ವಿಷಯಕ್ಕೆ ಹೋಗು

ಸೂಕ್ಷ್ಮ ಜೀವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ಯಾಕ್ಟೀರಿಯ
ಬ್ಯಾಕ್ಟೀರಿಯದ ಮೇಲೆ ದಾಳಿ ಮಾಡುವಂಥ ವೈರಸ್‍ಗಳು
ಬ್ಯಾಕ್ಟೀರಿಯ

ಸೂಕ್ಷ್ಮಜೀವಿ ಎಂದರೆ ಸೂಕ್ಷ್ಮ ದರ್ಶಕದ ಮೂಲಕ ಮಾತ್ರವೇ ಕಾಣಿಸುವಂಥಹ ಜೀವಿಯಾಗಿದೆ. ಸೂಕ್ಷ್ಮಜೀವಿಗಳ ಕುರಿತು ಅಧ್ಯಯನ ಮಾಡುವಂಥ ಶಾಸ್ತ್ರವನ್ನು ಸೂಕ್ಷ್ಮಜೀವಶಾಸ್ತ್ರ ಎಂದು ಕರೆಯಲಾಗುತ್ತದೆ. ಬ್ಯಾಕ್ಟೀರಿಯ,ಆರ್ಕಿಯಾ,ಮತ್ತು ಹೆಚ್ಚಾಗಿ ಎಲ್ಲಾ ಪ್ರೋಟೋಸೋವಗಳು ಸೂಕ್ಷ್ಮ ಜೀವಿಗಳು. ಕೆಲವು ಶಿಲೀಂಧ್ರಗಳು,ಪಾಚಿ ಮತ್ತು ಕೆಲವು ಪ್ರಾಣಿಗಳು(rotifers) ಸಹ ಸೂಕ್ಷ್ಮಜೀವಿಗಳು. ಕೆಲವು ಸೂಕ್ಷ್ಮಜೀವಶಾಸ್ತ್ರಜ್ಞರು ವೈರಸ್‌ಗಳನ್ನೂ ಸಹ ಸೂಕ್ಷ್ಮಜೀವಿಗಳು ಎಂದು ಪರಿಗಣಿಸಿದ್ದಾರೆ.[೧][೨]

ಸೂಕ್ಷ್ಮ ಜೀವಿಗಳು ಕಂಡು ಬರುವ ಪ್ರದೇಶಗಳು[ಬದಲಾಯಿಸಿ]

ಜೈವಿಕಗೋಳದ ಎಲ್ಲಾ ಭಾಗಗಳಲ್ಲೂ ಸೂಕ್ಷ್ಮಜೀವಿಗಳು ಕಂಡುಬರುತ್ತವೆ. ಮಣ್ಣು, ೭ ಮೈಲಿ ಆಳವಿರುವ ಸಾಗರ, ಭೂಮಿಯ ಹೊರಪದರದ ಒಳಗಿರುವ ಬಂಡೆಗಳು, ೪೦ ಮೈಲಿ ಎತ್ತರವಿರುವ ವಾತಾವರಣ- ಇಂಥಹ ಪ್ರದೇಶಗಳಲ್ಲಿಯೂ ಸೂಕ್ಷ್ಮಜೀವಿಗಳು ಕಂಡು ಬರುತ್ತವೆ. ಸೂಕ್ಷ್ಮಜೀವಿಗಳು ವಿಭಜಕಗಳಾಗಿ ಕಾರ್ಯ ನಿರ್ವಹಿಸುವುದರಿಂದ ಪರಿಸರ ವ್ಯವಸ್ಥೆಯಲ್ಲಿ ಪೌಷ್ಟಿಕ ಮರುಬಳಕೆ ಮಾಡುತ್ತವೆ. ಸಾರಜನಕ ಚಕ್ರದಲ್ಲಿ ಸಾರಜನಕ ಹೊಂದಿಸುವಂಥ ಕೆಲಸವನ್ನೂ ಸಹ ಸೂಕ್ಷ್ಮಜೀವಿಗಳು ಮಾಡುತ್ತವೆ. ಆಹಾರ ಮತ್ತು ಪಾನೀಯ ತಯಾರಣೆಯಲ್ಲಿಯೂ ಸೂಕ್ಷ್ಮಜೀವಿಗಳ ಪಾತ್ರ ಮಹತ್ತರವಾದುದು. ತಳೀಯ ಎಂಜಿನಿಯರಿಂಗ್ ಅನ್ನು ಆಧರಿಸಿರುವಂಥ ಆಧುನಿಕ ತಂತ್ರಜ್ಞಾನಗಳಲ್ಲಿ ಸೂಕ್ಷ್ಮಜೀವಿಗಳನ್ನು ಉಪಯೋಗಿಸುತ್ತಾರೆ.

ಸೂಕ್ಷ್ಮಜೀವಿಗಳ ಆವಿಷ್ಕಾರದಲ್ಲಿ ಮಹತ್ತರ ಪಾತ್ರ ವಹಿಸಿದವರು[ಬದಲಾಯಿಸಿ]

ಸೂಕ್ಷ್ಮಜೀವಿಗಳ ವರ್ಗೀಕರಣ[ಬದಲಾಯಿಸಿ]

ರಾಬರ್ಟ್ ವಿಟ್ಟೇಕರ್ ಅವರು ೧೯೬೯ರಲ್ಲಿ ಈ ವ್ಯವಸ್ಥೆಯನ್ನು ಪ್ರತಿಪಾದಿಸಿದರು.[೩] ಅವುಗಳು:

 1. ಮೊನೆರಾ(ಪ್ರೊಕಾರ್ಯೋಟ್)- ಬ್ಯಾಕ್ಟೀರಿಯ
 2. ಪ್ರೊಟಿಸ್ಟ-ಏಕಕೋಶೀಯ ಯೂಕ್ಯಾರಿಯೋಟ್‍ಗಳು
 3. ಶಿಲೀಂಧ್ರಗಳು
 4. ಸಸ್ಯಗಳು
 5. ಎನಿಮೇಲಿಯಾ
 • ಮೂರು ಡೊಮೇನ್ ವ್ಯವಸ್ಥೆ

ಕಾರ್ಲ್ ವೂಸ್ ಅವರು ೧೯೭೮ರಲ್ಲಿ ಈ ವ್ಯವಸ್ಥೆಯನ್ನು ಪ್ರತಿಪಾದಿಸಿದರು. ಅವುಗಳು-

 1. ಯೂಬ್ಯಾಕ್ಟೀರಿಯ
 2. ಆರ್ಕಿಯಾ
 3. ಯುಕಾರ್ಯಾ-ಪ್ರೊಟಿಸ್ಟ, ಶಿಲೀಂಧ್ರಗಳು, ಸಸ್ಯಗಳು, ಎನಿಮೇಲಿಯಾ ಇವುಗಳು ಯುಕಾರ್ಯಾದಲ್ಲಿ ಇರುವ ರಾಜ್ಯಗಳು.

[೪]

ಉಲ್ಲೇಖ[ಬದಲಾಯಿಸಿ]

 1. microbiology What is Microbiology?
 2. https://www.highveld.com/ Archived 2019-07-10 ವೇಬ್ಯಾಕ್ ಮೆಷಿನ್ ನಲ್ಲಿ. Microbiology Gateway
 3. "ಆರ್ಕೈವ್ ನಕಲು". Archived from the original on 2015-12-22. Retrieved 2015-12-11. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 4. Ryan, KJ; Ray, CG, eds. (2004). Sherris Medical Microbiology (4th ed.).