ವಿಷಯಕ್ಕೆ ಹೋಗು

ಹಲ್ಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಂಪಾಂಜಿಯ ಹಲ್ಲುಗಳು

ಹಲ್ಲು ಆಹಾರವನ್ನು ಹರಿಯಲು/ಮುರಿಯಲು ಬಳಸಲಾದ, ಅನೇಕ ಕಶೇರುಕಗಳ ದವಡೆಗಳಲ್ಲಿ (ಅಥವಾ ಬಾಯಿಗಳು) ಕಂಡುಬರುವ ಒಂದು ಗಟ್ಟಿ, ಕ್ಯಾಲ್ಷಿಯಂ ಸಂಯುಕ್ತಗಳ ನಿಕ್ಷೇಪವಿರುವ ರಚನೆ. ಕೆಲವು ಪ್ರಾಣಿಗಳು, ವಿಶೇಷವಾಗಿ ಮಾಂಸಾಹಾರಿಗಳು, ಹಲ್ಲುಗಳನ್ನು ಬೇಟೆಯಾಡಲು ಅಥವಾ ರಕ್ಷಣಾ ಉದ್ದೇಶಗಳಿಗೂ ಬಳಸುತ್ತವೆ. ಹಲ್ಲುಗಳ ಬೇರುಗಳು ಒಸಡುಗಳಿಂದ ಆವೃತವಾಗಿರುತ್ತವೆ. ಹಲ್ಲುಗಳು ಮೂಳೆಯಿಂದ ರಚಿತವಾಗಿರುವುದಿಲ್ಲ, ಬದಲಾಗಿ ಭಿನ್ನ ಸಾಂದ್ರತೆ ಹಾಗೂ ಗಡಸುತನದ ಅನೇಕ ಊತಕಗಳಿಂದ ರಚಿತವಾಗಿರುತ್ತವೆ. ಅಂತಿಮವಾಗಿ ಹಲ್ಲುಗಳಾಗುವ ಕೋಶೀಯ ಅಂಗಾಂಶಗಳು ಭ್ರೂಣೀಯ ಜೀವಾಂಕುರ ಪದರವಾದ ಬಾಹ್ಯಕೋಶಸ್ತರದಿಂದ ಹುಟ್ಟುತ್ತವೆ.

ಹಲ್ಲುಗಳ ಸಾಮಾನ್ಯ ರಚನೆಯು ಕಶೇರುಕಗಳಾದ್ಯಂತ ಸಮಾನವಾಗಿದೆ, ಆದರೆ ಅವುಗಳ ರೂಪ ಮತ್ತು ಸ್ಥಾನದಲ್ಲಿ ಗಣನೀಯ ವ್ಯತ್ಯಾಸವಿದೆ. ಸಸ್ತನಿಗಳ ಹಲ್ಲುಗಳು ಆಳವಾದ ಬೇರುಗಳನ್ನು ಹೊಂದಿವೆ, ಮತ್ತು ಈ ವಿನ್ಯಾಸವು ಕೆಲವು ಮೀನುಗಳು, ಹಾಗೂ ಮೊಸಳೆ ಜಾತಿಯ ಪ್ರಾಣಿಗಳಲ್ಲಿ ಕೂಡ ಕಂಡುಬರುತ್ತದೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

  •  Beach, Chandler B., ed. (1914). "Teeth" . The New Student's Reference Work . Chicago: F. E. Compton and Co. {{cite encyclopedia}}: Cite has empty unknown parameters: |HIDE_PARAMETER10=, |HIDE_PARAMETER13=, |HIDE_PARAMETER2=, |HIDE_PARAMETER11=, |HIDE_PARAMETER8=, |HIDE_PARAMETER9=, |HIDE_PARAMETER3=, |HIDE_PARAMETER1=, and |HIDE_PARAMETER12= (help)
"https://kn.wikipedia.org/w/index.php?title=ಹಲ್ಲು&oldid=901009" ಇಂದ ಪಡೆಯಲ್ಪಟ್ಟಿದೆ