ಅಂಡಾಶಯ
| ಅಂಡಾಶಯ | |
|---|---|
| |
| Blood supply of the human female reproductive organs. The left ovary is visible above the label "ovarian arteries". | |
| ಲ್ಯಾಟಿನ್ | ovarium |
| Gray's | subject #266 1254 |
| Artery | ovarian artery, uterine artery |
| Vein | ovarian vein |
| Nerve | ovarian plexus |
| Lymph | Paraaortic lymph node |
| MeSH | Ovary |
| Dorlands/Elsevier | Ovary |
ಅಂಡಾಶಯ ಹೆಣ್ಣು ಪ್ರಾಣಿಗಳಲ್ಲಿ ಅಂಡಗಳಿಗೆ ಜನ್ಮ ನೀಡುವ ಗ್ರಂಥಿಗಳಿರುವ ಜನನಾಂಗ.ಇದರಲ್ಲಿ ಹಾರ್ಮೋನ್ ಉತ್ಪತ್ತಿ ಮಾಡುವ ಗ್ರಂಥಿಗಳೂ ಇರುತ್ತವೆ. ಕಶೇರುಕಗಳಲ್ಲಿ ಇಂತಹ ಎರಡು ಜನನಾಂಗಳಿರುತ್ತವೆ.ಮನುಷ್ಯ ಅಂಡಾಶಯವು ಬಿಳಿ ಬಣ್ಣದ್ದಾಗಿದ್ದು, ಗರ್ಭಕೋಶಕ್ಕೆ ತಾಗಿಕೊಂಡಿರುತ್ತದೆ.ಇದು ಸಾಮಾನ್ಯವಾಗಿ ೪ ಸೆಂಟಿಮೀಟರ್ X ೩ ಸೆಂಟಿಮೀಟರ್ x ೨ ಸೆಂಟಿಮೀಟರ್ ಗಾತ್ರವಿರುತ್ತದೆ.[೧] ಸಾಮಾನ್ಯವಾಗಿ ತಿಂಗಳಿಗೆ ಒಂದರಂತೆ ಸರದಿಯಲ್ಲಿ ಈ ಎರಡು ಅಂಡಾಶಯಗಳು ಮೊಟ್ಟೆಗಳನ್ನು ಉತ್ಪತ್ತಿ ಮಾಡುತ್ತವೆ. ಒಂದು ವೇಳೆ ಒಂದು ಅಂಡಾಶಯವು ಸರಿಯಾಗಿ ಕಾರ್ಯನಿರ್ವಹಿಸದಿದ್ದಲ್ಲಿ ಇನ್ನೊಂದು ಆಂಡಾಶಯವು ಅದರ ಕಾರ್ಯವನ್ನು ಮುಂದುವರೆಸುತ್ತದೆ.
ಅಂಗರಚನೆ
[ಬದಲಾಯಿಸಿ]ಗರ್ಭಕೋಶ ಬುಗುರಿಯಾಕಾರವಾಗಿದೆ. ಅಗಲವಾದ ' ಅಸ್ಮಿ ರಜ್ಜುಗಳಿಂದ ಹಿಡಿಯಲ್ಪಟ್ಟ ಗರ್ಭಕೋಶಕ್ಕೆ ಹಿಗ್ಗುವ ಅವಕಾಶವಿದೆ. ಗರ್ಭಕೋಶದ ಉದ್ದ ಮೂರು ಅಂಗುಲ, ಅಗಲ ಒಂದೂವರೆ ಅಂಗುಲ, ದಪ್ಪ ಒಂದು ಅಂಗುಲ. ಗರ್ಭಕೋಶದ ಅಗಲವಾದ ಮೇಲ್ಭಾಗವನ್ನು ನೋಡಿ. ಇದನ್ನು 'ಶರೀರ' ಎಂತಲೂ ಕಿರಿದಾದ ಕೆಳಭಾಗವನ್ನು "ಕುತ್ತಿಗೆ' ಎಂತಲೂ ಕರೆಯುತ್ತಾರೆ. . ಗರ್ಭಕೋಶಕ್ಕೆ ಮೂರು ಪದರಗಳಿವೆ. ಹೊರಪದರ, ಮಧ್ಯದ ಸ್ನಾಯು ಪದರ, ಒಳಗಿನ ಲೋಳೆಪದರ-ಇವು ಈ ಮೂರು ಪದರಗಳು. ಸ್ನಾಯಪದರ :ತುಂಬಾ ಬಲಿಷ್ಮ ವಾಗಿರುವುದರಿಂದ ಗರ್ಭಧಾರಣೆಯಾದಾಗ ಗರ್ಭಕೋಶ ವಿಸ್ತಾರವಾಗಿ ಹಿಗ್ಗುವ ಶಕ್ತಿಯನ್ನು ಪಡೆದಿದೆ. ಅಂಡಾಶಯದ ಹಾರ್ಮೋನು ಗಳ ಪ್ರಭಾವಕ್ಕೆ ಗರ್ಭಕೋಶ ಒಳಗಾಗಿದೆ. ಗರ್ಭಕೋಶದ ಮೇಲಿನ ಎರಡೂ ಬದಿಗಳಿಂದ ಡಿಂಭನಳಿಕೆಗಳು ಆರಂಭವಾಗುತ್ತವೆ ಎಂಬಂದನ್ನು ನೀವೀಗಾಗಲೇ : ತಿಳಿದಿದ್ದೀರಿ. ಗರ್ಭಕೋಶದ ಶರೀರದೊಳಗಿನ ಜಾಗ ತ್ರಿಕೋನಾಕಾರವಾಗಿ ಅದು ಕುತ್ತಿಗೆಯನ್ನು ಕೆಳಭಾಗದಲ್ಲಿ ಸಂಧಿಸುತ್ತದೆ. ಈ ಜಾಗದಲ್ಲಿ 'ಅಂತರ್ಮುಖ' ಇದೆ. ಕುತ್ತಿಗೆಯೊಳಗಿನ ಮಾರ್ಗ ಕ್ರಮಿಸಿದ ಬಳಿಕ 'ಬಹಿರ್ಮುಖ' ಇದೆ. ಇದು ಯೋನಿಯೊಳಗೆ ಪ್ರವೇಶಿಸುವ ದ್ವಾರ.[೨]
ಉಲ್ಲೇಖಗಳು
[ಬದಲಾಯಿಸಿ]- ↑ Daftary, Shirish; Chakravarti, Sudip (2011). Manual of Obstetrics, 3rd Edition. Elsevier. pp. 1-16. ISBN 9788131225561.
- ↑ ದಾಂಪತ್ಯ ದೀಪಿಕೆ - ಡಾ. ಅನುಪಮಾ ನಿರಂಜನ 1993, p. 13.
ಆಕರಗಳು
[ಬದಲಾಯಿಸಿ]ಪ್ರಕಟಿತ ಗ್ರಂಥಗಳು
[ಬದಲಾಯಿಸಿ]- ನಿರಂಜನ, ಡಾ. ಅನುಪಮಾ (1993), ದಾಂಪತ್ಯ ದೀಪಿಕೆ, ಡಿ.ವಿ.ಕೆ ಮೂರ್ತಿ ಮೈಸೂರು
ವೆಬ್ ಆಕರಗಳು
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- From the American Medical Association Archived 2016-10-25 ವೇಬ್ಯಾಕ್ ಮೆಷಿನ್ ನಲ್ಲಿ.
- Merck Online Medical Library: Female Reproductive System
