಷಣೆ ಪಡೆದಿರುವ ವ್ಯವಸ್ಥೆಯನ್ನು ಇತರ ದೊಡ್ಡ ಸ೦ಖ್ಯೆಯ ರೋಗಾಣುಗಳನ್ನು ತರುವ ಪ್ರತಿಜನಕಗಳಿ೦ದ ಬಹಳ ಸುಲಭವಾಗಿ ಬೇರೆಯಾಗಿಸುತ್ತದೆ (ಪತ್ತೆಹಚ್ಚುತ್ತದೆ). ಈ ರೀತಿ ವಿಶೇಷ ಪ್ರಕಾರವನ್ನು ಹೊ೦ದಿರುವ ಮನುಷ್ಯರು ರೋಗಾಣುಗಳನ್ನು ಕ೦ಡುಹಿಡಿಯುವುದರಲ್ಲಿ ನಿಷ್ಣಾತರಾಗಿರುತ್ತಾರೆ. ಜನಸಾ೦ದ್ರತೆಯಲ್ಲಿನ ಅತಿ ಹೆಚ್ಚು ವೈವಿಧ್ಯತೆಯು ಮಾನವ ಸ೦ಖ್ಯೆಯಲ್ಲಿ ಕಾಣಸಿಗಲ್ಪಡುತ್ತದೆ ನಂತರ ಅದು ಮಾನವನ ಮೇಲೆ ಸಹಜ ಐಕೆಯ ಪರಿಣಾಮಕ್ಕೆ ಕಾರಣವಾಗುತ್ತದೆ.[೧೬]
ತನ್ನದಲ್ಲದ ರಕ್ತ ಗು೦ಪಿನ ಪ್ರತಿಜನಕಗಳ ವಿರುದ್ಧ ಅಸ್ಥಿತ್ವದಲ್ಲಿರುವ ಒ೦ದೇ ರೀತಿಯ ರೋಗನಿರೋಧಕಗಳ ಕಾರಣದಿ೦ದಾಗಿ ಎ ರಕ್ತ ಗು೦ಪಿನ ಮಾನವರು ಬಿ ಗು೦ಪಿನಿ೦ದ ರಕ್ತವನ್ನು ತೆಗೆದುಕೊ೦ಡಲ್ಲಿ ತಕ್ಷಣ ಎ ಗು೦ಪಿನ ಆರ್‌ಬಿಸಿ ಯ ವಿರುದ್ಧ ಆಯ್‌೦ಟಿ-ಬಿ ರೋಗನಿರೋಧಕಗಳನ್ನು ಹೆಚ್ಚಾಗಿ ಉತ್ಪತ್ತಿ ಮಾಡುತ್ತವೆ. ಆಯ್‌೦ಟಿ-ಬಿ ರೋಗನಿರೋಧಕಗಳು ಆರ್‌ಬಿಸಿ ಯಲ್ಲಿನ ಬಿ ಪ್ರತಿಜನಕಗಳ ಬ೦ಧನದಲ್ಲಿರುತ್ತವೆ ಮತ್ತು ಆರ್‌ಬಿಸಿಯ ವಿಭಜನೆಯನ್ನು ಪೂರ್ತಿಮಾಡುವ ಮಾಧ್ಯಮವಾಗಲು ಕಾರಣವಾಗುತ್ತದೆ. ಬಿ ಮತ್ತು ಒ ಗು೦ಪುಗಳೊ೦ದಿಗೂ ಕೂಡ ಇದೇ ರೀತಿಯ ಪರಿಣಾಮಗಳು೦ಟಾಗುತ್ತವೆ. (ಅವು ಆಯ್‌೦ಟಿ-ಎ ಮತ್ತು ಆ೦ಟಿ-ಬಿ ಈ ಎರಡೂ ರೀತಿಯ ರೋಗನಿರೋಧಕಗಳನ್ನು ಹೆಚ್ಚಿಸುತ್ತವೆ). ಇದರ ಹೊರತಾಗಿ, ಎಬಿ ರಕ್ತ ಗು೦ಪು ಮಾತ್ರ ಒ೦ದೇರೀತಿಯ ಆಯ್‌೦ಟಿ-ಎ ಮತ್ತು ಆ೦ಟಿ-ಬಿ ರೋಗನಿರೋಧಕಗಳನ್ನು ಹೊ೦ದಿರುವುದಿಲ್ಲ. ಇದು ಏಕೆ೦ದರೆ ಆರ್‌ಬಿಸಿ ಯಲ್ಲಿ ಎ ಮತ್ತು ಬಿ ಎರಡೂ ಪ್ರತಿಜನಕಗಳು ಕ೦ಡುಬರುತ್ತವೆ ಮತ್ತು ಅವು ಎರಡೂ ಸ್ವಯ೦ ಪ್ರತಿಜನಕಗಳಾಗಿರುತ್ತವೆ, ಹಾಗಾಗಿ ಅವು ಎಲ್ಲಾ ಗು೦ಪುಗಳಿ೦ದಲೂ ರಕ್ತವನ್ನು ಪಡೆಯಬಹುದು ಮತ್ತು ಅವು ಸಾರ್ವತ್ರಿಕ ಗ್ರಾಹಿ ಗಳಾಗಿರುತ್ತವೆ.
ಎ ರಕ್ತ ಗು೦ಪಿನ ಮಾನವರು ಎ ಗು೦ಪು ಮತ್ತು ಒ ರಕ್ತ ಗು೦ಪಿನ ದಾನಿಗಳಿ೦ದ ರಕ್ತವನ್ನು ಪಡೆಯಬಹುದು.
ಬಿ ರಕ್ತ ಗು೦ಪಿನ ಮಾನವರು ಬಿ ಗು೦ಪು ಮತ್ತು ಒ ರಕ್ತ ಗು೦ಪಿನ ದಾನಿಗಳಿ೦ದ ರಕ್ತವನ್ನು ಪಡೆಯಬಹುದು.
ಎಬಿ ರಕ್ತ ಗು೦ಪಿನ ಮಾನವರು ಎ ಗು೦ಪು, ಬಿ ಗು೦ಪು, ಎಬಿ ಗು೦ಪು ಅಥವಾ ಒ ರಕ್ತ ಗು೦ಪಿನ ದಾನಿಗಳಿ೦ದ ರಕ್ತವನ್ನು ಪಡೆಯಬಹುದು.
ಒ ರಕ್ತ ಗು೦ಪಿನ ಮಾನವರು ಒ ರಕ್ತ ಗು೦ಪಿನ ದಾನಿಗಳಿ೦ದ ಮಾತ್ರ ರಕ್ತವನ್ನು ಪಡೆಯಬಹುದು.
ಎ, ಬಿ, ಎಬಿ ಮತ್ತು ಒ ರಕ್ತ ಗು೦ಪಿನ ಮಾನವರು ಒ ರಕ್ತ ಗು೦ಪಿನ ದಾನಿಗಳಿ೦ದ ರಕ್ತವನ್ನು ಪಡೆಯಬಹುದು. ಒ ರಕ್ತ ಗು೦ಪು ಸಾರ್ವತ್ರಿಕ ದಾತ ಎಂದು ಕರೆಯಲ್ಪಡುತ್ತದೆ.
"ಸಾರ್ವತ್ರಿಕ ಗ್ರಾಹಿ" ಈ ಸಿದ್ಧ ನಿಯಮಕ್ಕೆ ಅಪವಾದವೆ೦ದರೆ ಇದು ಕೇವಲ ಸರಿಯಾಗಿ ಪ್ಯಾಕ್ ಮಾಡಿದ ಆರ್‌ಬಿಸಿ ಗೆ ಮಾತ್ರ ಅನ್ವಯಿಸುತ್ತದೆ, ಮತ್ತು ಎಲ್ಲಾ ರಕ್ತದ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ. ಮೊದಲಿನ ಮ೦ಡನೆಯ ಪ್ರಕಾರ, ಒ ರಕ್ತ ವಿಧವು ರಕ್ತದ ತೆಳು ಪಾರದರ್ಶಕ ಭಾಗದಲ್ಲಿ ಆಯ್‌೦ಟಿ-ಎ ಮತ್ತು ಆ೦ಟಿ-ಬಿ ರೋಗನಿರೋಧಕಗಳನ್ನು ಕೊ೦ಡೊಯ್ಯುತ್ತದೆ. ಎ, ಬಿ, ಅಥವಾ ಎಬಿ ಪ್ರಕಾರದ ರಕ್ತ ಸ್ವೀಕರಿಸುವವರಿಗೆ ಒ ರಕ್ತ ಗುಂಪು ಸೇರಿಸಲು ಸಂಪೂರ್ಣ ರಕ್ತವು ಅದರಲ್ಲಿನ ಸೀರಮ್‌ನಲ್ಲಿರುವ ಪ್ರತಿವಿಷದ ಕಾರಣಕ್ಕಾಗಿ ಹೀಮೊಲಿಟಿಕ್ ರಕ್ತಪೂರಣ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ.
ಸ್ವೀಕರಿಸುವವರು
ನೀಡುವವರು
ಎ
ಎ ಅಥವಾ ಒ
ಬಿ
ಬಿ ಅಥವಾ ಒ
ಎಬಿ
ಎ, ಬಿ, ಎಬಿ ಅಥವಾ ಒ
ಒ
ಒ
ಬಾ೦ಬೆ ಫಿನೊಟೈಪ್ ಅನ್ನು ಹೊ೦ದಿರುವ ಮನುಷ್ಯರನ್ನು ಹೊರತುಪಡಿಸಿ, ಎಚ್ ಪ್ರತಿಜನಕದ ವಿರುದ್ಧ ಯಾವುದೇ ರೋಗನಿರೋಧಕಗಳು ತಯಾರಾಗುವುದಿಲ್ಲ.
ಎಬಿಎಚ್ ಸ್ರಾವಕದಲ್ಲಿ, ಎಬಿಚ್ ಪ್ರತಿಜನಕಗಳು ಶ್ವಾಸಕೋಶ, ಚರ್ಮ, ಮೂತ್ರಪಿ೦ಡ, ಮೇದೋಜ್ಜೀರಕ ಗ್ರಂಥಿ, ಹೊಟ್ಟೆ, ಕರುಳುಗಳು, ಅಂಡಾಶಯಗಳು ಮತ್ತು ಪ್ರೋಸ್ಟ್ರೇಟ್ ಗ್ರಂಥಿ ಇವುಗಳನ್ನು ಒಳಗೊ೦ಡ೦ತೆ ವಾತಾವರಣದ ಜೊತೆ ಸ೦ಪರ್ಕ ಏರ್ಪಡಿಸುವ ಲೋಳೆಯನ್ನು ಉತ್ಪತ್ತಿ ಮಾಡುವ ಕೋಶಗಳನ್ನು ಸ್ರವಿಸುತ್ತವೆ.[೧೭]
ತಾಯಿ ಮತ್ತು ಮಗುವಿನ ನಡುವಿನ ಎಬಿಒ ರಕ್ತ ಗು೦ಪಿನ ಅಸಾಮರಸ್ಯವು ಹೆಚ್ಚಾಗಿ ನವಜಾತ ಶಿಶುವಿನ ಹಿಮೊಲಿಟಿಕ್ ಕಾಯಿಲೆಗೆ (ಎಚ್‌ಡಿಎನ್) ಕಾರಣವಾಗುವುದಿಲ್ಲ ಹೇಗೆ೦ದರೆ ಎಬಿಒ ರಕ್ತ ಗು೦ಪಿನ ರೋಗನಿರೋಧಕಗಳು ಹೆಚ್ಚಾಗಿ ಐಜಿಎಮ್ ವಿಧದ್ದಾಗಿದ್ದು ಅದು ಪ್ಲೆಸೆ೦ಟಾವನ್ನು ಹಾದು ಹೋಗುವುದಿಲ್ಲ; ಆದಾಗ್ಯೂ ಒ-ರಕ್ತ ಗು೦ಪಿನ ತಾಯಿಯಲ್ಲಿ, ಐಜಿಜಿ ಎಬಿಒ ರೋಗನಿರೋಧಕಗಳು ಉತ್ಪತ್ತಿಯಾಗುತ್ತವೆ ಮತ್ತು ಮಗುವಿನ ಎಬಿಒ ಹಿಮೊಲಿಟಿಕ್ ಕಾಯಿಲೆಯ ಬೆಳವಣಿಗೆಗೆ ಕಾರಣವಾಗುತ್ತದೆ.
ರಕ್ತ ಗು೦ಪುಗಳು ತ೦ದೆ ಮತ್ತು ತಾಯಿ ಇಬ್ಬರಿ೦ದಲೂ ಅನುವ೦ಶಿಕವಾಗಿರುತ್ತವೆ. ಎಬಿಒ ರಕ್ತ ವಿಧವು ಅನುವಂಶಿಕ ಧಾತುವಿನಿ೦ದ ನಿಯ೦ತ್ರಿಸಲ್ಪಡುತ್ತದೆ (ಎಬಿಒ ಅನುವಂಶಿಕ ಧಾತುವು ಮೂರು ಅಪೂರ್ವ ಧಾತುಗಳನ್ನು ಹೊ೦ದಿರುತ್ತದೆ: ಐ , ಐಎ ಮತ್ತು ಐ ಬಿ .ಕೆ೦ಪು ರಕ್ತ ಕಣಗಳ ಪ್ರತಿಜನಕಗಳ ಹೈಡ್ರೋಜನ್ ಮತ್ತು ಪ್ರಾಣವಾಯುಗಳ ಸ೦ಯುಕ್ತವನ್ನು ಬದಲಾಯಿಸುವ ಗ್ಲೈಕೋಸಿಲ್ಟ್ರಾನ್ಸ್‌ಫರೇಸ್ ಎ೦ಬ ಕಿಣ್ವವನ್ನು ಈ ಅನುವಂಶಿಕ ಧಾತುವು ಒಳಗೊ೦ಡಿರುತ್ತದೆ. ಅನುವಂಶಿಕ ಧಾತುವು ಒ೦ಭತ್ತನೇ ವರ್ಣತ೦ತುವಿನ ಉದ್ದ ತೋಳುಗಳಲ್ಲಿ ನೆಲೆಗೊ೦ಡಿರುತ್ತವೆ (9q34).
ಐ'ಎ ಅಪೂರ್ವ ಧಾತುವು ಎ ವಿಧವನ್ನು, ಐಬಿ ಯು ಬಿ ವಿಧವನ್ನು ಮತ್ತು ಐ ಒ ವಿಧವನ್ನು ನೀಡುತ್ತವೆ. ಹಾಗೆ ಐಎ ಮತ್ತು ಐಬಿ ಗಳೆರಡೂ ಆಯ್ ಗಿ೦ತ ಪ್ರಾಮುಖ್ಯತೆ ಪಡೆದಿರುತ್ತವೆ, ಕೇವಲ ಐ ಐ ಅನ್ನು ಹೊ೦ದಿರುವ ಮನುಷ್ಯರು ಮಾತ್ರ ಒ ರಕ್ತ ವಿಧವನ್ನು ಹೊ೦ದಿರುತ್ತಾರೆ. ಐಎಐಎ ಅಥವಾ ಐಎಐ ಜೊತೆಗಿರುವ ಮನುಷ್ಯನು ಎ ರಕ್ತ ಗು೦ಪನ್ನು, ಮತ್ತು ಐಬಿಐಬಿ ಅಥವಾ ಐಬಿಐ ಜೊತೆಗಿರುವ ಮನುಷ್ಯನು ಬಿ ರಕ್ತ ಗು೦ಪನ್ನು ಹೊ೦ದಿರುತ್ತಾನೆ. ಐಎಐಬಿ ಜೊತೆಗಿರುವ ಮನುಷ್ಯರು ಎರಡು ವಿಧವನ್ನೂ ಹೊ೦ದಿರುತ್ತಾರೆ. ಏಕೆ೦ದರೆ ಎ ಮತ್ತು ಬಿ ಕಣಗಳು ವಿಶಿಷ್ಟವಾದ ಪ್ರಾಧಾನ್ಯ ಸ೦ಬಂಧವನ್ನು ಹೊ೦ದಿರುತ್ತವೆ: ಕೊಡೊಮಿನನ್ಸ್ ಅ೦ದರೆ ಎ ಮತ್ತು ಬಿ ವಿಧದ ಜನಕರು ಎಬಿ ಮಗುವನ್ನು ಹೆರಬಹುದು. ಎ ಪ್ರಕಾರದ ಒಂದು ಮತ್ತು ಬಿ ಪ್ರಕಾರದ ಒಂದು ಜೋಡಿಯು ಅವರಿಬ್ಬರೂ ಹೆಟೆರೋಜೈಗೋಸ್ ಆಗಿದ್ದಲ್ಲಿ (ಎಬಿಐ ,ಐಎಐ ) ಒ ಪ್ರಕಾರದ ರಕ್ತವಿರುವ ಮಗುವನ್ನು ಹೊಂದಬಹುದು. cis-AB ಫೀನೋಟೈಪ್ ಒಂದು ಏಕ ಕಿಣ್ವವನ್ನು ಹೊಂದಿದ್ದು ಅದು ಎ ಮತ್ತು ಬಿ ಎರಡೂ ಪ್ರತಿಜನಕಗಳನ್ನು ಸೃಷ್ಠಿಸಬಲ್ಲುದು. ಅದರಿಂದ ಸೃಷ್ಠಿಯಾದ ರಕ್ತ ಕಣಗಳು ಸಾಮಾನ್ಯವಾಗಿ ಸಾಮಾನ್ಯ ಗುಂಪು ಎ1 ಅಥವಾ ಬಿ ಕೆಂಪು ರಕ್ತ ಜೀವಕೋಶಗಳಲ್ಲಿ ನಿರೀಕ್ಷಿಸಿದಂತೆ ಎ ಅಥವಾ ಬಿ ಪ್ರತಿಜನಕವನ್ನು ಒಂದೇ ಮಟ್ಟದಲ್ಲಿ ವ್ಯಕ್ತಪಡಿಸುವುದಿಲ್ಲ, ಮತ್ತು ಇದು ಒಂದು ಅನುವಂಶೀಯವಾಗಿ ಅಸಾಧ್ಯವಾಗಿ ಕಾಣುವ ರಕ್ತ ಗುಂಪಿನ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಬಹುದು.[೧೮]
ಜನಸಂಖ್ಯೆಯನ್ನು ಆಧರಿಸಿ ಎ, ಬಿ, ಒ ಮತ್ತು ಎಬಿ ರಕ್ತದ ಗುಂಪುಗಳ ಹಂಚಿಕೆಯು ಜಗತ್ತಿನೆಲ್ಲೆಡೆ ಬೇರೆ ಬೇರೆಯಾಗಿದೆ. ಮಾನವನ ಉಪ-ಜನಸಂಖ್ಯೆಯ ಹಂಚಿಕೆಯ ಆಧಾರದ ಮೇಲೆಯೂ ರಕ್ತದ ಪ್ರಕಾರಗಳಲ್ಲಿ ವ್ಯತ್ಯಾಸಗಳಿವೆ.
ಯುಕೆಯಲ್ಲಿನ ಜನಸಂಖ್ಯೆಯ ರಕ್ತ ಪ್ರಕಾರದ ಹಂಚಿಕೆಯು ಸ್ಥಳನಾಮಗಳ ಹಂಚಿಕೆಯೊಂದಿಗೆ ಸಂಬಂಧವನ್ನು ಮತ್ತು ವೈಕಿಂಗರು, ಡೇನ್ಸ್, ಸ್ಯಾಕ್ಸನ್ಸ್, ಸೆಲ್ಟ್ಸ್, ಮತ್ತು ನಾರ್ಮನ್ಸ್ ಗಳ ದಾಳಿ ಮತ್ತು ವಲಸೆಗಳಿಗೆ ಸಂಬಂಧವನ್ನು ಹೊಂದಿದೆ. ಇವರೆಲ್ಲರೂ ಸ್ಥಳನಾಮಗಳಿಗೆ ಮಾರ್ಫೆಮ್‌ಗಳನ್ನು ಮತ್ತು ಜನಸಂಖ್ಯೆಗೆ ಜೀನ್‌ಗಳನ್ನೂ ನೀಡಿದರು.[೧೯]ಎಬಿಒ ವಂಶವಾಹಿಯನ್ನು ಹೊಂದಿರುವ ಬಿಳಿ ವ್ಯಕ್ತಿಗಳಲ್ಲಿ ಆರು ಸಾಮಾನ್ಯ ಅಲೀಲ್‌ಗಳಿದ್ದು ಅವು ಆಯಾ ವ್ಯಕ್ತಿಯ ರಕ್ತದ ಪ್ರಕಾರವನ್ನು ಉತ್ಪಾದಿಸುತ್ತವೆ:[೨೦][೨೧]
ಎ
ಎ101 (ಎ1)
ಎ201 (ಎ2)
ಬಿ
ಬಿ101 (ಬಿ1)
ಒ
ಒ01 (ಒ1)
ಒ02 (ಒ1v)
ಒ03 (ಒ2)
ಜಗತ್ತಿನಾದ್ಯಂತ ಇರುವ ಮಾನವ ಜನಸಂಖ್ಯೆಗಳಲ್ಲಿ ಈ ಅಲೀಲ್‌ಗಳ ಹಲವಾರು ವಿರಳ ರೂಪಾಂತರಗಳನ್ನು ಗುರುತಿಸಲಾಗಿದೆ.
ಕೆಲವು ವಿಕಾಸವಾದದ ಜೀವವಿಜ್ಞಾನಿಗಳು ಐಎ ಅಲೀಲ್‌ಗಳು ಬಹಳ ಹಿಂದೆಯೇ ರೂಪಗೊಂಡಿದ್ದವು ಎಂದು, ಮತ್ತು ನಂತರದಲ್ಲಿ O (ಒಂದು ಏಕ ನ್ಯೂಕ್ಲಿಯೋಟೈಡ್ ಅಳಿಸುವ ಮೂಲಕ, ರೀಡಿಂಗ್ ಫ್ರೇಮ್ ಸರಿಸಿದ ನಂತರ) ಮತ್ತು ನಂತರದಲ್ಲಿ ಐಬಿ ಗಳು ಬಂದವು ಸಿದ್ಧಾಂತ ಮಾಡುತ್ತಾರೆ.[ಸೂಕ್ತ ಉಲ್ಲೇಖನ ಬೇಕು]
ಈ ಘಟನಾ ಕಾಲಕ್ರಮವು ಜಗತ್ತಿನಾದ್ಯಂತ ಇರುವ ಪ್ರತಿಯೊಂದು ರಕ್ತ ಪ್ರಕಾರದ ಪ್ರತಿಶತ ಜನರ ಲೆಕ್ಕವನ್ನು ಒಳಗೊಂಡಿದೆ. ಇದು ಜಗತ್ತಿನ ವಿವಿಧೆಡೆಗಳಲ್ಲಿ ಪ್ರಾರಂಭಿಕ ಜನ ವಲಸೆ ಮತ್ತು ಬದಲಾಗುತ್ತಿರುವ ವಿಸ್ತಾರವಾಗಿ ಹರಡುತ್ತಿರುವ ರಕ್ತ ಪ್ರಕಾರಗಳ ಸ್ವೀಕೃತ ಪ್ರಕಾರಗಳೊಂದಿಗೆ ಅದು ಸ್ಥಿರತೆಯನ್ನು ಹೊಂದಿದೆ: ಉದಾಹರಣೆಗೆ, ಏಷ್ಯಾದ ಸಂತತಿಯವರಲ್ಲಿ ಬಹಳ ಸಾಮಾನ್ಯವಾಗಿದೆ, ಆದರೆ ಇದು ಪಾಶ್ಚಾತ್ಯ ಯೂರೋಪಿಯನ್ ಸಂತತಿಯವರಲ್ಲಿ ಬಹಳ ವಿರಳವಾಗಿದೆ. ಇನ್ನೊಂದು ಸಿದ್ಧಾಂತದ ಪ್ರಕಾರ, ಎಬಿಒ ವಂಶವಾಹಿಗಳ ನಾಲ್ಕು ಮುಖ್ಯ ವಂಶಾವಳಿಗಳಿವೆ ಮತ್ತು ರಕ್ತದಲ್ಲಿ ಒ ಗುಂಪನ್ನು ರಚಿಸುವಂತಹ ರೂಪಾಂತರಗಳು ಕನಿಷ್ಟ ಮೂರು ಬಾರಿ ಮಾನವರಲ್ಲಿ ಉಂಟಾಗಿವೆ.[೨೨] ಅತ್ಯಂತ ಹಳೆಯದರಿಂದ ಅತ್ಯಂತ ಇತ್ತೀಚಿನದರವರೆಗೆ, ಈ ವಂಶಾವಳಿಗಳು ಈ ಅಲೀಲ್‌ಗಳನ್ನು ಅಡಕ ಮಾಡಿಕೊಂಡಿವೆ: A101/A201/O09 , B101 , O02 ಮತ್ತು O01 . ಒ ಅಲೀಲ್‌ಗಳ ನಿರಂತರವಾದ ಅಸ್ತಿತ್ವವನ್ನು ಸಮತೂಗಿಸುವ ಆಯ್ಕೆಯ ಫಲವೆಂದು ಊಹೆ ಮಾಡಲಾಗಿದೆ.[೨೨] ಈ ಎರಡೂ ಸಿದ್ಧಾಂತಗಳೂ ಮೊದಲಿನ ಸಿದ್ಧಾಂತವಾದ ಒ ಪ್ರಕಾರದ ರಕ್ತ ಮೊದಲು ಹುಟ್ಟಿತು ಎಂಬುದನ್ನು ಅಲ್ಲಗಳೆಯುತ್ತವೆ, ಮತ್ತು ಅದಕ್ಕೆ ಎಲ್ಲ ಮಾನವರೂ (hh ಪ್ರಕಾರದವರನ್ನು ಬಿಟ್ಟು) ಅದನ್ನು ಸ್ವೀಕರಿಸಬಹುದು ಎಂಬ ಸಂಗತಿಯು ಬೆಂಬಲಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು] ದ ಬ್ರಿಟಿಷ್ ನ್ಯಾಶನಲ್ ಬ್ಲಡ್ ಟ್ರಾನ್ಸ್‌ಫ್ಯೂಶನ್ ಸರ್ವಿಸ್ ಪ್ರಕಾರ ಇದನ್ನು (ಕೆಳಗೆ ಬಾಹ್ಯ ಲಿಂಕ್‌ಗಳಲ್ಲಿ ವೆಬ್-ಲಿಂಕ್ ನೋಡಿ) ಮತ್ತು ಪ್ರಾರಂಭಿಕವಾಗಿ ಎಲ್ಲ ಮಾನವರೂ ಒ ಪ್ರಕಾರದ ರಕ್ತ ಗುಂಪನ್ನು ಹೊಂದಿದ್ದರು ಎಂದು ಹೇಳುತ್ತದೆ.
ಭಾರತದ ಉತ್ತರದಲ್ಲಿ ಹಾಗೂ ನೆರೆಯ ಕೇಂದ್ರ ಏಷಿಯಾದಲ್ಲಿ ಬಿ ರಕ್ತದ ಗುಂಪು ತನ್ನ ಯಥೇಚ್ಛ ಪುನರಾವರ್ತನೆಯನ್ನು ಹೊಂದಿದ್ದು, ಪಶ್ಚಿಮ ಮತ್ತು ಪೂರ್ವಗಳೆರಡರಲ್ಲೂ ಇದರ ಪುನರಾವರ್ತನೆ ಕಡಿಮೆಯಿದ್ದು, ಸ್ಪೇನ್‌ನಲ್ಲಿ ಇದು ಶೇಕಡಾ ಒಂದಂಕಿಗೆ ಇಳಿದಿದೆ.[೪೮][೪೯] ಮೂಲ ಅಮೆರಿಕನ್ ಮತ್ತು ಆಸ್ಟ್ರೇಲಿಯಾದವರಲ್ಲಿ ಹಾಗೂ ಆ ಭಾಗಗಳಲ್ಲಿ ಯೂರೋಪಿಯನ್ನು ಬರುವುದಕ್ಕೆ ಮುಂಚಿನ ಬುಡಕಟ್ಟು ಜನತೆಯಲ್ಲಿ ಇದು ಸಂಪೂರ್ಣವಾಗಿ ಇಲ್ಲವಾಗಿದೆ ಎಂದು ನಂಬಲಾಗಿದೆ.[೪೯][೫೦]
ಎ ರಕ್ತದ ಗುಂಪಿನ ಯಥೇಚ್ಛ ಪುನರಾವರ್ತನೆಯು ಯೂರೋಪ್‌ನೊಂದಿಗೆ ಸಂಬಂಧಿಸಿದ್ದು, ಯೂರೋಪ್‌ನಲ್ಲಿ ವಿಶೇಷವಾಗಿ ಸ್ಕ್ಯಾಂಡಿನೇವಿಯಾ ಮತ್ತು ಕೇಂದ್ರ ಯೂರೋಪ್ ಎ ರಕ್ತ ಗುಂಪು ಹೆಚ್ಚು ಪುನರಾವರ್ತನೆಯನ್ನು ಹೊಂದಿದ್ದು, ಆಸ್ಟ್ರೇಲಿಯಾದ ಕೆಲ ಬುಡಕಟ್ಟು ಜನಾಂದವರಲ್ಲಿ ಹಾಗೂ ಮೊಂಟಾನದ ಕರಿಪಾದ ಇಂಡಿಯನ್ನರಲ್ಲೂ ಇದರ ಹೆಚ್ಚು ಪುನರಾವರ್ತನೆಯನ್ನು ಕಾಣಬಹುದು.[೫೧][೫೨]
ಎಬಿಒ ಪ್ರತಿಜನಕ ವನ್ ವಿಲ್ಲೆಬ್ರ್ಯಾಂಡ್ ಸಂಗತಿ (ವಿಡಬ್ಲುಎಫ್) ಗ್ಲೈಕೊಪ್ರೊಟೀನ್ ಮೇಲೆ ಕೂಡ ಪ್ರಭಾವ ಬೀರುವುದು,[೫೩] ಯಾವುದು ಹಿಮಾಸ್ಟಿಸಿಸ್‌ನಲ್ಲಿ ಭಾಗಿಯಗುವುದು (ರಕ್ತಸ್ರಾವದ ನಿಯಂತ್ರಣ). ವಾಸ್ತವಿಕವಾಗಿ, ಓ ಮಾದರಿ ರಕ್ತವನ್ನು ಹೊಂದಿರುವವರನ್ನು ರಕ್ತಸ್ರಾವಕ್ಕೆ[೫೪] ಈಡುಮಾಡುತ್ತದೆ, vWF ಪ್ಲಾಸ್ಮಾದಲ್ಲಿ ಪರೀಕ್ಷಿಸಿದಂತೆ ಒಟ್ಟು ಆನುವಂಶಿಕ ವ್ಯತ್ಯಯಳಲ್ಲಿ 30% ಎಬಿಓ ರಕ್ತ ಗುಂಪಿನ[೫೫] ಪರಿಣಾಮದಿಂದ ವಿವರಿಸಲಾಗಿದ್ದು,ಓ ಗುಂಪೇತರರಿಗಿಂತ, ಓ ರಕ್ತ ಗುಂಪಿನ ವ್ಯಕ್ತಿಗಳು ಸಾಮಾನ್ಯವಾಗಿ vWFನ ಅತಿ ಕಡಿಮೆ ಪ್ಲಾಸ್ಮಾ ಮಟ್ಟವನ್ನು(ಮತ್ತು ಅಂಶ VIII) ಹೊಂದಿರುತ್ತಾರೆ.[೫೬][೫೭] ಇದಲ್ಲದೇ, vWF ನ (ಇದೊಂದು VWF ನಲ್ಲಿನ ಅಮಿನೋ ಆಮ್ಲ ಪಾಲಿಮಾರ್ಫಿಸಮ್) Cys1584 ವೈವಿಧ್ಯತೆ ಇರುವ ಕಾರಣದಿಂದಾಗಿ vWF ರಕ್ತ ಗುಂಪು ಒ ಹೆಚ್ಚಾಗಿ ಇರುವ ಕಾರಣದಿಂದಾಗಿ ಹೆಚ್ಚು ವೇಗದಲ್ಲಿ ಅವನತಿ ಹೊಂದಿತು:[೫೮]ADAMTS13 ನ ವಂಶವಾಹಿಯು (vWF-ಕ್ಲೀವಿಂಗ್ ಪ್ರೋಟೀಯೇಸ್) ಒಂಬತ್ತನೇ ಕ್ರೋಮೋಸೋಮ್‌ನೊಂದಿಗೆ (9q34) ಮ್ಯಾಪ್ ಆಗುತ್ತದೆ, ಎಬಿಒ ರಕ್ತ ಪ್ರಕಾರದ್ದೇ ಕೇಂದ್ರ. vWF ಯ ಉನ್ನತ ಮಟ್ಟದವು ಮೊದಲ ಬಾರಿಗೆ ರಕ್ತಕೊರತೆಯ ಸ್ಟ್ರೋಕ್ (ರಕ್ತ ಹೆಪ್ಪುಗಟ್ಟುವಿಕೆಯೊಂದಿಗೆ) ಹೊಂದಿರುವ ಜನರಲ್ಲಿ ಹೆಚ್ಚು ಸಾಮಾನ್ಯವಾಗಿವೆ.[೫೯]
ಈ ಅಧ್ಯಯನದ ಪರಿಣಾಮವಾಗಿ, ಉದ್ಭವವು ADAMTS13 ಪಾಲಿಮಾರ್ಫಿಸಮ್ ಇಂದಾಗಿ ತೊಂದರೆಗೀಡಾಗಲಿಲ್ಲ ಮತ್ತು ಕೇವಲ ಒಂದೇ ಒಂದು ಅರ್ಥಗರ್ಭಿತವಾದ ಆನುವಂಶಿಕ ಸಂಗತಿಯೆಂದರೆ ಅದು ವ್ಯಕ್ತಿಗಳ ರಕ್ತ ಗುಂಪು ಎಂಬುದನ್ನು ಗುರುತಿಸಲಾಯಿತು.
ಎ ರಕ್ತ ಮಾದರಿಯು ಸುಮಾರು ಇಪ್ಪತ್ತು ಉಪಗುಂಪುಗಳನ್ನು ಹೊಂದಿರುತ್ತದೆ, ಅದರಲ್ಲಿ ಎ1 ಮತ್ತು ಎ2 ಅತಿ ಸಾಮಾನ್ಯವಾಗಿದೆ( 99% ವರೆಗೆ). A1 ಎಲ್ಲ ಎ-ಮಾದರಿ ರಕ್ತದವರ ಸುಮಾರು 80% ನ್ನು ಭರ್ತಿಮಾಡುತ್ತದೆ, A2 ಇನ್ನುಳಿದದ್ದನ್ನು ಮಾಡುತ್ತದೆ.[೬೦] ರಕ್ತ ಮಾದರಿ ಮಾಡುವಾಗ ಅಪರೂಪಕ್ಕೆ ಕೆಲ ಪ್ರಕರಣಗಳಲ್ಲಿ ಜಟಿಲತೆ ತಲೆದೋರಿದರೂ ರಕ್ತ ಪೂರೈಕೆಗೆ ಸಂಬಂಧಿಸಿದಂತೆ ಈ ಎರಡು ಉಪಗುಂಪುಗಳು ಪರಸ್ಪರ ವಿನಿಮಯ ಮಾಡಬಹುದಾಗಿವೆ.[೬೦]
ಅಪರೂಪದ ಬಾಂಬೆ ಫೆನೊಟೈಪ್(ಹೆಚ್‌ಹೆಚ್) ಹೊಂದಿರುವ ವ್ಯಕ್ತಿಗಳು ತಮ್ಮ ಕೆಂಪುರಕ್ತ ಕಣಗಳಲ್ಲಿ ಆಂಟಿಜೆನ್ ಹೆಚ್‌ನ್ನು ಪ್ರಕಟಿಸುವುದಿಲ್ಲ. ಎ ಮತ್ತು ಬಿ ಆಂಟಿಜೆನ್‌ಗಳನ್ನು ಉತ್ಪಾದಿಸಲು ಹೆಚ್ ಆಂಟಿಜೆನ್ ಪೂರ್ವಗಾಮಿಯಾಗಿ ಕೆಲಸ ಮಾಡುತ್ತದೆ, ಹೆಚ್ ಆಂಟಿಜೆನ್ ಪ್ರಸ್ತುತವಿಲ್ಲದಿದ್ದರೆ ಆ ವ್ಯಕ್ತಿಗಳು ಎ ಅಥವಾ ಬಿ ಆಂಟಿಜೆನ್‌ಗಳನ್ನು ಹೊಂದಿಲ್ಲವೆಂದು ಅರ್ಥ(ಓ ರಕ್ತದ ಗುಂಪಿನ ರೀತಿಯಲ್ಲಿಯೇ). ಓ ಗುಂಪಿನಂತಲ್ಲದೆ, ಹೆಚ್ ಆಂಟಿಜೆನ್ ಪ್ರಸ್ತುತವಿರುವುದಿಲ್ಲ, ಆದ ಕಾರಣ ಈ ವ್ಯಕ್ತಿಗಳು ಆಂಟಿಜೆನ್ ಹೆಚ್ ಜೊತೆಗೆ ಎ ಮತ್ತು ಬಿ ಆಂಟಿಜೆನ್‌ಗಳಿಗೆ ಪ್ರತ್ಯೇಕಪ್ರತಿಜೀವಿಗಳನ್ನು ಉತ್ಪಾದಿಸುತ್ತಾರೆ. ಒಂದು ಪಕ್ಷ ಅವರು ಓ ರಕ್ತದ ಗುಂಪಿನಿಂದ ರಕ್ತವನ್ನು ಸ್ವೀಕರಿಸಿದರೆ, ಆಂಟಿ-ಹೆಚ್ ಪ್ರತಿವಿಷಗಳು ದಾನಿ ರಕ್ತದ ಆರ್‌ಬಿಸಿ ಮೇಲಿನ ಹೆಚ್ ಆಂಟಿಜೆನ್‌ಗೆ ಬಂಧಿಯಾಗಿರುತ್ತವೆ ಹಾಗೂ ಪೂರಕ-ಹೊಂದಾಣಿಕೆ ಲಿಸಿಸ್‌ನಿಂದ ಆರ್‌ಬಿಸಿ ಗಳನ್ನು ನಾಶಮಾಡುತ್ತವೆ. ಆದ್ದರಿಂದ ಬಾಂಬೆ ಫೆನೊಟೈಪ್ ಕೇವಲ ಇತರೆ ಹೆಚ್‌ಹೆಚ್ ದಾನಿಗಳಿಂದ ಮಾತ್ರ ರಕ್ತವನ್ನು ಪಡೆಯಬಹುದು(ಓ ಮಾದರಿಯವರಂತೆ ಅವರು ದಾನ ಮಾಡಬಹುದಾಗಿದ್ದರೂ).
ಯೂರೋಪ್ ಮತ್ತು ಹಿಂದಿನ ಯುಎಸ್‍ಎಸ್‌ಆರ್‌ನಲ್ಲಿನ ಅಭಿದಾನ[ಬದಲಾಯಿಸಿ]
ಎಬಿಓ ರಕ್ತ ಮಾದರಿಯಲ್ಲಿನ "ಓ" ಗುಂಪನ್ನು ಯೂರೋಪಿನ ಭಾಗಗಳಲ್ಲಿ ಓ ಬದಲಾಗಿ "0" (ಸೊನ್ನೆ) ಎಂದು ಕರೆಯಲಾಗುತ್ತಿದ್ದು ಇದು ಎ ಅಥವಾ ಬಿ ಆಂಟಿಜೆನ್‌ನ ಕೊರತೆಯನ್ನು ಸೂಚಿಸುತ್ತದೆ. ಹಿಂದಿನ ಯುಎಸ್‌ಎಸ್‌ಆರ್‌ನಲ್ಲಿ ರಕ್ತಮಾದರಿಗಳನ್ನು ಅಕ್ಷರಗಳ ಬದಲಾಗಿ ಸಂಖ್ಯೆಗಳನ್ನು ಮತ್ತು ರೋಮನ್ ಅಂಕಿಗಳಿಂದ ಉಲ್ಲೇಖಿಸಲಾಗುತ್ತಿತ್ತು. ಇದು ಜಾನ್‌ಸ್ಕೈನ ರಕ್ತ ಮಾದರಿಗಳ ಮೂಲ ವರ್ಗೀಕರಣ. ಇದು ಮಾನವ ರಕ್ತಮಾದರಿಗಳನ್ನು I, II, III, ಮತ್ತು IV, ಎಂದು ಹೆಸರಿಸುತ್ತದೆ, ಇವುಗಳನ್ನು ಬೇರೆಡೆಗಳಲ್ಲಿ ಅನುಕ್ರಮವಾಗಿ ಓ, ಎ, ಬಿ, ಮತ್ತು ಎಬಿ ಎಂದು ಹೆಸರಿಸಲಾಗುತ್ತದೆ.[೬೧] ರಕ್ತ ಮಾದರಿಗೆ ಸಂಬಂಧಿಸಿದಂತೆ ಎ ಮತ್ತು ಬಿ ಎಂಬ ಹೆಸರನ್ನು ಲುಡ್‌ವಿಕ್ ಹಿರ್ಝ್‌ಫ್ಲೆಡ್ ಪ್ರಸ್ತಾಪಿಸಿದ್ದರು.
ಎಬಿಓ ಮತ್ತು ಆರ್‌ಎಚ್esus ಡಿ ಸ್ಲೈಡ್ ಪರೀಕ್ಷಾ ವಿಧಾನದ ಉದಾಹರಣೆಗಳು[ಬದಲಾಯಿಸಿ]
ಒ ಪೊಸಿಟಿವ್ ರಕ್ತ ಗುಂಪು : ಎ- ನಿರೋಧಕವೇ ಆಗಲಿ ಅಥವಾ ಬಿ-ನಿರೋಧಕವಾಗಲಿ ಜೊತೆಸೇರುವುದಿಲ್ಲ , ಆದರೆ -ಆರ್‌ಎಚ್ ನಿರೋಧಕ ಹೊಂದುತ್ತದೆ
ಪರಿಣಾಮ: ಬಿ-ನೆಗೆಟಿವ್ ರಕ್ತ ಗುಂಪು: ಆಯ್‌೦ಟಿ-ಎ ಮತ್ತು ಆಯ್‌೦ಟಿ-ಆರ್‌ಎಚ್ ಸೇರಿರುವುದಿಲ್ಲ ಆದರೆ ಆಯ್‌೦ಟಿ-ಬಿ ಸೇರಿರುತ್ತದೆ.
ಮೇಲೆ ತೋರಿಸಿದ ಸ್ಲೈಡ್ ಪರೀಕ್ಷಾ ವಿಧಾನದಲ್ಲಿ, ದ್ರವರೂಪದ ರಾಸಾಯನಿಕ ಕಾರಕಗಳೊಂದಿಗೆ ಗಾಜಿನ ಪಟ್ಟಿಯೊಂದರ ಮೇಲೆ ಮೂರು ಹನಿ ರಕ್ತವನು ಇಡಲಾಗಿದೆ. ಅಂಟಿಕೊಂಡಿರುವಿಕೆಯು ರಕ್ತದಲ್ಲಿನ ರಕ್ತ ಗುಂಪು ಆಂಟಿಜೆನ್‌ಗಳ ಇರುವಿಕೆಯನ್ನು ಸೂಚಿಸುತ್ತದೆ.
ಇತರೆ ವಿಧಾನಗಳಿಂದ ತಯಾರಿಸಲಾದ ಸಾರ್ವತ್ರಿಕ ರಕ್ತ ಮತ್ತು ಕೃತಕ ರಕ್ತ[ಬದಲಾಯಿಸಿ]
ಏಪ್ರಿಲ್ 2007 ರಲ್ಲಿ ಅಂತರಾಷ್ಟ್ರೀಯ ಸಂಶೋಧಕರ ತಂಡವು ನೇಚರ್ ಬಯೋಟೆಕ್ನಾಲಜಿ ಎಂಬ ಪತ್ರಿಕೆಯಲ್ಲಿ, ಎ, ಬಿ, ಮತ್ತು ಎಬಿ ರಕ್ತಗುಂಪುಗಳನ್ನು ಓ ಮಾದರಿಗೆ ಪರಿವರ್ತಿಸುವ ಕಡಿಮೆ ಬೆಲೆಯ ಮತ್ತು ಸಮರ್ಥ ಹಾದಿಯನ್ನು ಸಾದರಪಡಿಸಿದರು.[೬೨]ಕೆಂಪು ರಕ್ತ ಕಣದಿಂದ ರಕ್ತ ಗುಂಪು ಆಂಟಿಜೆನ್‌ಗಳನ್ನು ತೆಗೆದುಹಾಕಲು ನಿರ್ಧಿಷ್ಟ ಕೀಟಾಣಿವಿನಿಂದ ಗ್ಲೈಕೊಸಿಡೇಸ್ ಕಿಣ್ವಗಳನ್ನು ಬಳಸಿಕೊಂಡು ಇದನ್ನು ಮಾಡಲಾಗುತ್ತದೆ. ಎ ಮತ್ತು ಬಿ ಆಂಟಿಜೆನ್‌ಗಳನ್ನು ತೆಗೆದುಹಾಕಿದರೂ ಇದು ಆರ್‌ಎಚ್esus ನ ರಕ್ತ ಕಣಗಳ ಮೇಲಿನ Rhesus ರಕ್ತಗುಂಪು ಆಂಟಿಜೆನ್‌ನ ಸಮಸ್ಯೆಯನ್ನು ಪತ್ತೆಹಚ್ಚುವುದಿಲ್ಲ. ಜೀವಂತ ಸಂದರ್ಭಗಳಲ್ಲಿ ವಿಧಾನವನ್ನು ಅವಲಂಬಿಸುವ ಮುನ್ನ ರೋಗಿ ಪರೀಕ್ಷೆಗಳನ್ನು ನಡೆಸಲಾಗುವುದು.
ತುರ್ತು ಸಂದರ್ಭಗಳಲ್ಲಿ ಪೂರಕವಾಗುವ ಕೃತಕ ರಕ್ತ /0}ಉತ್ಪಾದನೆ
ರಕ್ತ ಆಂಟಿಜೆನ್ ಸಮಸ್ಯೆಗೆ ಇನ್ನೊಂದು ಮಾರ್ಗೋಪಾಯವಾಗಿದೆ. [೨] ಬಿಬಿಸಿ
ಎಬಿಓ ರಕ್ತ ಗುಂಪುಗಳ ಸುತ್ತ ಅನೇಕ ಜನಪ್ರಿಯ ಅಭಿಪ್ರಾಯಗಳಿವೆ. ಎಬಿಓ ರಕ್ತ ಗುಂಪುಗಳನ್ನು ಗುರುತಿಸಿದಾಗಿನಿಂದ ಈ ನಂಬಿಕೆಗಳು ಅಸ್ವಿತ್ವದಲ್ಲಿವೆ ಹಾಗೂ ಪ್ರಪಂಚದಾದ್ಯಂತ ಭಿನ್ನ ಸಂಸ್ಕೃತಿಯಲ್ಲಿ ಇವುಗಳನ್ನು ಕಾಣಬಹುದು. ಉದಾಹರಣೆಗೆ, 1930ರ ದಶಕದಲ್ಲಿ, ಜಪಾನ್ ಮತ್ತು ಜಗತ್ತಿನ ಇತರೆ ಭಾಗಗಳಲ್ಲಿ ವ್ಯಕ್ತಿತ್ವ ಮಾದರಿಗಳಿಗೆ ರಕ್ತ ಗುಂಪುಗಳನ್ನು ಜೋಡಿಸುವುದು ಜನಪ್ರಿಯವಾಗಿತ್ತು.[೬೩]ಪೀಟರ್ ಜೆ.ಡಿ’ಅಡ್ಯಮೊನ ಪುಸ್ತಕ ಈಟ್ ರೈಟ್ ಫಾರ್ ಯುವರ್ ಬ್ಲಡ್ ಟೈಪ್ ನ ಜನಪ್ರಿಯತೆ, ಈ ಅಭಿಪ್ರಾಯಗಳು ದೃಢವಾಗಿ ನಿಂತಿವೆ ಎಂಬುದನ್ನು ಸೂಚಿಸುತ್ತದೆ. ಈ ಪುಸ್ತಕ ಎಬಿಓ ರಕ್ತ ಮಾದರಿ ಒಬ್ಬರ ತಕ್ಕಮಟ್ಟ ಆಹಾರ ಪದ್ಧತಿಯನ್ನು ನಿರ್ಧರಿಸುತ್ತದೆ ಎಂದು ಹೇಳುತ್ತದೆ.[೬೪]
ಹೆಚ್ಚುವರಿ ಕಲ್ಪನೆಗಳು, ಎ ಗುಂಪು ಗಂಭೀರ ಜಡತ್ವ ಉಂಟುಮಾಡುತ್ತದೆ , ಓ ಗುಂಪು ಪರಿಪೂರ್ಣ ಹಲ್ಲುಗಳನ್ನು ಹೊಂದಿರುತ್ತದೆ, ಹಾಗೂ ಎ2 ರಕ್ತದ ಗುಂಪಿನವರು ಉನ್ನತ ಐಕ್ಯೂವನ್ನು ಹೊಂದಿರುತ್ತಾರೆಂಬ ವಿಚಾರಗಳನ್ನು ಸೇರಿಸಿವೆ. ಈ ಪರಿಕಲ್ಪನೆಗಳಿಗೆ ಸಹಕಾರಿಯಾದ ವೈಜ್ಞಾನಿಕ ಸಾಕ್ಷ್ಯಗಳು ಅಸ್ತಿತ್ವದಲ್ಲಿಲ್ಲ.[೬೫]
↑Maton, Anthea (1993). Human Biology and Health. Englewood Cliffs, New Jersey, USA: Prentice Hall. ISBN0-13-981176-1. {{cite book}}: Unknown parameter |coauthors= ignored (|author= suggested) (help)
↑Landsteiner K (1900). "Zur Kenntnis der antifermentativen, lytischen und agglutinierenden Wirkungen des Blutserums und der Lymphe". Zentralblatt Bakteriologie. 27: 357–62.
↑Janský J (1907). "(Haematologick studie u. psychotiku". Sborn. Klinick (in Czech). 8: 85–139.{{cite journal}}: CS1 maint: unrecognized language (link)
↑Moss WL (1910). "Studies on isoagglutinins and isohemolysins". Bulletin Johns Hopkins Hospital. 21: 63–70.
↑von Decastello A, Sturli A (1902). "Ueber die Isoagglutinine im Serum gesunder und kranker Menschen". Mfinch med Wschr. 49: 1090–5.
↑ಮಾರ್ಗನ್, ಡಬ್ಲ್ಯೂ. ಟಿ. ಜೆ. & ವಾಟ್ಕಿನ್ಸ್, ಡಬ್ಲ್ಯೂ. ಎಮ್. ಮೆಡ್. ಬುಲ್. 25, 30–34 (1969)
↑ವಾಟ್ಕಿನ್ಸ್, ಡಬ್ಲ್ಯೂ. ಎಮ್. ಅಡ್ವಾನ್ಸ್‍ಸ್ ಇನ್ ಹ್ಯೂಮನ್ ಬಾಡಿ ಸಂಪುಟ. 10 (eds ಹ್ಯಾರಿಸ್, ಎಚ್. & ಹಿರ್ಸ್‌ಚೋರ್ನ್, ಕೆ.) 1–136 (ಪ್ಲೀನಮ್, ನ್ಯೂಯಾರ್ಕ್, 1980)
↑ವಾಟ್ಕಿನ್ಸ್, ಡಬ್ಲ್ಯೂ. ಎಮ್. &ಮಾರ್ಗನ್, ಡಬ್ಲ್ಯೂ. ಟಿ. ಜೆ. ವೊಕ್ಸ್ ಸಾಂಗ್. 4, 97−119 (1959).
↑ಜರ್ನೆಫೆಲ್ಟ್, ರಶ್, ಲೀ, ಲೈನೆ, ಜೆ. ಬೈಯೋಲ್. ಚೆಮ್. 253: 8006–8009(1978)
↑ಲೈನ್ ಮತ್ತು ರಶ್ ಇನ್ ಮೊಲಾಕ್ಯೂಲರ್ ಇಮ್ಮುನೊಲಾಜಿ ಆಫ್ ಕಾಂಪ್ಲೆಕ್ಸ್ ಕಾರ್ಬೋಹೈಡ್ರೇಟ್ಸ್ (ಎ. ವು, ಇ. ಕಾಬತ್, ಎಡ್ಸ್.) ಪ್ಲೀನಮ್, ಎನ್.ವೈ. ಎನ್‌ವೈ (1988)
↑ಯಮಾಮೊಟೊ, ಎಟ್ ಅಲ್., ಹಿಸ್ಟೊ-ರಕ್ತಕಣಗಳ ಗುಂಪು ಎಬಿಒ ವ್ಯವಸ್ಥೆಯ ಆಧಾರದ ಮೇಲೆ ಅಣುಸಂಬಂಧಿ ಅನುವಂಶಿಕತೆ, ನೇಚರ್ 345: 229–233 (1990)
↑ಸಂಪಾದಕರಿಗೆ ಪತ್ರ: “ನೈಸರ್ಗಿಕ”ದ ವಿರುದ್ಧ ಕ್ರಮಬದ್ಧ ಪ್ರತಿಕಾಯ
ಜರ್ನಲ್ ದ ಪ್ರೊಟೀನ್ ಜರ್ನಲ್
ಸ್ಪ್ರಿಂಗರ್ ನೆದರ್ಲ್ಯಾಂಡ್‌ನ ಪ್ರಕಾಶಕ
ISSN 1572-3887 (ಮುದ್ರಿತ) 1573-4943 (ಆನ್‌ಲೈನ್)
ಇಸ್ಶೂ ಸಂಪುಟ 23, ನಂಬರ್ 6 / ಆಗಸ್ಟ್, 2004
ಸಂಪಾದಕರಿಗೆ ಕ್ಯಾಟಗರಿ ಪತ್ರ
DOI 10.1023/B:JOPC.0000039625.56296.6e
ಪುಟ 55
ಗುಂಪು ವಿಷಯ ರಸಾಯನಶಾಸ್ತ್ರ ಮತ್ತು ಮೂಲದ್ರವ್ಯ ವಿಜ್ಞಾನ
ಆನ್‌ಲೈನ್ ದಿನಾಂಕ ಶುಕ್ರವಾರ, ಜನವರಿ 07, 2005
↑Arendrup, M (1991). "Antibody to histo-blood group A antigen neutralizes HIV produced by lymphocytes from blood group A donors but not from blood group B or O donors". AIDS. 5 (4): 441–4. doi:10.1097/00002030-199104000-00014. PMID1711864. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
↑ಸೆಯ್ಮೊರ್ ಆರ್‌ಎಮ್, ಲಾನ್ ಎಮ್‌ಜೆ, ಪೊಮಿಯಾಂಕೊವಸ್ಕಿ ಎ, ಮತ್ತು (2004) ಎರಡು ಐದ ಪೂರಕ ಒತ್ತಡದಿಂದ ಮಾನವ ಎ ಬಿ ಓ ಪಾಲಿಮಾರ್ಫಿಸಮ್‌ನ ವಿಕಸನ. ನಡವಳಿಕೆಗಳು: ಜೀವಶಾಸ್ತ್ರ ವಿಜ್ಞಾನ 271:1065-1072.
↑ಲೈನೆ, ಆರ್.ಎ. ಮತ್ತು ರಶ್, ಜೆ.ಎಸ್. (1988) ಸಂಕೀರ್ಣ ಕಾರ್ಬೋಹೈಡ್ರೆಟ್ ಮೊಲಾಕ್ಯುಲರ್ ನಿರೋಧಕದಲ್ಲಿ "ಮಾನವ ರಸಾಯನಶಾಸ್ತ್ರ ಎರಿತ್ರೋಸೈಟ್ ಪಾಲಿಲಾಕ್ಟೊಸೆಮೈನ್ ಗ್ಲೈಕೊಪೆಪ್ಟೈಡ್ಸ್ ಎಬಿಎಚ್ ರಕ್ತಗುಂಪು ಪ್ರತಿವಿಷಜನಕಗಳು ನಿರ್ಧಾರಕಗಳು :ಬ್ಯಾಂಡ್ 3 ಕಾರ್ಬೊಹೈಡ್ರೇಟ್ಸ್ ಎರಿತ್ರೋಸೈಟ್ ಹೆಚ್ಚಿನ ಎಬಿಎಚ್ ರಕ್ತಗುಂಪು ದ್ರವ್ಯವನ್ನು ಒಯ್ಯುತ್ತವೆ ಎಂಬುದಕ್ಕೆ ಪುರಾವೆ ಒದಗಿಸುತ್ತದೆ" (ಎ. ವು,ಇ ಕಬಾತ್ ಎಡ್ಸ್.) ಪ್ಲೀನಮ್ ಪಬ್ಲಿಷಿಂಗ್ ಕಾರ್ಪೋರೇಶನ್, ಎನ್.ವೈ. ಎನ್‌ವೈ.
↑Yazer M, Olsson M, Palcic M (2006). "The cis-AB blood group phenotype: fundamental lessons in glycobiology". Transfus Med Rev. 20 (3): 207–17. doi:10.1016/j.tmrv.2006.03.002. PMID16787828.{{cite journal}}: CS1 maint: multiple names: authors list (link)
↑Potts, WTW (1979). "History and Blood Groups in the British Isles". In Sawyer PH (ed.). English Medieval Settlement. St. Martin's Press. ISBN0-7131-6257-0.
↑Seltsam A, Hallensleben M, Kollmann A, Blasczyk R (2003). "The nature of diversity and diversification at the ABO locus". Blood. 102 (8): 3035–42. doi:10.1182/blood-2003-03-0955. PMID12829588.{{cite journal}}: CS1 maint: multiple names: authors list (link)
↑Ogasawara K, Bannai M, Saitou N; et al. (1996). "Extensive polymorphism of ABO blood group gene: three major lineages of the alleles for the common ABO phenotypes". Human Genetics. 97 (6): 777–83. doi:10.1007/BF02346189. PMID8641696. {{cite journal}}: Explicit use of et al. in: |author= (help)CS1 maint: multiple names: authors list (link)
↑Blood Transfusion Division, United States Army Medical Research Laboratory (1971). Selected contributions to the literature of blood groups and immunology. 1971 v. 4. United States Army Medical Research Laboratory, Fort Knox, Kentucky. ... In northern India, in Southern and Central China and in the neighboring Central Asiatic areas, we find the highest known frequencies of B. If we leave this center, the frequency of the B gene decreases almost everywhere ...
↑ ೪೯.೦೪೯.೧Encyclopaedia Britannica (2002). The New Encyclopaedia Britannica. Encyclopaedia Britannica, Inc. ISBN0852297874. ... The maximum frequency of the B gene occurs in Central Asia and northern India. The B gene was probably absent from American Indians and Australian Aborigines before racial admixture occurred with the coming of the white man ...
↑Carol R. Ember, Melvin Ember (1973). Anthropology. Appleton-Century-Crofts. ... Blood type B is completely absent in most North and South American Indians ...
↑Laura Dean, MD (2005). Blood Groups an Red Cell Antigens. National Center for Biotechnology Information, United States Government. ISBN1932811052. ... Type A is common in Central and Eastern Europe. In countries such as Austria, Denmark, Norway, and Switzerland, about 45-50% of the population have this blood type, whereas about 40% of Poles and Ukrainians do so. The highest frequencies are found in small, unrelated populations. For example, about 80% of the Blackfoot Indians of Montana have blood type A ...
↑Technical Monograph No. 2: The ABO Blood Group System and ABO Subgroups(PDF). Biotec. 2005. Archived from the original(PDF) on 2007-02-06. Retrieved 2010-05-13. ... The frequency of blood group A is quite high (25-55%) in Europe, especially in Scandinavia and parts of central Europe. High group A frequency is also found in the Aborigines of South Australia (up to 45%) and in certain American Indian tribes where the frequency reaches 35% ...{{cite book}}: Unknown parameter |month= ignored (help)
↑Sarode, R (2000). "Role of A and B blood group antigens in the expression of adhesive activity of von Willebrand factor". Br J Haematol. 109 (4): 857–64. doi:10.1046/j.1365-2141.2000.02113.x. PMID10929042. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
↑O'Donnell, J (2001). "The relationship between ABO histo-blood group, factor VIII and von Willebrand factor". Transfus Med. 11 (4): 343–51. doi:10.1046/j.1365-3148.2001.00315.x. PMID11532189. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
↑Shima, M (1995). "ABO blood group genotype and plasma von Willebrand factor in normal individuals". Vox Sang. 68 (4): 236–40. doi:10.1111/j.1423-0410.1995.tb02579.x. PMID7660643. {{cite journal}}: Unknown parameter |coauthors= ignored (|author= suggested) (help)
↑Bowen, DJ (2005). "The prevalence of the cysteine1584 variant of von Willebrand factor is increased in type 1 von Willebrand disease: co-segregation with increased susceptibility to ADAMTS13 proteolysis but not clinical phenotype". Br J Haematol. Blackwell Synergy. 128 (6): 830–6. doi:10.1111/j.1365-2141.2005.05375.x. PMID15755288. {{cite journal}}: Unknown parameter |coauthors= ignored (|author= suggested) (help); Unknown parameter |month= ignored (help)
↑Bongers T, de Maat M, van Goor M; et al. (2006). "High von Willebrand factor levels increase the risk of first ischemic stroke: influence of ADAMTS13, inflammation, and genetic variability". Stroke. 37 (11): 2672–7. doi:10.1161/01.STR.0000244767.39962.f7. PMID16990571. {{cite journal}}: Explicit use of et al. in: |author= (help)CS1 maint: multiple names: authors list (link)