ವಿಷಯಕ್ಕೆ ಹೋಗು

ಯಕೃತ್ತಿನ ರೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ERROR: {{Expand}} is a disambiguation entry; please do not transclude it. Instead, use a more specific template, such as {{Incomplete}}, {{Expand list}}, {{Missing}}, or {{Expand section}}.
Liver disease
Classification and external resources
MeSHD008107

ಯಕೃತ್ತಿನ ರೋಗ (ಪಿತ್ತಜನಕಾಂಗದ ರೋಗವೆಂದು ಕೂಡ ಕರೆಯಲಾಗುತ್ತದೆ.)ವೆಂಬುದು ಯಕೃತ್ತಿನ ಮೇಲೆ ಪರಿಣಾಮ ಬೀರುವ ಯಾವುದೇ ಒಂದು ರೋಗದ ಬಗ್ಗೆ ವಿವರಿಸುವ ವಿಶಾಲ ಅರ್ಥದ ಪದವಾಗಿದೆ. ಅನೇಕರು ಯಕೃತ್ತ್ ನಲ್ಲಿ ಬೈಲಿರುಬಿನ್ ನ (ಸತ್ತ ರಕ್ತಕೋಶಗಳ ಸಂಖ್ಯೆ,ಆ ಭಾಗ ಹಳದಿಗೆ ತಿರುಗುತ್ತದೆ)ಮಟ್ಟವು ಹೆಚ್ಚುವುದರಿಂದ ಉಂಟಾಗುವ ಕಾಮಾಲೆರೋಗಕ್ಕೆ ಒಳಗಾಗಿರುತ್ತಾರೆ. ಸತ್ತ ಕೆಂಪು ರಕ್ತಕಣಗಳ ಹೀಮೋಗ್ಲೋಬಿನ್ ವಿಭಜನೆಯಾಗುವುದರಿಂದಾಗಿ ಬೈಲಿರುಬಿನ್‌ ಮಟ್ಟವು ಅಧಿಕಗೊಳ್ಳುತ್ತದೆ; ಸಾಮಾನ್ಯವಾಗಿ ಯಕೃತ್ತು ರಕ್ತದಿಂದ ಬೈಲಿರುಬಿನ್‌ನ್ನು ತೆಗೆದುಹಾಕಿ ಪಿತ್ತರಸದ ಮ‌ೂಲಕ ಹೊರದೂಡುತ್ತದೆ.

ರೋಗಗಳು[ಬದಲಾಯಿಸಿ]

 • ಯಕೃತ್ತಿನ ಉರಿಯೂತ(ಹೆಪಟೈಟಿಸ್), ಯಕೃತ್ತಿನ ಉರಿಯೂತವು ಅನೇಕ ವೈರಸ್ ಗಳಿಂದ ಉಂಟಾಗುತ್ತದೆ. ಅಲ್ಲದೇ ಕೆಲವು ವಿಷಗಳಿಂದ (ಉದಾಹರಣೆಗೆ ಆಲ್ಕಹಾಲ್), ಸ್ವರಕ್ಷಣೆಯಿಂದ (ಸ್ವರಕ್ಷಿತ ಯಕೃತ್ತಿನ ಉರಿಯೂತ)ಅಥವಾ ಆನುವಂಶಿಕ ಸ್ಥಿತಿಗಳಿಂದಲೂ ಕೂಡ ಉಂಟಾಗುತ್ತದೆ. ಈ ರೋಗವನ್ನು ಅಲನೈನ್ ಟ್ರಾನ್ಸಮಿನೇಸ್ ನ ಮಟ್ಟವನ್ನು ಪರಿಶೀಲಿಸುವ ಮೂಲಕ ನಿರ್ಣಯಿಸಬಹುದು.
 • ನಾನ್-ಆಲ್ಕಹಾಲಿಕ್ ಫ್ಯಾಟಿ ಲಿವರ್ ಡಿಸೀಸ್, ಈ ರೋಗದಲ್ಲಿ ಶಕ್ತಿಯು ಸ್ಥೂಲಕಾಯತೆಗೆ ಸಂಬಂಧಿಸಿದ್ದು, ಯಕೃತ್ತಿನಲ್ಲಿರುವ ಅತ್ಯಂತ ಹೆಚ್ಚು ಕೊಬ್ಬಿನಿಂದಾಗಿ ಉಂಟಾಗುತ್ತದೆ ಎಂದು ಗುರುತಿಸಲಾಗಿದೆ; ಅಲ್ಲದೇ ಯಕೃತ್ತಿನ ಉರಿಯೂತವನ್ನು ಉಂಟುಮಾಡಬಹುದು, ಉದಾಹರಣೆಗೆ ಸ್ಟಿಆಟೋ ಹೆಪಟೈಟಿಸ್ ಮತ್ತು/ಅಥವಾ ಯಕೃತ್ತಿನ ತೀವ್ರ ರೋಗ.
 • ಯಕೃತ್ತಿನ ಸತ್ತಕಣಗಳನ್ನು ಬದಲಾಯಿಸುವ ಮೂಲಕ ಯಕೃತ್ತಿನಲ್ಲಿ ತಂತು ರೂಪದ ಜೀವಕೋಶದ ರಚನೆಯಾಗುವುದೇ ಯಕೃತ್ತಿನ ತೀವ್ರ ರೋಗವಾಗಿದೆ. ಯಕೃತ್ತಿನ ಉರಿಯೂತದಿಂದಾಗಿ, ಅತಿಯಾದ ಕುಡಿತದಿಂದಾಗಿ ಅಥವಾ ಯಕೃತ್ತಿಗೆ ವಿಷಯುಕ್ತವಾದ ಇತರ ರಾಸಾಯನಿಗಳೊಂದಿಗೆ ಸೇರುವುದರಿಂದ ಯಕೃತ್ತಿನ ಕಣಗಳು ಸತ್ತು ಹೋಗುತ್ತವೆ. ಇದನ್ನು ಅಲನೈನ್ ಟ್ರಾನ್ಸಮಿನೇಸ್ ಮತ್ತು ಅಸ್ಪರ್ಟೈನ್ ಟ್ರಾನ್ಸಮಿನೇಸ್ (SGOT) ನ ಮಟ್ಟವನ್ನು ಪರಿಶೀಲಿಸುವ ಮೂಲಕ ಪತ್ತೆಹಚ್ಚಬಹುದು.
 • ಹೀಮೋಕ್ರೋಮ್ಯಾಟೊಸಿಸ್, ಆನುವಂಶಿಕ ರೋಗವಾಗಿದ್ದು, ದೇಹದಲ್ಲಿ ಕಬ್ಬಿಣ ಸಂಚಯವಾಗುವಂತೆ ಮಾಡಿ, ಅಂತಿಮವಾಗಿ ಯಕೃತ್ತಿನ ವಿಫಲತೆಗೆ ಕಾರಣವಾಗುತ್ತದೆ.
 • ಯಕೃತ್ತಿನಕ್ಯಾನ್ಸರ್ (ಆರಂಭಿಕ ಹೆಪ್ಯಾಟೊಸೆಲ್ಯುಲರ್ ಕಾರ್ಸಿನೋಮ ಅಥವಾ ಕೊಲ್ಯಾಗಿಯೊಕಾರ್ಸಿನೋಮ ಮತ್ತು ಸ್ಥಾನಾಂತರದ ಕ್ಯಾನ್ಸರ್ ಗಳು, ಸಾಮಾನ್ಯವಾಗಿ ಉದರ ಕರುಳಿನ ಕುಳಿ ಮಾರ್ಗದ ಇತರ ಭಾಗಗಳಿಂದ).
 • ವಿಲ್ಸನ್ಸ್ ರೋಗ,ಇದು ಆನುವಂಶಿಕ ರೋಗವಾಗಿದ್ದು, ದೇಹವು ತಾಮ್ರದ ಅಂಶವನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ.
 • ಪ್ರೈಮರಿ ಸ್ಕಲ್ರೋಸಿಂಗ್ ಕೊಲ್ಯಾಂಗಿಟಿಸ್, ಎಂಬುದು ಪಿತ್ತನಾಳದ ಉರಿಯೂತ ರೋಗವಾಗಿದ್ದು, ಗುಣದಲ್ಲಿ ಸ್ವರಕ್ಷಿತವನ್ನು ಹೋಲುತ್ತದೆ.
 • ಪ್ರೈಮರಿ ಬಿಲ್ಯರಿ ಸಿರೋಸಿಸ್,ಎಂಬುದು ಚಿಕ್ಕ ಪಿತ್ತನಾಳಗಳ ಸ್ವರಕ್ಷಿತ ರೋಗವಾಗಿದೆ.
 • ಬುಡ್-ಚಿಅರಿ ಸಿಂಡ್ರೋಮ್ ಎಂಬುದು ಪಿತ್ತಜನಕಾಂಗ ನಾಳದ ಅಡಚಣೆಯಾಗಿದೆ.
 • ಗಿಲ್ ಬರ್ಟ್ಸ್ ಸಿಂಡ್ರೋಮ್ ಎಂಬುದು ಬೈಲಿರುಬಿನ್ ಚಯಾಪಚಯ ಕ್ರಿಯೆಯ ಆನುವಂಶಿಕ ರೋಗವಾಗಿದ್ದು, ಸುಮಾರು 5 ಪ್ರತಿಶತದಷ್ಟು ಜನಸಂಖ್ಯೆಯಲ್ಲಿ ಕಂಡುಬಂದಿದೆ.
 • ಗ್ಲೈಕೊಜನ್ ಸ್ಟೋರೇಜ್ ಡಿಸೀಸ್ ಟೈಪ್ II, ಎಂಬುದು ಗ್ಲೈಕೊಜನ್ ನ ವೃದ್ಧಿಯಾಗಿದ್ದು, ದೇಹದ ಪ್ರತಿಯೊಂದು ಭಾಗದಲ್ಲೂ ಬೆಳೆಯುತ್ತಿರುವ ಸ್ನಾಯುಗಳ ಬಲಹೀನತೆ(ಮೈಯೊಪ್ಯಾತಿ) ಉಂಟುಮಾಡುತ್ತದೆ. ಅಲ್ಲದೇ ದೇಹದ ಅನೇಕ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತವೆ. ವಿಶೇಷವಾಗಿ ಹೃದಯದಲ್ಲಿ, ಅಸ್ಥಿಪಂಜರದ ಸ್ನಾಯುಗಳಲ್ಲಿ, ಯಕೃತ್ತಿನ ಮತ್ತು ನರವ್ಯವಸ್ಥೆಯಲ್ಲಿ ಜೀವಕೋಶಗಳ ಮೇಲೆ ಪರಿಣಾಮ ಬೀರುತ್ತದೆ.

ಪಿತ್ತದ ನಾಳಬಂಧ, ಆಲ್ಫ್-1 ಆಂಟಿಟ್ರಿಪ್ಸಿನ್ ಡಿಫಿಷಿಯನ್ಸಿ, ಅಲಗಿಲ್ಲೆ ಸಿಂಡ್ರೋಮ್,ಮತ್ತು ಪ್ರೊಗ್ರೆಸಿವ್ ಫ್ಯಮಿಲಿಯಲ್ ಇಂಟ್ರಾಹೆಪ್ಯಾಟಿಕ್ ಕೊಲೆಸ್ಟಾಸಿಸ್ ಗಳನ್ನು ಒಳಗೊಂಡಂತೆ ಮಕ್ಕಳ ಅನೇಕ (ಆನುವಂಶಿಕ)ಯಕೃತ್ತಿನ ರೋಗಗಳಿವೆ.

ರೋಗಲಕ್ಷಣ[ಬದಲಾಯಿಸಿ]

ರೋಗ ತಗುಲಿದ ಯಕೃತ್ತಿನ ಲಕ್ಷಣಗಳು[ಬದಲಾಯಿಸಿ]

ಬಾಹ್ಯ ಲಕ್ಷಣಗಳು ಕೆಳಕಂಡವುಗಳನ್ನು ಒಳಗೊಂಡಿವೆ: ಆವೃತವಾದ ನಾಲಿಗೆ, ತುರಿಕೆಯ ಚರ್ಮ, ಅತಿಯಾಗಿ ಬೆವರುವುದು, ಅಸಹ್ಯವಾದ ದೇಹದ ದುರ್ವಾಸನೆ, ಕಣ್ಣುಗಳ ಕೆಳಗೆ ಕಪ್ಪು ಕಲೆ, ತುರಿಸುವ ಕಣ್ಣುಗಳು ಮತ್ತು ಕೆಂಪಾಗಿ ಊದಿರುವ ಕಣ್ಣುಗಳು, ಮೊಡವೆ ರೊಸಾಸಿಯ, ಚರ್ಮದ ಮೇಲೆ ಕಂದು ಬಣ್ಣದ ಚುಕ್ಕೆಗಳು ಮತ್ತು ಕಲೆಗಳು, ಕೆಂಪೇರಿದ ಮುಖಭಾವ ಅಥವಾ ಮಿತಿಮೀರಿದ ಮುಖದ ರಕ್ತನಾಳಗಳು.[೧]

ಇತರ ಲಕ್ಷಣಗಳು ಈ ಕೆಳಕಂಡವುಗಳನ್ನು ಒಳಗೊಂಡಿವೆ: ಕಾಮಾಲೆ, ಗಾಢವರ್ಣದ ಮೂತ್ರ, ಬಿಳಚಿಕೊಂಡ ಮಲ, ಮೂಳೆ ಸವೆತ,ಸುಲಭ ರಕ್ತಸ್ರಾವ,ತುರಿಕೆ, ಚರ್ಮದಲ್ಲಿ ಕಾಣುವ ರಕ್ತನಾಳಗಳಂತಹ ಸಣ್ಣ ಬಲೆ, ದೊಡ್ಡದಾದ ಗುಲ್ಮ , ಕಿಬ್ಬೊಟ್ಟೆಯ ಕುಳಿಯಲ್ಲಿ ಸ್ರಾವ, ಶೀತ, ಪಿತ್ತಜನಕಾಂಗದ ನಾಳದಿಂದ ಅಥವಾ ಮೇದೋಜೀರಕ ಗ್ರಂಥಿಯಿಂದ ಅಥವಾ ಪಿತ್ತಕೋಶದಿಂದ ನೋವು.[೨]

ಯಕೃತ್ತು ಸರಿಯಾಗಿ ಕೆಲಸಮಾಡದಿರುವುದರ ರೋಗಲಕ್ಷಣಗಳು, ದೈಹಿಕ ಲಕ್ಷಣ ಮತ್ತು ಜೀರ್ಣತೆಯ ಸಮಸ್ಯೆಗಳು, ರಕ್ತದ ಸಕ್ಕರೆ ಕಾಯಿಲೆಯ ಸಮಸ್ಯೆಗಳು, ಪ್ರತಿರಕ್ಷಿತ ಕಾಯಿಲೆಗಳು, ಜಿಡ್ಡಿನ ಅಸಹಜವಾದ ಹೀರಿಕೆ, ಮತ್ತು ಚಯಾಪಚಯ ಸಮಸ್ಯೆಗಳಿಗೆ ಸಂಬಂಧಿಸಿದ ಅನೇಕ ರೋಗಲಕ್ಷಣಗಳನ್ನು ಒಳಗೊಂಡಿವೆ.[೧]

ಕೊಬ್ಬಿನ ಅರೆಜೀರ್ಣತೆ ಈ ಕೆಳಕಂಡ ರೋಗಲಕ್ಷಣಗಳಿಗೆ ಕಾರಣವಾಗಿದೆ: ಅಜೀರ್ಣ, ಹಿನ್ ಸುರಿತ, ಕೊಬ್ಬನ್ನು ಕರಗಿಸುವ ಜೀವಸತ್ವಗಳ ಕೊರತೆ, ಮೂಲವ್ಯಾಧಿ, ಪಿತ್ತಕೋಶದ ಕಲ್ಲುಗಳು, ಕೊಬ್ಬುಳ್ಳ ಆಹಾರಗಳ ಅಸಹಿಷ್ಣುತೆ, ಆಲ್ಕಹಾಲ್, ಓಕರಿಕೆ ಮತ್ತು ವಾಂತಿಯ ಅಸಹಿಷ್ಣುತೆ, ಹೊಟ್ಟೆ ಉಬ್ಬುವುದು, ಮತ್ತು ಮಲಬದ್ಧತೆ.

ನರಮಂಡಲದ ಕಾಯಿಲೆಗಳು ಈ ಕೆಳಕಂಡವುಗಳನ್ನು ಒಳಗೊಂಡಿವೆ: ಮಾನಸಿಕ ಕುಸಿತ, ಚಿತ್ತ ಚಂಚಲತೆ, ವಿಶೇಷವಾಗಿ ಕೋಪ ಮತ್ತು ಮುಂಗೋಪ, ಚಿತ್ತೈಕಾಗ್ರತೆಯ ಕೊರತೆ ಮತ್ತು "ಮಾನಸಿಕ ಗೊಂದಲ", ದೇಹವನ್ನು ಅತಿಯಾಗಿ ಬಿಸಿ ಮಾಡುವುದು, ವಿಶೇಷವಾಗಿ ಮುಖ ಮತ್ತು ಮುಂಡವನ್ನು ಬಿಸಿಯಾಗಿಸುವುದು, ಹಾಗು ಓಕರಿಕೆಗೆ ಸಂಬಂಧಿದಂತೆ ಮತ್ತೆ ಮತ್ತೆ ಬರುವ ತಲೆನೋವು (ಅರೆ ತಲೆನೋವನ್ನು ಒಳಗೊಂಡಂತೆ).

ರಕ್ತದಲ್ಲಿರುವ ಸಕ್ಕರೆ ಅಂಶದ ಸಮಸ್ಯೆಗಳು ಈ ಕೆಳಕಂಡಂತಿವೆ: ಸಕ್ಕರೆಗಾಗಿ ಹಾತೊರೆತ, ಹೈಪೊಗ್ಲಿಕ್ಯಾಮಿಯ ಮತ್ತು ರಕ್ತದಲ್ಲಿರುವ ಸಕ್ಕರೆಯ ಅಸ್ಥಿರ ಮಟ್ಟಗಳು,ಮತ್ತು ಮಧುಮೇಹ ಮೆಲ್ಲಿಟಸ್ 2ನೇ ವಿಧದ ಆಕ್ರಮಣ.

ರಕ್ತದ ಹರಿವಿನಲ್ಲಿರುವ ಕೊಬ್ಬಿನ ಮಟ್ಟದಲ್ಲಿ ಉಂಟಾಗುವ ವೈಪರೀತ್ಯ, ಜೀವಿಗಳಲ್ಲಿ ಮೇದಸ್ಸಿನ ಅತ್ಯಂತ ಹೆಚ್ಚಿನ ಮಟ್ಟ ಅಥವಾ ಅತ್ಯಂತ ಕಡಿಮೆ ಮಟ್ಟದಲ್ಲಿರುತ್ತದೆ. ಹೈಪರ್ ಕೊಲೆಸ್ಟ್ರೊಲೇಮಿಯ: LDL ಕೊಲೆಸ್ಟರಾಲ್ ಅನ್ನು ಹೆಚ್ಚಿಸುತ್ತದೆ, HDL ಕೊಲೆಸ್ಟರಾಲ್ ಅನ್ನು ಕಡಿಮೆ ಮಾಡುತ್ತದೆ,ಟ್ರಿಗ್ಲಿಸರೈಡ್ ಗಳನ್ನು ಹೆಚ್ಚಿಸುತ್ತದೆ,ತಡೆಯೊಡ್ಡಿದ ಅಪಧಮನಿ ಅಧಿಕ ರಕ್ತದ ಒತ್ತಡ , ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ದೇಹದ ಇತರ ಭಾಗಗಳಲ್ಲಿ (ಅಂಗಗಳ ನೆಣ ರೋಗ) ಕೊಬ್ಬನ್ನು ಹೆಚ್ಚಿಸುತ್ತದೆ. ಚರ್ಮದಲ್ಲಿ ಹೆಚ್ಚು ಪ್ರಮಾಣದ ಕೊಬ್ಬನ್ನು ಉಂಟುಮಾಡುವುದು(ಲಿಪೊಮಾಸ್ ಮತ್ತು ಇತರ ಕೊಬ್ಬುಳ್ಳ ದುರ್ಮಾಂಸಗಳು), ಮಿತಿಮೀರಿ ದಪ್ಪವಾಗುವುದು (ಸ್ಥೂಲ ಕಾಯತೆಯನ್ನು ಉಂಟುಮಾಡುತ್ತದೆ). ಪಥ್ಯದಲ್ಲಿದ್ದರೂ ತೂಕವನ್ನು ಇಳಿಸಿಕೊಳ್ಳಲಾಗದಿರುವುದು, ನಿಷ್ಕ್ರಿಯವಾದ ಚಯಾಪಚಯ ಕ್ರಿಯೆ, ಊದಿಕೊಂಡಿರುವ ಹೊಟ್ಟೆ (ಡೊಳ್ಳುಹೊಟ್ಟೆ), ಸೆಲ್ಯುಲೈಟ್, ಕೊಬ್ಬುಳ ಯಕೃತ್ತು, ಮತ್ತು ಮೇಲೊಟ್ಟೆಯ ಸುತ್ತಲಿರುವ ಕೊಬ್ಬಿನ ಸುರುಳಿ(ಯಕೃತ್ತಿನ ಸುರುಳಿ) ಇತ್ಯಾದಿ.[೧] ಅಥವಾ ಅತ್ಯಂತ ಕೆಳಮಟ್ಟದ ಮೇದಸ್ಸುಗಳು: ಹೈಪೊಕೊಲೆಸ್ಟರಾಲೇಮಿಯ: ಒಟ್ಟು ಕೊಲೆಸ್ಟರಾಲ್ ನ ಪ್ರಮಾಣ ಕಡಿಮೆಯಾಗುವುದು, LDL ಮತ್ತು VLDL ಕೊಲೆಸ್ಟರಾಲ್ ನ ಪ್ರಮಾಣ ಕಡಿಮೆಯಾಗುವುದು, ಕಡಿಮೆ ಪ್ರಮಾಣದಲ್ಲಿರುವ ಟ್ರಿಗ್ಲೈಡರೈಡ್ಸ್.

ಲಿವರ್ ಫಂಕ್ಷನ್ ಟೆಸ್ಟಸ್ (ಯಕೃತ್ತು ಕಾರ್ಯಪರೀಕ್ಷೆಗಳು)[ಬದಲಾಯಿಸಿ]

ಯಕೃತ್ತ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರೀಕ್ಷಿಸಲು ಅನೇಕ ಲಿವರ್ ಫಂಕ್ಷನ್ ಟೆಸ್ಟ್ (ಯಕೃತ್ತು ಕಾರ್ಯ ಪರೀಕ್ಷೆ)ಗಳಿವೆ. ಈ ಪರೀಕ್ಷೆಯನ್ನು ರಕ್ತದಲ್ಲಿರುವ ಕಿಣ್ವಗಳಿಗೆ ಮಾಡಲಾಗುತ್ತದೆ. ಇವು ಸಾಮಾನ್ಯವಾಗಿ ಯಕೃತ್ತಿನ ಜೀವಕೋಶಗಳಲ್ಲಿ, ಉಪಾಪಚಯಜ ಅಥವಾ ಉತ್ಪನ್ನಗಳಲ್ಲಿ ಹೇರಳವಾಗಿರುತ್ತವೆ.

ಯಕೃತ್ತ್ ತನ್ನನ್ನು ತಾನೇ ಸಂಪೂರ್ಣವಾಗಿ ಗುಣಪಡಿಸಿಕೊಳ್ಳುವಂತಹ ಏಕಮಾತ್ರ ಅಂಗವಾಗಿದೆ.

ಚಿತ್ರಣ[ಬದಲಾಯಿಸಿ]

ಯಕೃತ್ತಿನ ರೋಗಗಳ ಚಿಕಿತ್ಸೆ[ಬದಲಾಯಿಸಿ]

ಯಕೃತ್ತಿನ ಕಸಿ ಅಥವಾ ಸ್ಥಳಾಂತರೀಕರಣವು(ಲಿವರ್ ಟ್ರಾನ್ಸ್ ಪ್ಲಾಂಟ್) ದೀರ್ಘಕಾಲದಿಂದ ಬಾಧಿಸುತ್ತಿರುವ ಯಕೃತ್ತಿನ ರೋಗಕ್ಕಿರುವ ನಿಜವಾದ ಚಿಕಿತ್ಸೆಯಾಗಿದೆ. ಆದರೂ, ಸಲ್ಫಸಾಲಸೈನ್ ನಂತಹ ಸದ್ಯದಲ್ಲಿ ಪರೀಕ್ಷಿಸಲಾದ ಕೆಲವೊಂದು ಆಶಾದಾಯಕ ಜೌಷಧಿಗಳಿವೆ. ಈ ಔಷಧಿಗಳು ಯಕೃತ್ತಿನ ಪುನರ್ ಬೆಳವಣಿಗೆಯನ್ನು ನಿಲ್ಲಿಸುವ ವಿಶೇಷ ಪ್ರೋಟೀನ್ ಗಳನ್ನು ತಡೆಗಟ್ಟುವ ಮೂಲಕ ಪುನರ್ ಬೆಳವಣಿಗೆ ಸಹಕರಿಸುವ ಸಾಮರ್ಥ್ಯ ಹೊಂದಿವೆ. ಇದು ಯಕೃತ್ತಿಗೆ ಭಾಗಶಃ ಅಥವಾ ಸಂಪೂರ್ಣವಾಗಿ ಬೆಳೆಯಲು ಅನುಕೂಲ ಮಾಡಿಕೊಡುತ್ತದೆ. ಈ ಔಷಧಿಗಳನ್ನು ವೈದ್ಯಕೀಯವಾಗಿ ಪ್ರಯೋಗಗಳಿಗೆ ಒಳಪಡಿಸಿ ಪರೀಕ್ಷಿಸುತ್ತಿರುವ ಕಾರಣ ದುರದೃಷ್ಟವಶಾತ್ ಪ್ರಸ್ತುತದಲ್ಲಿ ಇವುಗಳನ್ನು ಬಳಸುತ್ತಿಲ್ಲ. ಇತರ ಚಿಕಿತ್ಸೆಗಳು ಕಾಂಡಕೋಶದ ಬಳಕೆಯನ್ನು ಒಳಗೊಂಡಿವೆ. ಇದನ್ನು ರೋಗಿಯ ವಿಫಲವಾದ ಯಕೃತ್ತಿಗೆ, ಇಂಜೆಕ್ಷನ್ ನ ಮೂಲಕ ಸೇರಿಸಿ ಅಂಗವನ್ನು ಮತ್ತೆ ಬೆಳೆಯುವಂತೆ ಮಾಡಲಾಗುತ್ತದೆ. ಆದರೆ ಇದು ಇನ್ನೂ ಆರಂಭದ ಹಂತದಲ್ಲಿದ್ದರೆ ಸಾಧ್ಯವಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]