ರೇಬೀಸ್
Rabies | |
---|---|
Classification and external resources | |
![]() ರೇಬೀಸ್ ಹೊಂದಿರುವ ಒಂದು ನಾಯಿ ಶಕ್ತಿಹೀನ (ಉದ್ರೇಕ ನಂತರ) ಸ್ಥಿತಿಯಲ್ಲಿ | |
ICD-10 | A82 |
DiseasesDB | 11148 |
MedlinePlus | 001334 |
eMedicine | med/1374 eerg/493 ped/1974 |
MeSH | D011818 |
ಬಿಸಿರಕ್ತವಿರುವ ಮಾನವರು ಮತ್ತು ಇತರ ಪ್ರಾಣಿಗಳಲ್ಲಿ ತೀವ್ರವಾದ ಮಿದುಳಿನ ಉರಿಯೂತ ಉಂಟು ಮಾಡುವ ರೇಬೀಸ್, ಒಂದು ವೈರಸ್‍ಗಳಿಂದುಂಟಾಗುವ ರೋಗ.[೧] ಆರಂಭಿಕ ರೋಗಲಕ್ಷಣಗಳು ಜ್ವರ ಮತ್ತು ಕಚ್ಚಲಾದ ಜಾಗದಲ್ಲಿ ಜುಮುಗುಟ್ಟುವಿಕೆಯನ್ನು ಒಳ್ಳಗೊಳ್ಳಬಹುದು.[೧] ಈ ರೋಗಲಕ್ಷಣಗಳನ್ನು ಈ ಕೆಳಗಿನ ಒಂದು ಅಥವಾ ಹೆಚ್ಚಿನ ರೋಗಲಕ್ಷಣಗಳು ಅನುಸರಿಸಬಹುದು: ರಭಸದ ಚಲನವಲನಗಳು, ಅನಿಯಂತ್ರಿತ ಉದ್ವೇಗ, ನೀರಿನ ಭಯ, ದೇಹದ ಅಂಗಗಳನ್ನು ಚಲಿಸುವಲ್ಲಿ ಅಸಾಮರ್ಥ್ಯ, ಗೊಂದಲ, ಮತ್ತು ಪ್ರಜ್ಞೆ ಕಳೆದುಕೊಳ್ಳುವುದು.[೧] ರೋಗಲಕ್ಷಣಗಳು ಕಂಡುಬಂದ ನಂತರ ರೇಬೀಸ್ ಬಹುಮಟ್ಟಿಗೆ ಸಾವನ್ನುಂಟು ಮಾಡುತ್ತದೆ.[೧] ರೋಗ ತಗಲುವಿಕೆ ಮತ್ತು ರೋಗಲಕ್ಷಣಗಳ ಆರಂಭವಾಗುವಿಕೆಯ ನಡುವಿನ ಅವಧಿ ಸಾಮಾನ್ಯವಾಗಿ ಒಂದರಿಂದ ಮೂರು ತಿಂಗಳುಗಳಾಗಿರುತ್ತದೆ. ಕೆಲವೊಮ್ಮೆ, ಈ ಕಾಲಾವಧಿಯು ವಿಭಿನ್ನವಾಗಿ ಅಂದರೆ ಒಂದು ವಾರಕ್ಕಿಂತ ಕಡಿಮೆ ಸಮಯದಿಂದ ಹಿಡಿದು ಒಂದು ವರ್ಷಕ್ಕಿಂತ ಹೆಚ್ಚೂ ಇರಬಹುದು.[೧] ಕಾಲಾವಧಿಯು, ವೈರಸ್ ಕೇಂದ್ರ ನರಮಂಡಲವನ್ನು ತಲುಪಲು ಸಾಗಬೇಕಾದ ದೂರವನ್ನು ಆಧರಿಸಿರುತ್ತದೆ.[೨]
ಮಾನವರಿಗೆ ರೇಬೀಸ್ ಇತರ ಪ್ರಾಣಿಗಳ ಮೂಲಕ ವರ್ಗಾಂತರವಾಗುತ್ತದೆ. ಸೋಂಕು ತಗಲಿದ ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನು ಅಥವಾ ಮನುಷ್ಯರನ್ನು ಪರಚಿದಾಗ ಅಥವಾ ಕಚ್ಚಿದಾಗ ರೇಬೀಸ್ ವರ್ಗಾಂತರಗೊಳ್ಳಬಲ್ಲದು. [೧] ಸೋಂಕು ತಗಲಿದ ಪ್ರಾಣಿಯ ಜೊಲ್ಲು, ಮತ್ತೊಂದು ಪ್ರಾಣಿ ಅಥವಾ ಮನುಷ್ಯರ ಲೋಳೆ ಪೊರೆಯೊಡನೆ ಸಂಪರ್ಕಕ್ಕೆ ಬಂದರೆ, ಅಂತಹ ಜೊಲ್ಲು ಸಹ ರೇಬೀಸ್ ಅನ್ನು ವರ್ಗಾಂತರಿಸಬಲ್ಲದು.[೧] ಮನುಷ್ಯರಲ್ಲಿನ ರೇಬೀಸ್ ಪ್ರಸಂಗಗಳಲ್ಲಿ ಬಹಳಷ್ಟು ನಾಯಿಕಡಿತದಿಂದ ಉಂಟಾದುವು.[೧] ನಾಯಿಗಳು ಸಾಮಾನ್ಯವಾಗಿ ರೇಬೀಸ್ ಹೊಂದಿರುವ ದೇಶಗಳಲ್ಲಿ 99%ಕ್ಕಿಂತ ಹೆಚ್ಚು ರೇಬೀಸ್ ಪ್ರಸಂಗಗಳು ನಾಯಿಕಡಿತದಿಂದ ಉಂಟಾದವುಗಳಾಗಿರುತ್ತವೆ.[೩] ಅಮೇರಿಕಾ ರಾಷ್ಟ್ರಗಳಲ್ಲಿ, ರೇಬೀಸ್ ಉಂಟಾಗುವುದಕ್ಕೆ ಬಹಳ ಹೆಚ್ಚಿನ ಸಾಮಾನ್ಯ ಕಾರಣ ಬಾವಲಿಗಳು, ಮತ್ತು ಮನುಷ್ಯರಲ್ಲಿ ಕಂಡುಬರುವ ರೇಬೀಸ್‍ನಲ್ಲಿ 5%ಕ್ಕಿಂತ ಕಡಿಮೆ ನಾಯಿಗಳಿಂದ ಉಂಟಾದವು.[೧][೩] ದಂಶಕ ಅಥವಾ ಹೆಗ್ಗಣಗಳು ರೇಬೀಸ್ ಸೋಂಕಿಗೆ ಒಳಗಾಗುವುದು ಬಹಳ ಅಪರೂಪ.[೩] ರೇಬೀಸ್ ವೈರಸ್ ಹೊರಮೈ ನರಗಳನ್ನು ಅನುಸರಿಸುತ್ತಾ ಮಿದುಳಿನೆಡೆ ಸಾಗುತ್ತವೆ. ರೋಗಲಕ್ಷಣಗಳು ಆರಂಭವಾದ ನಂತರ ಮಾತ್ರ ರೋಗದ ರೋಗಪತ್ತೆ ಸಾಧ್ಯವಾಗುವುದು.[೧]
ಪ್ರಾಣಿ ನಿಯಂತ್ರಣ ಮತ್ತು ಲಸಿಕೆ ನೀಡುವಿಕೆ ಕಾರ್ಯಕ್ರಮಗಳು ಜಗತ್ತಿನ ಸಾಕಷ್ಟು ಪ್ರಾಂತ್ಯಗಳಲ್ಲಿ ರೇಬೀಸ್ ಅಪಾಯವನ್ನು ಕಡಿಮೆ ಮಾಡಿದೆ.[೧] ರೇಬೀಸ್ ಅಪಾಯ ಅತ್ಯಂತ ಹೆಚ್ಚು ಸಂಭವನೀಯವಾಗಿರುವ ಮಂದಿಗೆ ಮುಂಚಿತವಾಗಿಯೇ ರೋಗ-ನಿರೋಧಕ ಲಸಿಕೆ ನೀಡುವುದನ್ನು ಶಿಫಾರಸು ಮಾಡಲಾಗುತ್ತದೆ. ಅತ್ಯಂತ ಹೆಚ್ಚು ಅಪಾಯವುಳ್ಳ ಗುಂಪು, ಬಾವಲಿಗಳೊಂದಿಗೆ ಕೆಲಸ ಮಾಡುವವರನ್ನು ಅಥವಾ ರೇಬೀಸ್ ಸಾಮಾನ್ಯವಾಗಿರುವಂತೆ ಕಂಡುಬರುವ ಜಗತ್ತಿನ ಪ್ರದೇಶಗಳಲ್ಲಿ ದೀರ್ಘ ಸಮಯವನ್ನು ಕಳೆಯುವ ಜನರನ್ನು ಒಳಗೊಳ್ಳುತ್ತದೆ.[೧] ಈಗಾಗಲೇ ರೇಬೀಸ್‍ಗೆ ಒಡ್ಡಲ್ಪಟ್ಟ ಜನರಿಗೆ ರೇಬೀಸ್ ಲಸಿಕೆ ಮತ್ತು ಕೆಲವೊಮ್ಮೆ ರೇಬೀಸ್ ಇಮ್ಯುನೊಗ್ಲಾಬ್ಯುಲಿನ್ ಚಿಕಿತ್ಸೆಯನ್ನು ರೋಗಲಕ್ಷಣಗಳು ಆರಂಭವಾಗುವ ಮೊದಲೇ ನೀಡಲಾದರೆ, ಅಂತಹ ಚಿಕಿತ್ಸೆಯು ರೋಗವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗುತ್ತದೆ.[೧] ಕಚ್ಚಲ್ಪಟ್ಟ ಮತ್ತು ತರಚಿರುವ ಜಾಗವನ್ನು 15 ನಿಮಿಷಗಳ ಕಾಲ ಸೋಪ್ ಮತ್ತು ನೀರಿನೊಂದಿಗೆ ಪೋವಿಡೊನ್ ಅಯೋಡಿನ್, ಅಥವಾ ಡಿಟರ್ಜೆಂಟ್‍ನಿಂದ ತೊಳೆಯುವುದರಿಂದ ವೈರಸ್‍ಗಳನ್ನು ಕೊಲ್ಲಬಹುದು ಮತ್ತು ಈ ಕ್ರಮವು ರೇಬೀಸ್ ವರ್ಗಾಂತರಗೊಳ್ಳುವುದನ್ನು ತಡೆಯುವಲ್ಲಿ ಸ್ವಲ್ಪ ಪರಿಣಾಮಕಾರಿಯಾಗಿರುವಂತೆ ಕಂಡುಬರುತ್ತದೆ.[೧] ರೇಬೀಸ್ ಸೋಂಕಿಗೊಳಗಾದ ನಂತರ ಬದುಕುಳಿದವರು ಕೇವಲ ಕೆಲವೇ ಮಂದಿ ಮತ್ತು ಇದು ಸಾಧ್ಯವಾದುದು ಮಿಲ್ವಾಕೀ ಪ್ರೊಟೊಕಾಲ್ ಎಂದು ಕರೆಯಲಾಗುವ ಒಂದು ವಿಸ್ತೃತ ಚಿಕಿತ್ಸೆಯಿಂದ.[೪]
ರೇಬೀಸ್ ಒಂದು ವರ್ಷಕ್ಕೆ ಇಡೀ ಜಗತ್ತಿನಲ್ಲಿ ಸುಮಾರು 26,000ದಿಂದ 55,000 ಸಾವುಗಳನ್ನುಂಟು ಮಾಡುತ್ತದೆ.[೧][೫] ಈ ಸಾವುಗಳಲ್ಲಿ 95%ಕ್ಕಿಂತ ಹೆಚ್ಚಿನವು ಏಷ್ಯಾ ಮತ್ತು ಆಫ್ರಿಕಾದಲ್ಲಿ ಉಂಟಾಗುತ್ತವೆ.[೧] ಅಂಟಾರ್ಟಿಕಾವನ್ನು ಹೊರತುಪಡಿಸಿ ಉಳಿದೆಲ್ಲಾ ಖಂಡಗಳಲ್ಲಿ, 150ಕ್ಕೂ ಹೆಚ್ಚಿನ ದೇಶಗಳಲ್ಲಿ ರೇಬೀಸ್ ಇದೆ.[೧] ಜಗತ್ತಿನಲ್ಲಿ 3 ಬಿಲಿಯನ್‍ಗಿಂತ ಹೆಚ್ಚು ಜನರು ರೇಬೀಸ್ ಆಗಬಹುದಾದ ಪ್ರಾಂತ್ಯಗಳಲ್ಲಿ ವಾಸಿಸುತ್ತಾರೆ.[೧] ಯೂರೋಪ್‍ನ ಬಹಳಷ್ಟು ಭಾಗಗಳಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ, ರೇಬೀಸ್ ಬಾವಲಿಗಳಲ್ಲಿ ಮಾತ್ರ ಕಂಡುಬರುತ್ತದೆ.[೬] ಹಲವು ಚಿಕ್ಕ ದ್ವೀಪ ರಾಷ್ಟ್ರಗಳಲ್ಲಿ ರೇಬೀಸ್ ಇಲ್ಲವೇ ಇಲ್ಲ.[೭] Powerd by jeevan horikuruba Official bets onar
References[ಬದಲಾಯಿಸಿ]
- ↑ ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ ೧.೧೩ ೧.೧೪ ೧.೧೫ ೧.೧೬ ೧.೧೭ "Rabies Fact Sheet N°99". World Health Organization. July 2013. Retrieved 28 February 2014.
- ↑ Cotran RS; Kumar V; Fausto N (2005). Robbins and Cotran Pathologic Basis of Disease (7th ed.). Elsevier/Saunders. p. 1375. ISBN 0-7216-0187-1.
{{cite book}}
: Invalid|display-authors=3
(help); Unknown parameter|author-separator=
ignored (help) - ↑ ೩.೦ ೩.೧ ೩.೨ Tintinalli, Judith E. (2010). Emergency Medicine: A Comprehensive Study Guide (Emergency Medicine (Tintinalli)). McGraw-Hill. pp. Chapter 152. ISBN 0-07-148480-9.
- ↑ Hemachudha T, Ugolini G, Wacharapluesadee S, Sungkarat W, Shuangshoti S, Laothamatas J (May 2013). "Human rabies: neuropathogenesis, diagnosis, and management". Lancet neurology. 12 (5): 498–513. doi:10.1016/s1474-4422(13)70038-3. PMID 23602163.
{{cite journal}}
: CS1 maint: multiple names: authors list (link) - ↑ Lozano R, Naghavi M, Foreman K, Lim S, Shibuya K, Aboyans V, Abraham J, Adair T, Aggarwal R; et al. (Dec 15, 2012). "Global and regional mortality from 235 causes of death for 20 age groups in 1990 and 2010: a systematic analysis for the Global Burden of Disease Study 2010". Lancet. 380 (9859): 2095–128. doi:10.1016/S0140-6736(12)61728-0. PMID 23245604.
{{cite journal}}
: Explicit use of et al. in:|author=
(help)CS1 maint: multiple names: authors list (link) - ↑ "Presence / absence of rabies in 2007". World Health Organization. 2007. Retrieved 1 March 2014.
- ↑ "Rabies-Free Countries and Political Units". CDC. Retrieved 1 March 2014.