ವಿಷಯಕ್ಕೆ ಹೋಗು

ವೈರಾಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ವೈರಸ್ ಇಂದ ಪುನರ್ನಿರ್ದೇಶಿತ)
ರೋಟವೈರಸ್

ವೈರಾಣುವು (ಲ್ಯಾಟಿನ್‌ನಲ್ಲಿ ವೈರಸ್ ಎಂದರೆ ಟಾಕ್ಸಿನ್ - ಜೀವಾಣುವಿನಲ್ಲಿ ಉತ್ಪನ್ನವಾಗುವ ವಿಷ ಅಥವಾ ವಿಷ) ಬೇರೆಯೊಂದು ಜೀವಿಯ ಜೀವಕೋಶಗಳೊಳಗೆ ಮಾತ್ರ ಸಂತಾನೋತ್ಪತ್ತಿ ಮಾಡಬಲ್ಲ ಒಂದು ಚಿಕ್ಕದಾದ ಸೋಂಕು ಉಂಟುಮಾಡುವ ಸೂಕ್ಷ್ಮಜೀವಿ.[] ವೈರಾಣುಗಳು ದ್ಯುತಿ ಸೂಕ್ಷ್ಮದರ್ಶಕದಿಂದ ಪ್ರತ್ಯಕ್ಷವಾಗಿ ಕಾಣದಷ್ಟು ಚಿಕ್ಕದಾಗಿರುತ್ತವೆ. ಎಲೆಕ್ಟ್ರಾನ್ ಸೂಕ್ಷ್ಮದರ್ಶಕಕ್ಕೆ ಮಾತ್ರ ಗೋಚರ. ವೈರಾಣುಗಳು ಪ್ರಾಣಿಗಳು ಮತ್ತು ಸಸ್ಯಗಳ ಜೊತೆಗೆ ಬ್ಯಾಕ್ಟೀರಿಯಾ ಮತ್ತು ಆರ್ಕೀಯಾದ ವರೆಗಿನ ಎಲ್ಲ ಬಗೆಯ ಜೀವಿಗಳಲ್ಲಿ ಸೋಂಕು ಉಂಟು ಮಾಡುತ್ತವೆ.[][] ಇವುಗಳ ಡಿ.ಎನ್.ಎ ಅಥವಾ ಆರ್.ಎನ್.ಎ ಎಳೆಗಳನ್ನು ಪ್ರೋಟೀನುಗಳು ಆವರಿಸಿಕೊಂಡಿರುವ ಕಣಗಳಾಗಿವೆ. ಇವುಗಳು ಜೀವಕೋಶಗಳು ಅಲ್ಲ ಎಂಬುದನ್ನು ರುಡಾಲ್ಫ್ ವರ್ಛೊ ಅವರು ಹೊರಡಿಸಿದ ಕೋಶ ಸಿದ್ಧಾಂತದ ಮೂಲಕ ವ್ಯಕ್ತವಾಗಿದೆ. ಆದರೂ ಇವುಗಳು ಜೀವಿಗಳ ಒಳಗಡೆ ಇದ್ದಾಗ ಜೀವ ತುಂಬಿದಂತೆ ಕಾಣುವುದು. ಇದರಿಂದಾಗಿ ವೈರಾಣುಗಳು ಜೀವಿಗಳ ಹಾಗು ನಿರ್ಜೀವ ಲೋಕದ ಮಧ್ಯೆ ಇರುವ ಒಂದು ಸೇತುವೆ ಆಗಿದೆ. ಇವುಗಳು ಹಲವಾರು ರೋಗಗಳನ್ನು ಹರಡುತ್ತವೆ. ಇದರಿಂದಾಗಿ ವಿಜ್ಞಾನಿಗಳು ಇವುಗಳ ಬಗ್ಗೆ ತಿಳಿದು, ಜೀವಿಗಳಲ್ಲಿ ರೋಗಗಳನ್ನು ಉಂಟುಮಾಡುವ ರೀತಿಯನ್ನು ಕುರಿತು ಹೆಚ್ಚು ಮಾಹಿತಿಯನ್ನು ಸಂಗ್ರಹಿಸಿರುವರು. ಜೊತೆಗೆ ಇವುಗಳನ್ನು ಮಾನವನ ಹಾಗು ಪರಿಸರದ ಉಪಯೋಗಕ್ಕಾಗಿಯೂ ಇಂದು ಬಳಸಲಾಗಿದೆ. ವೈರಾಣುಗಳು ಆಕೃತಿಯಲ್ಲಿಯೂ ಗಾತ್ರದಲ್ಲಿಯೂ ವ್ಯತ್ಯಾಸವನ್ನು ತೋರಿಸುವುವು. ಇವುಗಳ ವ್ಯಾಸ ೧೭ ರಿಂದ ೧೦೦೦ ನ್ಯಾನೋಮೀಟರುಗಳಾಗಿವೆ.

ಇತಿಹಾಸ

[ಬದಲಾಯಿಸಿ]

ವೈರಾಣುಗಳ ಅಸ್ತಿತ್ವವು ಹತ್ತೊಂಬತ್ತನೆಯ ಶತಮಾನದಿಂದ ತಿಳಿದಿದೆ. ಇದರ ಫಲವಾಗಿ, ಇವುಗಳು ಬ್ಯಾಕ್ಟೀರಿಯಾಗಳಿಗಿಂತ ಚಿಕ್ಕದು ಎಂಬುದು ವ್ಯಕ್ತವಾಯಿತು. ಇನ್ನ ಒಂದು ಹೆಜ್ಜೆ ಮುಂದೆಹೋದಾಗ ಇವುಗಳು ಪುನರಾವರ್ತಿಸುವುದು ಜೀವಕೋಶಗಳಲ್ಲಿ ಮಾತ್ರವೆಂದು ತಿಳಿಯಿತು. ೧೮೯೨ರಲ್ಲಿ, ಡಿಮಿಟ್ರಿ ಇವಾನೋವ್‍ಸ್ಕಿ ಅವರು ಮಾಡಿದ ವ್ಯಾಸಂಗದ ಮೂಲಕ, ಸೋಂಕಿತಗೊಂಡ ತಂಬಾಕು ಎಲೆಗಳಿಂದ ಪಡೆದ ರಸವನ್ನು ಬಹಳ ಪುಟ್ಟ ರಂಧ್ರ ಹೊಂದಿರುವ ಶೋಧಕದಲ್ಲಿ ಸೋಸಿ ಪಡೆದ ದ್ರವಕ್ಕೆ ಬೇರೆ ಆರೋಗ್ಯಕರವಾದ ತಂಬಾಕು ಗಿಡಗಳನ್ನು ಸೋಂಕಿತಗೊಳಿಸುವ ಶಕ್ತಿ ಇರುವುದಾಗಿ ಕಂಡು ಬಂದಿತು. ಆದರೆ ಈ ದ್ರವ್ಯದಲ್ಲಿ ಇರುವ ರೋಗಾಣುಗಳನ್ನು ಪ್ರಯೋಗಾಲಯದಲ್ಲಿ ಬೆಳೆಯಲು ಸಾಧ್ಯವಾಗಲಿಲ್ಲ. ಪಡೆದ ಫಲಿತಾಂಶದಿಂದ ಇವು ಬೆಳೆಯಲು ಅಸಾಧ್ಯವಾದ, ಬ್ಯಾಕ್ಟೀರಿಯಾಗಳಿಗಿಂತ ಚಿಕ್ಕ ಜೀವಿಗಳು ಎಂದು ಹೇಳಿದರು. ಇವುಗಳ ನಿಜವಾದ ಸ್ವಭಾವವನ್ನು ತಿಳಿದಿದ್ದು ೧೯೩೩ರಲ್ಲಿ ಜೀವಶಾಸ್ತ್ರಜ್ಞನಾದ ವೆಂಡಲ್ ಮೆರೆಡಿತ್ ಸ್ಟಾನ್ಲಿ ಅವರು ಕಂಡುಹಿಡಿದ ಟೊಬಾಕೊ ಮೊಸಾಯ್ಕ್ ವೈರಾಣುವಿನTMV ಮೂಲಕ. ತಂಬಾಕು ಗಿಡದ ಸೋಂಕಿತ ಎಲೆಯನ್ನು ತೆಗೆದು, ಅದರ ಸತ್ವವನ್ನು ಶೇಖರಿಸಿ, ಶುದ್ಧಗೊಳಿಸಿ, ಪತನ ಮಾಡಿದಾಗ, ದ್ರವದಲ್ಲಿದ್ದ ಎಲ್ಲವು ಪತನಗೊಂಡವು. ಇದು ಸಾಧ್ಯವಾಗುವುದು ರಾಸಾಯನಿಕ ಪದಾರ್ಥಗಳಲ್ಲಿ ಮಾತ್ರವೆ. ಇದರ ಮೂಲಕ ಇವರು, ವೈರಾಣುಗಳನ್ನು ಸ್ಫಟಿಕೀಕರಣಗೊಳಿಸಿ, ಇವುಗಳು ಕೇವಲ ನಿರ್ಜೀವ ಪದಾರ್ಥಗಳು ಎಂದು ವ್ಯಕ್ತಪಡಿಸಿದರು. ೧೯೪೬ರಲ್ಲಿ ಇವರಿಗೆ ಇದಕ್ಕಾಗಿ ನೊಬೆಲ್ ಪುರಸ್ಕಾರ ದೊರಕಿತು.[] ಕೆಲವು ವರ್ಷಗಳ ನಂತರ ವಿಜ್ಞಾನಿಗಳು ಸಂಶೋಧನೆ ಮಾಡಿದ ಈ ವೈರಾಣು ಆರ್.ಎನ್.ಎ ಹಾಗು ಪ್ರೋಟೀನುಗಳ ಸಂಯೋಜನೆ ಎಂಬುದು ವ್ಯಕ್ತವಾಯಿತು.

ಹೆನಿಪಾವೈರಸ್ ರಚನೆ - ಕೇರಳದಲ್ಲಿ ೨೦೧೮ರಲ್ಲಿ ಕಂಡು ಬಂದ ಬಾವಲಿಯಿಂದ ಹರಡುವುದೆಂದು ಭಾವಿಸಲಾಗಿದ್ದ ನೀಫಾ ವೈರಸ್ (Nipah virus )ಸೋಂಕಿನ ವಿಷಾಣು ಚಿತ್ರ , ಬಣ್ಣ -ಕಲ್ಪನೆಯ ಕೃತಕ

ವೈರಾಣುಗಳ ನಿರ್ಮಾಣ

[ಬದಲಾಯಿಸಿ]

ಎಲ್ಲಾ ವೈರಾಣುಗಳ ತಳಮಟ್ಟದ ರಚನೆ ಒಂದೇ ಆಗಿದೆ: ನಡುವಲ್ಲಿ ನ್ಯೂಕ್ಲಿಯಿಕ್ ಆಮ್ಲ ಮತ್ತೆ ಇದರ ಸುತ್ತ ಪ್ರೋಟೀನ್ ಸುತ್ತುವರಿದಿದೆ. ಎರಡು ತರದ ನ್ಯೂಕ್ಲಿಯಿಕ್ ಆಮ್ಲದಲ್ಲಿ (ಡಿ.ಎನ್.ಎ ಹಾಗೂ ಆರ್.ಎನ್.ಎ) ಯಾವುದಾದರೂ ಒಂದು ಪ್ರತಿಯೊಂದು ವೈರಾಣುವಿನಲ್ಲಿ ಕಂಡುಬರುತ್ತದೆ. ಇದರ ಸುತ್ತ ಒಂದರಿಂದ ಹಲವಾರು ತರದ ಪ್ರೋಟೀನುಗಳು ಪುನರಾವರ್ತಿತಗೊಂಡು ನಿರ್ಮಿತವಾಗಿರುವ 'ಕ್ಯಾಪ್ಸಿಡ್' ಎಂಬ ರಕ್ಷಣೆ ಇರುತ್ತದೆ. ಈ ಪ್ರೋಟೀನುಗಳನ್ನು 'ಕ್ಯಾಪ್ಸೋಮಿಯರ್ಸ್' ಎಂದು ಕರೆಯಲಾಗುತ್ತದೆ.[] ಕೆಲವು ಪ್ರಾಣಿಗಳನ್ನು ಆಕ್ರಮಿಸುವ ವೈರಾಣುಗಳಿಗೆ ಕ್ಯಾಪ್ಸಿಡಿನ ಸುತ್ತ ಪ್ರೋಟೀನ್, ಮೇದಸ್ಸು ಅಥವ ಗ್ಲೈಕೋ-ಪ್ರೋಟೀನ್, ಇವುಗಳಿಂದ ನಿರ್ಮಿತವಾಗಿರುವ 'ಎನ್ವೆಲಪ್' ಎಂಬ ಪದರ ಇದೆ.

ವೈರಾಣುಗಳು ಮತ್ತು ರೋಗಗಳು

[ಬದಲಾಯಿಸಿ]

ವೈರಸ್ಸುಗಳು ಸಿಡುಬುರೋಗ, ನೀರುಕೋಟ್ಲೆ, ಅಂಗರೆ ಕಜ್ಜಿ, ಜರ್ಮನ್ ಮೀಸೆಲ್ಸ್ (ರುಬೆಲ್ಲಾ), ನೆಗಡಿ ಮತ್ತು ಶೀತ, ಯಕೃತ್ ಕಾಯಿಲೆ, ಪೋಲಿಯೋ, ಏಡ್ಸ್, ಹಾಗೆಯೇ ಹಲವಾರು ಸಸ್ಯರೋಗಗಳನ್ನು ಕೂಡ ಉಂಟುಮಾಡುತ್ತವೆ. ಸಸ್ಯಗಳಲ್ಲಿ ಮೊಸಾಯಿಕ್ಸ್ ಮತ್ತು ಕುಬ್ಜರೋಗಗಳು ಸಾಮಾನ್ಯ.

ವೈರಾಣು ರೋಗ
ಹೆಚ್.ಐ.ವಿ ಏಡ್ಸ್ ರೋಗ
ಹೆಪಟೈಟಿಸ್ ವೈರಾಣು (''ಹೆಪಟೈಟಿಸ್ ಬಿ ವೈರಾಣು'') ಯಕೃತ್ತು ರೋಗಗಳು
ಹಲವಾರು ವೈರಾಣುಗಳು, ಮುಖ್ಯವಾಗಿ ರೈನೋ ವೈರಾಣು ನೆಗಡಿ
ಹೆರ್ಪೆಸ್ ವೈರಾಣು ಗಣಜಿಲೆ

ಪ್ರಾಣಿ

[ಬದಲಾಯಿಸಿ]
ವೈರಾಣು ರೋಗ
ರಾಬ್ಡೋ ವೈರಾಣು ರೇಬೀಸ್[]
ಹಂದಿಜ್ವರ ವೈರಾಣು ಹಂದಿಜ್ವರ
ಇನ್ಫ್ಲುಯೆನ್ಜ ವೈರಾಣು ಇನ್ಫ್ಲುಯೆನ್ಜ
ವೈರಾಣು ರೊಗ
ಟಿ.ಎಮ್.ವಿ ಮೊಸೈಕ್ ರೋಗ
ಬ್ಯಾಕ್ಟೀರಿಯೋಫೇಜ್

ಬ್ಯಾಕ್ಟೀರಿಯೋಫೇಜ್

[ಬದಲಾಯಿಸಿ]

ಬ್ಯಾಕ್ಟೀರಿಯಾಗಳನ್ನು ಆಕ್ರಮಿಸುವ ವೈರಾಣುಗಳನ್ನು 'ಬ್ಯಾಕ್ಟೀರಿಯೋಫೇಜ್' ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಎರಡು ರೀತಿಯ ಸಂತಾನೋತ್ಪತಿಯ ರೀತಿಗಳು ಕಂಡುಬರಬಹುದು. ಒಂದು 'ಲೈಟಿಕ್' ಮತ್ತೊಂದು 'ಲೈಸೋಜೆನಿಕ್' ಜೀವನ ಚಕ್ರ.

ಲೈಟಿಕ್ ಜೀವನ ಚಕ್ರ

[ಬದಲಾಯಿಸಿ]

(ಲೈಸಿಸ್ ಎಂದರೆ 'ಬೇರ್ಪಡು' ಎಂದರ್ಥ) ವೈರಾಣು ಒಂದು ಬ್ಯಾಕ್ಟೀರಿಯಾದ ಜೀವಕೋಶವನ್ನು ಸೋಂಕಿತಗೊಳ್ಳಿಸಿ, ನಂತರ ಅದೇ ಕೋಶವನ್ನು ಸಂಪೂರ್ಣವಾಗಿ ನಾಶಗೊಳಿಸಿದಾಗ ಆ ಜೀವನ ಚಕ್ರವನ್ನು ಲೈಟಿಕ್ ಜೀವನ ಚಕ್ರ ಎಂದು ಕರೆಯುವೆವು. ಕೆಲವು ವೈರಾಣುಗಳು ಇದನ್ನು ಬ್ಯಾಕ್ಟೀರಯಾದ ಒಳಗೆ ಸೇರಿದ ತಕ್ಷಣ ಮಾಡುತ್ತವೆ, ಕೆಲವು ವ್ಯತ್ಯಸ್ಥ ಕಾಲಾವಧಿಯಲ್ಲಿ ಮಾಡುತ್ತವೆ.

ಲೈಟಿಕ್ ಮತ್ತು ಲೈಸೋಜೆನಿಕ್ ಜೀವನ ಚಕ್ರ

ವೈರಾಣು ಮೊದಲು ಬ್ಯಾಕ್ಟೀರಿಯ ಕೋಶದ ಮೇಲೆ ಇರುವ ಗ್ರಾಹಕ ಕಣಗಳ ಒಂದಕ್ಕೆ ಅಂಟಿಕೊಂಡು, ತಮ್ಮ ನ್ಯೂಕ್ಲಿಕ್ ಆಸಿಡನ್ನು ಕೋಶಕ್ಕೆ ಒಳನುಗ್ಗಿಸುತ್ತವೆ. ಕೋಶದ ಒಳಗಡೆ ಈ ಒಂದು ನ್ಯೂಕ್ಲಿಕ್ ಆಸಿಡಿನ ಸಂಖ್ಯೆ ಹೆಚ್ಚಾಗುತ್ತದೆ ಜೊತೆಗೆ ಕ್ಯಾಪ್ಸಿಡ್ ಪ್ರೋಟೀನುಗಳ ಉತ್ಪಾದನೆಯು ನಡೆಯುತ್ತದೆ. ನಂತರ ನಿರ್ಮಿತವಾದ ಎಲ್ಲಾ ಕಣಗಳು ಸೇರಿಸಿ ಹಲವಾರು ವೈರಾಣುಗಳನ್ನು ಹೊರಡಿಸುತ್ತದೆ. ಹೀಗೆ ಉತ್ಪಾದಿತವಾದ ವೈರಾಣುಗಳಿಂದ ಕೋಶದ ಒಳಗಿನ ಒತ್ತಡ ಹೆಚ್ಚಾಗಿ ಕೋಶವನ್ನು ಕೀಳಿ ಅವುಗಳು ಹೊರಹೊಮ್ಮುವವು. ಸೋಂಕಿತಗೊಂಡ ಪ್ರತಿಯೊಂದು ಕೋಶದಿಂದ ನೂರಾರು ವೈರಾಣುಗಳು ಹೊರಬರುವವು.

ಲೈಸೋಜೆನಿಕ್ ಜೀವನ ಚಕ್ರ

[ಬದಲಾಯಿಸಿ]

ಈ ಜೀವ ಚಕ್ರದಲ್ಲಿ ಬ್ಯಾಕ್ಟೀರಿಯಾದ ಕೋಶಗಳು ನಾಶವಾಗುವುದಿಲ್ಲ. ಆದರೆ ಕೋಶದ ಒಳಗಿರುವ ವೈರಾಣುವು ಯಾವುದಾದರು ರೀತಿಯಲ್ಲಿ ಪ್ರಚೋದಕಗೊಂಡರೆ ಅದು ಲೈಟಿಕ್ ಜೀವಚಕ್ರವನ್ನು ಮುಂದುವರಿಸುತ್ತದೆ. ಇಲ್ಲಿ ವೈರಾಣುವಿನ ಗುಣಾಕಾರ ನಡೆಯುವುದಿಲ್ಲ, ಬದಲಾಗಿ ಕೋಶದ ಒಳಗಡೆ ಸೇರಿದ ನ್ಯೂಕ್ಲಿಕ್ ಆಸಿಡ್, ಬ್ಯಾಕ್ಟೀರಿಯಾದ ನ್ಯೂಕ್ಲಿಕ್ ಆಸಿಡಿನ ಜೊತೆ ಸೇರಿರುತ್ತದೆ. ವೈರಾಣುವಿನ ಸಂತಾನೋತ್ಪತಿ ನಡೆಯುವ ಮೂಲಕ ವೈರಾಣುವಿನ ಗುಣಾಕಾರವು ನಡೆಯುತ್ತದೆ.

  • ಕೆಲವು ವೈರಾಣುಗಳಲ್ಲಿ ಎರಡು ತರದ ಜೀವನ ಚಕ್ರವನ್ನು ಕಂಡುಬರುವುದು (λ ಫಾಜ್).

ಹೆಚ್ಚಿನ ಓದಿಗೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Wu KJ (15 April 2020). "There are more viruses than stars in the universe. Why do only some infect us? – More than a quadrillion quadrillion individual viruses exist on Earth, but most are not poised to hop into humans. Can we find the ones that are?". National Geographic Society. Archived from the original on 15 April 2020. Retrieved 18 May 2020.
  2. Koonin EV, Senkevich TG, Dolja VV (September 2006). "The ancient Virus World and evolution of cells". Biology Direct. 1 (1): 29. doi:10.1186/1745-6150-1-29. PMC 1594570. PMID 16984643.
  3. Zimmer C (26 February 2021). "The Secret Life of a Coronavirus - An oily, 100-nanometer-wide bubble of genes has killed more than two million people and reshaped the world. Scientists don't quite know what to make of it". The New York Times. Archived from the original on 2021-12-28. Retrieved 28 February 2021.
  4. Colvig, R (February 1972). "Wendell M, STANLEY, PhD, (1905-1971)". Cancer. 29 (2): 541–2. doi:10.1002/1097-0142(197202)29:2<541::AID-CNCR2820290246>3.0.CO;2-T. PMID 4552137.
  5. Collier p. 40
  6. Shors p. 631
  • Raven, Peter H;Johnson George Brooks. Biology,6th edition. state textbook adoption,Rowan,Salisbury.2000
"https://kn.wikipedia.org/w/index.php?title=ವೈರಾಣು&oldid=1220818" ಇಂದ ಪಡೆಯಲ್ಪಟ್ಟಿದೆ